• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Rajendra Singh Babu: ರೆಬಲ್ ಸ್ಟಾರ್ ಅಂತ ಸಿನಿಮಾ ರೀ-ರಿಲೀಸ್; ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

Rajendra Singh Babu: ರೆಬಲ್ ಸ್ಟಾರ್ ಅಂತ ಸಿನಿಮಾ ರೀ-ರಿಲೀಸ್; ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

ಅಂಬಿ "ಅಂತ" ಸಿನಿಮಾದ ಅನಂತ ನೆನಪುಗಳು!

ಅಂಬಿ "ಅಂತ" ಸಿನಿಮಾದ ಅನಂತ ನೆನಪುಗಳು!

ರೆಬಲ್ ಸ್ಟಾರ್ ಅಂಬರೀಶ್ ಕ್ಲಾಸಿಕ್ ಅಂತ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಹೊಸ ಸ್ಪರ್ಶದೊಂದಿಗೆ ಈ ಚಿತ್ರವನ್ನ ನಿರ್ಮಾಪಕ ಜಯಣ್ಣ ರೀ-ರಿಲೀಸ್ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು ಗೊತ್ತೇ ? ಇಲ್ಲಿದೆ ಓದಿ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಅಂತ (Kannada Classic Antha Cinema) ಸಿನಿಮಾ ಆ ದಿನಗಳಲ್ಲಿಯೇ ಅತಿ ದೊಡ್ಡ ಕ್ರೇಜ್ ಹುಟ್ಟಿಸಿತ್ತು. ಈ ಚಿತ್ರ ಆ ದಿನಗಳಲ್ಲಿಯೇ ಬ್ಯಾನ್ ಕೂಡ ಆಗಿತ್ತು. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಹೋರಾಟದಿಂದ ಈ ಸಿನಿಮಾ (Antha Cinema Untold Story) ಮತ್ತೆ ರಿಲೀಸ್ ಆಯಿತು. ಜನರ ಮನದಲ್ಲಿ ಹೊಸ ಅಲೆಯನ್ನ ಎಬ್ಬಿಸಿತ್ತು. ಅಂದಿನ ದಿನಗಳಲ್ಲಿಯೇ ಈ ಚಿತ್ರದ ಎಲ್ಲೆಡೆ ಕ್ರೇಜ್ ಹುಟ್ಟಿಸಿತ್ತು. ಸಿನಿಮಾ ಪ್ರೇಮಿಗಳು ಮತ್ತು ಇಂಡಸ್ಟ್ರೀಯಲ್ಲೂ ಈ ಚಿತ್ರದ (Antha Re-Release soon) ಬಗ್ಗೆ ಒಳ್ಳೆ ಟಾಕ್ ಇತ್ತು. ಅಂತಹ ಈ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ.


ಈ ಹಿನ್ನೆಲೆಯಲ್ಲಿ ಚಿತ್ರದ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಆ ದಿನಗಳ (Antha Cinema Unknown Story) ಒಂದಷ್ಟು ಇಂಟ್ರ್ಟಿಂಗ್ ವಿಷಯಗಳನ್ನ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.


Kannada Classic Antha Cinema Going to Re-Release soon
ಸಾವಿರಾರು ಚಿತ್ರಗಳಿಗೆ "ಅಂತ" ಸಿನಿಮಾ ಸ್ಪೂರ್ತಿ


ಅಂಬಿ "ಅಂತ" ಸಿನಿಮಾದ ಅನಂತ ನೆನಪುಗಳು !


ಅಂತ ಸಿನಿಮಾ ಬಂದು ಈಗ 40 ವರ್ಷಗಳೇ ಕಳೆದಿವೆ. ಆದರೂ ಈ ಸಿನಿಮಾ ಬಗ್ಗೆ ಇರೋ ಕ್ರೇಜ್ ಕಡಿಮೆ ಆಗಿಲ್ಲ. ಅಷ್ಟು ಒಳ್ಳೆ ಕಥೆಯ ಚಿತ್ರಕ್ಕೆ ಅಂಬರೀಶ್ ನಾಯಕರಾಗಿ ಆಯ್ಕೆ ಆಗಿದ್ದರು. ನಟಿ ಲಕ್ಷ್ಮೀ ಚಿತ್ರದ ಹೀರೋಯಿನ್ ಅಂತಲೇ ಸೆಲೆಕ್ಟ್ ಆಗಿದ್ದರು.




ಇವರ ಜೋಡಿಯ ಈ ಚಿತ್ರ ಸೆಟ್ಟೇರಿತ್ತು. ಚಿತ್ರದ ಅಷ್ಟೂ ಭಾಗವನ್ನ ಮೈಸೂರಿನಲ್ಲಿಯೇ ಚಿತ್ರೀಕರಿಸಲಾಗಿತ್ತು. ಚಿತ್ರಕ್ಕಾಗಿ ೧೮ ಅದ್ಧೂರಿ ಸೆಟ್‌ಗಳನ್ನ ನಿರ್ಮಿಸಿದ್ದೇವು. ಚಿತ್ರ ತುಂಬಾ ಚೆನ್ನಾಗಿಯೇ ಬಂದಿತ್ತು.



ರಾಜೇಂದ್ರ ಸಿಂಗ್ ಬಾಬು ಅವರಿಗೆ ಅಂತ ಕಥೆ ಸಿಕ್ಕದ್ದು ಹೇಗೆ?


ಅಸಲಿಗೆ ಈ ಚಿತ್ರವನ್ನ ಬೇರೆಯವರು ನಿರ್ದೇಶನ ಮಾಡಬೇಕಿತ್ತು. ಆದರೆ ಈ ಕಥೆ ಎಂ.ಬಿ.ಸಿಂಗ್ ಅವರ ಮೂಲಕ ನನಗೆ ದೊರೆಯಿತು. ಹಾಗಾಗಿಯೇ ಈ ಚಿತ್ರವನ್ನ ಡೈರೆಕ್ಟ್ ಮಾಡಿದೆ.


ಚಿತ್ರದಲ್ಲಿ ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್ ಹೀಗೆ ಹಲವು ಕಲಾವಿದರು ಅಭಿನಯಿಸಿದ್ದಾರೆ.


ಸಾವಿರಾರು ಚಿತ್ರಗಳಿಗೆ "ಅಂತ" ಸಿನಿಮಾ ಸ್ಪೂರ್ತಿ


ಇವರೆಲ್ಲ ಈ ಸಿನಿಮಾ ನಿರೀಕ್ಷೆ ಮೀರಿ ಯಶಸ್ಸು ಕಂಡಿದ್ದು, ಸಾವಿರಾರು ಸಿನಿಮಾಗಳಿಗೂ ಅಂತ ಸಿನಿಮಾ ಒಂದು ರೀತಿ ಸ್ಪೂರ್ತಿನೂ ಆಗಿದೆ. ಅಂತಹ ಈ ಸಿನಿಮಾ ಅಂದಿನ ದಿನಗಳಲ್ಲಿಯೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು.


Kannada Classic Antha Cinema Going to Re-Release soon
ಅಂಬರೀಶ್ ಅಂತ ಚಿತ್ರಕ್ಕೆ ಹೊಸ ಟಚ್


ಆ ದಿನಗಳಲ್ಲಿಯೇ ಈ ಚಿತ್ರಕ್ಕೆ ಭಾರೀ ಬೇಡಿಕೆ ಇತ್ತು. ಈ ಚಿತ್ರದಲ್ಲಿ ಕಥೇನೆ ಹೀರೋ ಆಗಿತ್ತು. ಕಥೆ ಚೆನ್ನಾಗಿದ್ದರೆ, ಸಕ್ಸಸ್ ಗ್ಯಾರಂಟಿ. ಅಂತಹ ಈ ಚಿತ್ರ ಇದೇ ತಿಂಗಳ-26  ರಂದು ರೀ-ರಿಲೀಸ್ ಆಗುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಡೈಕ್ಟರ್ ರಾಜೇಂದ್ರ ಸಿಂಗ್ ಬಾಬು ಹೇಳಿದರು.


ಅಂಬರೀಶ್ "ಅಂತ" ಚಿತ್ರಕ್ಕೆ ಹೊಸ ಟಚ್


ಜಯಣ್ಣ ಫಿಲ್ಮ್ಸ್ ಮೂಲಕವೇ ಈ ಚಿತ್ರ ಮರು ಬಿಡುಗಡೆ ಆಗುತ್ತಿದೆ. 35 ಎಂ.ಎಂ ನಿಂದ 70 ಎಂ.ಎಂ.ಗೆ ಚಿತ್ರ ಇದೀಗ ಬದಲಾಗಿದೆ. ಕಲರ್ ಮತ್ತು ಸೌಂಡ್‌ನಲ್ಲೂ ಹೊಸ ಸ್ಪರ್ಶ ಬಂದಿದೆ.


ಇದನ್ನೂ ಓದಿ: Priyanka Chopra: ಡ್ಯಾನ್ಸ್ ಮಾಡುತ್ತಾ ಒಳ ಉಡುಪು ಕಳಚುವಂತೆ ಹೇಳಿದ್ರಂತೆ ನಿರ್ದೇಶಕ! ಕಹಿ ಅನುಭವ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

top videos


    ರೆಬಲ್ ಸ್ಟಾರ್ ಅಂಬರೀಶ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಈ ಚಿತ್ರ ಮರು ಬಿಡುಗಡೆ ಆಗುತ್ತಿದೆ. ಮೇ-೨೯ ರಂದು ಅಂಬರೀಶ್ ಅವರ ಜನ್ಮ ದಿನ ಇದೆ. ಅದಕ್ಕೂ ಮೊದಲೇ ಮೇ-29 ರಂದು "ಅಂತ" ಸಿನಿಮಾ 70 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿದೆ.

    First published: