ಸ್ಯಾಂಡಲ್‌ವುಡ್‌ನ ಹಾಸ್ಯ ಕಲಾವಿದ ಚಿಕ್ಕಣ್ಣ (comedy Actor chikkanna) ಮಸ್ತ್ ಮಜಾ ಮೂಡ್‌ನಲ್ಲಿದ್ದಾರೆ. ಗೋವಾದ ಸಮುದ್ರದಲ್ಲಿ ಚಿಕ್ಕು ಮಸ್ತ್ ಮೋಜ್ ಮಾಡ್ತಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ ಜೊತೆಗೆ ಯಾವ (Goa Jolly Trip) ಹುಡುಗಿನೂ ಇಲ್ಲ. ಹೀರೋಯಿನ್ ಕೂಡ ಇಲ್ಲ. ಅದರೆ ಇದು ಮತ್ಯಾವುದೇ ಸಿನಿಮಾದ ವಿಡಿಯೋ ಅಲ್ವೇ ಅಲ್ಲ. ರಜೆಯ-ಮಜಾ ಮೂಡ್‌ನಲ್ಲಿಯೇ ಚಿಕ್ಕಣ್ಣ (Jolly Trip Video Viral) ಇದ್ದಾರೆ. ಆದರೆ ಚಿಕ್ಕಣ್ಣನ ವಿಡಿಯೋ ನೋಡಿದ ಅಭಿಮಾನಿಗಳು ಸೂಪರ್ ಅಂತ ಏನೂ ಹೇಳಿಲ್ಲ. ಚಿಕ್ಕಣ್ಣ ನಿಮ್ಮ (Actor Chikkanna) ಯಶ್ ಎಲ್ಲಿ ಅಂತಲೇ ಕೇಳಿದ್ದಾರೆ. ಚಿಕ್ಕಣ್ಣ ಗೆಳೆಯರ ಜೊತೆಗೆ ಗೋವಾ ಟ್ರಿಪ್ ಬಂದಂತಿದೆ. ಇಲ್ಲಿಯ ಸಮುದ್ರ ತೀರದಲ್ಲಿ ಮಸ್ತ್ ಓಡಾಡಿಕೊಂಡು ಖುಷಿಪಡುತ್ತಿದ್ದಾರೆ. ಸಮುದ್ರದಲ್ಲಿ ವಾಟರ್ ಬೈಕ್ ಹತ್ತಿ ಸೂಪರ್ ಕೂಲ್ ಆಗಿಯೇ ಇದ್ದಾರೆ.
ವಾಟರ್ ಬೈಕ್ ಅಲ್ಲಿ ಉಪಾಧ್ಯಕ್ಷ ಜಾಲಿ ರೈಡ್
ಗೋವಾದಲ್ಲಿ ಮಸ್ತ್ ಎಂಜಾಯ್ ಮಾಡ್ತಿರೋ ಚಿಕ್ಕಣ್ಣ ವಿಡಿಯೋದಲ್ಲಿ ಒಬ್ಬರೇ ಇದ್ದಾರೆ. ಆದರೆ ಸ್ನೇಹಿತರಾರೋ ವಿಡಿಯೋ ಮಾಡಿದಂತೆ ಕಾಣುತ್ತದೆ.
ಗೋವಾದಲ್ಲಿ ಚಿಕ್ಕಣ್ಣ-ವಿಡಿಯೋ ಮಸ್ತ್ ವೈರಲ್
ಈ ಒಂದು ವಿಡಿಯೋವನ್ನ ಸ್ವತಃ ಚಿಕ್ಕಣ್ಣ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ. ಅಧಿಕೃತ ಪೇಜ್ ಅಲ್ಲಿ ಶೇರ್ ಮಾಡಿಕೊಂಡಿರೋ ಈ ವಿಡಿಯೋಗೆ ಅಂತ ಒಳ್ಳೆ ಕಾಮೆಂಟ್ ಏನೂ ಬಂದಿಲ್ಲ. ಬಂದಿರೋ ಎಲ್ಲ ಕಾಮೆಂಟ್‌ಗಳೆಲ್ಲ ಪ್ರಶ್ನೆಗಳೇ ಆಗಿವೆ.
ಹೌದು, ಚಿಕ್ಕಣ್ಣ ಅದ್ಯಾಕೆ ಈ ವಿಡಿಯೋ ಶೇರ್ ಮಾಡಿದ್ರೋ ಏನೋ? ಸೋಷಿಯಲ್ ಮೀಡಿಯಾದಲ್ಲಿ ಚಿಕ್ಕಣ್ಣ ಅಂತ ಹೇಳಿಕೊಳ್ಳುವ ರೀತಿಯಲ್ಲಿ ಆ್ಯಕ್ಟೀವ್ ಆಗಿರೋ ಹಾಗೇ ಕಾಣೋದಿಲ್ಲ. ಆದರೆ ಇದೀಗ ಶೇರ್ ಮಾಡಿರೋ ವಿಡಿಯೋಗೆ ಕಾಮೆಂಟ್ಸ್ ಜಾಸ್ತಿ ಬಂದಿವೆ.
ಚಿಕ್ಕಣ್ಣನ ಗೋವಾ ಟ್ರಿಪ್ ವಿಡಿಯೋ ಫುಲ್ ವೈರಲ್
ಚಿಕ್ಕಣ್ಣ ಶೇರ್ ಮಾಡಿರೋ ಗೋವಾ ವಿಡಿಯೋದ ಕಮೆಂಟ್ ಬಾಕ್ಸ್ ಅಲ್ಲಿ ಯಾರೂ ಪ್ರಶಂಸೆ ಏನೂ ಮಾಡಿಲ್ಲ. ಪ್ರಶ್ನೆಗಳನ್ನೆ ಕೇಳಿದ್ದಾರೆ. ಜೊತೆಗೆ ಅದ್ಯಾರೋ ಯಶ್ ಬಾಸ್ ಎಲ್ಲಿದ್ದಾರೆ ಅಂತಲೇ ಕೇಳಿದ್ದಾರೆ.
ಚಿಕ್ಕಣ್ಣನ ಗೋವಾ ವಿಡಿಯೋಗೆ ಫ್ಯಾನ್ಸ್ ಪ್ರಶ್ನೆಗಳ ಸುರಿಮಳೆ
ಇನ್ನು ಕೆಲವರಂತೂ ನೇರವಾಗಿಯೇ ಚಿಕ್ಕಣ್ಣಗೆ ಕೇಳಿ ಬಿಟ್ಟಿದ್ದಾರೆ. ಇದೇನೋ ಸರಿ ಆದರೆ ನಿಮ್ಮ ಉಪಾಧ್ಯಕ್ಷ ಸಿನಿಮಾ ರಿಲೀಸ್ ಆಗೋದು ಯಾವಾಗ ಅನ್ನೋದನ್ನ ನೇರವಾಗಿಯೇ ಕೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ಇಲ್ಲಿ ಜಾಸ್ತಿ ಇವೆ.
ಆದರೆ ಇದಕ್ಕೂ ಹೆಚ್ಚಾಗಿ ಇಲ್ಲೊಂದು ವಿಷಯ ಕೂಡ ಇದೆ. ಹಾರ್ಟ್ ಟಚ್ಚಿಂಗ್ ವಿಚಾರವನ್ನ ನಾವು ಈ ಒಂದು ಕಮೆಂಟ್ ಬಾಕ್ಸ್ ನಲ್ಲಿ ನೋಡಬಹುದು. ಹೌದು, ಚಿಕ್ಕಣ್ಣನ ಅಭಿಮಾನಿ ಅನಿಸುತ್ತದೆ. ಅಣ್ಣ ನನಗೆ ಸಹಾಯ ಮಾಡಿ, ನಾನು ನನ್ನ ಮಗನಿಗೋಸ್ಕರ ಬದುಕಬೇಕು ಅಂತ ಕೇಳಿದ್ದಾರೆ.
View this post on Instagram
ಇಷ್ಟೇ ಅಲ್ಲ ಅದಲ್ಲದೇ ಸಹಾಯಕ ಮಾಡಲು ನಂಬರ್ ಕೂಡ ಕೊಟ್ಟಿದ್ದಾರೆ. ಇದನ್ನ ಚಿಕ್ಕಣ್ಣ ನೋಡಿದ್ದಾರೋ ಇಲ್ವೋ ಆದರೆ ಎಲ್ಲ ಕಮೆಂಟ್ಸ್‌ಕ್ಕಿಂತಲೂ ಈ ಒಂದು ವಿಷಯ ಇಲ್ಲಿ ಹೆಚ್ಚು ಗಮನ ಸೆಳೆಯುತ್ತದೆ ನೋಡಿ.
ಫ್ಯಾನ್ಸ್ ಪ್ರಶ್ನೆಗೆ ಚಿಕ್ಕಣ್ಣ ಉತ್ತರ ಕೊಡೋದು ಯಾವಾಗ?
ಆದರೆ ಚಿಕ್ಕಣ್ಣ ಯಾವುದಕ್ಕೂ ಇಲ್ಲಿ ಯಾವುದೇ ರೀತಿ ಪ್ರತಿಕ್ರಿಯೆ ಕೊಟ್ಟಿಲ್ಲ. ಬದಲಾಗಿ ಸುಮ್ಮನೆ ಇದ್ದಾರೆ. ತಮ್ಮ ಗೋವಾ ಟ್ರಿಪ್‌ನ ಜಾಲಿ ಮೂಡ್‌ನಲ್ಲಿಯೇ ಇದ್ದಂತೆ ಕಾಣುತ್ತದೆ.
ಚಿಕ್ಕಣ್ಣ ತಮ್ಮ ಈ ಒಂದು ಇನ್‌ಸ್ಟ್ರಾಗ್ರಾಮ್ ಪೇಜ್ ಅಲ್ಲಿ ಈ ಒಂದು ವಿಡಿಯೋ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಇದರ ಹೊರತಾಗಿ ಇಲ್ಲಿ ಹಲವು ಫೊಟೋಗಳಿವೆ. ಶರಣ್ ಜೊತೆಗೆ ನಿಂತಿರೋ ಫೋಟೊಗಳೂ ಇವೆ.
ಗೋವಾದಲ್ಲಿ ಉಪಾಧ್ಯಕ್ಷ ಚಿಕ್ಕಣ್ಣ ಜಾಲಿ ಮೂಡ್
ಇನ್ನುಳಿದಂತೆ ಚಿಕ್ಕಣ್ಣನ ಉಪಾಧ್ಯಕ್ಷ ಸಿನಿಮಾದ ಕೆಲಸ ಬಹುತೇಕ ಪೂರ್ಣಗೊಂಡಿದೆ. ಆದರೆ ಸಿನಿಮಾ ಪ್ರಚಾರ ಕೂಡ ಇನ್ನೂ ಆದಂತಿಲ್ಲ.
ಇದನ್ನೂ ಓದಿ: Kannada Director: ಗುಳಿಗ ದೈವಕ್ಕೆ ಗುಡಿ ನಿರ್ಮಿಸಿದ ನಿರ್ದೇಶಕ! ಅಷ್ಟಕ್ಕೂ ಆಗಿದ್ದೇನು?
ಚಿತ್ರ ತಂಡ ಕೂಡ ಸಿನಿಮಾ ರಿಲೀಸ್ ಡೇಟ್ ಇನ್ನೂ ಅನೌನ್ಸ್ ಮಾಡಿಲ್ಲ. ಅದು ಬಿಟ್ಟರೆ ಉಪಾಧ್ಯಕ್ಷರ ಗೋವಾ ಟ್ರಿಪ್ ವಿಡಿಯೋ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ