ಕನ್ನಡದಲ್ಲಿ ಕಳೆದ ಒಂದು ತಿಂಗಳಿನಿಂದ ಬೇರೆ ಬೇರೆ (Cinema) ಸಿನಿಮಾ ಬರ್ತಾನೇ ಇವೆ. ಅವುಗಳಲ್ಲಿ ಎಲ್ಲ ಕಥೆಗಳೂ ಚೆನ್ನಾಗಿವೆ ಏನಂತ ಹೇಳೋಕೆ ಆಗೋದಿಲ್ಲ. ಇನ್ನು ಕೆಲವು (Super Cinema) ಸೂಪರ್ ಅಂತಲೂ ಹೇಳೋಕೆ ಆಗೋದಿಲ್ಲ. ಒಳ್ಳೆ ಕಥೆಯ (Story) ಸಿನಿಮಾಗಳು ಬಂದಿರೋದಂತೂ ಅಷ್ಟೇ ನಿಜ. ಇಂತಹ ಸಿನಿಮಾಗಳಲ್ಲಿ ಈ ಶುಕ್ರವಾರ ರಿಲೀಸ್ ಆದ ಬಾಂಡ್ ರವಿ (Bond Ravi) ಕೂಡ ಒಳ್ಳೆ ಕಥೆಯನ್ನ ಹೊಂದಿದೆ. ಲವರ್ಸ್ ಹೆಚ್ಚು ಇಷ್ಟಪಡೋ ಹಾಗೆನೂ ಇದೆ. ಅದೇ ಲವರ್ಸ್ ಬೇರೆ ರೀತಿ ಯೋಚನೆ ಮಾಡೋಕೂ ಹಚ್ಚುವ ರೀತಿನೇ ಈ ಚಿತ್ರವೂ ಇದೆ. ಈ ಚಿತ್ರದ ಒಟ್ಟು ವಿಶ್ಲೇಷಣೆ ಇಲ್ಲಿದೆ. ಈ ಲೇಖನದ ಕೊನೆಯಲ್ಲಿ ನಾಯಕನ ಮಾತು ಇದೆ. ಅದನ್ನೂ ಮಿಸ್ ಮಾಡದೇ ಓದಿ.
ಬಾಂಡ್ ರವಿ ಪಕ್ಕಾ ರಾಜ್ ಫ್ಯಾಮಿಲಿಯ ಅಪ್ಪು ಫ್ಯಾನ್ ರೀ!
ಬಾಂಡ್ ರವಿ ಒಬ್ಬ ಪ್ರಾಮಾಣಿಕ ಲವರ್. ನಿಯತ್ತಾಗಿರೋ ಖತರ್ನಾಕ್ ರೌಡಿನೂ ಹೌದು. ಒಂದೇ ಒಂದು ಕೇಸ್ ನಲ್ಲಿ ಸಿಲುಕದೇ ಇರೋ ಬುದ್ದಿವಂತನೂ ಹೌದು. ಇಷ್ಟೆಲ್ಲ ಹೌದುಗಳ ಈ ರವಿ ಜೀವನದಲ್ಲಿ ಜೈಲೇ ಎಲ್ಲ. ಇಲ್ಲಿರೋರೇ ಎಲ್ಲ.
ಇಂತಹ ರವಿ ಬಾಳಲ್ಲಿ ಒಬ್ಬ ಶ್ವೇತಾ ಎಂಟ್ರಿ ಆಗುತ್ತದೆ. ಆಕೆ ಈತನಿಗೆ ಲೋನ್ ಲವರ್. ಅಂದ್ರೆ , ಲೋನ್ ಕೊಡಲು ಕಾಲ್ ಮಾಡೋ ಲೇಡಿ ಅಷ್ಟೆ. ಅದೇ ಕಾಲ್, ಮಾತು ಮತ್ತು ಕಥೆ ಮುಂದೆ ಲವ್ ಆಗಿ ಬದಲಾಗುತ್ತದೆ.
ಕಾಲ್ನಲ್ಲಿ ಲವ್-ಕೋರ್ಟ್ನಲ್ಲಿ ಸರ್ಪೈಸ್ ಭೇಟಿ!
ಬಾಂಡ್ ರವಿ ಸಿನಿಮಾದ ಇಂಟ್ರಸ್ಟಿಂಗ್ ವಿಚಾರ ಇದೇ ನೋಡಿ. ಲವ್ ಮಾಡೋ ಹುಡುಗಿ ಸದಾ ಸರ್ಪೈಸ್ ಕೇಳ್ತಾಳೆ. ಹಾಗೆ ಶ್ವೇತಾ ಕೂಡ ಇಲ್ಲಿ ಈ ರವಿಗೆ ಸರ್ಪ್ರೈಜ್ ಭೇಟಿ ಕೇಳುತ್ತಾಳೆ. ಅದು ಇಲ್ಲಿ ಕೋರ್ಟ್ ನಲ್ಲಿಯೇ ಆಗುತ್ತದೆ ಅನ್ನೋದೇ ವಿಶೇಷ ಮತ್ತು ಶಾಕ್ ಕೊಡುವ ಪಾಯಿಂಟ್.
ರವಿ ಕಾಣದ್ದನ್ನ ಶ್ವೇತಾ ಮೊದಲೇ ಕಂಡಿರುತ್ತಾಳೆ!
ಬಾಂಡ್ ರವಿಯ ಜೀವನದಲ್ಲಿ ಶ್ವೇತಾನೆ ಎಲ್ಲ ಇವಳ ಮುಂದೆ ಏನೂ ಇಲ್ಲ. ಹೌದು, ಈ ಮಾತಂತೂ ಸತ್ಯವೇ ಆಗುತ್ತದೆ. ರವಿ ಜೈಲಿನಿಂದ ಹೊರ ಬರ್ತಾನೆ. ಬಂದ್ಮೇಲೆ ಏನ್ ಆಗುತ್ತದೆ. ಇದುವೇ ಇಲ್ಲಿ ರನ್ ಆಗೋ ಅಸಲಿ ಮ್ಯಾಟರ್. ಸೆಕೆಂಡ್ ಹಾಫ್ ನಿಂದ ಕಥೆ ಬೇರೆ ಟರ್ನ್ ತೆಗೆದುಕೊಳ್ಳುತ್ತದೆ.
ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ಎರಡೂ ವಿಭಿನ್ನ!
ಹ್ಯಾಪಿ...ಹ್ಯಾಪಿ ಆಗಿಯೇ ಸಾಗುತ್ತದೆ. ರೌಡಿ ಒಬ್ಬನ ಜೀವನದಲ್ಲಿ ಎಲ್ಲರೂ ಸುಗಮ ಸುಗಮವಾಗಿಯೇ ಆಗುತ್ತದೆ. ಆದರೆ, ಕಥೆ ಕ್ಲೈಮ್ಯಾಕ್ಸ್ ಹಂತಕ್ಕೆ ಬರೋ ಹೊತ್ತಿಗೆ ಸಿನಿಮಾ ಕಥೇನೆ ಬೇರೆ ಆಗುತ್ತದೆ. ಇದನ್ನ ತೆರೆ ಮೇಲೆ ನೋಡಿದ್ರೇನೆ ಚೆಂದ ನೋಡಿ.
ಶೋಭರಾಜ್ ಸೂಪರ್-ಪ್ರಮೋದ್ ಸಖತ್!
ಬಾಂಡ್ ರವಿ ಸಿನಿಮಾದಲ್ಲಿ ಶೋಭರಾಜ್ ಸಖತ್ ರೋಲ್ ಮಾಡಿದ್ದಾರೆ. ಕಾರ್ಪೋರೇಟರ್ ಆಗಿಯೇ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ರವಿ ಕಾಳೆ ಅಂತೂ ಜೈಲಿನಲ್ಲಿಯೇ ಗಢ ಗಢ ನಡುಗಿಸಿಯೇ ಬಿಡ್ತಾರೆ. ಇದರ ಹೊರತಾಗಿ ಕಾಮಿಡಿ ಕಿಲಾಡಿಯ ಜಿಜಿ, ಸಂತೋಷ್ ಜೈಲಿನಲ್ಲಿಯೇ ಪ್ರಮೋದ್ಗೆ ಸಾಥ್ ಕೊಟ್ಟಿದ್ದಾರೆ.
ಮನೋ ಮೂರ್ತಿ ಸಂಗೀತ - ಸೋನು ಗಾನ ಟಚೇಬಲ್
ಬಾಂಡ್ ರವಿ ಸಿನಿಮಾದಲ್ಲಿ ಸಂಗೀತ ಕೂಡ ಇಷ್ಟ ಆಗುತ್ತದೆ. ಮನೋ ಮೂರ್ತಿ ಸಂಗೀತ ಇಷ್ಟ ಆಗುತ್ತದೆ. ಸೋನು ಗಾನ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯವೂ ಹೃದಯಕ್ಕೆ ಟಚ್ ಆಗುತ್ತದೆ.
ನವ ನಟಿ ಕಾಜಲ್ ಕುಂದರ್ ಯಾಕ್ ಇಷ್ಟ ಆಗ್ತಾರೆ ಗೊತ್ತೇ?
ಬಾಂಡ್ ರವಿ ಜೊತೆಗೆ ಜೋಡಿ ಆಗಿರೋ ನವ ನಟಿ ಕಾಜಲ್ ಕುಂದರ್ ಚೆನ್ನಾಗಿ ನಟನೆ ಮಾಡಿದ್ದಾರೆ. ಒಬ್ಬ ಲವರ್ ಆಗಿಯೇ ಚೆನ್ನಾಗಿಯೇ ನಟಿಸಿದ್ದಾರೆ. ಒಬ್ಬ ದ್ವೇಷ ಪಡೋ ಹುಡುಗಿಯಾಗಿಯೂ ಅದ್ಭುತವಾಗಿಯೇ ನಟಿಸಿದ್ದಾರೆ.
ಇದನ್ನೂ ಓದಿ: Vasishta Simha-Haripriya: ಸಿಂಹನ ತೋಳಲ್ಲಿ ಬಂಧಿಯಾದ ಹರಿಪ್ರಿಯಾ, ಖಾಸಗಿ ಕಾರ್ಯಕ್ರಮದ ಫೋಟೋಸ್ ರಿವೀಲ್
ಬಾಂಡ್ ರವಿ ಹಾರ್ಟ್ ಟಚ್ ಮಾಡೋ ಸಿನಿಮಾ
ಬಾಂಡ್ ರವಿ ಸಿನಿಮಾ ಎಲ್ಲರಿಗೂ ಇಷ್ಟ ಆಗುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ಚೆನ್ನಾಗಿ ಮಾಡಿದ್ದಾರೆ. ಸಿನಿಮಾ ನೋಡಿ ಹೊರ ಬಂದ್ಮೇಲೂ ಕಾಡೋ ಕ್ಲೈಮ್ಯಾಕ್ಸ್ ಇದರಲ್ಲಿದೆ. ನಿರ್ದೇಶಕ ಪ್ರಜ್ವಲ್ ಒಳ್ಳೆ ಕೆಲಸ ಮಾಡಿದ್ದಾರೆ. ಜನ ಕೂಡ ಈ ಚಿತ್ರವನ್ನ ಒಪ್ಪಿಕೊಳ್ಳುವುದು ಕೂಡ ಗ್ಯಾರಂಟಿ.
ನಾಯಕ ನಟ ಬಾಂಡ್ ರವಿ ಹೇಳಿದ ಕೊನೆ ಮಾತು
ಅಮ್ಮ ಹುಟ್ಟಿಸ್ತಾಳೆ. ಲವರ್ ಸಾಯಿಸ್ತಾಳೆ. ಇದು ಇಡೀ ಚಿತ್ರದ ಕಥೆಯ ಜೀವಾಳ. ಇದರ ಸುತ್ತವೇ ಕಥೆ ಇದೆಯಾ? ಅಂತ ಕೇಳಬೇಡಿ. ಸಿನಿಮಾ ನೋಡಿ ಈ ಮಾತು ನಿಜವೋ ಸುಳ್ಳೋ ತಿಳಿಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ