ರಾಜ್‌ಕುಮಾರ್ ಸಿನಿಮಾ ಜೀವನದಲ್ಲಿ (Mayor Muthanna Movie) ಅನೇಕ ನಿರ್ದೇಶಕರು ಬಂದಿದ್ದಾರೆ. ಒಬ್ಬೊಬ್ಬರು ಒಂದು ರೀತಿ ಸಿನಿಮಾ ಮಾಡಿದ್ದಾರೆ. ಇವರ ಮೂಲಕ ಡಾಕ್ಟರ್ ರಾಜ್‌ಕುಮಾರ್ ತಮ್ಮ ಅಭಿಮಾನಿ ದೇವರುಗಳ ಎದುರು ವಿಭಿನ್ನ ರೂಪದಲ್ಲಿಯೇ ಕಂಡಿದ್ದಾರೆ. ಇವರ ಸಿನಿಮಾ ಜೀವನದಲ್ಲಿ (Mayor Muthanna Film) ದೊರೈ-ಭಗವಾನ್ ವಿಶೇಷವಾಗಿದ್ದಾರೆ. ಇವರ ನಿರ್ದೇಶನದ ಬಾಂಡ್ ಶೈಲಿಯ ಸರಣಿ ಸಿನಿಮಾ ಮುಖಾಂತರ ರಾಜ್, ಭಾರತದ (Sandalwood Classic Cinema) ಮೊದಲ ಬಾಂಡ್ ಸಿನಿಮಾ ಹೀರೋ ಆದರು. ಇದರ ಮಧ್ಯೆ ಡೈರೆಕ್ಟರ್ ಸಿದ್ದಲಿಂಗಯ್ಯನವ್ರು ಇನ್ನೂ ಒಂದು ರೀತಿ ವಿಭಿನ್ನವಾದ ಸಿನಿಮಾಗಳನ್ನ ಮಾಡಿದ್ದರು. ಆ ಸಾಲಿನಲ್ಲಿ ಬಂಗಾರದ ಮನುಷ್ಯ ವಿಶೇಷವಾಗಿ ನಿಲ್ಲುತ್ತದೆ. ಆದರೆ ಅದಕ್ಕೂ ಮೊದಲು ಮೇಯರ್ ಮುತ್ತಣ್ಣ (Rajkumar Mayor Muthanna Cinema) ಸಿನಿಮಾ ಮಾಡಿದ್ದರು.
ಇದು ಇನ್ನೂ ಸ್ಪೆಷಲ್ ಆಗಿದೆ. ಈ ಚಿತ್ರದ ಕುರಿತು ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
ಮೇಯರ್ ಮುತ್ತಣ್ಣ ಕನ್ನಡದ ಸ್ಪೆಷಲ್ ಸಿನಿಮಾ
ಡಾಕ್ಟರ್ ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಬ್ಲಾಕ್ ಆ್ಯಂಡ್ ವೈಟ್ ಸಿನಿಮಾ ಆಗಿದೆ. ೧೯೬೯ ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಆ ದಿನಗಳಲ್ಲಿಯೇ ಒಂದು ರೀತಿ ಸ್ಪೂರ್ತಿದಾಯಕ ಸಿನಿಮಾನೂ ಇದಾಗಿತ್ತು.
ಸಾಮಾನ್ಯ ಹಳ್ಳಿ ಮುಗ್ದ ವ್ಯಕ್ತಿ ಸಿಟಿಗೆ ಬಂದು ಮೇಯರ್ ಆಗೋದು ಈ ಕಥೆಯ ಒಟ್ಟು ತಿರುಳಾಗಿತ್ತು. ಇದನ್ನ ಅಷ್ಟೇ ಅದ್ಭುತವಾಗಿಯೇ ಬೆಳ್ಳಿ ತೆರೆ ಮೇಲೆ ತರಲಾಗಿತ್ತು. ಕಪ್ಪು-ಬಿಳುಪು ದಿನಗಳಲ್ಲಿಯೇ ಈ ಚಿತ್ರ ತುಂಬಾ ವಿಶೇಷವಾಗಿ ಕಾಣಿಸಿಕೊಂಡಿತ್ತು.
ಮೇಯರ್ ಮುತ್ತಣ್ಣ ರಾಜ್ ಚಿತ್ರ ಜೀವನದ ಸ್ಪೆಷಲ್ ಸಿನಿಮಾ
ಕಪ್ಪು-ಬಿಳುಪು ದಿನಗಳಲ್ಲಿ ಬಂದ ಈ ಸಿನಿಮಾದಲ್ಲಿ ರಾಜ್‌ಕುಮಾರ್ ಎರಡು ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಳ್ಳಿಯ ಸಾಮಾನ್ಯ ವ್ಯಕ್ತಿಯಾಗಿಯೇ ಮೊದಲು ಕಾಣಿಸಿಕೊಳ್ಳುತ್ತಾರೆ. ಇದಾದ್ಮೇಲೆ ರಾಜ್‌ಕುಮಾರ್ ಸಿಟಿಗೆ ಬಂದು ಮೇಯರ್ ಆಗುತ್ತಾರೆ.
ಹಾಗೆ ಬಂದ ಈ ಚಿತ್ರ ತುಂಬಾನೇ ವಿಶೇಷವಾಗಿ ಕಂಡಿತ್ತು. ಸಿನಿಮಾ ಪ್ರೇಮಿಗಳು ಇದನ್ನ ತುಂಬಾನೇ ಇಷ್ಟಪಟ್ಟಿದ್ದರು. ಆದರೆ ಈ ಚಿತ್ರಕ್ಕೆ ಇಂಗ್ಲೀಷ್ ಕಾದಂಬರಿಯ ಸ್ಪೂರ್ತಿನೂ ಇತ್ತು ಅನ್ನೋದು ಕೂಡ ಅಷ್ಟೇ ಸತ್ಯವಾದ ಮಾತಾಗಿದೆ.
ಮೇಯರ್ ಮುತ್ತಣ್ಣ ಚಿತ್ರಕ್ಕೆ ಇಂಗ್ಲೀಷ್ ಕಾದಂಬರಿ ಸ್ಪೂರ್ತಿ!
ಕನ್ನಡದ ಮೇಯರ್ ಮುತ್ತಣ್ಣ ಸಿನಿಮಾ ಥಾಮಸ್ ಹಾರ್ಡಿ ಬರೆದ "ದಿ ಮೇಯರ್ ಆಫ್ ಕ್ಯಾಸ್ಟರ್ ಬ್ರಿಡ್ಜ್" ಕಾದಂಬರಿಯಿಂದ ಸ್ಪೂರ್ತಿ ಪಡೆದಿತ್ತು. ೧೮೮೬ ರಲ್ಲಿ ರಿಲೀಸ್ ಆಗಿದ್ದ ಈ ಪುಸ್ತಕದ ಸ್ಪೂರ್ತಿಯಿಂದಲೇ, ಬಾಸುಮಣಿ ಮೇಯರ್ ಮುತ್ತಣ್ಣ ಕಥೆ ಬರೆದಿದ್ದರು.
ಇದೇ ಕಥೆಯನ್ನ ಇಟ್ಟುಕೊಂಡೇ ಯುವ ನಿರ್ದೇಶಕ ಸಿದ್ದಲಿಂಗಯ್ಯ ಅಂದು ಮೇಯರ್ ಮುತ್ತಣ್ಣ ಸಿನಿಮಾ ಮಾಡಿದ್ದರು. ವಿಶೇಷವೆಂದ್ರೆ, ಈ ಸಿನಿಮಾದ ಮೂಲಕ ಸಿದ್ದಲಿಂಗಯ್ಯ ಡೈರೆಕ್ಟರ್ ಆಗಿದ್ದರು. ಇನ್ನೂ ಒಂದು ವಿಶೇಷ ಏನೂ ಗೊತ್ತೇ?
ಮೇಯರ್ ಮುತ್ತಣ್ಣ ದ್ವಾರಕೀಶ್ ಮೊದಲ ನಿರ್ಮಾಣದ ಸಿನಿಮಾ!
ಹೌದು, ಮೇಯರ್ ಮುತ್ತಣ್ಣ ಚಿತ್ರದ ಮೂಲಕ ನಟ-ನಿರ್ದೇಶಕ-ನಿರ್ಮಾಪಕ ದ್ವಾರಕೀಶ್ ಸ್ವತಂತ್ರ ನಿರ್ಮಾಪಕರೂ ಆದರು. ಮೇಯರ್ ಮುತ್ತಣ್ಣ ಚಿತ್ರ ದ್ವಾರಕೀಶ್ ಮೊದಲ ನಿರ್ಮಾಣದ ಚಿತ್ರವೂ ಆಯಿತು ಅಂತಲೇ ಹೇಳಬಹುದು.
ಮೇಯರ್ ಮುತ್ತಣ್ಣ ಸಿನಿಮಾದಲ್ಲಿ ರಾಜ್‌ಕುಮಾರ್ ಅವರಿಗೆ ನಟಿ ಭಾರತಿ ಅವರು ಜೋಡಿ ಆಗಿದ್ದರು. ರಾಜನ್-ನಾಗೇಂದ್ರ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದರು. ಚಿ. ಉದಯ್ ಶಂಕರ್ ಸಾಹಿತ್ಯ ಬರೆದಿದ್ದರು. ಹಾಗೇ ಒಳ್ಳೆ ತಂಡದ ಮೇಯರ್ ಮುತ್ತಣ್ಣ ಕನ್ನಡಿಗರ ಹೃದಯದಲ್ಲಿ ಹೊಸ ಅಲೆಯನ್ನೆ ಅಂದು ಎಬ್ಬಿಸಿತ್ತು.
ಮೇಯರ್ ಮುತ್ತಣ್ಣ ತೆಲುಗು ಭಾಷೆಯಲ್ಲಿ ರಿಮೇಡ್!
ಮೇಯರ್ ಮುತ್ತಣ್ಣ ತುಂಬಾನೇ ಖ್ಯಾತಿ ಪಡೆಯಿತು. ಈ ಮೂಲಕ ಕನ್ನಡಿಗರ ಮನದಲ್ಲಿ ವಿಶೇಷ ಜಾಗ ಮಾಡಿಕೊಂಡಿರೋ ಮೇಯರ್ ಮುತ್ತಣ್ಣ ಮುಂದೇ, ತೆಲುಗುದಲ್ಲೂ ಮತ್ತೆ ನಿರ್ಮಾಣಗೊಂಡಿತ್ತು. ೧೯೭೪ ರಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾಕ್ಕೆ ಅಂದು ಚಲಂ ನಾಯಕರಾಗಿದ್ದರು.
ಇದನ್ನೂ ಓದಿ: Rocking Star Yash: ಯಶ್ ಮುಂದಿನ ಚಿತ್ರಕ್ಕೆ ಲೇಡಿ ಡೈರೆಕ್ಟರ್! ಇವರೇ ನೋಡಿ ಆ ಮಹಿಳಾ ನಿರ್ದೇಶಕಿ
ತೆಲುಗು ಭಾಷೆಯಲ್ಲಿ ಈ ಚಿತ್ರಕ್ಕೆ ಚೇರ್ಮನ್ ಚಲಮಯ್ಯ ಅಂತ ಹೆಸರಿಟ್ಟಿದ್ದರು. ಹಾಗೇ ಕನ್ನಡದಲ್ಲಿ ಬಂದ ಮೇಯರ್ ಮತ್ತಣ್ಣ ಬೇರೆ ಭಾಷೆಯಲ್ಲೂ ಬಂದು ಅಲ್ಲಿಯ ಜನರಲ್ಲೂ ಹೊಸ ಭಾವನೆ ಮೂಡಿಸಿತ್ತು. ಜೊತೆಗೆ ರಾಜ್ ಚಿತ್ರ ಜೀವನದ ವಿಶೇಷ ಸಿನಿಮಾ ಕೂಡ ಆಗಿತ್ತು ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ