ಕನ್ನಡ ಚಿತ್ರರಂಗದಲ್ಲಿ ಅನೇಕ (Kannada Classic Cinema) ಕನ್ನಡ ಸಿನಿಮಾಗಳು ಬಂದಿವೆ. ಬಂದಿರೋ ಅಷ್ಟೂ ಸಿನಿಮಾಗಳಲ್ಲಿ ಕ್ಲಾಸಿಕ್ ಸಿನಿಮಾಗಳು ಇವೆ. ಚಂದನವನವನ್ನ (Sandalwood) ತುಂಬಾನೇ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋದ ಸಿನಿಮಾಗಳೂ ಇಲ್ಲಿವೆ. ಬಂಗಾರದ ಮನುಷ್ಯ ಆ ಸಾಲಿನ ಒಂದು (Rajkumar Movie) ಅದ್ಭುತ ಚಿತ್ರವೇ ಆಗಿದೆ. ಸಿನಿಮಾ ಅನ್ನೋದು ಒಂದು ಪ್ರಭಾವಿ ಮಾಧ್ಯಮ ಆಗಿದೆ. ಇದನ್ನ ಅರಿತುಕೊಂಡೇ ಬಂಗಾರದ ಮನುಷ್ಯ (Bangaarada Manushya) ರೆಡಿ ಆಗಿತ್ತು ಅನಿಸುತ್ತದೆ. ಅದರ ಫಲದಿಂದ ಬಂಗಾರದ ಮನುಷ್ಯ ಚಿತ್ರ ನೋಡಿದ ಅದೆಷ್ಟೋ ಯುವಕರು, ಸಿಟಿಯಿಂದ ತಮ್ಮ ಹಳ್ಳಿಗೆ ವಾಪಸ್ ಹೋದರು. ಕಾರಣ, ಸಿನಿಮಾ ಅಷ್ಟು ಪ್ರಭಾವ ಬೀರಿತ್ತು. ಅಂತಹ ಈ ಸಿನಿಮಾದ ಬಗ್ಗೆ ಎಷ್ಟು ಹೇಳಿದರೂ ಕಡಿಮೇನೆ. ಆದರೂ ಆ ದಿನಗಳನ್ನ ಇಲ್ಲಿ ನೆನಪಿಸಿಕೊಂಡಿದ್ದೇವೆ ಓದಿ.
ಬಂಗಾರದ ಮನುಷ್ಯ 2 ವರ್ಷ ಪ್ರದರ್ಶನ ಕಂಡ ಸಿನಿಮಾ!
ನಿಜಕ್ಕೂ ಬಂಗಾರದ ಮನುಷ್ಯ ಸಿನಿಮಾ ಗೋಲ್ಡನ್ ಸಿನಿಮಾನೇ ಬಿಡಿ. ಡಾಕ್ಟರ್ ರಾಜ್ಕುಮಾರ್ ಅವರು ನಿರ್ವಹಿಸಿದ್ದ ರಾಜೀವಪ್ಪ ಪಾತ್ರ ಅಂದಿನ ಯುವಕರನ್ನ ತುಂಬಾನೇ ಕಾಡಿತ್ತು. ಅಷ್ಟೇ ಪ್ರಭಾವವನ್ನ ಬೀರಿತ್ತು. ಮನಸ್ಸು ಬದಲಿಸುವಂತೆ ಮಾಡಿತ್ತು.
ಈ ಒಂದು ಕಾರಣಕ್ಕೇನೆ ಬಂಗಾರದ ಮನುಷ್ಯ ಚಿತ್ರದ ಬೆಳ್ಳಿ ಪರದೆ ಮೇಲೆ 2 ವರ್ಷ ಪ್ರದರ್ಶನ ಕಂಡಿತ್ತು. ಡಾಕ್ಟರ್ ರಾಜ್ಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ಅಭಿನಯದ ಈ ಚಿತ್ರ 1972 ಮಾರ್ಚ್-31 ರಂದು ತೆರೆ ಕಂಡಿತ್ತು.
ಅಂದು ಸ್ಟೇಟ್ಸ್ ಇಂದು ಭೂಮಿಕಾ ಥಿಯೇಟರ್
ಬೆಂಗಳೂರಿನ ಸ್ಟೇಟ್ಸ್ (States Theatre) ಚಿತ್ರಮಂದಿರದಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇಲ್ಲಿಯೇ ಬರೋಬ್ಬರಿ ಒಂದು ವರ್ಷ ಬಂಗಾರದ ಮನುಷ್ಯ ಪ್ರದರ್ಶನ ಕಂಡಿತ್ತು. ಕೆಜಿ ರಸ್ತೆಯಲ್ಲಿ ಈಗಲೂ ಈ ಥಿಯೇಟರ್ ಇದೆ. ಆದರೆ ಹೆಸರು ಭೂಮಿಕಾ ಅಂತ ಚೇಂಜ್ ಆಗಿದೆ.
ಅದೇ ಥಿಯೇಟರ್ನಲ್ಲಿ ಒಂದು ವರ್ಷ ಓಡಿದ ಈ ಚಿತ್ರವನ್ನ ನಿರ್ದೇಶಕ ಸಿದ್ದಲಿಂಗಯ್ಯನವರು ನಿರ್ದೇಶನ ಮಾಡಿದ್ದಾರೆ. ಟಿ. ಕೆ. ರಾಮ್ ರಾವ್ ಅವರ ಬಂಗಾರದ ಮನುಷ್ಯ ಕಾದಂಬರಿಯನ್ನ ಆಧರಿಸಿ ಸಿದ್ಧಲಿಂಗಯ್ಯನವರು ಸಿನಿಮಾ ಮಾಡಿದ್ದರು.
ಬಂಗಾರದ ಮನುಷ್ಯ ಕಾದಂಬರಿ ಆಧಾರಿತ ಸಿನಿಮಾ!
ಸಾಮಾನ್ಯವಾಗಿ ಟಿ. ಕೆ. ರಾಮ್ ರಾವ್ ಅವರು ಕ್ರೈಮ್ ಮತ್ತು ಪತ್ತೇದಾರಿ ಕಾದಂಬರಿಗಳನ್ನ ಬರೆದಿದ್ದಾರೆ. ಆದರೆ ಬಂಗಾರದ ಮನುಷ್ಯ ಅವರು ಕೊಟ್ಟ ಅದ್ಭುತ ಕಾದಂಬರಿ ಆಗಿದೆ. ಇದನ್ನೇ ಸಿನಿಮಾ ಮಾಡಿ ಗೆದ್ದ ಸಿದ್ದಲಿಂಗಯ್ಯನವರು ಈಗಲೂ ಎಲ್ಲರ ಮನದಲ್ಲಿದ್ದಾರೆ.
ಡಾಕ್ಟರ್ ರಾಜ್ಕುಮಾರ್ ಅವರು ಜನಮಾನಸದಲ್ಲಿ ಇನ್ನೂ ಹಾಗೆ ಇದ್ದಾರೆ. ಇವರ ಅಭಿನಯದ ಬಂಗಾರದ ಮನುಷ್ಯ ಕೇವಲ ಬೆಂಗಳೂರಲ್ಲಿ ಪ್ರದರ್ಶನ ಕಂಡಿರಲಿಲ್ಲ.
ಮೈಸೂರು ಚಾಮುಂಡೇಶ್ವರಿ ಥಿಯೇಟರ್ ಯಶಸ್ವಿ ಪ್ರದರ್ಶನ
ಮೈಸೂರಿನಲ್ಲೂ ಚಾಮುಂಡೇಶ್ವರಿ ಥಿಯೇಟರ್ನಲ್ಲಿ 60 ವಾರಗಳವರೆಗೂ ಪ್ರದರ್ಶನ ಕಂಡಿತ್ತು. ಅಷ್ಟೊಂದು ಪ್ರಭಾವ ಬೀರಿದ್ದ ಈ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ಜೋಡಿ ಬಹುವಾಗಿಯೇ ಜನರಿಗೆ ಮೆಚ್ಚುಗೆ ಆಯಿತು.
ಚಿತ್ರಕ್ಕಿದ್ದ ಜಿ. ಕೆ. ವೆಂಕಟೇಶ್ ಅವರ ಸಂಗೀತ ಇಡೀ ಚಿತ್ರಕ್ಕೆ ಬೇರೆಯದ್ದೇ ಒಂದು ಟಚ್ ಕೊಟ್ಟಿತ್ತು. ಕೈಲಾಗದು ಎಂದು ಹಾಡಂತೂ ಒಂದು ರೀತಿ ಸ್ಪೂರ್ತಿ ತುಂಬಿತ್ತು. ಸಿನಿಮಾ ಬಂದು 50 ವರ್ಷ ಕಳೆದರೂ ಈ ಚಿತ್ರದ ಹಾಡುಗಳು ಈಗಲೂ ತಾಜಾತನವನ್ನ ಉಳಿಸಿಕೊಂಡಿವೆ.
1988 ರಲ್ಲಿ ಬಂಗಾರದ ಮನುಷ್ಯ ರೀ-ರಿಲೀಸ್
ರಾಜ್ಕುಮಾರ್ ಚಿತ್ರ ಜೀವನದ ಮಹೋನ್ನತ ಸಿನಿಮಾ ಬಂಗಾರದ ಮನುಷ್ಯ ಆಗಿನ ಟೈಮ್ಲ್ಲಿ ಭಾರೀ ಸಂಚಲನ ಮೂಡಿಸಿತ್ತು. 1972 ರಲ್ಲಿ ರಿಲೀಸ್ ಆಗಿದ್ದ ಇದೇ ಸಿನಿಮಾ 1988 ರಲ್ಲಿ ರೀ-ರಿಲೀಸ್ ಆಯಿತು.
ಆಗಲೂ ಈ ಚಿತ್ರದ ಕ್ರೇಜ್ ಕಡಿಮೆ ಆಗಿರಲಿಲ್ಲ. ಮೊದಲು ರಿಲೀಸ್ಲ್ಲಿದ್ದ ಅದೇ ಸೆಳೆತ ಈ ಚಿತ್ರಕ್ಕೆ ಇತ್ತು. ಹಾಗಾಗಿಯೇ ಬಂಗಾರದ ಮನುಷ್ಯ ಚಿತ್ರ ಬರೋಬ್ಬರಿ 25 ವಾರ ಯಶಸ್ವಿ ಪ್ರದರ್ಶನ ಕಂಡಿತ್ತು.
ಬಂಗಾರದ ಮನುಷ್ಯ ತೆಲುಗು ಭಾಷೆಯಲ್ಲಿ ರಿಮೇಕ್!
ಬಂಗಾರದ ಮನುಷ್ಯ ಪರ ಭಾಷೆಯಲ್ಲೂ ರಿಮೇಕ್ ಆಗಿತ್ತು. ಟಾಲಿವುಡ್ನ ನಾಯಕ ನಟ ಪ್ರಿನ್ಸ್ ಮಹೇಶ್ ಬಾಬು ತಂದೆ ಕೃಷ್ಣ, ಬಂಗಾರದ ಮನುಷ್ಯ ಚಿತ್ರದ ರಿಮೇಕ್ Devudulanti Manishi ಹೆಸರಿನಲ್ಲಿ ರಿಲೀಸ್ ಆಗಿತ್ತು.
ಇದನ್ನೂ ಓದಿ: Martin Teaser: ಮಾರ್ಟಿನ್ ಟೀಸರ್ ದುಡ್ಡು ಕೊಟ್ಟು ನೋಡಬೇಕು! ಯಾಕ್ ಗೊತ್ತಾ?
ಕನ್ನಡದ ಬಂಗಾರದ ಮನುಷ್ಯ ಚಿತ್ರವನ್ನ ಈಗ ಎಲ್ಲೆ ನೋಡಿದ್ರೂ ಸರಿಯೇ ಹೊಸ ಅನುಭವ ನೀಡುತ್ತದೆ. ತಾಜಾತನದ ಭಾವ ಮೂಡಿಸುತ್ತದೆ. ಕೃಷಿ ಬಗ್ಗೆ ಈಗ ಅಂತಹ ಆಸಕ್ತಿ ಇಲ್ಲದೇ ಇದ್ದರೂ ಕೂಡ ವಿದೇಶದಿಂದ ವಾಪಸ್ ಬಂದು ಭಾರತಕ್ಕೆ ಬಂದೋರು ಇದ್ದಾರೆ.
ಹೆಚ್ಚಿನ ವ್ಯಾಸಂಗ ಮಾಡಿ ಹಳ್ಳಿಗೆ ವಾಪಸ್ ಬಂದು ಕೃಷಿ ಮಾಡಿದವರು ಈಗಲೂ ಇದ್ದಾರೆ. ಅಂತಹವರಿಗೆ ಬಂಗಾರದ ಮನುಷ್ಯ ಒಂದು ರೀತಿ ಸ್ಪೂರ್ತಿ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ