Ramachari New Movie: ಮತ್ತೆ ಬಂದ್ರು ರಾಮಾಚಾರಿ, ಮಾರ್ಗರೇಟ್ ಇಲ್ಲಿದೆ ಹೊಸ ಮ್ಯಾಟರ್

ಮತ್ತೆ ಹುಟ್ಟಿ ಬಂದ ರಾಮಾಚಾರಿ-ಮಾರ್ಗರೇಟ್!

ಮತ್ತೆ ಹುಟ್ಟಿ ಬಂದ ರಾಮಾಚಾರಿ-ಮಾರ್ಗರೇಟ್!

ಡೈರೆಕ್ಟರ್ ಪುಟ್ಟಣ್ಣನವರ ರಾಮಾಚಾರಿ ಕಾಲಕ ಕಾಲಕ್ಕೆ ಮತ್ತೆ ಮತ್ತೆ ಹುಟ್ಟಿ ಬರ್ತಾನೇ ಇದ್ದಾರೆ. ರಾಮಾಚಾರಿ ಜೊತೆಗೆ ಮಾರ್ಗರೇಟ್ ಕೂಡ ಮತ್ತೆ ಹುಟ್ಟಿ ಬರ್ತಿದ್ದಾಳೆ. ಎಂದೂ ಮುಗಿಯದ ಇವರ ಲವ್ ಸ್ಟೋರಿ ಹೊಸ ರೂಪದಲ್ಲಿ ಕನ್ನಡದ ಬೆಳ್ಳಿ ತೆರೆ ಮೇಲೆ ಬರ್ತಾನೆ ಇದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗದ ಕ್ಲಾಸಿಕ್ (Ramachari New Movie) ಸಿನಿಮಾಗಳಲ್ಲಿ ನಾಗರಹಾವು ಸಿನಿಮಾ ವಿಶೇಷವಾಗಿ ನಿಲ್ಲುತ್ತದೆ. ಪುಟ್ಟಣ್ಣ ಕಣಗಾಲ್‌ ಅವರ ಈ ಚಿತ್ರದ ಪ್ರಭಾವ ಈಗಲೂ ಇದೆ. ಈ ಒಂದು ಚಿತ್ರದ ರಾಮಾಚಾರಿ ಹಾಗೂ ಮಾರ್ಗರೇಟ್ ಪಾತ್ರಗಳು ಈಗಲೂ ಹತ್ತು ಹಲವು ಪಾತ್ರಗಳಿಗೆ ಸ್ಪೂರ್ತಿ ಪಡೆದಿವೆ. ಕ್ರೇಜಿ ಸ್ಟಾರ್ (Kannada Ramacari New Movie) ರವಿಚಂದ್ರನ್ ಅವರು ತಮ್ಮ ಚಿತ್ರಕ್ಕೆ ರಾಮಾಚಾರಿ ಅಂತ ಹೆಸರಿಟ್ಟಿದ್ದರು. ರಾಮಾಚಾರಿ ಮೂಲಕವೇ ಎಲ್ಲರ ಹೃದಯ ಕದ್ದೇ ಬಿಟ್ಟರು. ರಾಜಕುಮಾರ ಚಿತ್ರ ಖ್ಯಾತಿಯ ನಿರ್ದೇಶಕರ ಸಂತೋಷ್ ಆನಂದರಾಮ್ ಅವರು ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದ (Sandalwood Ramachari New Film) ಮೂಲಕ ರಾಮಚಾರಿ ಮತ್ತು ಮಾರ್ಗರೇಟ್ ಪಾತ್ರಗಳನ್ನ ಮತ್ತೆ ಸೃಷ್ಟಿಸಿದ್ದರು.


ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಈ ಒಂದು ಪ್ರಯತ್ನವನ್ನ ಜನ ಒಪ್ಪಿ ಮೆಚ್ಚಿದರು. ಇತ್ತೀಚಿಗೆ ರಾಮಾಚಾರಿ-2 ಅನ್ನೋ ಸಿನಿಮಾ ಕೂಡ ಬಂದಿತ್ತು. ಇದೀಗ ಪುಟ್ಟಣ್ಣನವರ (New Movie Launch) ರಾಮಾಚಾರಿ ಮತ್ತು ಮಾರ್ಗರೇಟ್ ಮತ್ತೆ ಹುಟ್ಟಿಬಂದಿದ್ದಾರೆ.


Kannada Classic Character Ramachari Margaret New Movie Launch
ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಕನ್ನಡ ಹೊಸ ಸಿನಿಮಾ!


ಮತ್ತೆ ಹುಟ್ಟಿ ಬಂದ ರಾಮಾಚಾರಿ-ಮಾರ್ಗರೇಟ್!


ಡೈರೆಕ್ಟರ್ ಪುಟ್ಟಣ್ಣನವರ ರಾಮಾಚಾರಿ ಕಾಲಕ ಕಾಲಕ್ಕೆ ಮತ್ತೆ ಮತ್ತೆ ಹುಟ್ಟಿ ಬರ್ತಾನೇ ಇದ್ದಾರೆ. ರಾಮಾಚಾರಿ ಜೊತೆಗೆ ಮಾರ್ಗರೇಟ್ ಕೂಡ ಮತ್ತೆ ಹುಟ್ಟಿ ಬರ್ತಿದ್ದಾಳೆ. ಎಂದೂ ಮುಗಿಯದ ಇವರ ಲವ್ ಸ್ಟೋರಿ ಹೊಸ ರೂಪದಲ್ಲಿ ಕನ್ನಡದ ಬೆಳ್ಳಿ ತೆರೆ ಮೇಲೆ ಬರ್ತಾನೆ ಇದೆ.
ಇದೀಗ ಇದೇ ರಾಮಾಚಾರಿ ನವ ನಟ ಅಭಿಲಾಷ್ ರೂಪದಲ್ಲಿ ಬರ್ತಿದ್ದಾನೆ. ನಾಯಕಿ ನಟಿ ಸೋನಲ್ ಮೊಂಥೆರೋ ಮೂಲಕ ಮಾರ್ಗರೇಟ್ ಕೂಡ ಬರ್ತಿದ್ದಾಳೆ. ಹೌದು, ಈ ಚಿತ್ರದ ಹೆಸರು ತುಂಬಾ ಸ್ಪೆಷಲ್ ಅನಿಸುತ್ತಿದೆ. ಆ ಹೆಸರು ಏನು ಗೊತ್ತೇ? ಇಲ್ಲಿದೆ ಓದಿ.


ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಕನ್ನಡ ಹೊಸ ಸಿನಿಮಾ!


ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಅನ್ನೋದೇ ಈ ಚಿತ್ರದ ಶೀರ್ಷಿಕೆ ಆಗಿದೆ. ರಾಮಾಚಾರಿ ಆಗೋ ಅವಕಾಶ ಈ ಸಲ ಯುವ ನಟ ಅಭಿಲಾಷ್‌ಗೆ ಸಿಕ್ಕಿದೆ. ಅಭಿಲಾಷ್ ಯಾರೂ? ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿ ಒಂದಷ್ಟು ಸಿನಿಮಾ ರೂಪದಲ್ಲಿ ಉತ್ತರ ಸಿಗುತ್ತವೆ.


ಡಾಲಿ ಧನಂಜಯ್ ಅಭಿನಯದ ಬಡವಾ ರಾಸ್ಕಲ್ ಚಿತ್ರದಲ್ಲಿ ಅಭಿಲಾಷ್ ಒಂದು ಸಣ್ಣ ಪಾತ್ರ ಮಾಡಿದ್ದರು. ಮೊನ್ನೆ ಮೊನ್ನೆ ಬಂದ ಹೊಯ್ಸಳ ಚಿತ್ರದಲ್ಲೂ ಅಭಿಲಾಷ್ ನಟಿಸಿದ್ದಾರೆ. ಅಭಿಲಾಷ್‌ಗೆ ಈಗ ಹೀರೋ ಆಗೋ ಅವಕಾಶ ಸಿಕ್ಕಿದೆ.


ಡಾಲಿ ಧನಂಜಯ್ ಅಭಿಮಾನಿ ಇದೀಗ ಹೀರೋ!


ಡಾಲಿ ಧನಂಜಯ್ ಅವರ ಅಪ್ಪಟ ಅಭಿಮಾನಿಯಾಗಿರೋ ನಟ ಅಭಿಲಾಷ್ ಹೀರೋ ಆಗಿರೋ ಈ ಚಿತ್ರದ ಮುಹೂರ್ತಕ್ಕೆ ಸ್ವತಃ ಡಾಲಿ ಧನಂಜಯ್ ಬಂದಿದ್ದರು. ಬಂದು ಇಡೀ ಟೀಮ್‌ಗೆ ಶುಭ ಹಾರೈಸಿದ್ದಾರೆ. ಇದರಿಂದ ಅಭಿಲಾಷ್ ಆ್ಯಂಡ್ ಟೀಮ್ ಫುಲ್ ಖುಷ್ ಆಗಿದೆ.


ಅಭಿಲಾಷ್ ಜೊತೆಗೆ ಜೋಡಿ ಆಗಿರೋ ನಟಿ ಸೋನಲ್ ಮೊಂಥೆರೋ ಯಾರೂ ಅನ್ನೋದು ಬೇಡ್ವೇ ಬೇಡ. ಸೋನಲ್ ಮೊಂಥೆರೋ ಹಲವು ಸಿನಿಮಾ ಮಾಡಿದ್ದಾರೆ. ಕನ್ನಡಿಗರಿಗೆ ಸೋನಲ್ ಯಾರೂ ಅನ್ನೋದು ಗೊತ್ತೇ ಇದೆ.


Kannada Classic Character Ramachari Margaret New Movie Launch
ಡಾಲಿ ಧನಂಜಯ್ ಅಭಿಮಾನಿ ಇದೀಗ ಹೀರೋ!


ಕ್ಲಾಸಿಕ್ ಜಲೀಲ ಪಾತ್ರದಲ್ಲಿ ಯಶ್ ಶೆಟ್ಟಿ ಅಭಿನಯ


ಮಾರ್ಗರೇಟ್ ಮತ್ತು ರಾಮಾಚಾರಿ ಸಿನಿಮಾದಲ್ಲಿ ಜಲೀಲ ಪಾತ್ರವೂ ಇದೆ. ರೆಬಲ್ ಸ್ಟಾರ್ ಅಂಬರೀಶ್ ಅವರ ಈ ಒಂದು ಕ್ಲಾಸಿಕ್ ರೋಲ್ ಅನ್ನ ಈ ಚಿತ್ರದಲ್ಲಿ ಬೇಡಿಕೆಯ ನಟ ಯಶ್ ಶೆಟ್ಟಿ ನಿರ್ಹಿಸುತ್ತಿದ್ದು, ಪಾತ್ರ ಹೇಗೆಲ್ಲ ಬರುತ್ತದೆ ಅನ್ನುವ ಕುತೂಹಲ ಕೂಡ ಮೂಡಿದೆ.


ಇನ್ನು ಇವರನ್ನ ತೆರೆ ಮೇಲೆ ತರೋ ಕೆಲಸವನ್ನ ಗಿರಿಧರ್ ಕುಂಬಾರ್ ಮಾಡುತ್ತಿದ್ದಾರೆ. ಇವರ ಈ ಒಂದು ಪ್ರಯತ್ನದ ಚಿತ್ರದಲ್ಲಿ ಸಮಾಜಕ್ಕೆ ಬೇಕಿರೋ ವಿಷಯವನ್ನ ಇಟ್ಟುಕೊಂಡು ಕಥೆ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: Ondu Muttina Kathe: ನಾನು ರಾಜ್​ಕುಮಾರ್ ಇಮೇಜ್ ಬ್ರೇಕ್ ಮಾಡುವಲ್ಲಿ ಸೋತು ಹೋದೆ ಎಂದಿದ್ದರು ಶಂಕರ್ ನಾಗ್? ಯಾಕೆ?


ಇದೇ ಮೇ-15 ರಿಂದ ಶೂಟಿಂ ಗ್ ಕೂಡ ಶುರು ಆಗುತ್ತದೆ. ಸದ್ಯಕ್ಕೆ ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿದೆ.

First published: