• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Bhootayyana Maga Ayyu: ಭೂತಯ್ಯನ ಮಗ ಅಯ್ಯು ಸಿನಿಮಾಗಾಗಿ ಎರಡು ಸಲ ದೊಡ್ಡ ಟ್ಯಾಂಕ್ ಕಟ್ಟಿಸಿದ್ರು ಡೈರೆಕ್ಟರ್! ಸಿನಿಮಾ ಸೆಟ್ಟೇರಿದ್ದು ಹೇಗೆ ಗೊತ್ತಾ?

Bhootayyana Maga Ayyu: ಭೂತಯ್ಯನ ಮಗ ಅಯ್ಯು ಸಿನಿಮಾಗಾಗಿ ಎರಡು ಸಲ ದೊಡ್ಡ ಟ್ಯಾಂಕ್ ಕಟ್ಟಿಸಿದ್ರು ಡೈರೆಕ್ಟರ್! ಸಿನಿಮಾ ಸೆಟ್ಟೇರಿದ್ದು ಹೇಗೆ ಗೊತ್ತಾ?

ಭೂತಯ್ಯನಮಗ ಅಯ್ಯು ಚಿತ್ರದ ಬಜೆಟ್ ಎಷ್ಟು ಗೊತ್ತೇ?

ಭೂತಯ್ಯನಮಗ ಅಯ್ಯು ಚಿತ್ರದ ಬಜೆಟ್ ಎಷ್ಟು ಗೊತ್ತೇ?

ಭೂತಯ್ಯನ ಮಗ ಅಯ್ಯು ಚಿತ್ರ ಒಳ್ಳೆ ಕಲೆಕ್ಷನ್ ಮಾಡಿತು. ಚಿತ್ರದಲ್ಲಿ ಇದ್ದ ಭೂತಯ್ಯನ ಪಾತ್ರಧಾರಿ ಎಂ.ಪಿ.ಶಂಕರ್ ಜನರ ಮನ ಗೆದ್ದರು. ಚಿತ್ರದ ಕ್ಲೈಮ್ಯಾಕ್ಸ್ ಸೀನ್​ ಅನ್ನು ವಿಮರ್ಶಕರು ಮೆಚ್ಚಿಕೊಂಡರು. ಲೋಕನಾಥ್ ಅವರ ಉಪ್ಪಿನಕಾಯಿ ಸೀನ್ ಈಗಲೂ ಹೆಚ್ಚು ಖುಷಿಕೊಡುತ್ತದೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

  ಬಂಗಾರದ ಮನುಷ್ಯ ಚಿತ್ರ ಹಿಟ್ (Kannada Classic Movies) ಆಯಿತು. ದೂರದ ಬೆಟ್ಟ ಚಿತ್ರವೂ ಕ್ಲಿಕ್ ಆಯಿತು. ಇದನ್ನ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಸಿದ್ದಲಿಂಗಯ್ಯನವರಿಗೆ (Bangarada Manushya) ಅದೇನೋ ಕಸಿವಿಸಿ, ಕಿವಿಗೆ ಬೀಳ್ತಾ ಇದ್ದ ಕಮೆಂಟ್ಸ್ ಖುಷಿ ತರ್ತಾ ಇರಲಿಲ್ಲ. ಡಾಕ್ಟರ್ ರಾಜ್​​ಕುಮಾರ್ ಅವರಂತಹ (Director Siddalingaiah) ನಟರು ಇದ್ದರೆ ಸಿನಿಮಾ ಗೆಲ್ಲೋದಿಲ್ವೇ ಅನ್ನೊ ಮಾತುಗಳು ಕೇಳಿ ಬಂದಿದ್ವು. ಗಾಂಧಿನಗರಲ್ಲಿ ಇಂತಹದ್ದು ಈಗಲೂ ಇದೆ. ಆಗಲೂ ಇತ್ತು. ಆದರೆ ಸಿದ್ದಲಿಂಗಯ್ಯನವರು ಇದನ್ನ ಸಹಿಸಿಕೊಳ್ಳಲಿಲ್ಲ. ತಮ್ಮ ಪ್ರತಿಭೆಯನ್ನ ಸಾಬೀತು (Kannada Super Hit Movie) ಪಡಿಸಲು ಒಂದು ನಿರ್ಧಾರ ಮಾಡಿದರು. ತಮ್ಮ ಮುಂದಿನ ಚಿತ್ರಕ್ಕೆ ಹೊಸಬರನ್ನ ಹಾಕಿಕೊಳ್ಳಬೇಕು ಅಂತ ನಿರ್ಧಾರ ಮಾಡಿಯೇ ಬಿಟ್ಟರು.


  ರಂಗಭೂಮಿಯಲ್ಲಿ ಹೆಸರು ಮಾಡಿದ್ದ ಲೋಕೇಶ್ ಅವರನ್ನ ಆಯ್ಕೆ ಮಾಡಿದರು. ನಾಗರಹಾವು ಚಿತ್ರದ ಮೂಲಕ ಆಗಷ್ಟೇ ಹೆಸರು ಮಾಡಿದ್ದ ರಾಮಾಚಾರಿ ವಿಷ್ಣುವರ್ಧನ್ ಅವರನ್ನ ಸೆಲೆಕ್ಟ್ ಮಾಡಿದರು. ಭೂತಯ್ಯನ ಪಾತ್ರಕ್ಕೆ ಪ್ರಾಣಿ ಪ್ರಿಯ ಎಂ.ಪಿ.ಶಂಕರ್ ಓಕೆ ಅಂದ್ರು.


  Kannada Classic Movie Bhootayyana Maga Ayyu Movie Unknown Facts
  ಡೈರೆಕ್ಟರ್ ಸಿದ್ದಲಿಂಗಯ್ಯನವರ ಧೈರ್ಯ ಮೆಚ್ಚಲೇಬೇಕು


  ಭೂತಯ್ಯನ ಮಗ ಅಯ್ಯು ಚಿತ್ರಕ್ಕೆ ಪುಟ್ಟ ಕಥೆ ಆಧಾರ
  ಇವರನ್ನೆಲ್ಲ ಇಟ್ಟುಕೊಂಡು ಸಿನಿಮಾ ಮಾಡಲು ಸಿದ್ದಲಿಂಗಯ್ಯನವರು ನಿರ್ಧಾರ ಮಾಡಿದರು. ಚಿತ್ರದ ಕಥೆಗೆ ಗೊರೂರು ರಾಮಸ್ವಾಮ ಅಯ್ಯಂಗಾರ್ ಅವರ ಕಥಾ ಸಂಕಲನ ವೈಯಾರಿ ಆಯ್ಕೆ ಮಾಡಿಕೊಂಡಿದ್ದರು. ಇದರಲ್ಲಿ ಬರುವ 12 ಪುಟದ ಒಂದು ಕಥೆಯ್ನ ತೆಗೆದುಕೊಂಡರು.
  ಇದನ್ನ ಆಧರಿಸಿಯೇ ತಮ್ಮದೇ ಒಂದು ಚಿತ್ರಕಥೆ ಮಾಡಿಕೊಂಡರು. ಸಿನಿಮಾದ ಡೈಲಾಗ್ ಕೆಲಸವೂ ಆಯಿತು. ಹಾಗೆ ಈ ಚಿತ್ರವನ್ನ ಸೆಟ್​​ನಲ್ಲಿ ತೆಗೆಯಲೇಬಾರದು ಅಂತಲೂ ಸಿದ್ದಲಿಂಗಯ್ಯನವರು ನಿರ್ಧರಿಸಿದ್ದರು.


  ಔಟ್​ ಡೋರ್​​ನಲ್ಲಿ ಚಿತ್ರೀಕರಿಸಿದ ಮೊದಲ ಕಲರ್ ಸಿನಿಮಾ
  ಹಾಗಾಗಿಯೇ ಇಡೀ ಚಿತ್ರವನ್ನ ಔಟ್​​ ಡೋರ್​​ನಲ್ಲಿಯೇ ಪ್ಲಾನ್ ಮಾಡಿದರು. ಇದಕ್ಕಾಗಿ ಕಳಸಾಪುರ, ತಲಕಾಡು, ಧರ್ಮಸ್ಥಳವನ್ನ ಆಯ್ಕೆ ಮಾಡಿದರು. ಇಲ್ಲಿಯೇ ಅಂದುಕೊಂಡಂತೆ ಚಿತ್ರೀಕರಣ ಮಾಡಿದರು.


  ಚಿಕ್ಕಮಗಳೂರು ಟೌನ್ ಸಮೀಪದ ಕಳಸಾಪುರ ಅಂದ್ರೆ ಸಿದ್ದಲಿಂಗಯ್ಯನವರಿಗೆ ವಿಶೇಷ ಪ್ರೀತಿ ಇತ್ತು. ಸ್ಪೆಷಲ್ ಅಟ್ಯಾಚ್​ಮೆಂಟ್​ ಕೂಡ ಇತ್ತು. ಇದೇ ಹಳ್ಳಿಯಲ್ಲಿ ತಮ್ಮ ಬಂಗಾರದ ಮನುಷ್ಯ ಚಿತ್ರದ ಕೆಲವು ದೃಶ್ಯಗಳನ್ನೂ ತೆಗೆದಿದ್ದರು.


  20 ದಿನ ಭೂತಯ್ಯನಮಗ ಅಯ್ಯು ಕ್ಲೈಮ್ಯಾಕ್ಸ್ ಶೂಟ್
  ಈ ಒಂದು ಕಾರಣಕ್ಕೇನೆ ಭೂತಯ್ಯನ ಮಗ ಅಯ್ಯು ಚಿತ್ರದ ದೃಶ್ಯಗಳನ್ನ ಕಳಸಾಪುರದಲ್ಲಿ ಚಿತ್ರೀಕರಿಸಿಕೊಂಡಿದ್ದರು. ಚಿತ್ರದ ಕ್ಲೈಮ್ಯಾಕ್ಸ್ ಸೀನ್​ನ್ನ ಕಳಸಾಪುರದ ಮಾದರಾಯನಕಟ್ಟೆ ಮತ್ತು ಶಿವನಸಮುದ್ರ ಫಾಲ್ಸ್​ನಲ್ಲಿ ಚಿತ್ರೀಕರಿಸಲಾಗಿದೆ. ಹೆಚ್ಚು ಕಡಿಮೆ 20 ದಿನ ಈ ದೃಶ್ಯವನ್ನ ತೆಗೆಯಲಾಗಿದೆ.


  ಭೂತಯ್ಯನ ಮಗ ಅಯ್ಯು ಸಿನಿಮಾದಲ್ಲಿ ಒಂದು ದೃಶ್ಯ ಇದೆ. ಈ ದೃಶ್ಯದಲ್ಲಿ ಮನೆಯೊಳಗೆ ನೀರು ನುಗ್ಗುತ್ತದೆ. ಇದಕ್ಕಾಗಿಯೇ ಡೈರೆಕ್ಟರ್ ಸಿದ್ದಲಿಂಗಯ್ಯನವರು ಒಂದು ಟ್ಯಾಂಕ್​ ಕಟ್ಟಿಸಿದ್ದರು. ಆ ನೀರು ರಭಸದಿಂದ ಮನೆಯೊಳಗೆ ನುಗ್ಗುವಂತೆ ಪ್ಲಾನ್ ಮಾಡಿದ್ದರು.


  ಡೈರೆಕ್ಟರ್ ಸಿದ್ದಲಿಂಗಯ್ಯನವರ ಧೈರ್ಯ ಮೆಚ್ಚಲೇಬೇಕು


  ಆದರೆ ಈ ದೃಶ್ಯವನ್ನ ಇನ್ನೇನು ತೆಗೆಯಬೇಕು ಅನ್ನುವ ಹೊತ್ತಿಗೆ ಟ್ಯಾಂಕ್ ಒಡೆದು ಹೋಯಿತು. ಹಾಗಂತ ಎದೆಗುಂದದ ಸಿದ್ದಲಿಂಗಯ್ಯನವರು ಮತ್ತೆ ಅದನ್ನ ರೆಡಿ ಮಾಡಿಸಿದರು. ಅಂದುಕೊಂಡಂತೆ ದೃಶ್ಯವನ್ನ ತೆಗೆದುಕೊಂಡರು.


  ಸಾಕಷ್ಟು ಕಷ್ಟ-ನಷ್ಟಗಳ ನಡುವೆ ಭೂತಯ್ಯನ ಮಗ ಅಯ್ಯು ಸಿನಿಮಾ ರೆಡಿ ಆಯಿತು. ರವಿಚಂದ್ರನ್ ತಂದೆ ಎನ್.ವೀರಾಸ್ವಾಮಿ ಅವರ ನಿರ್ಮಾಣದ ಈ ಚಿತ್ರ ಫೆಬ್ರವರಿ-02, 1974 ರಲ್ಲಿ ತೆರೆಗೆ ಬಂತು.


  ಭೂತಯ್ಯನಮಗ ಅಯ್ಯು ಚಿತ್ರದ ಬಜೆಟ್ ಎಷ್ಟು ಗೊತ್ತೇ?
  ಚಿತ್ರ ತೆರೆಗೆ ಬಂದ್ಮೇಲೆ ಜನ ಈ ಚಿತ್ರವನ್ನ ತುಂಬಾ ಮೆಚ್ಚಿಕೊಡರು. ಚಿತ್ರಕ್ಕೆ ಹಾಕಿದ್ದ 12 ಲಕ್ಷ ಬಜೆಟ್ ಕೈಬಿಟ್ಟು ಹೋಗಲಿಲ್ಲ. ಭೂತಯ್ಯನ ಮಗ ಅಯ್ಯು ಬಾಕ್ಸ್ ಆಫೀಸ್​ ಕೊಳ್ಳೆ ಹೊಡೆಯಿತು. ಇದರಿಂದ ಆ ಟೈಮ್​​ನಲ್ಲಿ ಇದು 45 ಲಕ್ಷ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು ಅನ್ನುವ ಮಾಹಿತಿ ಕೂಡ ಇತ್ತು.


  Kannada Classic Movie Bhootayyana Maga Ayyu Movie Unknown Facts
  20 ದಿನ ಭೂತಯ್ಯನಮಗ ಅಯ್ಯು ಕ್ಲೈಮ್ಯಾಕ್ಸ್ ಶೂಟ್


  ಭೂತಯ್ಯನ ಮಗ ಅಯ್ಯು ಚಿತ್ರ ಒಳ್ಳೆ ಕಲೆಕ್ಷನ್ ಜೊತೆಗೆ, ಚಿತ್ರದಲ್ಲಿ ಇದ್ದ ಭೂತಯ್ಯನ ಪಾತ್ರಧಾರಿ ಎಂ.ಪಿ.ಶಂಕರ್ ಜನರ ಮನ ಗೆದ್ದರು. ಚಿತ್ರದ ಕ್ಲೈಮ್ಯಾಕ್ಸ್ ಸೀನ್​ನ್ನ ವಿಮರ್ಶಕರು ಮೆಚ್ಚಿಕೊಂಡರು. ಲೋಕನಾಥ್ ಅವರ ಉಪ್ಪಿನಕಾಯಿ ಸೀನ್ ಈಗಲೂ ಹೆಚ್ಚು ಖುಷಿಕೊಡುತ್ತದೆ.


  ಕಮಲ್ ಹಾಸನ್ ಮೆಚ್ಚಿದ ಭೂತಯ್ಯನಮಗ ಅಯ್ಯು ಸಿನಿಮಾ
  ಭೂತಯ್ಯನ ಮಗ ಅಯ್ಯು ಸಾಕಷ್ಟು ವಿಷಯವನ್ನ ಸಮಾಜಕ್ಕೆ ತಿಳಿಸಿತ್ತು. ಕೋರ್ಟು ಕಚೇರಿಯಿಂದ ಏನೂ ಆಗೋದಿಲ್ಲ ಅನ್ನುವುದನ್ನ ಇದು ಹೇಳಿತ್ತು. ಇಂತಹ ಅದ್ಭುತ ಚಿತ್ರವನ್ನ ಕಮಲ್ ಹಾಸನ್ ಕೂಡ ಮೆಚ್ಚಿಕೊಂಡಿದ್ದರು.


  ಇದನ್ನೂ ಓದಿ: Ramachari: ಕಣ್ಣು ಕಂಡರೂ ಕಾಣಲ್ಲ ಎಂದ ಚಾರು, ಎಲ್ಲಾ ರಾಮಾಚಾರಿ ಪ್ರೀತಿಗಾಗಿ!


  ತಮ್ಮ ನೆಚ್ಚಿನ 20 ಸಿನಿಮಾಗಳ ಪಟ್ಟಿಯಲ್ಲಿ ಭೂತಯ್ಯನಮಗ ಅಯ್ಯು ಕೂಡ ಇದೆ ಅಂತಲೂ ಹೇಳಿಕೊಂಡಿದ್ದರು. ಹೀಗೆ ಭೂತಯ್ಯನ ಮಗ ಅಯ್ಯು ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಆಗಿ ಹೊಳೆಯುತ್ತಿದ್ದು, ಜಿ.ಕೆ.ವೆಂಕಟೇಶ್ ಅವರ ಸಂಗೀತದ ಈ ಚಿತ್ರ ಇದೇ ಫೆಬ್ರವರಿ-02 ರಂದು 49 ವರ್ಷ ಪೂರೈಸಿದೆ. ಇಂತಹ ಈ ಚಿತ್ರದ ಬಗ್ಗೆ ಈಗಲೂ ಜನ ಮಾತನಾಡುತ್ತಾರೆ. ಒಳ್ಳೆ ಸಿನಿಮಾ ಅಂತಲೂ ಅಭಿಪ್ರಾಯ ಪಡುತ್ತಾರೆ.

  First published: