Bhushan Choreographer ಅಂದು ಡ್ಯಾನ್ಸರ್, ಇಂದು ಹೀರೋ! ಭೂಷಣ್ ಬೆಳವಣಿಗೆ ಸೂಪರೋ ಸೂಪರ್!

ಕನ್ನಡದ ಯುವ ಡ್ಯಾನ್ಸ್ ಮಾಸ್ಟರ್ ಭೂಷಣ್ ಒಂದು ಪ್ರಯೋಗ ಮಾಡಿದ್ದಾರೆ. ರಾಜಾ ರಾಣಿ ಹೆಸರಿನ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಇದೇ 23 ಕ್ಕೆ ಈ ಸಿನಿಮಾ ರಿಲೀಸ್ ಕೂಡ ಆಗುತ್ತಿದೆ.

ಚುಟು ಚುಟು ಹಾಡಿನ ನೃತ್ಯ ನಿರ್ದೇಶಕ

ಚುಟು ಚುಟು ಹಾಡಿನ ನೃತ್ಯ ನಿರ್ದೇಶಕ

  • Share this:
ಸ್ಯಾಂಡಲ್​ವುಡ್ ನಲ್ಲಿ ಅನೇಕ ಕೋರಿಯೋಗ್ರಾಫರ್ (Choreographer) ಇದ್ದಾರೆ. ಅವರೆಲ್ಲ ಒಂದು ಹಂತಕ್ಕೆ ನಿರ್ದೇಶಕರೇ ಆಗಿದ್ದಾರೆ. ನೃತ್ಯವನ್ನ ನಿರ್ದೇಶನ ಮಾಡ್ತಾನೇ ಎಲ್ಲ ಹೀರೋಗಳ ಹೀರೋಯಿನ್​ಗಳ (Hero) ಫೇವರಿಟ್ ಕೂಡ ಆಗಿರುತ್ತಾರೆ. ಆದರೆ ಕೋರಿಯೋಗ್ರಾಫರ್​ಗಳು ಹೀರೋ ಆಗಿ ಟ್ರೈ ಮಾಡೋದು ಬಹುತೇಕ ಕಡಿಮೆನೆ ಸರಿ. ಅಭಿನಯದ ಕಿಚ್ಚಿನಿಂದ ಆ ಒಂದು ಪ್ರಯತ್ನ ಮಾಡಿದೋರು ಕೆಲವರು ಇದ್ದಾರೆ. ಆದರೆ ಸಕ್ಸಸ್ ರೇಟ್ (Success Rate) ಕಡಿಮೆ ಇದೆ. ಹಾಗಂತ ಹೀರೋ ಆಗಲೇಬಾರದೇ ಅಂತ ಕೇಳಬೇಡಿ. ಅದೃಷ್ಟ ಅನ್ನೋದು ಯಾರಪ್ಪನ ಸ್ವತ್ತು ಅಲ್ಲ ಬಿಡಿ. ಅದು ಇದ್ದರೇ, ಪ್ರಭು ದೇವ (Prabu deva) ರೀತಿ ಆಗಬಹುದು. ಇಲ್ಲವೇ ರೆಮೋ ರೀತಿನೂ ಬೇರೆ ಬೇರೆ ಕಡೆಗೂ ಮಿಂಚಬಹುದು.

ಚುಟು ಚುಟು ಹಾಡಿನ ನೃತ್ಯ ನಿರ್ದೇಶಕ ಭೂಷಣ್ ಈಗ ಹೀರೋ 
ಅದರಂತೆ ಕನ್ನಡದ ಯುವ ಡ್ಯಾನ್ಸ್ ಮಾಸ್ಟರ್ ಭೂಷಣ್ ಅಂತಹ ಒಂದು ಪ್ರಯೋಗ ಮಾಡಿದ್ದಾರೆ. ರಾಜಾ ರಾಣಿ ಹೆಸರಿನ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಇದೇ 23ಕ್ಕೆ ಈ ಸಿನಿಮಾ ರಿಲೀಸ್ ಕೂಡ ಆಗುತ್ತಿದೆ.

Kannada Choreographer Bhushan New Film Release on 23rd this week
ನೃತ್ಯ ನಿರ್ದೇಶಕ ಭೂಷಣ್ ಅಭಿನಯದ ಚಿತ್ರದ ಪೋಸ್ಟರ್


ಹೌದು, ನೃತ್ಯ ನಿರ್ದೇಶಕ ಭೂಷಣ್ ಕನ್ನಡದ ಹೆಸರಾಂತ ಯುವ ನೃತ್ಯ ನಿರ್ದೇಶಕ ಈ ನಿರ್ದೇಶಕನ ಚುಟು ಚುಟು ಹಾಡು ಈಗಲೂ ಫೇಮಸ್. Rambo-2 ಸಿನಿಮಾದ ಈ ಹಾಡಿನ ಸ್ಟೆಪ್ ಕೂಡ ಹಾಡಿನ ಜೊತೆಗೆ ಹಿಟ್ ಆಗಿಬಿಟ್ಟಿವೆ. ಈ ಮೂಲಕ ಮೊದಲ ಹಾಡಿನಲ್ಲಿಯೇ ಭೂಷಣ್ ಸಿಕ್ಸರ್ ಹೊಡೆದು ಬಿಟ್ಟರು.

ಪವರ್ ಸ್ಟಾರ್ ಅಪ್ಪು ಡ್ಯಾನ್ಸ್ ವಿತ್ ಅಪ್ಪು ಹಾಡಿಗೂ ಭೂಷನ್ ಕೋರಿಯೋಗ್ರಾಫಿ 
ಭೂಷಣ್ ನೃತ್ಯ ನಿರ್ದೇಶನದ ಡ್ಯಾನ್ಸ್ ವಿತ್ ಅಪ್ಪು ಕೂಡ ಸಖತ್ ಹಿಟ್ ಆಗಿದೆ. ರಾಜಕುಮಾರ್ ಸಿನಿಮಾದ ಈ ಹಾಡಿನ ಖದರ್ ಈಗಲೂ ಇದೆ. ಮಕ್ಕಳಾದಿಯಾಗಿ ಎಲ್ಲರೂ ಈ ಹಾಡಿನ ಅಪ್ಪು ನೃತ್ಯವನ್ನ ಅತಿ ಹೆಚ್ಚು ಇಷ್ಟಪಡುತ್ತಾರೆ.

ಇದನ್ನೂ ಓದಿ: Devaraj Birthday: ಇವ್ರು ಕನ್ನಡದ ಪೊಲೀಸ್ ಆಫೀಸರ್! ಡೈನಾಮಿಕ್ ಹೀರೋ ದೇವರಾಜ್​ಗೆ​ ಹ್ಯಾಪಿ ಬರ್ತ್​ಡೇ!

60ಕ್ಕೂ ಹೆಚ್ಚು ಸಿನಿಮಾಗಳಿಗೆ ಕೋರಿಯೋಗ್ರಾಫಿ ಮಾಡಿರೋ ನೃತ್ಯ ನಿರ್ದೇಶಕ ಭೂಷನ್ ಈಗ ಸಿನಿಮಾವೊಂದರ ಹೀರೋ ಆಗಿದ್ದಾರೆ. ನಿಜ, ಆ ಸಿನಿಮಾದ ಹೆಸರು ರಾಜಾ ರಾಣಿ ಅಂತಲೇ ಇದೆ. ರಾಜನಾಗಿಯೇ ಈ ಸಿನಿಮಾದಲ್ಲಿ ಭೂಷಣ್ ಅಭಿನಯಿಸಿದ್ದಾರೆ.

ರಾಜಾ ರಾಣಿ ಚಿತ್ರದ 2 ಹಾಡಿಗೆ ಭೂಷಣ್  ಕೋರಿಯೋಗ್ರಾಫಿ

ಕೋರಿಯೋಗ್ರಾಫರ್ ಭೂಷಣ್ ಉತ್ಸಾಹಿ ಯುವ ನೃತ್ಯ ನಿರ್ದೇಶಕರೇ ಆಗಿದ್ದಾರೆ. ತಮ್ಮ ಮೊದಲ ಈ ಸಿನಿಮಾದಲ್ಲಿ ನಾಯಕ ನಟರಾಗಿದ್ದು, ಚಿತ್ರದಲ್ಲಿ ಬರೋ ಎರಡು ಹಾಡಿಗೆ ನೃತ್ಯ ನಿರ್ದೇಶನ ಕೂಡ ಮಾಡಿದ್ದಾರೆ.

Kannada Choreographer Bhushan New Film Release on 23rd this week
ರಾಜಾ ರಾಣಿ ಚಿತ್ರದ ವರ್ಕಿಂಗ್ ಸ್ಟಿಲ್ಸ್


ವಿಶೇಷವಾಗಿ ಈಗಾಗಲೇ ರಿಲೀಸ್ ಆಗಿರೋ ನಾಯಕನ ಪರಿಚಯಿಸೋ ಹಾಡು ಚೆನ್ನಾಗಿದೆ. ಇದನ್ನ ಸ್ವತಃ ಭೂಷಣ್ ಕೋರಿಯೋಗ್ರಾಫಿ ಮಾಡಿದ್ದಾರೆ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭು ದೇವ ಕೂಡ ಇದನ್ನ ನೋಡಿ ಮೆಚ್ಚಿಕೊಂಡಿದ್ದಾರೆ.

ರಾಜಾ ರಾಣಿ ಚಿತ್ರದಲ್ಲಿ ಭೂಷಣ್ ಸಖತ್ ಫೈಟ್ಸ್ 
ನೃತ್ಯ ನಿರ್ದೇಶಕ ಭೂಷಣ್ ಹೀರೋ ಆಗಿರೋ ಈ ಒಂದು ಚಿತ್ರಕ್ಕೆ ಮಾನ್ಯಾ ಹೆಸರಿನ ನಟಿ ಕೂಡ ಸಾಥ್ ಕೊಟ್ಟಿದ್ದಾರೆ. ಇವರು ಇಲ್ಲಿ ರಾಜಾ ರಾಣಿಯಾಗಿಯೇ ಮಿಂಚಿದ್ದಾರೆ. ಭೂಷಣ್ ಈ ಚಿತ್ರದಲ್ಲಿ ಫೈಟ್ಸ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Bigg Boss Winner: ಬಿಗ್​ಬಾಸ್ ಈ ಜೋಡಿ ಫುಲ್ ಮಿಂಚಿಂಗ್! ಫೋಟೋಶೂಟ್​ಗೆ ಸೂಪರ್ ಐಡಿಯಾ ಕೊಡ್ತಾರೆ

ಚಿತ್ರದ ಮೂರು ಫೈಟ್ಸ್ ಇರೋ ಈ ಚಿತ್ರವನ್ನ ಕೆಂಪೇಗೌಡ ಮಾಗಡಿ ನಿರ್ದೇಶನ ಮಾಡಿದ್ದಾರೆ. ಇದೇ 23 ರಂದು ರಾಜ ರಾಣಿ ಸಿನಿಮಾ ರಿಲೀಸ್ ಆಗುತ್ತಿದೆ.

ನಾಯಕ ನಟರಾಗಿಯೇ ಸ್ಯಾಂಡಲ್​ವುಡ್​ ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಕೋರಿಯೋಗ್ರಾಫರ್ ಭೂಷಣ್, ಮುಂದೊಂದಿನ ಚಿತ್ರ ನಿರ್ದೇಶನ ಮಾಡೋ ಕನಸನ್ನೂ ಇಟ್ಟುಕೊಂಡಿದ್ದಾರೆ. ಇವರ ಈ ಪ್ರಯತ್ನಕ್ಕೆ ಗುಡ್ ಲಕ್
First published: