ಕನ್ನಡದಲ್ಲಿ ಕ್ಲಾಸಿಕ್ ಸಿನಿಮಾಗಳು (Bangarada Hoovu Cinema) ಕಾಲವೊಂದಿತ್ತು. ಆ ಟೈಮ್ ನಲ್ಲಿ ಬರುತ್ತಿದ್ದ ಚಿತ್ರಗಳ ಕಥೆಯಲ್ಲಿ ಆದರ್ಶ ಇರುತ್ತಿತ್ತು. ನಾಯಕನಿಗೊಂದು (Rajkumar Movie Unknown Facts) ನೌಕರಿನೂ ಇರ್ತಾಯಿತ್ತು. ಸಿನಿಮಾ ನೋಡ್ತಾ ಹೋದ ಪ್ರೇಕ್ಷಕನಿಗೆ ಸಂದೇಶ ಕೂಡ ಇರ್ತಾ ಇತ್ತು. ಹಾಗೆ 1967 ರಲ್ಲಿ ಬಂಗಾರದ (Bangarada Hoovu Movie) ಹೂವು ಸಿನಿಮಾ ಬಂದಿತ್ತು. ಈ ಚಿತ್ರದಲ್ಲಿ ಡಾಕ್ಟರ್ ರಾಜ್ಕುಮಾರ್ ಮತ್ತು ಕಲ್ಪನಾ ಅಭಿನಯಿಸಿದ್ದರು. ಬಿ.ಎ.ಅರಸು ಕುಮಾರ್ ಈ ಚಿತ್ರಕ್ಕೆ ದುಡ್ಡು ಹಾಕಿದ್ದರು. ತಾವೇ ಈ ಒಂದು ವಿಶೇಷ ಕಥೆಯನ್ನ ನಿರ್ದೇಶನ ಮಾಡಿದ್ದರು. ರಾಜನ್-ನಾಗೇಂದ್ರ ಈ ಒಂದು ಚಿತ್ರಕ್ಕೆ ಅದ್ಭುತ (Rajan-Nagendra Music Direction) ಸಂಗೀತ ಕೊಟ್ಟಿದ್ದರು. ಅದೇ ಸಂಗೀತದಲ್ಲಿಯೇ "ನೀ ನಡೆವ ಹಾದಿಯಲ್ಲಿ" ಕ್ಲಾಸಿಕ್ ಹಾಡು ಮೂಡಿ ಬಂದಿತ್ತು.
ಇದೇ ಹಾಡಿನ ರಚನೆ ವಿಷಯದ ಹಿಂದೆ ಒಂದು ಕಥೆ ಇದೆ. ಅದು ತುಂಬಾ ಇಂಟ್ರಸ್ಟಿಂಗ್ ಆಗಿಯೇ ಇದೆ. ಅದು ಇಲ್ಲಿದೆ ಓದಿ.
ನೀ ನಡೆವ ಹಾದಿಯಲ್ಲಿ ಹಾಡಿನ ಹಿಂದಿನ ಕಥೆ
ಬಂಗಾರದ ಹೂವು ಸಿನಿಮಾ ಸೂಪರ್ ಹಿಟ್ ಆಗಿತ್ತು. ಪ್ರಶಸ್ತಿಗಳೂ ಈ ಚಿತ್ರಕ್ಕೆ ಬಂದಿದ್ದವು. ಅಂತಹ ಈ ಚಿತ್ರ ಕುಷ್ಠರೋಗದ ಮೇಲೆ ಬೆಳಕು ಚೆಲ್ಲಿತ್ತು. ಮೂಢನಂಬಿಕೆಯನ್ನ ಹೋಗಲಾಡಿಸೋ ಕೆಲಸವನ್ನೂ ಮಾಡಿತ್ತು.
ಸಮಾಜ ಮುಖಿಯಾಗಿಯೇ ಇದ್ದ ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ಮಾಡಿದ್ದರು. ಚಿ.ಉದಯ್ ಶಂಕರ್, ವಿಜಯ್ ನಾರಸಿಂಹ ಸಾಹಿತ್ಯ ಬರೆದಿದ್ದರು.
ನೀ ನಡೆವ ಹಾದಿಯಲ್ಲಿ ಹಾಡು ಸೂಪರ್ ಹಿಟ್
ಬಂಗಾರದ ಹೂವು ಚಿತ್ರಕ್ಕೆ ಒಳ್ಳೆ ಹಾಡುಗಳು ಬೇಕು ಅಂತಲೇ ಡೈರೆಕ್ಟರ್ ಅರಸು ಕುಮಾರ್ ನಿರ್ಧರಿಸಿದ್ದರು. ಆ ಕೂಡಲೇ ಅವ್ರು, ಚಿ.ಉದಯ್ ಶಂಕರ್, ವಿಜಯನಾರಸಿಂಹ ಹಾಗೂ ಆರ್.ಎನ್.ಜಯಗೋಪಾಲ್ ಅವರನ್ನ ಕೇಳಿದ್ದರು.
ಆಗಲೇ ಈ ಚಿತ್ರಕ್ಕೆ ಆರ್.ಎನ್.ಜಯಗೋಪಾಲ್ ಒಂದು ಹಾಡು ಬರೆಯಲು ಕುಳಿತರು. ಆದರೆ ಆ ಗೀತೆ ಮೊದಲ ಸಾಲು ಒಳೆಯಿತು. ಮುಂದೇನೂ ಅನ್ನೋ ಹೊತ್ತಿಗೆ ಏನೂ ಹೊಳೀತಾನೇ ಇಲ್ಲ. ಏನ್ ಮಾಡಬೇಕು ಅಂತಲೇ ಆರ್.ಎನ್.ಜಯಗೋಪಾಲ್ ಯೋಚ್ನೆ ಮಾಡುತ್ತಲೇ ಕುಳಿತ್ತಿದ್ದರು.
ಪಲ್ಲವಿ ಒಬ್ಬರು ಬರೆದರು ಚರಣ ಮತ್ತೊಬ್ಬರು ಬರೆದರು!
ನೀ ನಡೆವ ಹಾದಿಯಲ್ಲಿ ಅಂತಲೇ ಬರೆದುಕೊಂಡು ಕುಳಿತಿದ್ದ ಹೊತ್ತಿಗೆ, ವಿಜಯನಾರಸಿಂಹ ಅವರು ಬಂದ್ರು, ನೀ ನಡೆವ ಹಾದಿಯಲ್ಲಿ ಅಂತ ಹೇಳಿಕೊಂಡು, ಈ ಬಾಳ ಬುತ್ತಿಯಲ್ಲಿ ಸಿಹಿ ಪಾಲು ನಿನಗಿರಲಿ ಕಹಿ ಎಲ್ಲ ನನಗಿರಲಿ ಎಂದು ಚರಣದ ಸಾಲುಗಳನ್ನ ಬರೆದೆ ಬಿಟ್ಟರು.
ಆರ್.ಎನ್.ಜಯಗೋಪಾಲ್ ತಾವು ಈ ಹಾಡಿನ ಕ್ರೆಡಿಟ್ ತೆಗೆದುಕೊಳ್ಳಲೇ ಇಲ್ಲ. ವಿಜಯನಾರಸಿಂಹ ಅವರಿಗೇನೆ ಅದನ್ನ ಕೊಟ್ಟರು. ಅಲ್ಲಿಗೆ ಒಂದೇ ಹಾಡನ್ನ ಇಬ್ಬರು ಬರೆದರೂ ಕೂಡ ಈ ಹಾಡಿನ ಕ್ರೆಡಿಟ್ ಮಾತ್ರ ವಿಜಯ ನಾರಸಿಂಹ ಅವರ ಹೆಸರಲ್ಲಿಯೇ ಇದೆ.
ಬಂಗಾರದ ಹೂವು ಚಿತ್ರದ ಕ್ಲಾಸಿಕ್ "ನೀ ನಡೆವ ಹಾದಿಯಲ್ಲಿ" ಹೀಗೆ ಹಾಡು ರೆಡಿ ಆಯಿತು. ಅದನ್ನ ಅಷ್ಟೇ ಅದ್ಭುತವಾಗಿಯೇ ಗಾಯಕಿ ಎಸ್.ಜಾನಕಿ ಮತ್ತು ಪಿ.ಸುಶೀಲಾ ಹಾಡಿದರು. ಇದೇ ಹಾಡು ಇಂದಿಗೂ ಪ್ರಸ್ತುತ ಅನಿಸುತ್ತದೆ. ಅದಕ್ಕೇನೆ ಈಗಲೂ ಈ ಹಾಡು ಕೇಳಿದರೆ ಎಲ್ಲರಿಗೂ ಇಷ್ಟ ಆಗುತ್ತದೆ.
ಕನ್ನಡದ ಬಂಗಾರದ ಹೂವು ಸೂಪರ್ ಸಿನಿಮಾ
ಕುಷ್ಠರೋಗದ ಬಗ್ಗೆ ಏನೇನೋ ಕಲ್ಪನೆಗಳಿದ್ದವು. ಇನ್ನೇನೋ ಮೂಢ ನಂಬಿಕೆಗಳೂ ಇದ್ದವು. ಆದರೆ ಚಿತ್ರದ ನಿರ್ದೇಶಕರಾದ ಅರಸು ಕುಮಾರ್ ಅವರು ತಮ್ಮ ಈ ಚಿತ್ರ ಮೂಲಕ ಜಾಗೃತಿ ಮೂಡಿಸೋ ಕೆಲಸವನ್ನ ಕೂಡ ಮಾಡಿದ್ದರು.
ಕುಷ್ಠರೋಗದ ಮೇಲೆ ಬೆಳಕು ಚೆಲ್ಲುವ ಕೆಲಸವನ್ನ ಈ ಒಂದು ಸಿನಿಮಾ ಅಂದೇ ಮಾಡಿತ್ತು. 1967 ರಲ್ಲಿ ತೆರೆ ಕಂಡಿದ್ದ ಈ ಚಿತ್ರದಲ್ಲಿ ಮಿನುಗು ತಾರೆ ಕಲ್ಪನಾ ಮತ್ತು ಡಾಕ್ಟರ್ ರಾಜ್ ಕುಮಾರ್ ಅಭಿನಯಿಸಿದ್ದರು. ಚಿತ್ರದಲ್ಲಿ ಉದಯ್ ಕುಮಾರ್ ಮತ್ತು ಶೈಲಶ್ರೀ ಕೂಡ ಇದ್ದರು.
ಇದನ್ನೂ ಓದಿ: Hostel Hudugaru Bekagiddare: ಕನ್ನಡದ ಹೊಸ ಹುಡುಗರ ಬೆನ್ನಿಗೆ ನಿಂತ ಸ್ಟಾರ್ ನಟರು, ಕುತೂಹಲ ಮೂಡಿಸಿದ ಚಿತ್ರ
ಕಪ್ಪು-ಬಿಳುಪಿನ ಕಾಲದಲ್ಲಿಯೇ ಈ ಒಂದು ಚಿತ್ರ ಒಳ್ಳೆ ವಿಷಯದ ಮೇಲೆ ಬಂದಿತ್ತು. ಜನರಲ್ಲಿದ್ದ ತಪ್ಪು ಕಲ್ಪನೆಯನ್ನ ತಿದ್ದುವ ಕೆಲಸವನ್ನೂ ಮಾಡಿತ್ತು. ನೀ ನಡೆವ ಹಾದಿಯಲ್ಲಿ ಅನ್ನೋ ಸುಂದರ ಹಾಡಿನ ಮೂಲಕ ಅಗಾಧ ಪ್ರೀತಿಯ ಮಹತ್ವವನ್ನೂ ಸಾರಲಾಗಿತ್ತು ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ