V Ravichandran: ಕ್ರೇಜಿ ಸ್ಟಾರ್ ಕಚೇರಿಯಲ್ಲಿ ಇಂದಿರಾ ಗಾಂಧಿ ಫೋಟೋ!

ಇಂದಿರಾ ಗಾಂಧಿ ಫೋಟೋ ಮತ್ತು ನಾಗರಹಾವು ಸಿನಿಮಾ!

ಇಂದಿರಾ ಗಾಂಧಿ ಫೋಟೋ ಮತ್ತು ನಾಗರಹಾವು ಸಿನಿಮಾ!

ಈ ಅರ್ಜಿ ವಿಚಾರ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ತಿಳಿಯಿತಂತೆ. ಆಗ ಇಂದಿರಾ ಅವರು ಡೈರೆಕ್ಟರ್ ಪುಟ್ಟಣ್ಣನವರ ಬಗ್ಗೆ ತಿಳಿದುಕೊಂಡರಂತೆ. ಅವರ ಸಿನಿಮಾಗಳ ಬಗ್ಗೆ ತಿಳಿದುಕೊಂಡ ಮೇಲೆ ಚಿತ್ರದುರ್ಗದಲ್ಲಿ ಚಿತ್ರೀಕರಿಸಲು ಪರವಾನಗಿ ಕೊಟ್ಟರು ಅನ್ನೋ ಕಥೆ ಇದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದ ಸಿನಿಮಾ (Kannada Movie Inudustry) ಹಬ್ ಯಾವುದು? ಎಲ್ಲಿದೆ ಕನ್ನಡ ಸಿನಿಮಾರಂಗದ ಆ ಹಬ್? ಈ ಒಂದು ಪ್ರಶ್ನೆಗೆ ಗಾಂಧಿನಗರ ಅಂತಲೇ ಹೇಳಬೇಕು. ಈಗ ಸಿನಿಮಾ (Movie Office) ಆಫೀಸ್​ಗಳು ಇಲ್ಲಿಯೇ ಇವೆ. ಆ ಒಂದು ಕಾಲದಲ್ಲಿ (Bangalore Gandhinagara) ಗಾಂಧಿನಗರ ಸಿನಿಮಾ ಕಚೇರಿಗಳ ದೊಡ್ಡ ಹಬ್ ಆಗಿತ್ತು. ಇಲ್ಲಿ ಅನೇಕ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಎಲ್ಲರೂ ಬರುತ್ತಿದ್ದರು. ಸಿನಿಮಾ ವಿತರಿಸೋ ಕಚೇರಿಗಳೂ ಇಲ್ಲಿಯೇ ಇದ್ದವು. ಗಾಂಧಿನಗರದಲ್ಲಿ ರಾಜ್​ ಕುಮಾರ್ ಫ್ಯಾಮಿಲಿಯ ವಜ್ರೇಶ್ವರಿ ಆಫೀಸ್ ಕೂಡ ಇದೆ. ಇದೇ ಸಾಲಿನಲ್ಲಿಯೇ ಕ್ರೇಜಿ ಸ್ಟಾರ್ ರವಿಚಂದ್ರನ್ ತಂದೆ (Veeraswamy Film Producer) ವೀರಸ್ವಾಮಿ ಅವರ ಈಶ್ವರಿ ಆಫೀಸ್ ಕೂಡ ಇತ್ತು. ಆ ಕಚೇರಿಗೆ ಕಾಲಿಟ್ಟರೇ ಸಾಕು, ಅಲ್ಲೊಂದು ಫೋಟೋ ಎಲ್ಲರನ್ನು ಆಕರ್ಷಿಸುತ್ತಿತ್ತು.


ಗಾಂಧಿನಗರದ ಈಶ್ವರಿ ಕಚೇರಿಯಲ್ಲಿ ಇಂದಿರಾ ಫೋಟೋ!


ಗಾಂಧಿನಗರದಲ್ಲಿ ಸಿನಿಮಾ ಕಚೇರಿಗಳು ಸಾಕಷ್ಟು ಇದ್ದವು. ಆದರೆ ಈಗ ಆ ವೈಭವ ಅಷ್ಟೇನೂ ಕಾಣೋದಿಲ್ಲ. ಆದರೂ ಕಚೇರಿಗಳು ಇಲ್ಲಿ ಇಲ್ವೇ ಇಲ್ಲ ಅಂತ ಹೇಳಿದ್ರೆ ತಪ್ಪಾಗುತ್ತದೆ. ಸಿನಿಮಾ ವಿತರಕ ಕಚೇರಿಗಳು, ಸಿನಿಮಾ ನಿರ್ಮಾಪಕರ ಕಚೇರಿಗಳು ಹೀಗೆ ಎಲ್ಲವೂ ಇಲ್ಲಿ ಇನ್ನೂ ಇವೆ.


Kannada Classic Naagarahaavu Movie Unknown Intresting Facts
ಹೆಚ್ಚು ಕಡಿಮೆ 15 ದಿನ ಪುರಾತತ್ವ ಇಲಾಖೆ ಕಚೇರಿ ಸುತ್ತಾಟ!


ಗಾಂಧಿನಗರದ ಈ ಒಂದು ಏರಿಯಾದಲ್ಲಿ ಸಿನಿಮಾ ಚಟುವಟಿಕೆಗಳು ಸದಾ ಇರುತ್ತದೆ. ಕೊರೊನಾ ಟೈಮ್​ಲ್ಲಿ ಏನಂದ್ರೆ ಏನೂ ಇರಲಿಲ್ಲ ಅನ್ನುವ ಸತ್ಯ ಗೊತ್ತೇ ಇದೆ. ಅದೇ ಗಾಂಧಿನಗರದಲ್ಲಿ ಈಗ ಮತ್ತೆ ಲೈಫ್ ಸುಧಾರಿಸಿಕೊಂಡಿದೆ. ಎಂದಿನಂತೆ ಸಿನಿಮಾ ಚಟುವಟಿಕೆಗಳು ಇಲ್ಲಿ ಸಾಗುತ್ತಲೇ ಇವೆ.




ಗಾಂಧಿನಗರದ ಆ ದಿನಗಳ ಇಂಟ್ರಸ್ಟಿಂಗ್ ಕಥೆ ಏನು ಗೊತ್ತೇ?
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಈಶ್ವರಿ ಪಿಕ್ಚರ್ಸ್ ಕಚೇರಿಯಲ್ಲಿ ಒಳಗಡೆ ಹೋದ್ರೆ ಒಂದು ಆಶ್ಚರ್ಯ ಎಲ್ಲರಿಗೂ ಕಾಣುತ್ತಿತ್ತು. ಅದನ್ನ ನೋಡಿದವ್ರು ಮೋಸ್ಟ್ಲಿ ಇವರು ಕಾಂಗ್ರೆಸ್ ಫಾಲೋವರ್ ಆಗಿರಬೇಕು ಅಂತಲೇ ಅಂದುಕೊಳ್ಳುತ್ತಿದ್ದರು. ಅದಕ್ಕೆ ಕಾರಣ ಕಚೇರಿಯಲ್ಲಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆ ಒಂದು ಫೋಟೊ ಆಗಿತ್ತು.


ರಾಜಕಾರಣಿಗಳ ಮನೆಯಲ್ಲೋ ಅವರ ಕಚೇರಿಯಲ್ಲೋ ಫೋಟೋವನ್ನ ಗೋಡೆಗೆ ನೇತು ಹಾಕೋದು ಕಾಮನ್ ಬಿಡಿ. ಆದರೆ ಸಿನಿಮಾ ಕಚೇರಿಗೂ ರಾಜಕೀಯಕ್ಕೂ ಎಲ್ಲಿಂದ ಎಲ್ಲಿ ಸಂಬಂಧ, ಈಶ್ವರಿ ಪಿಕ್ಚರ್ಸ್ ಗೂ ಇಂದಿರಾ ಗಾಂಧಿ ಅವರಿಗೂ ಇನ್ನೆಲ್ಲಿಯ ಲಿಂಕ್ ಅಂತ ನೀವು ಕೇಳಬಹುದು. ಆದರೆ ಇಲ್ಲೊಂದು ಇಂಟ್ರಸ್ಟಿಂಗ್ ಕಥೆ ಇದೆ.


ಇಂದಿರಾ ಗಾಂಧಿ ಫೋಟೋ ಮತ್ತು ನಾಗರಹಾವು ಸಿನಿಮಾ!
ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್​ ಅವರು ನಾಗರಹಾವು ಸಿನಿಮಾ ಮಾಡಿದ್ದರು. ಈ ಚಿತ್ರದ ಕಥೆಯನ್ನ ಚಿತ್ರದುರ್ಗದ ಕೋಟೆಯಲ್ಲಿ ಚಿತ್ರೀಕರಿಸಿದ್ದರು. ಆದರೆ ಇವರಿಗೆ ಇಲ್ಲಿ ಚಿತ್ರೀಕರಿಸಲು ಪರವಾನಗಿ ಕೂಡ ಬೇಕಿತ್ತು. ಅದನ್ನ ಪಡೆಯಲು ಸಿನಿಮಾ ತಂಡ ಸಿಕ್ಕಾಪಟ್ಟೆ ಕಷ್ಟಪಟ್ಟಿತ್ತು.


ಚಿತ್ರವನ್ನ ನಿರ್ಮಿಸಿದ್ದ ಈಶ್ವರಿ ಪಿಕ್ಚರ್ಸ್ ಸಂಸ್ಥೆಯ ಗಂಗಪ್ಪ ಅನ್ನೋರು ದೆಹಲಿಯಲ್ಲಿದ್ದ ಪುರಾತತ್ವ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಚಿತ್ರದುರ್ಗದ ಕೋಟೆಯಲ್ಲಿ ನಾಗರಹಾವು ಹೆಸರಿನ ಚಿತ್ರವನ್ನ ಚಿತ್ರೀಕರಿಸಬೇಕಿದೆ. ಇದಕ್ಕೆ ಪರವಾನಗಿ ಕೊಡಿ ಅಂತ ಅರ್ಜಿ ಸಲ್ಲಿಸಿದ್ದರು.


ಹೆಚ್ಚು ಕಡಿಮೆ 15 ದಿನ ಪುರಾತತ್ವ ಇಲಾಖೆ ಕಚೇರಿ ಸುತ್ತಾಟ
ಈಶ್ವರಿ ಪಿಕ್ಚರ್ಸ್​ನ ಗಂಗಪ್ಪ ಅನ್ನೋರು ಬರೋಬ್ಬರಿ 15 ದಿನ ಪುರಾತತ್ವ ಇಲಾಖೆಗೆ ಸುತ್ತಾಡಿದರು. ದಿನವೂ ಕಚೇರಿಗೆ ಹೋಗಿ ನಮ್ಮ ಚಿತ್ರದ ಚಿತ್ರೀಕರಣದ ಪರವಾನಗಿ ಏನ್ ಆಯಿತು ಅಂತಲೇ ಕೇಳೋರು.


Kannada Classic Naagarahaavu Movie Unknown Intresting Facts
ಗಾಂಧಿನಗರದ ಈಶ್ವರಿ ಕಚೇರಿಯಲ್ಲಿ ಇಂದಿರಾ ಫೋಟೋ!


ಆಗ ಅದು ಅಷ್ಟು ಸುಲಭಕ್ಕೆ ಆಗಲೇ ಇಲ್ಲ. ಆದರೆ ಕೊನೆಗೆ ಈ ಅರ್ಜಿ ವಿಚಾರ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ತಿಳಿಯಿತಂತೆ, ಆಗ ಇಂದಿರಾ ಅವರು ಡೈರೆಕ್ಟರ್ ಪುಟ್ಟಣ್ಣನವರ ಬಗ್ಗೆ ತಿಳಿದುಕೊಂಡ್ರಂತೆ. ಅವರ ಸಿನಿಮಾಗಳ ಬಗ್ಗೆ ತಿಳಿದುಕೊಂಡ ಮೇಲೆ ಚಿತ್ರದುರ್ಗದಲ್ಲಿ ಚಿತ್ರೀಕರಿಸಲ ಪರವಾನಗಿ ಕೊಟ್ರಂತೆ ಅನ್ನೋ ಕಥೆ ಇದೆ.


ಇದನ್ನೂ ಓದಿ: Ashika Ranganath: ಚುಟು ಚುಟು ಹುಡುಗಿಯ ಮಸ್ತ್ ಫೋಟೋ ಶೂಟ್; ಸಿಂಪಲ್ ಡ್ರೆಸ್​ನಲ್ಲಿ ಆಶಿಕಾ ಮಿಂಚಿಂಗ್!


ಈ ಒಂದು ಕಾರಣಕ್ಕೇನೆ ಈಶ್ವರಿ ಪಿಕ್ಚರ್ಸ್ ಕಚೇರಿಯಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ಫೋಟೋ ಹಾಕಲಾಗಿತ್ತು. ಇದನ್ನ ಬಲ್ಲವರು ಬಲ್ಲರು ಇನ್ನುಳಿದವರಿಗೆ ಇದರ ಬಗ್ಗೆ ತಿಳಿದಿಲ್ಲ ಅನ್ನೋದು ಕೂಡ ಅಷ್ಟೆ ಸತ್ಯ.

First published: