ಕ್ರಿಯೇಟಿವ್ ಡೈರೆಕ್ಟರ್-ಡೈಲಾಗ್ ರೈಟರ್ (Comedy Actor Girish) ಇರಬೇಕು. ಅವರು ಇದ್ರೆ ಮಾತ್ರ ಹಾಸ್ಯ ಕಲಾವಿದ ಜೀವಂತ ಆಗಿರ್ತಾನೆ. ಅವರಾರೂ ಇಲ್ಲ ಅದ್ಕೋಳಿ, ಅಲ್ಲಿಗೆ ಹಾಸ್ಯ (Kannada Comedy Actor Girish Shivanna) ಕಲಾವಿದ ಕಣ್ಮರೆ ಆಗ್ತಾನೆ. ನಾನು ಇವತ್ತು ಬೆಳಗ್ಗೆ ಎದ್ದ ಕೂಡಲೇ ಒಂದು ವಿಷಯ ಅಂದುಕೊಂಡೆ. ಇಲ್ಲಿವರೆಗೂ ನಗಿಸಿದ್ದೇನೆ. ಆದರೆ ನನ್ನ ನೋಡಿದಾಕ್ಷಣ (Kannada Comedy Actor) ಜನ ನಗಬೇಕು. ಆ ಲೆವಲ್ಗೆ ನಾನು ಅಭಿನಯಿಸಬೇಕು. ಅದುವೇ ನನ್ನ ಗುರಿ. ಹಾಸ್ಯ ಕಲಾವಿದರು ನಾಯಕರಾದ್ರೆ ಅದರಿಂದ ಏನೂ ತೊಂದರೆ ಇಲ್ಲ. ಆಗೊಮ್ಮೆ ಈಗೊಮ್ಮೆ ಬರುವ ಹಾಸ್ಯ ಕಲಾವಿದ (Comedy Hero) ನಾಯಕನಾದ್ರೆ, ಹೀರೋ ಆಗಿ ಇಡೀ ಸಿನಿಮಾದಲ್ಲಿ ನಗಿಸ್ತಾನೇ ಹೋಗ್ತಾನೆ.
ನಿಜ, ಈ ಮಾತನ್ನ ಕನ್ನಡದ ದಡಿಯಾ ಗಿರಿ ಹೇಳಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ತಮ್ಮ ವಿಶೇಷ ದಿನ ವಿಶೇಷವಾಗಿಯೇ ಮಾತನಾಡಿದ್ದಾರೆ. ಆ ವಿಶೇಷ ದಿನ ಬೇರೆ ಏನೂ ಅಲ್ಲ. ದಡಿಯಾಗಿರಿ ಇವತ್ತು (09.01.2023) ರಂದು ತಮ್ಮ ಜನ್ಮ ದಿನ ಆಚರಿಸಿಕೊಂಡಿದ್ದಾರೆ.
ಗಿರೀಶ್ ಶಿವಣ್ಣ ಕನ್ನಡದ ಬೇಡಿಕೆ ಹಾಸ್ಯ ಕಲಾವಿದ
ದಡಿಯಾ ಗಿರಿ ಅಂತಲೇ ಗುರುತಿಸಿಕೊಳ್ಳುವ ನಟ ಗಿರೀಶ್ ಶಿವಣ್ಣ, ಕನ್ನಡದ ಬಹುತೇಕ ಹೀರೋಗಳ ಸಿನಿಮಾದಲ್ಲಿರುತ್ತಾರೆ. ದೇಹದ ತೂಕದಷ್ಟೇ ನಗಿಸೋ ಶಕ್ತಿನೂ ಗಿರಿಗೆ ಇದೆ. ಇದರಿಂದ ಬೆಳ್ಳಿ ತೆರೆ ಮೇಲೆ ಬರುವ ಗಿರೀಶ್ ಶಿವಣ್ಣ ಎಲ್ಲರ ಮೊಗದಲ್ಲೂ ನಗು ಮೂಡಿಸುತ್ತಾರೆ.
ಗಿರೀಶ್ ರಂಗಭೂಮಿಯಿಂದಲೇ ಬಂದೋರು. ಇವರಿಗೆ ಪಾತ್ರಗಳ ಹಂಗಿಲ್ಲ. ಯಾವ ಪಾತ್ರದಲ್ಲೂ ನಿಮ್ಮನ್ನ ಎಂಟರಟೈನ್ ಮಾಡ್ತಾರೆ. ಆದರೆ ಗಿರಿ ಈಗ ಎಲ್ಲರನ್ನ ತಮ್ಮ ಹಾಸ್ಯ ಪ್ರತಿಭೆ ಮೂಲಕವೇ ಮನರಂಜಿಸುತ್ತಲೇ ಇದ್ದಾರೆ.
ಹಾಸ್ಯ ಕಲಾವಿದ ಗಿರೀಶ್ ಪ್ರತಿಭೆಗೆ ಬೇಡಿಕೆ ಇದೆ
ಹಾಸ್ಯ ಕಲಾವಿದ ಗಿರೀಶ್ ಅವರನ್ನ ತೆರೆ ಮೇಲೆ ನೋಡಿದ ಜನ ನಗುತ್ತಾರೆ. ಗಿರೀಶ್ ಪಾತ್ರ ಬಂದಿದೆ ಅಂದ್ರೆ, ಅಲ್ಲಿ ನಗು ಗ್ಯಾರಂಟಿ ಅಂತೇ ಹೇಳಬಹುದು. ಅಷ್ಟು ಭರವಸೆಯನ್ನ ಗಿರೀಶ್ ಶಿವಣ್ಣ ಮೂಡಿಸಿ ಆಗಿದೆ. ಕೊನೆವರೆಗೂ ಜನರನ್ನ ನಗಿಸುತ್ತಲೇ ಇರಬೇಕು. ಇನ್ನಷ್ಟು ಮತ್ತಷ್ಟು ಜನರನ್ನ ರಂಜಿಸಬೇಕು ಅಂತಲೇ ಗಿರೀಶ್ ತಮ್ಮ ಪಯಣವನ್ನ ಮುಂದುವರೆಸಿದ್ದಾರೆ.
ನಾನು ತೆರೆ ಮೇಲೆ ಬಂದ್ರೆ ಸಾಕು, ಜನ ನಗಬೇಕು!
ಗಿರೀಶ್ ಶಿವಣ್ಣ ಇಂದು ಬೆಳ್ಳಗೆ ಎದ್ದಾಗ ಅವರಿಗೆ ಒಂದು ಯೋಚನೆ ಬಂತು. ನನ್ನ ತೆರೆ ಮೇಲೆ ನೋಡಿದಾಕ್ಷಣ ಜನ ನಗಬೇಕು. ಅಷ್ಟು ಕೆಲಸವನ್ನ ನಾನು ಇನ್ನೂ ಮಾಡಬೇಕು. ಜನರನ್ನ ನಗಿಸುತ್ತಲೇ ನಾನು ಇರಬೇಕು ಅಂತೇ ಯೋಚಿಸಿ ಗಟ್ಟಿ ನಿರ್ಧಾರವನ್ನೂ ಮಾಡಿದರು.
ಗಿರೀಶ್ ಇವತ್ತು ಈ ನಿರ್ಧಾರ ತೆಗೆದುಕೊಳ್ಳು ಏನ್ ಕಾರಣ?
ಹೌದು, ಗಿರೀಶ್ ಶಿವಣ್ಣ ಇವತ್ತು ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಅದೇ ಖುಷಿಯಲ್ಲಿಯೇ ಇನ್ನಷ್ಟು ನಗಿಸುತ್ತಲೇ ಇರಬೇಕು ಅಂತಲೇ ಯೋಚನೆ ಮಾಡಿದ್ದಾರೆ.
ಮಗು ಮನಸಿನ ಗಿರಿಗೆ ವಯಸ್ಸೇ ಆಗೋದಿಲ್ಲ ನೋಡಿ!
ಗಿರೀಶ್ ಶಿವಣ್ಣ ಏಜ್ ಬಗ್ಗೆ ತೆಲೆಕಡೆಸಿಕೊಳ್ಳೋದೇ ಇಲ್ಲ. ಏಜ್ ಅನ್ನೋದು ಏನೂ ಇಲ್ಲ. ಮಗು ಮನಸಿನ ಹಾಗೆ ಇದ್ರೆ ಸಾಕು. ಎಲ್ಲ ಕಾಲಕ್ಕೂ ಎಲ್ಲವೂ ಸರಿ ಇರುತ್ತದೆ ಅನ್ನೋದೇ ಗಿರೀಶ್ ಶಿವಣ್ಣ ನಂಬಿರೋ ಸತ್ಯ. ಮತ್ತು ಅದನ್ನೆ ಫಾಲೋ ಮಾಡಿದ್ದಾರೆ. ಅದು ಅವರ ಮಾತಿನಲ್ಲೂ ವ್ಯಕ್ತವಾಗುತ್ತದೆ.
ಹಾಸ್ಯ ಕಲಾವಿದರೇ ಹೀರೋ ಆದ್ರೆ ಏನ್ ಆಗುತ್ತದೆ?
ಹಾಸ್ಯ ಕಲಾವಿದರೇ ಹೀರೋ ಆದರೆ ಒಳ್ಳೆಯದೇನೇ. ಇಡೀ ಸಿನಿಮಾದಲ್ಲಿ ಹಾಸ್ಯವನ್ನ ಅವರು ಮಾಡಬಹುದು. ಆದರೆ ಒಬ್ಬ ಹಾಸ್ಯ ನಟರಾಗಿದ್ರೆ, ಆಗೊಮ್ಮೆ ಈಗೊಮ್ಮೆ ಬಂದು ಹಾಸ್ಯ ಮಾಡಿ ಹೋಗಬೇಕಾಗುತ್ತದೆ ಅಂತಲೇ ಗಿರೀಶ್ ಹೇಳಿಕೊಳ್ತಾರೆ.
ಹಾಸ್ಯ ಕಲಾವಿದ ಗಿರೀಶ್ ಅವರಿಗೆ ಬೇಸರ ಏನೂ ಇಲ್ಲ. ಹಾಸ್ಯ ಪಾತ್ರಕೊಟ್ಟರೂ ಸರಿಯೇ, ಬೇರೆ ಪಾತ್ರಕೊಟ್ಟರೂ ಓಕೆ, ಒಬ್ಬ ಕಲಾವಿದನಾಗಿಯೇ ಇದ್ದೇನೆ. ಎಲ್ಲವನ್ನೂ ಮಾಡುತ್ತೇನೆ. ಜನರನ್ನ ರಂಜಿಸುತ್ತಲೇ ಇರುತ್ತೇನೆ ಅಂತಲೇ ಗಿರೀಶ್ ಶಿವಣ್ಣ ಹೇಳ್ತಾರೆ.
ಗಿರೀಶ್ ಶಿವಣ್ಣ ಸದ್ಯ ಒಂದಷ್ಟು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಗಳಲ್ಲೂ ಹಾಸ್ಯದ ಹೊನಲು ಹರಿಸುತ್ತಿದ್ದಾರೆ. ಮೊನ್ನೆ ಗಿರೀಶ್ ಅಭಿನಯದ ಮಿಸ್ಟರ್ ಬ್ಯಾಚುಲರ್ ಚಿತ್ರ ರಿಲೀಸ್ ಆಗಿದೆ. ಪ್ರಜ್ವಲ್ ದೇವರಾಜ್ ಅಭಿನಯದ ವೀರಂ ಚಿತ್ರದ ಡಬ್ಬಿಂಗ್ ಕೆಲಸ ಈಗ ನಡೆಯುತ್ತಿದೆ.
ಇನ್ನು ಹೆಸರೇ ಇಡದ ಒಂದಷ್ಟು ಸಿನಿಮಾಗಳನ್ನ ಗಿರೀಶ್ ಶಿವಣ್ಣ ಈಗಾಗಲೇ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಬರ್ತ್ ಡೇ ಮ್ಯಾನ್ ಗಿರೀಶ್ ಶಿವಣ್ಣ ಬ್ಯುಸಿ ಇದ್ದಾರೆ. ನಗಿಸುತ್ತಲೇ ಮುನ್ನುಗ್ಗುತ್ತಿದ್ದಾರೆ. ಕ್ರಿಯೇಟಿವ್ ಡೈರೆಕ್ಟರ್-ಡೈಲಾಗ್ ರೈಟರ್ ಇರೋವರೆಗೂ ಹಾಸ್ಯ ಕಲಾವಿದರು ಜೀವಂತ ಇರುತ್ತಾನೆ ಅನೋದನ್ನ ಬಲವಾಗಿಯೇ ನಂಬಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ