ಸ್ಯಾಂಡಲ್‌ವುಡ್ ನಲ್ಲಿ ಒಂದು ಸಿನಿಮಾ (America America Movie) ಬಂದಿತ್ತು. ಈ ಚಿತ್ರ 1997 ಏಪ್ರಿಲ್ 11ರಂದು ರಿಲೀಸ್ ಆಗಿತ್ತು. ನಾಗತಿಹಳ್ಳ ಚಂದ್ರಶೇಖರ್ ಅವರ ಈ ಚಿತ್ರ ಇಡೀ ಕನ್ನಡ ನಾಡಿನ ಯುವ ಜನತೆಯಲ್ಲಿ (America America Film) ಹೊಸ ಅಲೆಯನ್ನ ಎಬ್ಬಿಸಿತ್ತು. ಹೌದು, ಅಮೆರಿಕಾ ಅಮೆರಿಕಾ ಸಿನಿಮಾ ಅಮೆರಿಕಾಕ್ಕೆ ಹೋಗೊ ಜನರ ಸ್ಥಿತಿ-ಗತಿಯ ಚಿತ್ರಣವನ್ನ ಕೂಡ ಕಟ್ಟಿಕೊಟ್ಟಿತ್ತು. ಪ್ರೀತಿ-ಪ್ರೇಮ-ಸ್ನೇಹತನದ (Kannada Super Hit Movie) ಅಸಲಿ ಭಾವಗಳನ್ನ ಕೂಡ ಈ ಚಿತ್ರ ಕಟ್ಟಿಕೊಟ್ಟಿತ್ತು. ಈ ಚಿತ್ರದ ರಿಲೀಸ್ ಆಗಿ 26 ವರ್ಷ ಕಳೆದು ಹೋಗಿದೆ. ಆದರೆ ಇದೀಗ ಈ ಚಿತ್ರ ಮತ್ತೊಮ್ಮೆ ಪ್ರದರ್ಶನ ಆಗುತ್ತಿದೆ. ಯಾವಾಗ ಆಗುತ್ತಿದೆ? ಎಲ್ಲಿ ಆಗುತ್ತಿದೆ? ಈ ಬಗ್ಗೆ (Movie Updates) ಅಧಿಕೃತ ಮಾಹಿತಿ ಕೊಟ್ಟವರು ಯಾರು? ಇಲ್ಲಿದೆ ಓದಿ.
ಅಮೆರಿಕಾ ಅಮೆರಿಕಾ ಸಿನಿಮಾ ಸ್ಪೆಷಲ್ ಪ್ರದರ್ಶನ
ಅಮೆರಿಕಾ ಅಮೆರಿಕಾ ಕನ್ನಡದ ಕ್ಲಾಸಿಕ್ ಸಿನಿಮಾ. 90 ರ ದಶಕದಲ್ಲಿ ಈ ಚಿತ್ರ ಹೊಸ ಅಲೆ ಎಬ್ಬಿಸಿತ್ತು. ಯುವಕ-ಯುವತಿಯರ ಮನದಲ್ಲಿ ಈ ಚಿತ್ರ ಹೊಸ ಭಾವ ಮೂಡಿಸಿತ್ತು. ಯುವ ಜನತೆ ಅಲ್ಲದೇ ಎಲ್ಲರೂ ಈ ಒಂದು ಸಿನಿಮಾ ಮೆಚ್ಚಿಕೊಂಡು ಕೊಂಡಾಡಿದ್ದರು.
ಪ್ರೀತಿ-ಪ್ರೇಮ-ಸ್ನೇಹದ ಕಥೆ ಹೇಳಿದ್ದ ಸಿನಿಮಾ
ಅಮೆರಿಕಾ ಅಮೆರಿಕಾ ಸಿನಿಮಾ ಪ್ರೀತಿ-ಪ್ರೇಮ-ಸ್ನೇಹದ ಕಥೆಯನ್ನ ಕೂಡ ಹೇಳಿತ್ತು. ಡೈರೆಕ್ಟರ್ ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಮೂಲಕ ಇನ್ನೂ ಒಂದು ಸತ್ಯವನ್ನು ಹೇಳಿದ್ದರು. ಭಾರತದಿಂದ ಅಮೆರಿಕಾಕ್ಕೆ ಹೋಗುವ ಭಾರತೀಯ ಯುವಕರು ಕೆಲಸ ಕಳೆದುಕೊಳ್ಳುವ ಸ್ಥಿತಿ-ಗತಿಯ ಕಥೆಯನ್ನ ಕೂಡ ಹೇಳಿದ್ದರು.
ಚಿತ್ರದಲ್ಲಿ ಮೂವರು ಸ್ನೇಹಿತರ ಕಥೆಯನ್ನ ನಾಗತಿಹಳ್ಳಿ ಮೇಷ್ಟ್ರು ತುಂಬಾ ಅದ್ಭುತವಾಗಿಯೇ ತೋರಿದ್ದರು. ಚಿತ್ರದ ಈ ಮೂರು ಪಾತ್ರಕ್ಕೆ ಸೂರ್ಯ, ಚಂದ್ರ, ಭೂಮಿ ಅರ್ಥ ಕೊಡುವ ಹೆಸರನ್ನೆ ಇಟ್ಟಿದ್ದರು. ನಾಯಕಿ ಹೇಮಾ ಪಂಚಮುಖಿ ಅವರ ಪಾತ್ರಕ್ಕೆ ಭೂಮಿ ಅಂತಲೇ ಹೆಸರಿಡಲಾಗಿತ್ತು.
ಅಮೆರಿಕಾ ಅಮೆರಿಕಾ ಕನ್ನಡದ ಸ್ಪೆಷಲ್ ಸಿನಿಮಾ
ರಮೇಶ್ ಅರವಿಂದ್ ಅವರ ಪಾತ್ರಕ್ಕೆ ಸೂರ್ಯ ಅನ್ನುವ ಹೆಸರಿತ್ತು. ಮತ್ತೊಬ್ಬ ಗೆಳೆಯ ಬಾಲಿವುಡ್ ನಟ ಅಕ್ಷಯ್ ಆನಂದ್ ಅಭಿನಯದ ಪಾತ್ರಕ್ಕೆ ಶಶಾಂಕ್ ಅಂತ ಹೆಸರಿಟ್ಟಿದ್ದರು. ಈ ಪಾತ್ರಗಳ ಮೂಲಕ ನಾಗತಿಹಳ್ಳಿ ಮೇಷ್ಟ್ರು ಒಂದು ಚಂದದ ಕಥೆಯನ್ನ ಅಷ್ಟೇ ಸುಂದರವಾಗಿಯೆ ಜನಕ್ಕೆ ಮುಟ್ಟಿಸಿದ್ದರು.
ಹಾಗೆ ಈ ಚಿತ್ರದಲ್ಲಿ ಹಾಡುಗಳೂ ತುಂಬಾ ಚೆನ್ನಾಗಿದ್ದವು. ಮನೋ ಮೂರ್ತಿ ಅವರ ಸಂಗೀತದಲ್ಲಿ ತುಂಬಾ ಒಳ್ಳೆ ಹಾಡುಗಳೇ ಮೂಡಿ ಬಂದಿದ್ದವು. ನಾಗತಿಹಳ್ಳಿ ಮೇಷ್ಟ್ರು ಬರೆದ ನೂರು ಜನ್ಮಕೂ ಹಾಡು ಸೂಪರ್ ಆಗಿತ್ತು. ಇದನ್ನ ಜನ ಈಗಲೂ ಗುನುಗುತ್ತಾರೆ.
ಅಮೆರಿಕಾ ಅಮೆರಿಕಾ ಚಿತ್ರ ಬಂದು 26 ವರ್ಷ ಪೂರ್ಣ
ಕನ್ನಡದ ಈ ಸಿನಿಮಾ ಬಂದು ಇದೀಗ 26 ವರ್ಷಗಳೇ ಕಳೆದಿವೆ. ಆದರೂ ಈ ಚಿತ್ರವನ್ನ ಮೆಚ್ಚುವ ಸಿನಿಪ್ರೇಮಿಗಳು ಇನ್ನೂ ಇದ್ದಾರೆ. ಇವರ ಸಿನಿಮಾ ಪ್ರೀತಿಗೆ ಡೈರೆಕ್ಟರ್ ನಾಗತಿಹಳ್ಳಿ ಮೇಷ್ಟ್ರು ಈಗೊಂದು ಹೊಸ ನ್ಯೂಸ್ ಕೊಟ್ಟಿದ್ದಾರೆ. ಅದು ಇಂತಿದೆ.
ಎಂದೂ ಬತ್ತಿಹೋಗದ ಪನ್ನೀರ ಜೀವನದಿಯನ್ನು ಮತ್ತು ಮಮಕಾರ ಮಾಯೆಯನ್ನು ಮತ್ತೊಮ್ಮೆ ಬೆಳ್ಳಿಪರದೆಯ ಮೇಲೆ ನೋಡಬಯಸುವವರಿಗಾಗಿ.
ಮಾರ್ಚ್-27 ರಂದು ಬೆಳಗ್ಗೆ 10 ಗಂಟೆಗೆ ಚಿತ್ರ ಪ್ರದರ್ಶನ
ಹೌದು, ಅಮೆರಿಕಾ ಅಮೆರಿಕಾ ಸಿನಿಮಾ ಮತ್ತೆ ಪ್ರದರ್ಶನ ಆಗುತ್ತಿದೆ. ಬೆಂಗಳೂರಿನ ಕಲಾವಿದರ ಸಂಘದ ಪ್ರಿವೀವ್ ಥಿಯೇಟರ್‌ನಲ್ಲಿ ಅಮೆರಿಕಾ ಅಮೆರಿಕಾ ಸಿನಿಮಾ ಪ್ರದರ್ಶನ ಆಗುತ್ತಿದೆ. ಇದಕ್ಕಾಗಿಯೇ ಒಂದು ದಿನವನ್ನ ಕೂಡ ಈಗಾಗಲೇ ಫಿಕ್ಸ್ ಮಾಡಲಾಗಿದೆ.
ಇದೇ ಮಾರ್ಚ್-27 ರಂದು ಬೆಳಗ್ಗೆ 10 ಗಂಟೆಗೆ ಅಮೆರಿಕಾ ಅಮೆರಿಕಾ ಸಿನಿಮಾ ಪ್ರದರ್ಶನ ಆಗುತ್ತಿದೆ. ಈ ಒಂದು ವಿಷಯವನ್ನ ನಾಗತಿಹಳ್ಳಿ ಮೇಷ್ಟ್ರು ಸೋಷಿಯಲ್ ಮೀಡಿಯಾ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. ತಮ್ಮ ಟ್ವಿಟರ್ ಪೇಜ್‌ಲ್ಲಿ ಒಂದು ಸ್ಪೆಷಲ್ ಪೋಸ್ಟರ್‌ನ್ನ ಪೋಸ್ಟ್ ಮಾಡಿ ತಮ್ಮ ಚಿತ್ರದ ಮರು ಪ್ರರ್ಶನದ ಉದ್ದೇಶವನ್ನೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Kichcha Sudeepa: ಕಬ್ಜ ಸಿನಿಮಾ ನೋಡಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಹೊಸ ಒತ್ತಾಯ! ಫ್ಯಾನ್ಸ್ ಪ್ಲೀಸ್ ಎಂದಿದ್ದೇಕೆ?
ಒಟ್ಟಾರೆ ಕನ್ನಡದ ಅಮೆರಿಕಾ! ಅಮೆರಿಕಾ! ಸಿನಿಮಾ ಮತ್ತೊಮ್ಮೆ ಪ್ರದರ್ಶನ ಆಗುತ್ತಿದೆ. ಸಿನಿಪ್ರೇಮಿಗಳಿಗಾಗಿಯೇ ಈ ಒಂದು ಶೋ ಪ್ಲಾನ್ ಆಗಿದೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ