Gandhi Mattu Notu: ಗಾಂಧಿ ನೋಟು ಮತ್ತು ಸೆನ್ಸಾರ್ ಶಾಕ್! 9 ತಿಂಗಳು ಬೇಕಾಯ್ತು

ಸಿನಿಮಾ ಹೊರ ಬಂದ್ಮೇಲೆ ಸಾಕಷ್ಟು ಚರ್ಚೆಗೂ ಕಾರಣ ಆಗುತ್ತದೆ. ಇದು ನಿಜ, ಅಂತಲೇ ನಿರ್ದೇಶಕ ಯೋಗಿ ದೇವಗಂಗೆ ನಮ್ಮ ಜೊತೆಗೆ ಹೇಳಿಕೊಂಡಿದ್ದಾರೆ.

ಗಾಂಧಿ ಮತ್ತು ನೋಟು ಕನ್ನಡದ ವಿಶೇಷ ಸಿನಿಮಾ

ಗಾಂಧಿ ಮತ್ತು ನೋಟು ಕನ್ನಡದ ವಿಶೇಷ ಸಿನಿಮಾ

  • Share this:
ಕನ್ನಡದಲ್ಲಿ ಒಂದು ಸಿನಿಮಾ ತಯಾರಾಗಿದೆ. ಈ ಸಿನಿಮಾದ ವಿಷಯ ತುಂಬಾ ಚೆನ್ನಾಗಿದೆ. ಇದನ್ನ ಕೇಳಿದ್ರೆ ಹೌದಲ್ವೇ ಅಂತ ನಿಮಗೂ ಅನಿಸುತ್ತದೆ. ಅಂತಹ ಕಂಟೆಂಟ್​ ನ ಈ ಸಿನಿಮಾ ಸೆನ್ಸಾರ್​ಗಾಗಿಯೇ (Censor) ಪರದಾಡಿದೆ. ಆ ಪರದಾಟ ಮತ್ತು ಹೋರಾಟ ಬರೋಬ್ಬರಿ 9 ತಿಂಗಳೇ ಕಳೆದು ಹೋಗಿದೆ. ಒಂದು ಮಗುವನ್ನ ಹೆತ್ತ ಬಳಿಕ ತಾಯಿ ಅನುಭವಿಸೋ ಆ ನಿರಾಳತೆಯಲ್ಲಿ ಚಿತ್ರದ ನಿರ್ದೇಶಕ ಯೋಗಿ ದೇವಗಂಗೆ (Yogi Devagange) ಇದ್ದಾರೆ. ಕಾರಣ, ಸಿನಿಮಾಕ್ಕೆ ಸೆನ್ಸಾರ್ (Cinema Censor) ಅಷ್ಟು ಬೇಗ ಸಿಕ್ಕಿಯೇ ಇಲ್ಲ. ಸಾಕಷ್ಟು ಚರ್ಚೆಗಳು, ಸಾಕಷ್ಟು ಬೇಕು ಬೇಡಗಳು ಹಿಂಗೆ ಎಲ್ಲವೂ ಇಲ್ಲಿ ಚರ್ಚೆ ಆಗಿವೆ. ಇದಕ್ಕೆ ಮೂಲ ಕಾರಣ, ಸಿನಿಮಾದಲ್ಲಿರೋ ಒಂದು ಗಂಭೀರ ವಿಷಯ. ಅದನ್ನ ಡೈರೆಕ್ಟರ್ ಒಬ್ಬ ಪುಟ್ಟ ಹುಡುಗಿಯ ಮೂಲಕ ಹೇಳಿಸಿದ್ದಾರೆ. ಹಾಗೆ ಚರ್ಚೆಗೊಡ್ಡಬಲ್ಲ ಶಕ್ತಿ ಇರೋ ಈ ಚಿತ್ರಕ್ಕೆ ಕೊನೆಗೂ ಸೆನ್ಸಾರ್ ಪ್ರಮಾಣ (Censor Certificate) ಪತ್ರ ಸಿಕ್ಕಿದೆ. ಈಗ ಈ ಸಿನಿಮಾ ರಿಲೀಸ್​ಗೂ ರೆಡಿ ಆಗುತ್ತಿದೆ.

ಗಾಂಧಿ ಮತ್ತು ನೋಟು ಗಂಭೀರ ವಿಷಯದ ಸಿನಿಮಾ

ಈಗ ನೀವೂ ಓದಿರೋ ಅಷ್ಟೂ ವಿಚಾರಗಳ, ಆ ಸಿನಿಮಾ ಹೆಸರು ಗಾಂಧಿ ಮತ್ತು ನೋಟು. ಈ ಸಿನಿಮಾ ವಿಶೇಷವಾದ ಕಂಟೆಂಟ್ ಹೊಂದಿದೆ. ಸಿನಿಮಾ ಹೊರ ಬಂದ್ಮೇಲೆ ಸಾಕಷ್ಟು ಚರ್ಚೆಗೂ ಈ ಸಿನಿಮಾ ಕಾರಣ ಆಗುತ್ತದೆ. ಇದು ನಿಜ, ಅಂತಲೇ ನಿರ್ದೇಶಕ ಯೋಗಿ ದೇವಗಂಗೆ ನಮ್ಮ ಜೊತೆಗೆ ಹೇಳಿಕೊಂಡಿದ್ದಾರೆ.

ಸಿನಿಮಾ ಹೊರ ಬಂದ್ಮೇಲೆ ಭಾರೀ ಚರ್ಚೆಗೂ ಕಾರಣ ಆಗುತ್ತದೆ

ಗಾಂಧಿ ಮತ್ತು ನೋಟು ಒಂದು ಗಂಭೀರ ಚರ್ಚೆಯನ್ನ ಹುಟ್ಟುಹಾಕುವ ವಿಷಯವನ್ನೇ ಹೊಂದಿದೆ. ಹೌದು, ನಿರ್ದೇಶಕರು ಈ ವಿಷಯವನ್ನ ಪುಟ್ಟ ಹುಡುಗಿಯ ಮೂಲಕವೇ ಗಂಭೀರ ವಿಷಯವನ್ನ ಹೇಳಿಸಿದ್ದಾರೆ. ಅದು ನಿಜಕ್ಕೂ ವಿಶೇಷವೇ ಆಗಿದೆ.

Cinema Gandhi mattu Notu Cinema finally Got Censor Certificate
ಕನ್ನಡದ ಗಾಂಧಿ ಮತ್ತು ನೋಟು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ


ಹೌದು, ಗಾಂಧಿ ಮತ್ತು ನೋಟು ಸಿನಿಮಾದಲ್ಲಿ 12 ವರ್ಷದ ಪುಟ್ಟ ಹುಡುಗಿ
ಅಭಿನಯಿಸಿದ್ದಾಳೆ. ಗಾಂಧಿ ಬಗ್ಗೆ ಅಪಾರ ಗೌರವ ಬೆಳೆಸಿಕೊಂಡಿರೋ ಈ ಹುಡುಗಿಗೆ ಒಂದು ಪ್ರಶ್ನೆ ಹುಟ್ಟುತ್ತದೆ. ಗಾಂಧಿಜೀ ಇರೋ ಈ ನೋಟು ಎಲ್ಲ ಕಡೆಗೂ ಹೋಗುತ್ತದೆ.

ಗಾಂಧಿಜೀ ಇರೋ ನೋಟು ಎಲ್ಲೆಡೆ ಹೋಗುತ್ತೆ ಅಲ್ವೇ?

ಸರಾಯಿ ಅಂಗಡಿಗೂ ಹೋಗುತ್ತದೆ. ಅಪ್ಪ ಬೀಡಿ ತರಲು ಹೇಳೋ ಆ ನೋಟಲ್ಲೂ ಇರುತ್ತದೆ. ಇದು ಸರೀ ಅಲ್ಲ ಅಂತಲೇ ಈ ಹುಡುಗಿ ಮನಸ್ಸಲ್ಲೂ ಬರುತ್ತದೆ. ಇದನ್ನ ನೋಡಿದಾಗ, ನಿಮಗೂ ಹೌದಲ್ವೇ, ಗಾಂಧಿ ಇರೋ ನೋಟು ಒಳ್ಳೆ ಕೆಲಸಕ್ಕೂ ಬಳಕೆ ಆಗುತ್ತದೆ.

ಇದನ್ನೂ ಓದಿ: Bigg Boss Season 9: ಇವ್ರೆಲ್ಲಾ ಈ ಬಾರಿ ಬಿಗ್​ಬಾಸ್​​ ಮನೆಗೆ ಹೋಗೋದು ಕನ್ಫರ್ಮ್​ ಅಂತೆ, ಅಸಲಿ ಆಟ ಈಗ ಶುರು!

ಕೆಟ್ಟ ಕೆಲಸಕ್ಕೂ ಉಪಯೋಗ ಆಗುತ್ತದೆ. ಸರಾಯಿ ಅಂಗಡಿಯಿಂದ ಹಿಡಿದು, ವೇಶ್ಯಾವಾಟಿಕೆ ವರೆಗೂ ಗಾಂಧಿ ಇರೋ ನೋಟು ಹೋಗುತ್ತದೆ ಅಂತಲೇ ನಿಮಗೂ ಅನಿಸುತ್ತದೆ. ಇದನ್ನೇ ನಿರ್ದೇಶಕ ಯೋಗಿ ದೇವಗಂಗೆ ಇಲ್ಲಿ ತೋರಿಸೋ ಕೆಲಸ ಮಾಡಿದ್ದಾರೆ.

ಗಾಂಧಿ ಮತ್ತು ನೋಟು ಚಿತ್ರದ ಸೆನ್ಸಾರ್​ಗೆ ಹಿಂದೇಟು
ಗಾಂಧಿ ಮತ್ತು ನೋಟು ಸಿನಿಮಾದ ಈ ವಿಷಯದ ಮೇಲೆ ಚಿತ್ರದಲ್ಲಿ ಭಾರೀ ಚರ್ಚೆಗಳೂ ಆಗುತ್ತವೆ. ಅದೇ ಚರ್ಚೆಯಲ್ಲಿ ವಿವಾದಾವಾಗಬಹುದಾದ ವಿಷಯದ ಮೇಲೂ ಚರ್ಚೆ ಬರುತ್ತವೆ. ಅದಕ್ಕೇನೆ ಸೆನ್ಸಾರ್ ಮಂಡಳಿ ಗಾಂಧಿ ಮತ್ತು ನೋಟು ಸಿನಿಮಾವನ್ನ ಸೆನ್ಸಾರ್ ಮಾಡಲು ಆರಂಭದಲ್ಲಿ ಹಿಂದೆಟು ಹಾಕಿತ್ತು.

ಗಾಂಧಿ ಮತ್ತು ನೋಟು ಚಿತ್ರಕ್ಕೆ 28 ಕಟ್ಸ್ ಕೊಟ್ಟ ಸೆನ್ಸಾರ್
ಆದರೆ ಬೇರೆ ಸೆನ್ಸಾರ್ ಆಫೀಸರ್ ಬಂದ್ಮೇಲೆ ಒಂದಷ್ಟು ಕಟ್ ಗಳನ್ನ ಕೊಟ್ಟಿದ್ದರು. ಆ ಕಟ್​ನ ಲೆಕ್ಕ ಹೆಚ್ಚು ಕಡಿಮೆ 108 ಆಗಿತ್ತು. ಇದಾದ್ಮೇಳೆ ಆಗ ಮತ್ತಷ್ಟು ಚರ್ಚೆಗಳು, ಬೇಕು ಬೇಡಗಳ ತರ್ಕ ಇಲ್ಲಿ ನಡೆದಿತ್ತು. ಕೊನೆಗೆ ಸೆನ್ಸಾರ್ ಮಂಡಳಿ ಚಿತ್ರಕ್ಕೆ 28 ಕಟ್​ಗಳನ್ನ ಕೊಟ್ಟಿದೆ. ಆ ಮೂಲಕ ಚಿತ್ರಕ್ಕೆ ಮಕ್ಕಳ ಸಿನಿಮಾ ಅಂತ ಕೊಡದೇ, ಯು/ಎ ಪ್ರಮಾಣ ಪತ್ರ ಕೊಟ್ಟು ಬಿಟ್ಟಿದೆ.

ಇದನ್ನೂ ಓದಿ: Janhvi Kapoor: ಬಣ್ಣದ ಹೂಗಳ ಸೀರೆಯಲ್ಲಿ ಜಾನ್ವಿ! ಸೌಂದರ್ಯದಲ್ಲಿ ಕಮ್ಮಿ ಇಲ್ಲ ಶ್ರೀದೇವಿ ಮಗಳು

ಗಾಂಧಿ ಮತ್ತು ನೋಟು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ
ಇಷ್ಟೆಲ್ಲ ಹೋರಾಟ ಆಗಿ ಈ ಯು/ಎ ಪ್ರಮಾಣ ಪತ್ರ ಸಿಗಲು ಬರೋಬ್ಬರಿ 9 ತಿಂಗಳುಗಳೇ ಕಳೆದು ಹೋಗಿವೆ. ನಿರ್ದೇಶಕ ಯೋಗಿ ದೇವಗಂಗೆ ತಮ್ಮ ಈ ಚಿತ್ರವನ್ನ ಈಗ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ನಿರ್ಮಾಪಕರಾದ ಮಂಜು ಬಿ.ಎ, ಚಂದ್ರು, ಪದ್ಮನಾಭ್ ತಮ್ಮ ಈ ಚಿತ್ರವನ್ನ ರಿಲೀಸ್ ಮಾಡೋಕೆ ಈಗ ಪ್ಲಾನ್ ಮಾಡುತ್ತಿದ್ದಾರೆ.

ಗಾಂಧಿ ಮತ್ತು ನೋಟು ಚಿತ್ರದ ಆ ಪುಟ್ಟ ಹುಡುಗಿ ಯಾರು ಗೊತ್ತೇ?
ಗಾಂಧಿ ಮತ್ತು ನೋಟು ಚಿತ್ರದ ಪುಟ್ಟ ಬಾಲಕಿಯ ಪಾತ್ರವನ್ನ ದಿವಿಜಾ ಮಾಡಿದ್ದಾಳೆ. ದಿವಿಜಾ ಬೇರೆ ಯಾರೋ ಅಲ್ಲ. ಕನ್ನಡದ ಹೆಸರಾಂತ ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಅವರ 12 ವರ್ಷದ ಮಗಳು ಈ ದಿವಿಜಾ.

Cinema Gandhi mattu Notu Cinema finally Got Censor Certificate
ಗಾಂಧಿ ಮತ್ತು ನೋಟು ಚಿತ್ರದಲ್ಲಿ ವಿ.ನಾಗೇಂದ್ರ ಪ್ರಸಾದ್ ಮಗಳ ಅಭಿನಯ


ದಿವಿಜಾ ಅಭಿನಯದ ಈ ಚಿತ್ರಕ್ಕೆ ವಾಣಿ ಹರಿಕೃಷ್ಣ ಅವರು ಸಂಗೀತ ಕೊಟ್ಟಿದ್ದಾರೆ. ಜಾನಪದ ಹಾಡುಗಳೂ ಈ ಸಿನಿಮಾದಲ್ಲಿ ಇವೆ. ಅವುಗಳನ್ನ ವಾಣಿ ಹರಿಕೃಷ್ಣ ಅವರು ಚೆನ್ನಾಗಿಯೇ ಮಾಡಿದ್ದಾರೆ. ಅಚ್ಚು ಸುರೇಶ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಒಳ್ಳೆ ಟೀಮ್​ ನ ಈ ಸಿನಿಮಾ ಈಗ ರೆಡಿ ಆಗಿದೆ. ರಿಲೀಸ್ ಗೂ ಪ್ಲಾನಿಂಗ್ ನಡೆಯುತ್ತಿದೆ.
First published: