ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲಿ (Janumada Jodi) ಜನುಮದ ಜೋಡಿ ಚಿತ್ರವೂ ಒಂದು. ಕನ್ನಡ ನಾಡಿನ ಜನತೆಗೆ ಹೊಸ ಅನುಭವ ಕೊಟ್ಟ ಈ ಚಿತ್ರ ವಿಶೇಷವಾಗಿಯೇ ಇತ್ತು. ಕನ್ನಡದ ಕ್ಲಾಸಿಕ್ (Classic Movie) ಚಿತ್ರಗಳಲ್ಲಿ ಜನುಮದ ಜೋಡಿ ಕೂಡ ಒಂದು ಅನ್ನುವುದು ಎಲ್ಲರಿಗೂ ಗೊತ್ತಿರೋ ವಿಷಯವೇ ಆಗಿದೆ. ಈ ಚಿತ್ರ ನಿರ್ಮಾಣದ ಸಮಯದಲ್ಲಿ ಸಾಕಷ್ಟು ಇಂಟ್ರಸ್ಟಿಂಗ್ ಕಥೆಗಳೂ ಇವೆ. ಚಿತ್ರದ (Actress Shilpa) ನಾಯಕಿ ಶಿಲ್ಪಾ ಈ ಸಿನಿಮಾದ ಮೊದಲ ಆಯ್ಕೆ ಅಲ್ಲ ಅನ್ನೋದು ಒಂದು ವಿಷಯವಾದ್ರೆ, ಕನ್ನಡದ ಮೂವರು ನಾಯಕಿರಲ್ಲಿ ಒಬ್ಬರನ್ನ ತೆಗೆದುಕೊಳ್ಳಬೇಕು ಅನ್ನುವ ವಿಷಯವೂ ಇದೆ. ವಿ.ಮನೋಹರ್ (V.Manohar) ಮುಂಚೇ ಈ ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕರು ಸಂಗೀತ ಮಾಡಲು ಕುಳಿತು ಎದ್ದು ಹೋದರು. ಯಾಕೆ ಅನ್ನುವ ಕುತೂಹಲ ಕೂಡ ಇದೆ.
ಜನುಮದ ಜೋಡಿ ಸಿನಿಮಾದ ನಾಯಕಿ ಶಿಲ್ಪಾ ಈ ಚಿತ್ರದ ಮೊದಲ ಆಯ್ಕೆ ಆಗಿರಲಿಲ್ಲ. ಕನ್ನಡ ಬರುವ ನಟಿಯನ್ನ ಈ ಚಿತ್ರಕ್ಕೆ ಆಯ್ಕೆ ಮಾಡಬೇಕು ಅನ್ನೋದು ಒಟ್ಟು ಲೆಕ್ಕಚಾರ ಆಗಿತ್ತು.
ಜನುಮದ ಜೋಡಿ ಚಿತ್ರದ ಪ್ಲಾನಿಂಗ್ ಹೇಗಿತ್ತು?
ದೊಡ್ಮನೆ ಸಿನಿಮಾ ಅಂದ್ಮೇಲೆ ಒಂದಷ್ಟು ಪ್ಲಾನಿಂಗ್ ಇರುತ್ತದೆ. ಚಿತ್ರ ಚೆನ್ನಾಗಿ ಬರಬೇಕು ಅನ್ನುವ ಹಿನ್ನೆಲೆಯಲ್ಲಿ ಪಕ್ಕಾ ಆಯ್ಕೆ ಕೂಡ ಇರುತ್ತದೆ. ಹಾಗಾಗಿಯೇ ಜನುಮದ ಜೋಡಿ ಚಿತ್ರಕ್ಕೆ ಕನ್ನಡದ ನಟಿಯನ್ನ ಆಯ್ಕೆ ಮಾಡಬೇಕು ಅನ್ನುವ ಇರಾದೆ ಸಿನಿಮಾ ಟೀಮ್ಗೆ ಇತ್ತು.
ಇದರಿಂದ ಕನ್ನಡದ ಹೆಸರಾಂತ ನಟಿಯರನ್ನ ಜನುಮದ ಜೋಡಿ ಚಿತ್ರಕ್ಕೆ ಆಯ್ಕೆ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಮೂವರ ಹೆಸರು ಆಗ ಕೇಳಿ ಬಂದಿದ್ದವು. ಕನ್ನಡದ ಆ ಮೂವರು ನಾಯಕಿಯರು ಇವರೇ ನೋಡಿ.
ಶೃತಿ
ಸುಧಾರಾಣಿ
ಪ್ರೇಮಾ
ಈ ಮೂವರಲ್ಲಿ ಒಬ್ಬರನ್ನ ಜನುಮದ ಜೋಡಿ ಚಿತ್ರಕ್ಕೆ ಆಯ್ಕೆ ಮಾಡಬೇಕು ಅಂತಲೇ ಇತ್ತು. ಆದರೆ ಇವರ ಡೇಟ್ಸ್ ಆ ಟೈಮ್ಲ್ಲಿ ಅಷ್ಟೇನೂ ಫ್ರೀ ಇರಲಿಲ್ಲ.
ನಟಿ ಶಿಲ್ಪಾ ಕಣ್ಣುಗಳು ಚೆನ್ನಾಗಿವೆ-ಶಿವಣ್ಣ ಹೀಗೆ ಹೇಳಿದ್ಯಾಕೆ?
ಹಾಗಾಗಿಯೇ ಸಿನಿಮಾ ಟೀಮ್ ಯಾರನ್ನ ಆಯ್ಕೆ ಮಾಡಬೇಕು ಅಂತ ಚಿಂತನೆ ನಡೆಸಿತ್ತು. ಆಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದು ಸಲಹೆ ಕೊಟ್ಟರು.
ನಟಿ ಶಿಲ್ಪಾ ಅಂತ ಇದ್ದಾರೆ. ಅವರ ಕಣ್ಣುಗಳು ತುಂಬಾ ಚೆನ್ನಾಗಿವೆ. ಟ್ರೈ ಮಾಡಬಹುದು ಅಂತ ಹೇಳಿದ್ದರು. ಆಗಲೇ ಶಿಲ್ಪಾ ಅವರನ್ನ ಭೇಟಿ ಮಾಡಿದ ಡೈರೆಕ್ಷನ್ ಟೀಮ್ನ ಸದಸ್ಯ ಪ್ರಕಾಶ್ ಅವರು ಶಿಲ್ಪಾ ಅವರಿಗೆ ಕಥೆ ಹೇಳಿದ್ದರು.
ಕಥೆ ಹೇಳಿದ್ಮೇಲೆ ಕನ್ನಡ ಭಾಷೆ ಬರುತ್ತದೆಯೋ ಇಲ್ವೋ ಅಂತಲೂ ನೋಡಿದ್ರು. ಆದರೆ ಕನ್ನಡ ಬರೋದಿಲ್ಲ ಅಂತ ಗೊತ್ತಾಯಿತು. ಹಾಗಂತ ಈ ನಟಿಯನ್ನ ರಿಜೆಕ್ಟ್ ಮಾಡಲಿಲ್ಲ.
ಜನುಮದ ಜೋಡಿ ಚಿತ್ರಕ್ಕೆ ಕನ್ನಡ ಕಲಿಸಿ ಕನ್ನಡ ಡೈಲಾಗ್ ಹೇಳಿಸೋ ಜವಾಬ್ದಾರಿಯನ್ನ ಡೈರೆಕ್ಟರ್ ಟಿ.ಎಸ್.ನಾಗಾಭರಣ ಅವರು ಪ್ರಕಾಶ್ ಅವರಿಗೆ ಒಪ್ಪಿಸಿದರು. ಆ ಕೆಲಸವನ್ನ ಪ್ರಕಾಶ್ ತುಂಬಾ ಚೆನ್ನಾಗಿಯೇ ಮಾಡಿದರು.
ಕನಕ ಪಾತ್ರಕ್ಕೆ ನಟಿ ಶಿಲ್ಪಾ ಆಯ್ಕೆ ಆಗಿದ್ದು ಹೇಗೆ?
ಹಾಗೆ ಕನ್ನಡ ಗೊತ್ತಿರದ ನಟಿ ಶಿಲ್ಪಾ ಈ ಚಿತ್ರದಲ್ಲಿ ಕನಕ ಹೆಸರಿನ ಪಾತ್ರ ಮಾಡಿದರು. ಈ ಪಾತ್ರದ ಅಭಿನಯಕ್ಕೆ ಮುಂದೆ ನಟಿ ಶಿಲ್ಪಾ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮಂ ಫೇರ್ ಪ್ರಶಸ್ತಿಯನ್ನ ಕೂಡ ಪಡೆದರು.
ಕನಕ ಪಾತ್ರ ಮಾಡೋವಾಗ್ಲೇ ಶಿಲ್ಪಾ ಅವರಿಗೆ ಈ ಚಿತ್ರಕ್ಕೆ ನಿಮಗೆ ಪ್ರಶಸ್ತಿ ಬರೋದು ಗ್ಯಾರಂಟಿ ಅಂತಲೇ ಹೇಳಿದ್ದರಂತೆ. ಆ ಪ್ರಕಾರ ಪ್ರಶಸ್ತಿನೂ ಬಂದಿದೆ ನೋಡಿ.
ಚಿತ್ರಕ್ಕೆ ವಿ.ಮನೋಹರ್ ಆಯ್ಕೆ ಆಗಿದ್ದು ಹೇಗೆ?
ಜನುಮದ ಜೋಡಿ ಚಿತ್ರದ ಹಾಡು ಅದ್ಭುತವಾಗಿಯೇ ಬಂದಿದ್ದವು. ಸಿನಿಮಾದ ಪ್ರತಿ ಹಾಡನ್ನ ಜನ ತುಂಬಾ ಇಷ್ಟಪಟ್ಟರು. ಅದರಲ್ಲೂ ಹಳ್ಳಿ ಸೊಗಡಗಿನ ಈ ಚಿತ್ರದಲ್ಲಿ ಅತ್ಯುತ್ತಮ ಹಾಡುಗಳನ್ನ ವಿ.ಮನೋಹರ್ ಮಾಡಿಕೊಟ್ಟಿದ್ದರು.
ಆದರೆ ಜನುಮದ ಜೋಡಿ ಚಿತ್ರಕ್ಕೆ ಆರಂಭದಲ್ಲಿ ಹಂಸಲೇಖ ಸಂಗೀತ ನಿರ್ದೇಶನ ಮಾಡೋರಿದ್ದರು. ಸಂಗೀತ ಸಂಯೋಜನೆ ಮಾಡೋಕೂ ಕುಳಿತಿದ್ದರು. ಆದರೆ ತಮ್ಮ ಸುಗ್ಗಿ ಚಿತ್ರದಲ್ಲೂ ಇದೇ ರೀತಿ ಹಾಡುಗಳಿವೆ. ಹಾಗಾಗಿಯೇ ಇದನ್ನ ಮಾಡೋದು ಕಷ್ಟ ಅಂತ ಹೇಳಿದರು.
ಜನುಮದ ಜೋಡಿ ಚಿತ್ರಕ್ಕೆ ರಾಜ್ ಕೊಟ್ಟ ಸಲಹೆ ಏನು?
ಇದಾದ್ಮೇಲೆ ಮುಂದೇನೂ ಅನ್ನುವ ಹೊತ್ತಿಗೆ ಡಾಕ್ಟರ್ ರಾಜ್ ಕುಮಾರ್ ಒಂದು ಸಲಹೆ ಕೊಟ್ಟರು. ಅವರ ಸಲಹೆಯಂತೆ ವಿ.ಮನೋಹರ್ ಈ ಚಿತ್ರಕ್ಕೆ ಸಂಗೀತ ಮಾಡಿದರು.
ಅಲ್ಲಿಗೆ ಜನುಮದ ಜೋಡಿ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನಿರ್ದೇಶಕರಾಗಿ ಆಯ್ಕೆ ಆದರು. ಅದ್ಭುತ ಅನಿಸೋ ಹಾಡುಗಳನ್ನ ಮಾಡಿಕೊಟ್ಟರು. ಆ ಹಾಡುಗಳು ಈಗಲೂ ಜನ ಮಾನಸದಲ್ಲಿ ಉಳಿದಿವೆ ನೋಡಿ ಅಂದ್ರೆ ತಪ್ಪೇ ಇಲ್ಲ ಬಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ