ಸ್ಯಾಂಡಲ್‌ವುಡ್ ಡೈರೆಕ್ಟರ್ ದುನಿಯಾ ಸೂರಿ ಒಂದ್ (Kannada comedy Actor Umesh) ಒಳ್ಳೆ ಕೆಲಸ ಮಾಡಿದ್ದಾರೆ. ಕನ್ನಡದ ಹಿರಿಯ ಕಲಾವಿದರನ್ನ ಮರೆಯದೇ ಅವರನ್ನ ತಮ್ಮ ಸಿನಿಮಾಕ್ಕೂ ಹಾಕಿಕೊಂಡಿದ್ದಾರೆ. ಜೊತೆಗೆ ಅವರಲ್ಲಿರೋ (Umesh Special Song Release) ಆ ಅದ್ಭುತ ಪ್ರತಿಭೆಯನ್ನ ಕೂಡ ತಮ್ಮ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೂ ಬಳಸಿಕೊಂಡಿದ್ದಾರೆ. ನಿಜ, ರಂಗಭೂಮಿ ಮತ್ತು ಸಿನಿಮಾ (Bad Manners Song Released) ಹೀಗೆ ಎರಡರ ಅನುಭವ ಹೊಂದಿರೋ ಕನ್ನಡದ ಹಿರಿಯ ನಟ ಎಂ.ಎಸ್.ಉಮೇಶ್ ಅವರಿಂದ ದುನಿಯಾ ಸೂರಿ ತಮ್ಮ ಚಿತ್ರಕ್ಕೆ ಒಂದು ಹಾಡು ಬರೆಸಿದ್ದಾರೆ. ಆ ಕಾಲದ ಅನುಭವದಲ್ಲಿಯೇ ಈ ಕಾಲದ ಹುಡುಗರಿಗೆ ಉಮೇಶ್ ಎಣ್ಣೆ ಹಾಡೊಂದನ್ನ ಬರೆದುಕೊಡೋದಲ್ಲದೇ, ಕಂಪೋಸ್ ಮಾಡಿ ಸ್ವತ ತಾವೇ ಹಾಡಿದ್ದಾರೆ. ಈ ಹಾಡಿನ ಒಂದು ವಿಶ್ಲೇಷಣೆ ಇಲ್ಲಿದೆ ಓದಿ.
ಅಂದು ಹಾಸ್ಯದ ಕಿಕ್ ಇಂದು ಎಣ್ಣೆ ಕಿಕ್-ಉಮೇಶ್ ಅಣ್ಣ ಸೂಪರ್ ಅಣ್ಣ
ಬ್ಯಾಡ್‌ಮ್ಯಾನರ್ಸ್ ಚಿತ್ರದ ಎರಡನೇ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ಹಲವು ವಿಶೇಷತೆಗಳಿವೆ. ಈ ವಿಶೇಷತೆಗಳಲ್ಲಿ ಈ ಮೊದಲೇ ಹೇಳಿದಂತೆ ಉಮೇಶ್ ಅವರೇ ಈ ಹಾಡಿನ ಹೈಲೈಟ್ ಅಂತ ಹೇಳಬಹುದು. ಈ ಹಾಡಿನಲ್ಲಿ ರಂಗಭೂಮಿಯ ಅನುಭವ ಸೂಸುತ್ತದೆ. ಎಣ್ಣೆ ಪ್ರಿಯರ ಗೋಳು ಕೂಡ ಇದೇ ಹಾಡನಲ್ಲಿಯೇ ಇರೋದು ವಿಶೇಷ ನೋಡಿ.
ಹೌದು, ಕನ್ನಡದ ಹಿರಿಯ ಹಾಸ್ಯ ನಟ ಎಂ.ಎಂ. ಉಮೇಶ್ ಅವರು ನಿಜಕ್ಕೂ ಅದ್ಭುತವಾದ ಹಾಡನ್ನ ಬರೆದುಕೊಟ್ಟಿದ್ದಾರೆ. ಪ್ರತಿ ಸಾಲಿನಲ್ಲೂ ಒಂದೊಂದು ಕಿಕ್ ಇದೆ. ಈ ಕಿಕ್‌ನೊಳಗೆ ಹಿಂದಿ ಪದಗಳ ಬಳಕೆನೂ ಇಲ್ಲಿ ವಿಶೇಷವಾಗಿಯೇ ಕಾಣಿಸುತ್ತದೆ.
ಸರಳ ಪದ ಸೂಪರ್ ಫೀಲ್-ಎಣ್ಣೆ ಹಾಡು ಮಸ್ತ್ ಆಗೈತೆ
ಸರಳ ಪದಗಳನ್ನ ಅಷ್ಟೇ ಚೆನ್ನಾಗಿಯೇ ಇಲ್ಲಿ ಬಳಸಿರೋದು ಸ್ಪೆಷಲ್ ಅನಿಸುತ್ತದೆ. ಸಾರಾಯಿ ಕುಡಿದ್ರೆ ಮೈ ಜುಮ್ ಅನ್ನುತ್ತದೆ ಅನ್ನುವ ಸಾಲನ್ನ ಬರೆದಿರೋ ಎಂ.ಎಸ್. ಉಮೇಶ್ ಅವರು, ಮುಂದೆ ಹಿಂದಿ ಪದಗಳನ್ನ ಕೂಡ ಬಳಸುತ್ತಲೇ ಸಾಗುತ್ತಾರೆ.
ತುಂಬಾ ವಿಶೇಷ ಅನಿಸೋ ಸಾಲುಗಳನ್ನ ತಾವೇ ಹಾಡಿದ್ದಾರೆ. ಅದಕ್ಕೂ ಹೆಚ್ಚಾಗಿ ತಮ್ಮದೇ ಶೈಲಿಯಲ್ಲಿಯೇ ಈ ಒಂದು ಹಾಡನ್ನ ಕಂಪೋಜ್ ಮಾಡಿದ್ದಾರೆ. ಅದು ಈ ಚಿತ್ರದ ಹಲವು ವಿಶೇಷತೆಗಳಲ್ಲಿ ಒಂದು ಅಂದ್ರೆ ತಪ್ಪೇ ಇಲ್ಲ ಬಿಡಿ.
ಹಾಸ್ಯ ನಟ ಉಮೇಶ್ ಎಣ್ಣೆ ಹಾಡಿಗೆ ಚರಣ್ ರಾಜ್ ಟಚ್
ಆದರೆ ಇಲ್ಲಿ ಚಿತ್ರದ ಸಂಗೀತ ನಿರ್ದೇಶಕ ಚರಣ್ ರಾಜ್ ವಿಶೇಷ ಟಚ್ ಕೂಡ ಕೊಟ್ಟಿದ್ದಾರೆ. ತಮ್ಮ ಈ ಹಿಂದಿನ ಸ್ಪೆಷಾಲಿಟಿಯಂತೇನೆ ಉಮೇಶ್ ಅವರ ಈ ಗೀತೆಗೆ ಈ ಕಾಲದ ಸಂಗೀತದ ಸ್ಪರ್ಶವನ್ನೂ ಕೊಟ್ಟಿದ್ದಾರೆ. ಹಾಗಾಗಿಯೇ ಹಳೇ ಬೇರು ಹೊಸ ಚಿಗುರು ಅನ್ನುವ ಹಾಗೆ ಈ ಹಾಡು ಕಿಕ್ ಕೊಡ್ತಿದೆ ನೋಡಿ.
ದುನಿಯಾ ಸೂರಿ ಅವರ ಸಿನಿಮಾದಲ್ಲಿ ಸ್ಪೆಷಲ್ ಆಗಿ ಏನಾದರೂ ಇರುತ್ತದೆ. ಶಿವಣ್ಣ ಅಭಿನಯದ ಕಡ್ಡಿಪುಡಿ ಸಿನಿಮಾದಲ್ಲಿ ಸೌಂದರ್ಯ ಸಮರ ಅನ್ನುವ ವಿಶೇಷ ಹಾಡಿತ್ತು. ದುನಿಯಾ ಚಿತ್ರದಲ್ಲಂತೂ ಅದ್ಭುತ ಹಾಡುಗಳೇ ಇದ್ದವು. ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಕೂಡ ಒಳ್ಳೆ ಹಾಡುಗಳೇ ಇವೆ. ಅದರಲ್ಲಿ ಉಮೇಶ್ ಅವರು ಬರೆದು ಹಾಡಿರೋ ಸಾರಾಯಿ ಹಾಡು ಹೊಸ ಕಿಕ್ ಅನ್ನ ಈಗಲೇ ಕೊಡುತ್ತಿದೆ.
ಸಾರಾಯಿ ಕುಡಿದ್ರೆ ಮೈ ಜುಮ್ ಜುಮ್ ಅಂತೈತೆ!
ಸಾರಾಯಿ ಕುಡಿದ್ರೆ ಮೈ ಜುಮ್ ಅನ್ನುತ್ತದೆ ಅನ್ನುವ ಈ ಗೀತೆ ಈಗಾಗಲೇ ರಿಲೀಸ್ ಆಗಿದೆ. ಮೇ-1 ರಂದು ಬೆಳಗ್ಗೆ ಈ ಗೀತೆಯ ಲಿರಿಕಲ್ ವಿಡಿಯೋ ಹೊರ ಬಂದಿದೆ. ಇದೇ ಹಾಡಿನ ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇದೆ. ಇದರೊಟ್ಟಿಗೆ ಎಂ.ಎಸ್. ಉಮೇಶ್ ಅವರ ಸಾಂಗ್ ರೆಕಾರ್ಡಿಂಗ್ ವಿಡಿಯೋ ಕೂಡ ಇದೇ ಹಾಡಿನಲ್ಲಿ ರಿವೀಲ್ ಆಗಿದೆ.
ಇದನ್ನೂ ಓದಿ: Kannada Serial: ಭಾಗ್ಯಲಕ್ಷ್ಮೀ ಸೀರಿಯಲ್ನ ತಾಂಡವ್ ಆಡಿಷನ್ ಮಾಡಿದ ನಟಿ ಯಾರು ಗೊತ್ತೇ?
ಇನ್ನುಳಿದಂತೆ ಎಂ.ಎಸ್. ಉಮೇಶ್ ಅವರು ಕನ್ನಡದ ಮಕ್ಕಳ ಚಿತ್ರದ ಮೊದಲ ಹೀರೋ ಅನ್ನೋದು ಕೂಡ ಅಷ್ಟೇ ವಿಶೇಷ ಅಂತ ಹೇಳಬಹುದು. 1960 ರಲ್ಲಿ ಬಂದ ಮಕ್ಕಳ ರಾಜ್ಯ ಚಿತ್ರದ ಮೂಲಕ ಅಂದೇ ಎಲ್ಲರ ಗಮನ ಸೆಳೆದ ಎಂ.ಎಸ್. ಉಮೇಶ್ ಅವರು, ಇಲ್ಲಿವರೆಗೂ 350 ಸಿನಿಮಾಗಳಲ್ಲಿ ಹಾಸ್ಯದ ಕಿಕ್ ಕೊಟ್ಟಿದ್ದರು. ಇದೀಗ ಬ್ಯಾಡ್ ಮ್ಯಾನರ್ಸ್ ಚಿತ್ರದ ಹಾಡಿನ ಮೂಲಕ ಹೊಸ ಕಿಕ್ ಕೊಡ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ