• Home
  • »
  • News
  • »
  • entertainment
  • »
  • Mellusire Remix: ಹಳೆ ಹಾಡು ಹೊಸ ಕಿಕ್! ದೆವ್ವದ ಸಿನಿಮಾದಲ್ಲಿ ಕ್ಲಾಸಿಕ್ ಸಾಂಗ್

Mellusire Remix: ಹಳೆ ಹಾಡು ಹೊಸ ಕಿಕ್! ದೆವ್ವದ ಸಿನಿಮಾದಲ್ಲಿ ಕ್ಲಾಸಿಕ್ ಸಾಂಗ್

ವೀರ ಕೇಸರಿ ಚಿತ್ರದ ಮೆಲ್ಲುಸಿರೇ ಸವಿಗಾನ ಈಗ ಮರು ಬಳಕೆ

ವೀರ ಕೇಸರಿ ಚಿತ್ರದ ಮೆಲ್ಲುಸಿರೇ ಸವಿಗಾನ ಈಗ ಮರು ಬಳಕೆ

ಸ್ಪೂಕಿ ಕಾಲೇಜ್ ಅನ್ನೋ ಚಿತ್ರದಲ್ಲಿ ಮೆಲ್ಲುಸಿರೇ ಸವಿಗಾನ ರಿಮಿಕ್ಸ್ ಆಗಿದೆ. ಹಳೆ ಹಾಡನ್ನ ತಮ್ಮ ಕಥೆಗೆ ಸರಿ ಹೊಂದುವ ರೀತಿಯಲ್ಲಿಯೇ ಇಲ್ಲಿ ಚಿತ್ರೀಕರಿಸಲಾಗಿದೆ. ರಿಷ್ಮಾ ನಾಣಯ್ಯ ಈ ಹಾಡಿನಲ್ಲಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸೋ ಹಾಗೇ ಡ್ಯಾನ್ಸ್ ಮಾಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ರಾಜ್​ ಕುಮಾರ್ (Rajkumar Cinema) ಸಿನಿಮಾ ಅದು. ಲೀಲಾವತಿ ಈ ಚಿತ್ರದ (Leelavathi) ನಾಯಕಿ ಆಗಿದ್ದರು. ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರ ಅನ್ನೋದು ಅಷ್ಟೇ ವಿಶೇಷ. ಈ ಚಿತ್ರದಲ್ಲಿ ಒಂದು ಹಾಡಿತ್ತು. ಇದು ಅಂದಿನ ಕಾಲದಲ್ಲಿ ಹೊಸ ಅಲೆಯನ್ನ ಎಬ್ಬಿಸಿತ್ತು. ಘಂಟಸಾಲಾ (Ghantasala) ಸಂಗೀತದ ಈ ಗೀತೆಯನ್ನ ಪಿ.ಸುಶೀಲಾ ಮತ್ತು ಘಂಟಸಾಲಾ ಹಾಡಿದ್ದರು. ಈ ಗೀತೆಯನ್ನ ಕೆ.ಆರ್.ಸೀತಾರಾಮ್ ಶಾಸ್ತ್ರಿಗಳು ಬರೆದಿದ್ದರು. ಹೌದು, ಆ ಚಿತ್ರದ ಹೆಸರು (Veera Kesari) ವೀರ ಕೇಸರಿ. ಈ ಚಿತ್ರದ ಆ ಮೆಲ್ಲುಸಿರೆ ಸವಿಗಾನ ಹಾಡು ಅತಿ ಹೆಚ್ಚು ಗಮನ ಸೆಳೆದಿತ್ತು. ಈಗಿನವರು ಕೇಳಿದ್ರು ಅಷ್ಟೆ, ಸಣ್ಣಗೆ ಒಂದು ಫೀಲ್ ಮೂಡುತ್ತಿತ್ತು. ಅದೇ ಗೀತೆಯನ್ನೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಕಾಲದ ಹುಡುಗರಿಗೆ ಇಷ್ಟವಾಗೋ ರೀತಿಯಲ್ಲಿ ಕೊಟ್ಟಿದ್ದಾರೆ. ಅದರ ಇನ್ನಷ್ಟು ಡಿಟೈಲ್ಸ್ ಇಲ್ಲಿದೆ.


ಮೆಲ್ಲುಸಿರೇ ಸವಿಗಾನ ಹಾಡಿಗೆ ಮಾದಕ ಸ್ಪರ್ಶ


ಮೆಲ್ಲುಸಿರೇ ಸವಿಗಾನ ಹಾಡಿಗೆ ವಿಶೇಷ ಸ್ಪರ್ಶ ಬಂದಿದೆ. ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದಲ್ಲಿ ಈ ಗೀತೆಗೆ ಸರಳ ಮತ್ತು ಸುಮಧುರು ಸ್ಪರ್ಶ ಮಾತ್ರ ಇತ್ತು. ಅದನ್ನ ಕೇಳಿದ ಅಂದಿನ ಮಂದಿ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದರು. ವೀರ ಕೇಸರಿ ಚಿತ್ರದ ಈ ಹಾಡಿಗೆ ಅಂದು ನಟಿ ಲೀಲಾವತಿ ತುಂಬಾ ಸುಂದರವಾಗಿಯೇ ಅಭಿನಯಿಸಿದ್ದರು.




ಡಾಕ್ಟರ್ ರಾಜಕುಮಾರ್ ಅವರು ಈ ಗೀತೆಯಲ್ಲಿ ವೀರ ಕೇಸರಿಯಾಗಿಯೇ ಮಿಂಚಿದರು. ಮೆಲ್ಲುಸಿರೇ ಸವಿಗಾನ ಅಂತಲೇ ಜೋಡಿಯಾಗಿ ಈ ಹಾಡಿನಲ್ಲಿ ಮೋಡಿ ಮಾಡಿದ್ದರು. ಮೆಲ್ಲುಸಿರೇ ಸವಿಗಾನ ಹಾಡು ಅಂದಿನ ಕಾಲದ ಬಿಗ್ ಹಿಟ್ ಹಾಡಂದ್ರೂ ತಪ್ಪಿಲ್ಲ.


Kannada Classic Song Remix in Spooky Collage Film
ಸ್ಪೂಕಿ ಕಾಲೇಜ್ ಚಿತ್ರದಲ್ಲಿ ಮೆಲ್ಲುಸಿರೇ ಸವಿಗಾನದ ಸವಿ


ವೀರ ಕೇಸರಿ ಮೆಲ್ಲುಸಿರೇ ಸವಿಗಾನ ಈಗ ಮರು ಬಳಕೆ
ಕಾಂತಾರ ಸಿನಿಮಾ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಳೆ ಕ್ಲಾಸಿಕ್ ಹಾಡಿಗೆ ಹೊಸ ಟಚ್ ಕೊಟ್ಟಿದ್ದಾರೆ. ಅಂದು ತುಂಬಾ ನಿಧಾನಕ್ಕೆ ಇದ್ದ ಮೆಲ್ಲುಸಿರೇ ಸವಿಗಾನವನ್ನ ರಿಮಿಕ್ಸ್ ಮಾಡಿ ಮತ್ತಷ್ಟು ಇನ್ನಷ್ಟು ಸ್ಪೀಡ್ ಮಾಡಿದ್ದಾರೆ. ಅದೇ ಹಾಡನ್ನ ಈಗ ಕೇಳಿದ್ರೆ ಫೀಲ್ ಬೇರೆ ಆಗುತ್ತದೆ.




ಮೆಲ್ಲುಸಿರೇ ಸವಿಗಾನ ಹಾಡಿನ ವೀಡಿಯೋ ರಿಲೀಸ್
ಮೆಲ್ಲುಸಿರೇ ಸವಿಗಾನ ರಿಮಿಕ್ಸ್ ಹಾಡಿನ ವೀಡಿಯೋ ಈಗ ರಿಲೀಸ್ ಆಗಿದೆ. ಇದು ಈ ಕಾಲದ ಪಕ್ಕಾ ಮಾದಕ ಗೀತೆ ಆಗಿ ಬಿಟ್ಟಿದೆ. ಕೇಳುವ ಯುವಕರಿಗೆ ಒಂದು ವಿಶೇಷ ಫೀಲ್ ಅನ್ನೂ ಕೊಡ್ತಾಯಿದೆ. ವಿಶೇಷವಾಗಿಯೇ ಈ ಒಂದು ಗೀತೆಯನ್ನ ಚಿತ್ರೀಕರಿಸಲಾಗಿದೆ.


ಸ್ಪೂಕಿ ಕಾಲೇಜ್ ಚಿತ್ರದಲ್ಲಿ ಮೆಲ್ಲುಸಿರೇ ಸವಿಗಾನದ ಸವಿ
ಸ್ಪೂಕಿ ಕಾಲೇಜ್ ಅನ್ನೋ ಚಿತ್ರದಲ್ಲಿಯೇ ಮೆಲ್ಲುಸಿರೇ ಸವಿಗಾನ ಹಾಡು ರಿಮಿಕ್ಸ್ ಆಗಿದೆ. ಹಳೆ ಹಾಡನ್ನ ತಮ್ಮ ಕಥೆಗೆ ಸರಿ ಹೊಂದುವ ರೀತಿಯಲ್ಲಿಯೇ ಇಲ್ಲಿ ಚಿತ್ರೀಕರಿಸಲಾಗಿದೆ. ರಿಷ್ಮಾ ನಾಣಯ್ಯ ಈ ಹಾಡಿನಲ್ಲಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸೋ ಹಾಗೇನೆ ಡ್ಯಾನ್ಸ್ ಮಾಡಿದ್ದಾರೆ.


ದಾಂಡೇಲಿ ಕಾಡಿನಲ್ಲಿ ಮೆಲ್ಲುಸಿರೇ ಸವಿಗಾನ ಹಾಡಿನ ಚಿತ್ರೀಕರಣ
ಮೆಲ್ಲುಸಿರೇ ಸವಿಗಾನ ಹಾಡನ್ನ ಡೈರೆಕ್ಟರ್ ಭರತ್ ಜಿ. ಅದ್ಭುತವಾಗಿಯೇ ಚಿತ್ರೀಕರಿಸಿಕೊಂಡು ಬಂದಿದ್ದಾರೆ. ನೃತ್ಯಗಾರ್ತಿಯರ ಜೊತೆಗೆ ನಟಿ ರಿಷ್ಮಾ ನಾಣಯ್ಯ ಚಿತ್ರದಲ್ಲಿ ಅದ್ಭುತವಾಗಿಯೇ ನೃತ್ಯ ಮಾಡಿದ್ದಾರೆ.




ಇದರಿಂದ ಮೆಲ್ಲುಸಿರೇ ಸವಿಗಾನ ಹಾಡಿಗೆ ವಿಶೇಷ ಫೀಲ್ ಕೂಡ ಬಂದಿದೆ. ಇದಕ್ಕೂ ಹೆಚ್ಚಾಗಿ, ಪಿ.ಸುಶೀಲಾ ಹಾಡಿದ್ದ ಈ ಗೀತೆಯನ್ನ ಇಲ್ಲಿ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಈಗೀನ ಟ್ರೆಂಡ್​​ಗೆ ತಕ್ಕನಾಗಿಯೇ ಹಾಡಿ ಯುವಕರ ದಿಲ್ ಕದ್ದಿದ್ದಾರೆ.


ಮೆಲ್ಲುಸಿರೇ ಸವಿಗಾನಕ್ಕೆ ಹಾರರ್ ಟಚ್ ಬಂದಿದಿಯೇ?
ಹೌದು, ಈ ಒಂದು ಪ್ರಶ್ನೆ ರಿಮಿಕ್ಸ್ ಹಾಡನ್ನ ನೋಡಿದಾಗ ಹುಟ್ಟುತ್ತದೆ. ರಿಷ್ಮಾ ನಾಣಯ್ಯ ಈ ಹಾಡಿನಲ್ಲಿ ನೃತ್ಯ ಮಾಡ್ತಾನೇ, ಸ್ಕೇರಿ ಎಕ್ಸಪ್ರೆಷನ್ ಕೂಡ ಕೊಡ್ತಾರೆ.


ಇದನ್ನೂ ಓದಿ: Kannada Mata Film Controversy: ಮಠ ಚಿತ್ರದ ಸುತ್ತ ವಿವಾದದ ಹುತ್ತ! ಟ್ರೈಲರ್ ನೋಡಿ ಫುಲ್ ಗರಂ ಆಗಿದ್ಯಾಕೆ ಕಾಳಿ ಸ್ವಾಮಿ?


ಅಲ್ಲಿಗೆ ಈ ಹಾರರ್ ಸಿನಿಮಾದಲ್ಲಿ ದೆವ್ವದ ರೂಪದಲ್ಲಿಯೇ ರಿಷ್ಮಾ ನಾಣಯ್ಯ ಕಾಣಿಸಿಕೊಳ್ತಾರೋ ಏನೋ. ಆದರೆ ಸದ್ಯ ಹೊರ ಬಿದ್ದ ಈ ಗೀತೆ ಎಲ್ಲರನ್ನೂ ಸೆಳೆಯುವಂತೆನೂ ಇದೆ.

First published: