Comedy Actor Mitra: ಮರತೇ ಹೋದ ಮಿತ್ರನಿಗೆ ಮರು ಜೀವ ಕೊಟ್ಟ ರಾಘವೇಂದ್ರ ಸ್ಟೋರ್ಸ್ಸ್

ಹಾಸ್ಯ ನಟ ಮಿತ್ರನಿಗೆ ಮರು ಜೀವ ಕೊಟ್ಟ ಕೋಗಿಲೆ

ಹಾಸ್ಯ ನಟ ಮಿತ್ರನಿಗೆ ಮರು ಜೀವ ಕೊಟ್ಟ ಕೋಗಿಲೆ

ಮರತೇ ಹೋಗಿದ್ದ ಮಿತ್ರ ಅವರಿಗೆ ಕೋಗಿಲೆ ಮರು ಜೀವ ನೀಡಿದೆ. ರಾಘವೇಂದ್ರ ಸ್ಟೋರ್ಸ್ಸ್ ಸಿನಿಮಾದ ಕೋಗಿಲೆ ಪಾತ್ರದಿಂದ ಮತ್ತೊಮ್ಮೆ ಮತ್ತಷ್ಟು ಅವಕಾಶಗಳು ಅರಸಿ ಬರ್ತಿವೆ ಅನ್ನೋದನ್ನ ಮಿತ್ರ, ನ್ಯೂಸ್-18 ಕನ್ನಡ ಡಿಜಿಟಲ್ ಸ್ಪೆಷಲ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಕನ್ನಡದ ಹಾಸ್ಯ ನಟ ಮಿತ್ರ ಇದೀಗ (Comedy Actor Mitra Updates) ಕೋಗಿಲೆ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಮನಸಾರೆ ಚಿತ್ರದ ಬಟ್ಟೆ ಬೇಡ ಪಾತ್ರದ ಮೂಲಕ ಎಲ್ಲರ ಮನದಲ್ಲಿದ್ದ ಮಿತ್ರ, ರಾಘವೇಂದ್ರ ಸ್ಟೋರ್ಸ್ (Mitra Special Interview) ಚಿತ್ರದ ಮೂಗನ ಪಾತ್ರದ ಮೂಲಕ ಪ್ರೇಕ್ಷಕರ ದಿಲ್ ಕದ್ದಿದ್ದಾರೆ. ಸಿನಿಮಾದಲ್ಲಿ ಒಂದ್ ಒಳ್ಳೆ ಪಾತ್ರ ಮಾಡಿರೋ ಖುಷಿ ಮಿತ್ರ ಮನದಲ್ಲಿ ಇದೀಗ ಮನೆ ಮಾಡಿದೆ. ಮಿತ್ರ ಅವರ (Comedy Actor) ಈ ಒಂದು ಪಾತ್ರ ಇವರನ್ನ ಬೇರೆ ಲೆವಲ್‌ಗೆ ತೆಗೆದುಕೊಂಡು ಹೋಗುತ್ತದೆ ಅನ್ನುವ ನಂಬಿಕೆ ಅವರಲ್ಲಿ ಮೂಡಿದೆ. ನ್ಯೂಸ್-18 ಕನ್ನಡ ಡಿಜಿಟಲ್‌ ಸ್ಪೆಷಲ್ ಸಂದರ್ಶನದಲ್ಲಿ ಮಿತ್ರ  ತಮಗೆ ಈ ಪಾತ್ರ ಸಿಕ್ಕಿರೋ ಆ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಆ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ.


ಮನಸಾರೆ ಮಿತ್ರನಿಗೆ ಮರು ಜೀವ ಕೊಟ್ಟ ಕೋಗಿಲೆ


ಮನಸಾರೆ ಮಿತ್ರ ಅಭಿನಯ ಮಾಡ್ತಾರೆ. ಹಾಸ್ಯದ ಜರ್ನಿಯಲ್ಲಿ ಇಲ್ಲಿವರೆಗೂ 100 ಕ್ಕೂ ಹೆಚ್ಚು ಸಿನಿಮಾಗಳನ್ನ ಮಾಡಿದ್ದಾರೆ. ಚಡ್ಡಿ ದೋಸ್ತ್ ವಿಶೇಷ ಸಿನಿಮಾ ಆಗಿತ್ತು. ಯೋಗರಾಜ್ ಭಟ್ ಅವರ ಮನಸಾರೆ ಸಿನಿಮಾ ಕೂಡ ಸ್ಪೆಷಲ್ ಆಗಿತ್ತು. ಈ ಚಿತ್ರದಲ್ಲಿ ಮಿತ್ರ ಬಟ್ಟೆ ಬೇಡ ಪಾತ್ರ ಸ್ಪೆಷಲ್ ಆಗಿಯೇ ಕಾಣಿಸಿತ್ತು.


Kannada Comedy actor Mitra Special Role in Raghavendra Stores Movie
ರಾಘವೇಂದ್ರ ಸ್ಟೋರ್ಸ್ಸ್ ಕೋಗಿಲೆ ಜತೆಗೆ ಮಾತು-ಕಥೆ


ಇದರ ಮಧ್ಯೆ ಮಿತ್ರ ಇನ್ನೂ ಒಂದು ಸಾಹಸ ಮಾಡಿದ್ದರು. ತಮ್ಮ ನಿರ್ಮಾಣದಲ್ಲಿ ರಾಗ ಅನ್ನುವ ಒಂದು ಅದ್ಭುತ ಚಿತ್ರ ಮಾಡಿದ್ದರು. ಈ ಚಿತ್ರದಲ್ಲಿ ಇವರೇ ಹೀರೋ ಆಗಿದ್ದರು. ಪರಸಂಗ ಅನ್ನುವ ಸಿನಿಮಾ ಚಿತ್ರದಲ್ಲೂ ಇವರದ್ದೇ ಎಲ್ಲ ಇತ್ತು.




ರಾಗದ ಮಿತ್ರನಿಗೆ ಮನಸಾರೆ ಸಿಕ್ಕ ಕೋಗಿಲೆಯ ಪಾತ್ರ!


ಎರಡು ಒಳ್ಳೆ ಸಿನಿಮಾ ಕೊಟ್ಟ ಮೇಲೂ ಮಿತ್ರ ಅವರಿಗೆ ಅವಕಾಶ ಕಡಿಮೆ ಆಗಿದ್ದವು. ಆದರೆ ಲಕ್ ನೋಡಿ ಹೇಗಿದೆ? ಮನಸಾರೆ ಚಿತ್ರದ ಬಟ್ಟೆ ಬೇಡ ಪಾತ್ರವನ್ನ ಆ ಒಂದು ದಿನ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ನೋಡ್ತಾಯಿದ್ದರು.


ಅದು ಅವರ ಮನದಲ್ಲಿ ಅಷ್ಟೇ ಜಾಗ ಮಾಡಿಕೊಂಡಿತ್ತು. ಈ ಒಂದು ಕಾರಣದಿಂದಲೇನೆ ರಾಘವೇಂದ್ರ ಸ್ಟೋರ್ಸ್ಸ್ ಸಿನಿಮಾದ ಕೋಗಿಲೆ ಪಾತ್ರಧಾರಿ ಹುಡುಕುತ್ತಿರೋವಾಗ, ಕೋಗಿಲೆ ರೋಲ್‌ಗೆ ಮಿತ್ರ ಸೂಟೇಬಲ್ ಅಂತ ಅಂದುಕೊಂಡರು. ಅದರ ಫಲ ಮಿತ್ರ ಅವರನ್ನ ಕೋಗಿಲೆ ಪಾತ್ರ ಹುಡುಕಿಕೊಂಡ ಹೋಗಿದೆ.


ರಾಘವೇಂದ್ರ ಸ್ಟೋರ್ಸ್ಸ್ ಕೋಗಿಲೆ ಜತೆಗೆ ಮಾತು-ಕಥೆ


ನ್ಯೂಸ್-18 ಕನ್ನಡ ಡಿಜಿಟಲ್ ಸ್ಪೆಷಲ್ ಎಫ್‌ಬಿ ಲೈವ್ ಸಂದರ್ಶನದಲ್ಲಿ ಈ ಎಲ್ಲ ಸತ್ಯವನ್ನ ಮಿತ್ರ ಹೇಳಿಕೊಂಡಿದ್ದಾರೆ. ಮನಸಾರೆ ಪಾತ್ರದಿಂದಲೇ ಕೋಗಿಲೆ ಪಾತ್ರ ನನಗೆ ಸಿಕ್ಕಿದೆ. ಜನ ಈ ಒಂದು ಪಾತ್ರವನ್ನ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ ಹೊರ ಬಂದಾಗ ಕೋಗಿಲೆ ಅಂತ ಕೂಗಿದ್ದಾರೆ.


ಮರತೇ ಹೋಗಿದ್ದ ಮಿತ್ರ ಅವರಿಗೆ ಕೋಗಿಲೆ ಮರು ಜೀವ ನೀಡಿದೆ. ರಾಘವೇಂದ್ರ ಸ್ಟೋರ್ಸ್ಸ್ ಸಿನಿಮಾದ ಕೋಗಿಲೆ ಪಾತ್ರದಿಂದ ಮತ್ತೊಮ್ಮೆ ಮತ್ತಷ್ಟು ಅವಕಾಶಗಳು ಅರಸಿ ಬರ್ತಿವೆ ಅನ್ನೋದನ್ನ ಮಿತ್ರ ಹೇಳಿಕೊಂಡಿದ್ದಾರೆ. ಅವಕಾಶ ಮಾಡಿಕೊಟ್ಟ ಹೊಂಬಾಳೆ ಸಂಸ್ಥೆಗೆ ಮನಸಾರೆ ಅಭಿನಂದನೆ ತಿಳಿಸಿದ್ದಾರೆ.


Kannada Comedy actor Mitra Special Role in Raghavendra Stores Movie
ರಾಗದ ಮಿತ್ರನಿಗೆ ಮನಸಾರೆ ಸಿಕ್ಕ ಕೋಗಿಲೆಯ ಪಾತ್ರ!


ಹಾಸ್ಯ ನಟ ಮಿತ್ರನಿಗೆ ಮರು ಜೀವ ಕೊಟ್ಟ ಕೋಗಿಲೆ


ಮಿತ್ರ ಚಿತ್ರ ಜೀವನದಲ್ಲಿ ಕೋಗಿಲೆ ಪಾತ್ರ ಅದೆಷ್ಟು ಪ್ರಭಾವ ಬೀರಿದೆ ಗೊತ್ತೇ? ಹೌದು, ರಾಘವೇಂದ್ರ ಸ್ಟೋರ್ಸ್ಸ್ ಚಿತ್ರದ ನಾಯಕ ನಟ ಜಗ್ಗೇಶ್ ಅವರು ಮಿತ್ರ ಅಭಿನಯಕ್ಕೆ ಕಳೆದೇ ಹೋಗಿದ್ದಾರೆ. ತಮ್ಮ ಚಿತ್ರದಲ್ಲಿ ಇಂತಹ ಒಂದು ಪಾತ್ರವನ್ನ ಮಿತ್ರ ಮಾಡಿದ್ದನ್ನ ಕಂಡು ಮಂತ್ರ ಮುಗ್ಧಗೊಂಡಿದ್ದಾರೆ.


ಇದನ್ನೂ ಓದಿ: Srii Murali: ಬಘೀರ ಸಿನಿಮಾ ಶೂಟಿಂಗ್ ಯಾವಾಗ? ರೋರಿಂಗ್ ಸ್ಟಾರ್ ಹೇಗಿದ್ದಾರೆ?

top videos


    ಈ ಒಂದು ಸತ್ಯವನ್ನ ರಾಘವೇಂದ್ರ ರಾಜ್‌ಕುಮಾರ್ ಅವರು ಜಗ್ಗೇಶ್ ಅವರೊಟ್ಟಿಗೆ ನಡೆಸಿದ್ದ ಸಂದರ್ಶನದಲ್ಲೂ ಹೇಳಿಕೊಂಡಿದ್ದಾರೆ. ಹಾಗಾಗಿಯೇ ಕೋಗಿಲೆ ಪಾತ್ರ ಅಂದೇ ಒಂದು ಸೆಳೆತ ಹುಟ್ಟಿಸಿತ್ತು. ಸಿನಿಮಾ ನೋಡಿದ್ಮೇಲೆ ಅಂತೂ ಈ ಕೋಗಿಲೆ ನಿಮ್ಮ ಮನದಲ್ಲಿ ನಗೆಯ ಹೊನಲನ್ನೇ ಹರಿಸುತ್ತದೆ.

    First published: