• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Accident Movie: ಕನ್ನಡದ ಕ್ಲಾಸಿಕ್ ಸಿನಿಮಾ; ಸಲ್ಮಾನ್ ಖಾನ್ ಹಿಟ್ ಆ್ಯಂಡ್ ರನ್ ಕೇಸ್ ಥರವೇ ಇದೆ?

Accident Movie: ಕನ್ನಡದ ಕ್ಲಾಸಿಕ್ ಸಿನಿಮಾ; ಸಲ್ಮಾನ್ ಖಾನ್ ಹಿಟ್ ಆ್ಯಂಡ್ ರನ್ ಕೇಸ್ ಥರವೇ ಇದೆ?

ಕನ್ನಡದ ಆ್ಯಕ್ಸಿಡೆಂಟ್ ನೈಜ ಘಟನೆ ಬಿಂಬಿಸುವಂತಿತ್ತು!

ಕನ್ನಡದ ಆ್ಯಕ್ಸಿಡೆಂಟ್ ನೈಜ ಘಟನೆ ಬಿಂಬಿಸುವಂತಿತ್ತು!

ಇದನ್ನ ನೋಡಿದಾಗ ಎಲ್ಲೋ ಇದು ಸಲ್ಮಾನ್ ಖಾನ್ ಹಿಟ್ ಆ್ಯಂಡ್ ರನ್​ ಕೇಸ್ ಥರವೇ ಇದೆ ಅಂತಲೇ ಹೇಳಬಹುದು. ಈ ಚಿತ್ರದ ಕಥೆನೂ ಹಾಗೇನೆ ಇದೆ. ಇದರಲ್ಲಿ ಆದ ಆ್ಯಕ್ಸಿಡೆಂಟ್ ಕೇಸ್ ಸಲ್ಮಾನ್ ಕೇಸ್ ರೀತಿನೇ ಇದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಮನೆಯಲ್ಲೋ ಥಿಯೇಟರ್​​ನಲ್ಲೋ (Kannada Accident Cinema) ಕುಳಿತು ಒಂದು ಸಿನಿಮಾ ನೋಡಿದಾಗ ನಮಗೆ ಒಂದು ಅಭಿಪ್ರಾಯ ಮೂಡುತ್ತದೆ. ಎಲ್ಲೋ ಇದು (Kannada Movie) ನನ್ನ ಕಥೆ ಇದ್ದ ಹಾಗಿದೆಯಲ್ಲ ಅಂತಲೂ ಅನಿಸುತ್ತದೆ. ಮನುಷ್ಯ ಅಂದ್ಮೇಲೆ ಎಲ್ಲರೂ ಸಹಜ ಅಲ್ವೇ. ಸಿನಿಮಾ (Accident Classic Movie) ಮಾಡುವವರು ಕೂಡ ಮನುಷ್ಯರೇ ಅಲ್ವೇ. ಕೆರೆಯ ನೀರು ಕೆರೆಗೆ ಹಾಕು ಅನ್ನುವ ಹಾಗೆ ಒಬ್ಬ ಕ್ರಿಯೇಟಿವ್ ಡೈರೆಕ್ಟರ್ (Shankar Nag Cinema) ಸಮಾಜದಿಂದಲೇ ಎಲ್ಲವನ್ನೂ ಪಡೆದಿರುತ್ತಾರೆ. ಅಲ್ಲಿ ಕಂಡ ಕ್ಯಾರೆಕ್ಟರ್​​ಗಳು, ಅಲ್ಲಿ ನಡೆದ ಘಟನೆಗಳು ಎಲ್ಲವನ್ನೂ ಬೆಳ್ಳಿ ತೆರೆ ಮೇಲೆ ಮೂಡುತ್ತವೆ. ಸಿನಿಮ್ಯಾಟಿಕ್ ಸ್ಪರ್ಶದೊಂದಿಗೆ ಜನರ ಮುಂದೆನೂ ಬರುತ್ತವೆ. ಅಂತಹದ್ದೇ ಒಂದು ಸಿನಿಮಾದ ಕಥೆ ಇಲ್ಲಿದೆ ಓದಿ.


ನಮ್ಮ ನಡುವೇನೆ ಇದ್ದು ಬಹು ಬೇಗನೇ ಹೊರಟು ಹೋದ ನಟ-ನಿರ್ದೇಶಕ ಶಂಕರ್ ನಾಗ್​ ಅವರು ಒಂದು ಸಿನಿಮಾ ಮಾಡಿದ್ದರು. ಈ ಚಿತ್ರದ ಚರ್ಚೆ ಈಗಲೂ ಇವೆ.


Kannada Classic Movie Accident Interesting Fact
ಪ್ರಭಾವಿ ವ್ಯಕ್ತಿಯ ಮಗನ ಆ್ಯಕ್ಸಿಡೆಂಟ್ ಸ್ಟೋರಿ


ಕನ್ನಡದ ಆ್ಯಕ್ಸಿಡೆಂಟ್ ನೈಜ ಘಟನೆ ಬಿಂಬಿಸುವಂತಿತ್ತು!
ಇದನ್ನ ನೋಡಿದಾಗ ಎಲ್ಲೋ ಇದು ಸಲ್ಮಾನ್ ಖಾನ್ ಹಿಟ್ ಆ್ಯಂಡ್ ರನ್​ ಕೇಸ್ ಥರವೇ ಇದೆ ಅಂತಲೇ ಹೇಳಬಹುದು. ಈ ಚಿತ್ರದ ಕಥೆನೂ ಹಾಗೇನೆ ಇದೆ. ಇದರಲ್ಲಿ ಆದ ಆ್ಯಕ್ಸಿಡೆಂಟ್ ಕೇಸ್ ಸಲ್ಮಾನ್ ಕೇಸ್ ರೀತಿನೇ ಇದೆ.




ಹೌದು, ಇಲ್ಲಿವರೆಗೂ ನಾವು ಹೇಳಿರೋದು ಶಂಕರ್ ನಾಗ್ ಅವರ ಆ್ಯಕ್ಸಿಡೆಂಟ್ ಸಿನಿಮಾದ ವಿಷಯವೇ ಆಗಿದೆ. ಈ ಚಿತ್ರ 1985 ನವೆಂಬರ್-09 ರಂದು ರಿಲೀಸ್ ಆಗಿತ್ತು.


ಪ್ರಭಾವಿ ವ್ಯಕ್ತಿಯ ಮಗನ ಆ್ಯಕ್ಸಿಡೆಂಟ್ ಸ್ಟೋರಿ
ಈ ಚಿತ್ರದಲ್ಲಿ ಬರುವ ಪಾತ್ರಗಳಲ್ಲಿ ಪ್ರಭಾವಿ ವ್ಯಕ್ತಿಯ ಮಗ ಒಬ್ಬ ಡ್ರಗ್ಸ್ ನಶೆಯಲ್ಲಿ ಒಂದ ಆ್ಯಕ್ಸಿಡೆಂಟ್ ಮಾಡ್ತಾನೆ. ರಸ್ತೆ ಪಕ್ಕ ಮಲಗಿದ ನಿರ್ಗತಿಕರ ಮೇಲೆ ಕಾರ್ ಚಲಾಯಿಸಿ ಬಿಡ್ತಾನೆ.


ಇದನ್ನ ಮುಚ್ಚಿಹಾಕಲು ಏನು ಬೇಕೋ ಎಲ್ಲವನ್ನೂ ಮಾಡಿ ಬಿಡ್ತಾರೆ. ತಂದೆಯ ಪ್ರಭಾವದಿಂದ ಏನೆಲ್ಲ ಸಾಧ್ಯವೋ ಅದನ್ನ ಮಾಡಿಯೂ ಬಿಡ್ತಾರೆ. ಇಂತಹ ಕಥೆಯನ್ನ 80 ರ ದಶಕದಲ್ಲಿಯೇ ಶಂಕರ್ ನಾಗರ್ ಬೆಳ್ಳಿ ತೆರೆ ಮೇಲೆ ತಂದಿದ್ದರು.


ಪತ್ರಕರ್ತನ ಪಾತ್ರದಲ್ಲಿ ಶಂಕರ್ ನಾಗ್ ಅಭಿನಯ
ವಸಂತ್ ಮುಕೇಶಿ ಈ ಚಿತ್ರಕ್ಕೆ ಕತೆ ಬರೆದಿದ್ದರು. ಇವರೇ ಈ ಚಿತ್ರಕ್ಕೆ ಸ್ಕ್ರೀನ್ ಪ್ಲೇ ಕೂಡ ಮಾಡಿದ್ದಾರೆ. ಆದರೆ ಶಂಕರ್ ನಾಗ್ ಅವರು ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು. ರವಿ ಹೆಸರಿನ ಪತ್ರಕರ್ತನ ಪಾತ್ರದಲ್ಲೂ ಅಭಿನಯಸಿದ್ದರು.


ಅನಂತ್ ನಾಗ್ ಪ್ರಭಾವಿ ರಾಜಕಾರಣಿ ಧರ್ಮಾಧಿಕಾರಿ ಪಾತ್ರವನ್ನ ನಿರ್ವಹಿಸಿದ್ದರು. ಅರುಂಧತಿ ನಾಗ್ ಅವರೂ ಈ ಚಿತ್ರದಲ್ಲಿ ನಟಿಸಿದ್ದರು. ಆ್ಯಕ್ಸಿಡೆಂಟ್ ಮಾಡೋ ಯುವಕ ದೀಪಕ್ ಪಾತ್ರದಲ್ಲಿ ಅಶೋಕ್ ಮಂದಣ್ಣ ಅಭಿನಯಿಸಿದ್ದರು.


ಶಂಕರ್ ನಾಗ್ ಡೈರೆಕ್ಷನ್​ನಲ್ಲಿ ಆ್ಯಕ್ಸಿಡೆಂಟ್ ಸಿನಿಮಾ
ಇಂತಹ ಕಥೆಯ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿತ್ತು. ಹಾಗೇನೆ ಪ್ರತಿಷ್ಠಿತ ಪ್ರಶಸ್ತಿಗಳೂ ಈ ಚಿತ್ರದ ಮುಡಿಗೇರಿದವು. ಆದರೆ ಈ ಒಂದು ಸಿನಿಮಾ 1985ರಲ್ಲಿ ಬಂದಿತ್ತು.
ಆದರೆ ಇದೇ ರೀತಿಯ ಒಂದು ಘಟನೆ 2002 ರಲ್ಲಿ ಮುಂಬೈಯಲ್ಲಿ ನಡೆಯಿತು.


ಇಲ್ಲಿ ರಾಜಕಾರಣಿಯ ಮಗ ಇರಲಿಲ್ಲ. ಆ್ಯಕ್ಸಿಡೆಂಟ್ ಮಾಡಿರೋ ವ್ಯಕ್ತಿ ಸಾಮಾನ್ಯ ವ್ಯಕ್ತಿನೂ ಆಗಿರಲಿಲ್ಲ. ಆ್ಯಕ್ಸಿಡೆಂಟ್ ಚಿತ್ರಕ್ಕೂ ಸಲ್ಮಾನ್ ಕೇಸ್​ಗೂ ಏನ್ ಸಂಬಂಧ
2002 ಸೆಪ್ಟೆಂಬರ್​-28 ರಂದು ರಾತ್ರಿ ವೇಳೆ ಭಯಾನಕ ಆ್ಯಕ್ಸಿಡೆಂಟ್ ನಡೆದೆ ಹೋಯಿತು. ನಿಜ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹೆಸರು ಈ ಒಂದು ಘಟನೆಯಲ್ಲಿ ಕೇಳಿ ಬಂತು.


Kannada Classic Movie Accident Interesting Fact
ಪತ್ರಕರ್ತನ ಪಾತ್ರದಲ್ಲಿ ಶಂಕರ್ ನಾಗ್ ಅಭಿನಯ


ಸ್ವತಃ ಸಲ್ಮಾನ್ ಖಾನ್ ಈ ಒಂದು ಆ್ಯಕ್ಸಿಡೆಂಟ್ ಮಾಡಿದ್ದಾರೆ ಅನ್ನುವ ಸುದ್ದಿನೇ ಹೆಚ್ಚು ಕೇಳಿ ಬಂತು. ಈ ಕೇಸ್​ಗೆ ಸಂಬಂಧಿಸಿದಂತೆ ಸಲ್ಮಾನ್ ಈಗಲೂ ಕೋರ್ಟ್ ಅಲೆಯುತ್ತಿದ್ದಾರೆ.


ಆ್ಯಕ್ಸಿಡೆಂಟ್ ಸಿನಿಮಾ ಕಥೆ ಸಲ್ಮಾನ್ ಸ್ಟೋರಿ ಥರವೇ ಇದೆ!
ಆದರೆ ಇಂತಹದ್ದೆ ಒಂದು ಘಟನೆ 1985 ರಲ್ಲಿ ಚಿತ್ರ ಆಗುತ್ತದೆ ಅನ್ನೋದು ಎಷ್ಟು ಕಾಕತಾಳಿಯ ಅಲ್ವೇ? ಅಥವಾ ಸಿನಿಮಾ ನೋಡಿ ಈ ರೀತಿ ಮಾಡಿದ್ರು ಅಂತ ಹೇಳೋಕೆ ಆಗೋದಿಲ್ಲ.


ಇದನ್ನೂ ಓದಿ: Bollywood: ಇದು ಬಾಲಿವುಡ್ ಸ್ಟಾರ್ ಹಳೆಯ ಫೋಟೋ, ಅಪ್ಪನ ಫೋಟೋ ನೋಡಿ ಮಗನ ಹೆಸರೇಳ್ತಿದ್ದಾರೆ ನೆಟ್ಟಿಗರು!


ಇದು ನಶೆಯಲ್ಲಿ ಆದ ಘಟನೆ ಅನ್ನುವ ಮಾಹಿತಿ ಕೂಡ ಇದೆ. ಒಟ್ಟಾರೆ, ಒಂದು ಕಥೆ ಸಿನಿಮಾಗೆ ಸ್ಪೂರ್ತಿ ಆಗಿಲ್ಲ ಅಂತಲೂ ಅಭಿಪ್ರಾಯ ಪಡಬಹುದು. ಆದರೆ ಒಂದು ಭಯಂಕರ ಆ್ಯಕ್ಸಿಡೆಂಟ್ ಹೋಲಿಕೆ ಆಗೋ ರೀತಿ ಆಗಿರೋದು ದುರಂತವೇ ಸರಿ.

First published: