• Home
  • »
  • News
  • »
  • entertainment
  • »
  • Comedy Actor Chikkanna: ಅಧ್ಯಕ್ಷ ಶರಣ್ ಮೀರಿಸ್ತಿರೋ ಉಪಾಧ್ಯಕ್ಷ ಚಿಕ್ಕಣ್ಣನ ಕಲರ್ ಫುಲ್ ಮೋಷನ್ ಪೋಸ್ಟರ್ ರಿಲೀಸ್

Comedy Actor Chikkanna: ಅಧ್ಯಕ್ಷ ಶರಣ್ ಮೀರಿಸ್ತಿರೋ ಉಪಾಧ್ಯಕ್ಷ ಚಿಕ್ಕಣ್ಣನ ಕಲರ್ ಫುಲ್ ಮೋಷನ್ ಪೋಸ್ಟರ್ ರಿಲೀಸ್

ಉಪಾಧ್ಯಕ್ಷ ಮೋಷನ್ ಪೋಸ್ಟರ್ ರಿಲೀಸ್

ಉಪಾಧ್ಯಕ್ಷ ಮೋಷನ್ ಪೋಸ್ಟರ್ ರಿಲೀಸ್

ಅಧ್ಯಕ್ಷ ಸಿನಿಮಾದಲ್ಲೂ ಕಲರ್​ ಫುಲ್ ಎಂಟ್ರಿಯನ್ನ ಹಾಸ್ಯ ನಾಯಕ ನಟ ಶರಣ್ ಮಾಡಿದ್ದರು. ಉಪಾಧ್ಯಕ್ಷ ಚಿಕ್ಕಣ್ಣ ಮೊದಲ ಮೋಷನ್ ಪೋಸ್ಟರ್ ನಲ್ಲಿ ಕಲರ್​ ಫುಲ್ ಎಂಟ್ರಿಯನ್ನೆ ಕೊಟ್ಟು ಹಾಸ್ಯ ಪ್ರಿಯರಿಗೆ ಹೊಸ ಕಿಕ್ ಕೊಡುತ್ತಿದ್ದಾರೆ.

  • Share this:

ಸ್ಯಾಂಡಲ್​ವುಡ್ ಕಾಮಿಡಿ ಆ್ಯಕ್ಟರ್ (Actor Chikkanna) ಚಿಕ್ಕಣ್ಣ ಕೊನೆಗೂ ಹೀರೋ ಆಗಿಯೇ ಬಿಟ್ಟಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಭರ್ಜರಿ ಇಂಟ್ರಡಕ್ಷನ್ ನ ಮೋಷನ್ (Motion Poster) ಪೋಸ್ಟರ್ ಕೂಡ ಈಗ ಧಮಾಕಾ ಮಾಡುತ್ತಿದೆ. ಹಾಸ್ಯದ (Comedy) ಮೂಲಕವೇ ಜನರ ಮನಸನ್ನ ಗೆದ್ದ ಕಾಮಿಡಿ ಕಲಾವಿದ ಚಿಕ್ಕಣ್ಣ , ಸೂಪರ್ ಡೂಪರ್ ಆಗಿಯೇ ಉಪಾಧ್ಯಕ್ಷ ಚಿತ್ರದಲ್ಲಿ ಕಾಣಿಸುತ್ತಿದ್ದಾರೆ. ಉಪಾಧ್ಯಕ್ಷನಿಗೆ ಹಿಟ್ಲರ್ (Hittler Kalyan) ಕಲ್ಯಾಣದ ಹೀರೋಯಿನ್ ಜೋಡಿ ಆಗಿರೋದು ವಿಶೇಷ. ಈ ವಿಶೇಷ ಜೋಡಿಯ ಈ ಚಿತ್ರದ ಫಸ್ಟ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇದು ಅಷ್ಟೇ ಕಲರ್​ ಫುಲ್ ಆಗಿಯೇ ಇದೆ. ಇನ್ನು  ಕನ್ನಡದ ಅಧ್ಯಕ್ಷರು ಯಾರೂ ಅಂತ ಹೇಳಿದ್ರೆ ಸಾಕು. ಆ ಕೂಡಲೇ ಕಾಮಿಡಿ ಹೀರೋ ಶರಣ್ ನೆನಪಿಗೆ ಬರುತ್ತಾರೆ. ಅದೇ ಅಧ್ಯಕ್ಷರ ಸಿನಿಮಾದಲ್ಲಿ ಉಪಾಧ್ಯಕ್ಷರು ಯಾರು? ಅಂತ ಹೇಳೊದೇ ಬೇಡ. ಅಲ್ಲಿ ಹಾಸ್ಯ ನಟ ಚಿಕ್ಕಣ್ಣನ ಮುಖ ಕಣ್ಮುಂದೆ ಬಂದೇ ಬಿಡುತ್ತದೆ.


ಅಧ್ಯಕ್ಷರ ಸಾಥಿ ಉಪಾಧ್ಯಕ್ಷರ ಭರ್ಜರಿ ಮೋಷನ್ ಪೋಸ್ಟರ್


ಆದರೆ ಇದೇ ಚಿಕ್ಕಣ್ಣ ಸಿನಿ ಜರ್ನಿಯ ಟ್ರ್ಯಾಕ್ ಈಗ ಬದಲಾಗಿದೆ. ನಾಯಕ ನಟರ ಜೊತೆಗೆ ಹಾಸ್ಯ ಮಾಡುತ್ತಲೇ ಭರ್ಜರಿ ಸ್ಕೋರ್ ಮಾಡುತ್ತಿದ್ದ ಚಿಕ್ಕಣ್ಣ ಫಸ್ಟ್ ಟೈಮ್ ಹೀರೋ ಆಗಿದ್ದಾರೆ.


Kannada Comedy Actor Chikkanna Acted Upadhyaksha Movie Motion Poster Release
ಉಪಾಧ್ಯಕ್ಷ ಹಾಸ್ಯ ಕಲಾವಿದ ಚಿಕ್ಕಣ್ಣ ಈಗ ಹೀರೋ


ಉಪಾಧ್ಯಕ್ಷರ ನಾಯಕತ್ವಕ್ಕೆ ದುಡ್ಡು ಹಾಕಿದ ನಿರ್ಮಾಪಕ ಉಮಾಪತಿ
ಚಿಕ್ಕಣ್ಣನ ಹೀರೋಗಿರಿಗೆ ನಿರ್ಮಾಪಕ ಉಮಾಪತಿ ಪ್ರೋಡಕ್ಷನ್ ಹೌಸ್ ದುಡ್ಡು ಹಾಕುತ್ತಿದೆ. ಮೊದಲ ಸಿನಿಮಾದ ಮೂಲಕವೇ ಚಿಕ್ಕಣ್ಣ ಹೀರೋ ಆಗಿ ಕನ್ನಡ ಇಂಡಸ್ಟ್ರೀಯಲ್ಲಿ ಸಖತ್ ಕಿಕ್ ಕೊಡಲು ಬರುತ್ತಿದ್ದಾರೆ.


ಇದನ್ನೂ ಓದಿ: Kantara Box Office Collection: ಮತ್ತಷ್ಟು ವೇಗ ಪಡೆದ ಕಾಂತಾರ ಓಟ, 5ನೇ ದಿನ ಕಲೆಕ್ಷನ್ ಎಷ್ಟು?


ಉಪಾಧ್ಯಕ್ಷ ಸಿನಿಮಾ ಮೂಲಕ ಚಿಕ್ಕಣ್ಣ ಹೀರೋ ಆಗಿದ್ದಾರೆ. ಡೈರೆಕ್ಟರ್ ಅನಿಲ್ ಕುಮಾರ್ ಇಲ್ಲಿ ಚಿಕ್ಕಣ್ಣನನ್ನ ಡೈರೆಕ್ಟ್ ಮಾಡಿದ್ದಾರೆ. ಪಕ್ಕಾ ಹಾಸ್ಯಮಯ ಸಿನಿಮಾದ ಬಹುತೇಕ ಕೆಲಸ ಪೂರ್ಣಗೊಂಡಿದೆ.


ಇದೇ ಡಿಸೆಂಬರ್ ತಿಂಗಳಲ್ಲಿ ಉಪಾಧ್ಯಕ್ಷ ಸಿನಿಮಾ ರಿಲೀಸ್
ನಾಯಕ ನಟ ಚಿಕ್ಕಣ್ಣ ಸೇರಿದಂತೆ ಚಿತ್ರದ ಇತರ ಪಾತ್ರಗಳೂ ತಮ್ಮ ಡಬ್ಬಿಂಗ್ ಕೆಲಸವನ್ನೂ ಪೂರ್ಣಗೊಳಿಸಿವೆ. ಇದೇ ಡಿಸೆಂಬರ್ ತಿಂಗಳಲ್ಲಿ ಚಿಕ್ಕಣ್ಣ ಹೀರೋ ಆಗಿರೋ ಈ ಉಪಾಧ್ಯಕ್ಷ ಸಿನಿಮಾ ರಿಲೀಸ್ ಆಗುತ್ತಿದೆ.
ಉಪಾಧ್ಯಕ್ಷ ಚಿಕ್ಕಣ್ಣನ ಕಲರ್​​ಫುಲ್ ಮೋಷನ್ ಪೋಸ್ಟರ್ ರಿಲೀಸ್
ಚಿಕ್ಕಣ್ಣನ ಉಪಾಧ್ಯಕ್ಷ ಸಿನಿಮಾದ ಕೆಲಸ ಬಹುತೇಕ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ಮೋಷನ್ ಪೋಸ್ಟರ್ ನಲ್ಲಿ ಚಿಕ್ಕಣ್ಣನ ಸಖತ್ ಎಂಟ್ರಿ ಕೂಡ ಇದೆ.


ಅಧ್ಯಕ್ಷ ಸಿನಿಮಾದಲ್ಲೂ ಇದೇ ರೀತಿಯ ಕಲರ್​ ಫುಲ್ ಎಂಟ್ರಿಯನ್ನ ಹಾಸ್ಯ ನಾಯಕ ನಟ ಶರಣ್ ಮಾಡಿದ್ದರು. ಉಪಾಧ್ಯಕ್ಷ ಚಿಕ್ಕಣ್ಣ ಮೊದಲ ಮೋಷನ್ ಪೋಸ್ಟರ್ ನಲ್ಲಿ ಕಲರ್​ ಫುಲ್ ಎಂಟ್ರಿಯನ್ನೆ ಕೊಟ್ಟು ಹಾಸ್ಯ ಪ್ರಿಯರಿಗೆ ಹೊಸ ಕಿಕ್ ಕೊಡುತ್ತಿದ್ದಾರೆ.


Kannada Comedy Actor Chikkanna Acted Upadhyaksha Movie Motion Poster Release
ಹಾಸ್ಯ ಕಲಾವಿದ ಚಿಕ್ಕಣ್ಣನ ಸಖತ್  ಲುಕ್


ಅರ್ಜುನ್ ಜನ್ಯ ಸಂಗೀತದ ಈ ಚಿತ್ರಕ್ಕೆ ಕೆ.ಎಲ್.ರಾಜಶೇಖರ್ ಡೈಲಾಗ್ ಬರೆದಿದ್ದಾರೆ. ಮೋಹನ್ ಬಿ.ಕೆರೆ ಕಲಾ ನಿರ್ದೇಶನದಲ್ಲಿಯೇ ಈ ಸಿನಿಮಾ ಇನ್ನಷ್ಟು ಕಲರ್​ಫುಲ್ ಆಗಿಯೇ ಇದೆ.


ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದ ಚಿಕ್ಕಣ್ಣ


ಇನ್ನುಳಿದಂತೆ ಚಿತ್ರದ ನಾಯಕಿ ಹಿಟ್ಲರ್ ಕಲ್ಯಾಣ ಚಿತ್ರದ ನಟಿ ಮಲೈಕಾ ವಾಸುಪಾಲ್ ಇಲ್ಲಿ ಚಿಕ್ಕಣ್ಣನಿಗೆ ಜೋಡಿಯಾಗಿದ್ದಾರೆ. ಈ ಜೋಡಿಯ ಸಿನಿಮಾದ ನಿರೀಕ್ಷೆನೂ ಈಗ ಜೋರಾಗಿಯೇ ಇದೆ.


ಇದನ್ನೂ ಓದಿ: Sonu Sood: ರೈಲ್ವೇ ಸ್ಟೇಷನ್ ನಲ್ಲಿ ನೀರು ಯಾವ ಬಿಸ್ಲೇರಿ ನೀರಿಗೂ ಕಡಿಮೆ ಇಲ್ಲ! ಎಂದ ಸೋನು ಸೂದ್


ಅಧ್ಯಕ್ಷ ಮೂಲಕ ಹಾಸ್ಯ ನಾಯಕ ನಟ ಶರಣ್ ಜನರ ದಿಲ್ ಕದ್ದರು.  ತಮ್ಮ ಹಾಸ್ಯ ನಾಯಕತ್ವದ ಖದರ್ ಅನ್ನೇ ತೋರಿದರು. ಈಗ ಉಪಾಧ್ಯಕ್ಷರ ಸರದಿ ಬಂದಿದೆ. ಈ ಮೂಲಕ ಚಿಕ್ಕಣ್ಣ ಹೀರೋ ಆಗಿಯೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

First published: