ಕನ್ನಡದ ಹಾಸ್ಯ ನಾಯಕ ನಟ ಶರಣ್ (Sharan) ಅಭಿನಯದ ಛೂ ಮಂತರ್ (Choo Mantar) ಸಿನಿಮಾ ರೆಡಿ ಆಗಿದೆ. ನಟ ಶರಣ್ ಈಗ ಪ್ರಚಾರ ಕಾರ್ಯಕ್ಕೂ ಇಳಿದಿದ್ದಾರೆ. ಒಂದು ಸಿನಿಮಾ ರಿಲೀಸ್ ಆಗೋವರೆಗೂ ಶರಣ್ ತಮ್ಮದೇ ಬೇರೆ ಚಿತ್ರದ ಬಗ್ಗೆ ಮಾತಾಡೋದಿಲ್ಲ. ಅದೇ ರೀತಿ ಗುರು-ಶಿಷ್ಯರು (Guru Shishyaru) ಸಿನಿಮಾ ರಿಲೀಸ್ ಆಗುವವರೆಗೂ ಸುಮ್ನೆ ಇದ್ದ ಶರಣ್, ಛೂ ಮಂತರ್ ಚಿತ್ರದ ಪ್ರಚಾರ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಛೂ ಮಂತರ್ ಸಿನಿಮಾ ಶರಣ್ ಚಿತ್ರ ಜೀವನದ ಹೊಸ ರೀತಿ ಸಿನಿಮಾ ಆಗಿದೆ. ಹಾಸ್ಯವನ್ನೆ ಪ್ರಮುಖವಾಗಿ ಅಭಿನಯಿಸಿ ಜನರ (Comedy Actor Chikkanna) ಮನಗೆದ್ದ ಶರಣ್, ಛೂ ಮಂತರ್ ಚಿತ್ರದ ಮೂಲಕ ಹಾಸ್ಯದ ಜೊತೆಗೆ ಹಾರರ್ ಕಂಟೆಂಟ್ ಕಟ್ಟಿಕೊಡೇ ಬರುತ್ತಿದ್ದಾರೆ.
ಛೂ ಮಂತರ್ ಅಂತವ್ರೆ ಹಾಸ್ಯ ನಾಯಕ ನಟ ಶರಣ್
ಶರಣ್ ಚಿತ್ರ ಬದುಕಿನಲ್ಲಿ ಹಾರರ್ ಸಿನಿಮಾ ಬಂದಿವೆ. ಆಗ ಇವರು ಹಾಸ್ಯ ನಟರಾಗಿಯೇ ಇದ್ದವರು. ಆದರೆ ಫಸ್ಟ್ ಟೈಮ್ ಶರಣ್, ಹಾಸ್ಯದ ಜೊತೆಗೆ ಹಾರರ್ ಕಂಟೆಂಟ್ ಇರೋ ಚಿತ್ರದಲ್ಲೂ ಅಭಿನಯಿಸಿದ್ದಾರೆ.
ಶರಣ್ ಅಭಿನಯದ ಛೂ ಮಂತರ್ ಚಿತ್ರದಲ್ಲಿ ಶರಣ್ ರೋಲ್ ವಿಭಿನ್ನವಾಗಿಯೇ ಇದೆ. ಅದರ ಝಲಕ್ ಕೊಡುವ ಒಂದು ಫಸ್ಟ್ ಲುಕ್ ಈಗ ರಿಲೀಸ್ ಆಗಿದೆ. ಇದರಲ್ಲಿ ಶರಣ್ ಪಾತ್ರದ ಝಲಕ್ ತಂಬಾ ಇಂಟ್ರಸ್ಟಿಂಗ್ ಅನಿಸುತ್ತಿದೆ.
ಛೂ ಮಂತರ್ ಚಿತ್ರದ 4K ಫಸ್ಟ್ ಲುಕ್ ರಿಲೀಸ್
ಛೂ ಮಂತರ್ ಸಿನಿಮಾದಲ್ಲಿ ಹತ್ತು ಹಲವು ಪಾತ್ರಗಳು ಇವೆ. ಇವುಗಳಲ್ಲಿ ಪ್ರಮುಖ ಅನಿಸೋ ಒಂದಷ್ಟು ಪಾತ್ರಗಳು ಫಸ್ಟ್ ಲುಕ್ ಅಲ್ಲಿ ಹೈಲೈಟ್ ಆಗಿವೆ. ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಚಿಕ್ಕಣ್ಣ ಮತ್ತು ಶರಣ್ ಪಾತ್ರಗಳ ಝಲಕ್ ಈ ಒಂದು 4K ಫಸ್ಟ್ ಲುಕ್ನಲ್ಲಿ ರಿವೀಲ್ ಆಗಿವೆ.
ಶರಣ್ ಪಾತ್ರಕ್ಕೆ ಈ ಚಿತ್ರದಲ್ಲಿ ಹಾಲಿವುಡ್ ಟಚ್ ಬಂದಂತಿದೆ. ಹಾಲಿವುಡ್ನ ಹ್ಯಾರಿ ಪಾಟರ್ ನಲ್ಲಿ ಬಂದ ಪಾತ್ರಗಳ ರೀತಿನೇ ಇದು ಕಾಣುತ್ತಿದೆ. ಚಿತ್ರದ ಇತರ ಪಾತ್ರಗಳನ್ನ ಕೂಡ ಇಲ್ಲಿ ವಿಶೇಷವಾಗಿಯೇ ಹಾರರ್ ಫೀಲ್ ಅಲ್ಲಿಯೇ ತೋರಲಾಗಿದೆ.
ಕರ್ವ ಚಿತ್ರದ ಡೈರೆಕ್ಟರ್ ನವನೀತ್ ಹಾರರ್ ಕಮಾಲ್
ಕನ್ನಡದಲ್ಲಿ ಕರ್ವ ಅಂತಲೇ ಒಂದು ಸಿನಿಮಾ ಬಂದಿತ್ತು. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಬೇರೆ ಲೆವಲ್ನ ಸಿನಿಮಾನೇ ಆಗಿತ್ತು. ಹಾರರ್ ಚಿತ್ರ ಕಂಡ ಕನ್ನಡಿಗರು ಭೇಷ್ ಅಂತಲೇ ಹೇಳಿದ್ದರು. ಅಷ್ಟು ಅದ್ಭುತವಾದ ಸಿನಿಮಾವನ್ನೆ ನವನೀತ್ ಮಾಡಿದ್ದರು.
ಕರ್ವ ಚಿತ್ರ ಆದ್ಮೇಲೆ ನವನೀತ್ ಕರ್ವ-2 ಸಿನಿಮಾ ಮಾಡ್ತಾರೆ ಅನ್ನುವ ಸುದ್ದಿನೂ ಇತ್ತು. ಆದರೆ ಅದಕ್ಕೂ ಮೊದಲೇ ಛೂ ಮಂತರ್ ಸಿನಿಮಾ ರೆಡಿ ಆಗಿದೆ. ಇದು ಕೂಡ ಕರ್ವ ಚಿತ್ರವನ್ನ ಮೀರಿಸೋ ಹಾಗೆ ಕಾಣಿಸುತ್ತಿದೆ.
ಛೂ ಮಂತರ್ ಟೆಕ್ನಿಕಲಿ ಸ್ಟ್ರಾಂಗ್ ಆಗಿರೋ ಸಿನಿಮಾ
ಛೂ ಮಂತರ್ ಸಿನಿಮಾದಲ್ಲಿ ಹೆಸರಾಂತ ಕಲಾವಿದರೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಛೂ ಮಂತರ್ ಚಿತ್ರಕ್ಕೆ ಕಮರ್ಷಿಯಲ್ ಟಚ್ ಕೂಡ ಇದೆ. ಹಾರರ್, ಹಾಸ್ಯ ಮತ್ತು ಕಮರ್ಷಿಯಲ್ ಟಚ್ ಹೀಗೆ ಎಲ್ಲವೂ ಇದೆ. ಹಾಗೆ ಎಲ್ಲವೂ ಇರೋ ಈ ಚಿತ್ರ ರೆಡಿ ಆಗಿದೆ.
ಇದನ್ನೂ ಓದಿ: Upendra UI Film: ಉಪ್ಪಿಯ UI ಸಿನಿಮಾ ಬಗ್ಗೆ ಹೊಸ ಅಪ್ಡೇಟ್! ನಿರ್ಮಾಪಕರ ಎಕ್ಸ್ಕ್ಲೂಸಿವ್ ಮಾತು
ಸಿನಿಮಾದ ಹಿಂದೆ ಟೆಕ್ನಿಕಲಿ ಸ್ಟ್ರಾಂಗ್ ಟೀಮ್ ಇದೆ. ಸಂಗೀತದ ವಿಚಾರಕ್ಕೆ ಬಂದ್ರೆ, ಚಂದನ್ ಶೆಟ್ಟಿ ಚಿತ್ರಕ್ಕೆ ಸಂಗೀತಕ್ಕೆ ಮಾಡಿದ್ದಾರೆ. ಅನೂಪ್ ಕಟ್ಟುಕರನ್ ಕ್ಯಾಮರಾ ವರ್ಕ್ ಮಾಡಿದ್ದಾರೆ.
ತರುಣ್ ಶಿವಪ್ಪ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸದ್ಯಕ್ಕೆ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ. ಸಿನಿಮಾದ ಇತರ ವಿಷಯಗಳು ಹಂತ ಹಂತವಾಗಿಯೇ ರಿವೀಲ್ ಆಗುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ