ಕನ್ನಡದ ಕಣ್ಮಣಿ ಡಾಕ್ಟರ್ ರಾಜಕುಮಾರ್ ಅವರು (Kannada Classic Movie) ಒಪ್ಪಿಕೊಂಡಿದ್ದರೇ, ಒಳ್ಳೆ ಡೈರೆಕ್ಟರ್ ಆಗುತ್ತಿದ್ದರು. ಆಯಾ ಪಾತ್ರಕ್ಕೆ ಯಾವ ಕಲಾವಿದರು ಸೂಟ್ ಆಗುತ್ತಾರೆ ಅನ್ನುವ ಸ್ಪಷ್ಟ ಕಲ್ಪನೆ ರಾಜ್ ಅವರಿಗೆ ಇರ್ತಾ ಇತ್ತು. ಅವರ ಸಿನಿಮಾಗಳ ಕಾಸ್ಟಿಂಗ್ ವಿಷಯದಲ್ಲಿ ಏನದರೂ (Sampathige Savaal Facts) ಗೊಂದಲ್ಲ ಇದ್ದರೇ, ರಾಜಕುಮಾರ್ ಅವರ ಬಳಿ ಸಲಹೆ ಕೇಳಲಾಗುತ್ತಿತ್ತು. ಆ ಸಲಹೆ ನಿಜಕ್ಕೂ ವರ್ಕೌಟ್ ಆಗುತ್ತಿದ್ದವು. ರಾಜಕುಮಾರ್ ಅವರು (Classic Sampathige Savaal Movie) ರಂಗಭೂಮಿಯಿಂದಲೇ ಬೆಳ್ಳಿ ತೆರೆಗೆ ಬಂದವರಲ್ಲವೇ, ಆದ್ದರಿಂದ ಅವರಿಗೆ ಕಲಾವಿದರ ಆಯ್ಕೆಯ ಬಗೆಗಿನ ವಿಷಯ ತಿಳಿದಿತ್ತು. ಹಾಗಾಗಿಯೆ ರಾಜಕುಮಾರ್ ಸಿನಿಮಾಗಳ ಹಿಂದೆ (Super Hit Movie) ಸಾಕಷ್ಟು ಕತೆಗಳಿವೆ.
ಅಂತಹ ಕಥೆಗಳಲ್ಲಿ ಸಂಪತ್ತಿಗೆ ಸವಾಲ್ ಚಿತ್ರದ ನಿರ್ಮಾಣದ ಸಮಯದಲ್ಲೂ ಒಂದಷ್ಟು ವಿಶೇಷ ಕಥೆಗಳಿವೆ. ಅವುಗಳನ್ನ ಇಲ್ಲಿ ಹೇಳಿದ್ದೇವೆ ಓದಿ.
ಡಾಕ್ಟರ್ ರಾಜಕುಮಾರ್ ಅಭಿನಯದ ಸಂಪತ್ತಿಗೆ ಸವಾಲ್ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ರಾಜಕುಮಾರ್ ಅವರ ಅಭಿನಯ ಅಮೋಘವಾಗಿಯೇ ಇತ್ತು. ಜನ ರಾಜಕುಮಾರ್ ಅವರ ವೀರಭದ್ರ ಪಾತ್ರವನ್ನ ಬಹುವಾಗಿಯೇ ಮೆಚ್ಚಿಕೊಂಡರು. ಅದನ್ನ ತುಂಬಾನೆ ಕೊಂಡಾಡಿದರು.
ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಹಾಡು ಸೂಪರ್ ಹಿಟ್
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ರಾಜಕುಮಾರ್ ಅವರು ಒಂದು ಹಾಡನ್ನ ಹಾಡಿದ್ದರು. ಯಾರೇ ಕೂಗಾಡಲಿ ಅನ್ನುವ ಈ ಗೀತೆ ತುಂಬಾ ಹಿಟ್ ಆಯಿತು. ಅಲ್ಲಿವರೆಗೂ ರಾಜಕುಮಾರ್ ಒಬ್ಬ ಕಲಾವಿದರಾಗಿ ಮಾತ್ರ ಉಳಿದಿದ್ದರು. ಆದರೆ ಸಂಪತ್ತಿಗೆ ಸವಾಲ್ ಚಿತ್ರದ ಮೂಲಕ ಗಾಯಕರೂ ಆದರು.
ಯಾರೇ ಕೂಗಾಡಲಿ ಹಾಡನ್ನ ಎಂದಿನಂತೆ ಪಿ.ಬಿ.ಶ್ರೀನಿವಾಸ್ ಹಾಡಬೇಕಿತ್ತು. ಚಿತ್ರದ ಸಂಗೀತ ನಿರ್ದೇಶಕ ಜಿ. ಕೆ. ವೆಂಕಟೇಶ್ ಅವರು ಇವರನ್ನೆ ಫಿಕ್ಸ್ ಮಾಡಿದ್ದರು. ಆದರೆ ಪಿ. ಬಿ. ಶ್ರೀನಿವಾಸ್ ಅವರು ಆ ಟೈಮ್‌ಲ್ಲಿ ತುಂಬಾ ಬ್ಯುಸಿ ಆಗಿದ್ದರು.
ಸಂಪತ್ತಿಗೆ ಸವಾಲ್ ಮೂಲಕ ಗಾಯಕರಾದ ರಾಜಕುಮಾರ್
ಈ ಒಂದು ಕಾರಣಕ್ಕೆ ದಾರಿ ಇಲ್ಲದೇ, ಜಿ. ಕೆ. ವೆಂಕಟೇಶ್ ಒಂದು ನಿರ್ಧಾರ ತೆಗೆದುಕೊಂಡರು. ಡಾಕ್ಟರ್ ರಾಜಕುಮಾರ್ ಅವರೇ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ ಹಾಡನ್ನ ಹಾಡಲಿ ಅಂತ ಹೇಳಿದರು. ಅದಕ್ಕೊಪ್ಪಿದ ರಾಜಕುಮಾರ್, ಹಾಡನ್ನ ಹಾಡಿಯೇ ಬಿಟ್ಟರು. ಆ ಗೀತೆ ಇಡೀ ಕನ್ನಡ ನಾಡಿನ ಜನಕ್ಕೆ ಇಷ್ಟ ಆಯಿತು.
ಇಲ್ಲಿಂದಲೇ ಡಾಕ್ಟರ್ ರಾಜಕುಮಾರ್ ಗಾಯಕರಾದರು. ಇವರ ಮುಂದಿನ ಎಲ್ಲ ಚಿತ್ರಗಳಲ್ಲೂ ರಾಜ್ ಹಾಡೋಕೆ ಆರಂಭಿಸಿದರು. ಆ ಕಾರಣಕ್ಕೇನೆ ಪಿ. ಬಿ. ಶ್ರೀನಿವಾಸ್ ಅವರು ರಾಜ್ ಚಿತ್ರಗಳಿಗೆ ಹಾಡೋದು ಕಡಿಮೆ ಆಗುತ್ತಲೇ ಹೋಯಿತು.
ಸಂಪತ್ತಿಗೆ ಸವಾಲ್ ಚಿತ್ರದ ದುರ್ಗಿ ಪಾತ್ರಕ್ಕೆ ಮೊದಲು ಜಯಂತಿ ಆಯ್ಕೆ
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ನಾಯಕ ವೀರಭದ್ರನ ಪಾತ್ರಕ್ಕೆ ಜಯಂತಿ ಅವರು ಆಯ್ಕೆ ಆಗಿದ್ದರು. ಅದರೆ ರಾಜಕುಮಾರ್ ಒಂದು ಸಲಹೆ ಕೊಟ್ಟರು. ದುರ್ಗಾ ಪಾತ್ರಕ್ಕೆ ಜಯಂತಿ ಸೂಟ್ ಆಗೋದಿಲ್ಲ. ಒಂದು ಕೆಲಸ ಮಾಡಿ, ಕಲಾವಿದೆ ಮಂಜುಳಾ ಈ ಒಂದು ಪಾತ್ರಕ್ಕೆ ತುಂಬಾ ಹೊಂದಿಕೆ ಆಗ್ತಾರೆ ಅಂತ ಹೇಳಿದರು.
ಡೈರೆಕ್ಟರ್ ಎ. ವಿ. ಶೇಷಗಿರಿ ರಾವ್ ಜಯಂತಿ ಬದಲು, ಮಂಜುಳಾ ಅವರನ್ನ ಹಾಕಿಕೊಂಡು ಈ ಚಿತ್ರ ಮಾಡಿದರು. ರಾಜ್ ಹೇಳಿದಂತೆ ಮಂಜುಳಾ ಇಡೀ ಚಿತ್ರದಲ್ಲಿ ಆವರಿಸಿಕೊಂಡರು. ರಾಜ್ ಮತ್ತು ಮಂಜುಳಾ ಅವರ ಮುಖಾ-ಮುಖಿ ಡೈಲಾಗ್ ಕೂಡ ಸೂಪರ್ ಆಗಿಯೇ ಬಂದಿದ್ದವು.
ಸಾಹುಕಾರ ನಾಟಕವೇ ಸಂಪತ್ತಿಗೆ ಸವಾಲ್ ಚಿತ್ರಕ್ಕೆ ಆಧಾರ
ಸಂಪತ್ತಿಗೆ ಸವಾಲ್ ಚಿತ್ರ ನಾಟಕವೊಂದನ್ನ ಆಧರಿಸಿ ತೆಗೆದ ಚಿತ್ರವಾಗಿದೆ. ಬಿ. ಪಿ. ದುತ್ತರಿಗೆ ಬರೆದ ಸಾಹುಕಾರ ನಾಟಕ ಇದಾಗಿತ್ತು. ಇದನ್ನ ಆಧರಿಸಿ ಸಿನಿಮಾ ಮಾಡೋವಲ್ಲಿ ಅನೇಕರು ವಿಫಲರಾಗಿದ್ದರು. ಆದರೆ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ಈ ನಾಟಕವನ್ನ ಚಿತ್ರ ಮಾಡಬೇಕು ಅಂತ ಆಸೆ ಪಟ್ಟಿದ್ದರು.
ಅದರಂತೆ ಚಿ. ಉದಯಶಂಕರ್ ಅವರು ಕನಕಪುರದಲ್ಲಿ ಈ ಒಂದು ನಾಟಕವನ್ನ ನೋಡಿದರು. ಅದಾದ್ಮೇಲೆ ಸಿನಿಮಾಕ್ಕೆ ಚಿತ್ರಕಥೆ ಬರೆದರು. ಅದೇ ಚಿತ್ರಕಥೆಯನ್ನ ಡೈರೆಕ್ಟರ್ ಎ. ವಿ. ಶೇಷಗಿರಿ ರಾವ್ ಡೈರೆಕ್ಟ್ ಮಾಡಿದರು.
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ವಜ್ರಮುನಿ ಅಬ್ಬರ ಬಲು ಜೋರು
ವಜ್ರಮುನಿ ಅವರು ಈ ಚಿತ್ರದಲ್ಲಿ ಸಾಹುಕಾರ ಸಿದ್ದಪ್ಪ ಪಾತ್ರವನ್ನ ಅದ್ಭುತವಾಗಿಯೇ ನಿರ್ವಹಿಸಿದ್ದರು. ಮಂಜುಳಾ ತಂದೆಯಾಗಿ ಕೆಂಡಾಮಂಡಲವಾಗಿಯೇ ಅಭಿನಯಿಸಿದ್ದರು. ಹಿರಿಯ ನಟ ಬಾಲಕೃಷ್ಣ ಅವರು ಪುಟ್ಟಪ್ಪ ಅನ್ನುವ ಪಾತ್ರವನ್ನ ಮಾಡಿ ನಗಿಸೋ ಕೆಲಸವನ್ನೂ ಮಾಡಿದರು.
ಇದನ್ನೂ ಓದಿ: Bollywood: ಆ ನಿರ್ದೇಶಕ ನನ್ನನ್ನು ರೂಮಿಗೆ ಕರೆದುಕೊಂಡು ಹೋಗಿದ್ದ; ಕಾಸ್ಟಿಂಗ್ ಕೌಚ್ ಕರಾಳ ಅನುಭವ ಬಿಚ್ಚಿಟ್ಟ ವಿದ್ಯಾ ಬಾಲನ್
ಚಿ. ಉದಯ್ ಶಂಕರ್ ಮತ್ತು ಆರ್. ಎನ್. ಜಯಗೋಪಾಲ್ ಬರೆದ ಹಾಡುಗಳು ಕೂಡ ಅದ್ಭುತವಾಗಿ ಬಂದಿದ್ದವು. ಹಾಗೇನೆ ಈ ಚಿತ್ರವನ್ನ ಮ್ಯೂಸಿಕಲ್ ಹಿಟ್ ಅಂತಲೂ ಕರೆಯುತ್ತಾರೆ. 1974 ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರ ಕನ್ನಡದ ಕ್ಲಾಸಿಕ್ ಸಿನಿಮಾ ಲಿಸ್ಟ್‌ಲ್ಲಿಯೇ ಇದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ