Bigg Boss Season 7: ಮಲ್ಟಿಪ್ಲೆಕ್ಸ್​ಗಳಿಗೂ ಲಗ್ಗೆ ಇಡಲಿದೆ ಕನ್ನಡದ ಬಿಗ್​ ಬಾಸ್​ 7

Bigg Boss Season 7: ಇಲ್ಲಿಯವರೆಗಿನ ಸೀಸನ್​ಗಳನ್ನು ಕೇವಲ ಕಿರುತೆರೆಯಲ್ಲಿ ನೋಡಿ ಆನಂದಿಸಿದ್ದೀರಿ. ಆದರೆ ಈ ಸಲ ಬಿಗ್​ ಬಾಸ್​ 7 ಅನ್ನು ಬೆಳ್ಳಿ ಪರದೆಯ ಮೇಲೆ ನೋಡುವ ಅವಕಾಶ ನಿಮ್ಮದಾಗಲಿದೆ. 

Anitha E | news18-kannada
Updated:October 12, 2019, 9:24 AM IST
Bigg Boss Season 7: ಮಲ್ಟಿಪ್ಲೆಕ್ಸ್​ಗಳಿಗೂ ಲಗ್ಗೆ ಇಡಲಿದೆ ಕನ್ನಡದ ಬಿಗ್​ ಬಾಸ್​ 7
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರಲಿರುವ ಬಿಗ್ ಬಾಸ್ 7 ಅಕ್ಟೋಬರ್ 13 ರಿಂದ ಪ್ರಾರಂಭವಾಗಲಿದೆ.
  • Share this:
'ಬಿಗ್‍ಬಾಸ್ 7'ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಇದೇ ಅಕ್ಟೊಬರ್ 13ರಂದು  ಅಂದರೆ ನಾಳೆ ಅದ್ಧೂರಿ ಕಾರ್ಯಕ್ರಮದ ಮೂಲಕ ಬಿಗ್‍ಬಾಸ್ ಕಾರ್ಯಕ್ರಮ ಲಾಂಚ್ ಆಗಲಿದೆ. ಅಂದಹಾಗೆ ಈ ಬಾರಿಯ ಬಿಗ್‍ಬಾಸ್ ಕಾರ್ಯಕ್ರಮದ ಆರಂಭದ ದಿನವನ್ನು ಮಲ್ಟಿಪ್ಲೆಕ್ಸ್​ಗಳಲ್ಲೂ ನೋಡಬಹುದಾಗಿದೆ.

ಇಲ್ಲಿಯವರೆಗಿನ ಸೀಸನ್​ಗಳನ್ನು ಕೇವಲ ಕಿರುತೆರೆಯಲ್ಲಿ ನೋಡಿ ಆನಂದಿಸಿದ್ದೀರಿ. ಆದರೆ ಈ ಸಲ 'ಬಿಗ್​ ಬಾಸ್​ 7' ಅನ್ನು ಬೆಳ್ಳಿ ಪರದೆಯ ಮೇಲೆ ನೋಡುವ ಅವಕಾಶ ನಿಮ್ಮದಾಗಲಿದೆ.

ಸುದೀಪ್​


'ರಾಜ್ಯದಾದ್ಯಂತ ಒಟ್ಟು ಆರು ಮಲ್ಟಿಪ್ಲೆಕ್ಸ್ ಸ್ಕ್ರೀನ್‍ಗಳಲ್ಲಿ 'ಬಿಗ್‍ಬಾಸ್ 7' ಕಾರ್ಯಕ್ರಮ ನೇರಪ್ರಸಾರ ಕಾಣಲಿದೆ' ಎಂದು ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಮೂರು, ಮೈಸೂರು, ಮಣಿಪಾಲ, ಉಡುಪಿಯ ತಲಾ ಒಂದು ಸ್ಕ್ರೀನ್‍ನಲ್ಲಿ ಬಿಗ್‍ಬಾಸ್ ಕಾರ್ಯಕ್ರಮ ನೋಡಬಹುದಾಗಿದೆ. ನಾಳೆ ಸಂಜೆ 6ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಅದನ್ನು ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Bala Trailer: 48 ಗಂಟೆಯೊಳಗೆ 1.83 ಕೋಟಿ ವೀಕ್ಷಣೆ ಪಡೆದು ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ ಈ ವಿಡಿಯೋ

ಬೆಂಗಳೂರಿನ ಮಲ್ಲೇಶ್ವರದ ಮಂತ್ರಿ ಸ್ಕ್ವೇರ್​, ಜೆ.ಪಿ. ನಗರದ ಸೆಂಟ್ರಲ್​ ಹಾಗೂ ಜಯನಗರದ ಸ್ವಾಗತ್​ ಗರುಡ, ಮೈಸೂರಿನ ಮಾಲ್​ ಆಫ್​ ಮೈಸೂರು, ಬೆಳಗಾವಿಯ ಹೆಡ್​ ಪೋಸ್ಟ್ ಆಫೀಸ್​ ರಸ್ತೆಯಲ್ಲಿರುವ ಮಾಲ್​ನಲ್ಲಿ, ಉಡುಪಿಯ ಮಣಿಪಾಲದ ಸೆಂಟ್ರಲ್​ ಸಿನಿಮಾಸ್​ನ ಐನಾಕ್ಸ್​ನಲ್ಲಿ ಕನ್ನಡದ 'ಬಿಗ್​ ಬಾಸ್​ 7' ಕಾರ್ಯಕ್ರಮದ ನೇರ ಪ್ರಸಾರವಾಗಲಿದೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಗ್​ಬಾಸ್​ ನೋಡಲು ಹಣ ಕೊಡುವ ಅಗತ್ಯ ಇಲ್ಲ ಆದರೆ ಆನ್​ಲೈನ್​ನಲ್ಲಿ ಬುಕ್ಕಿಂಗ್​ ಮಾಡಿಕೊಳ್ಳಬೇಕು.
Loading...

 

Madhubala: ಎವರ್​ಗ್ರೀನ್ ಸುಂದರಿ ಮಧುಬಾಲಾರನ್ನೇ ಹೋಲುವ ಸ್ಯಾಂಡಲ್​ವುಡ್​ ನಟಿ ಈಗ ಹೊಸ ಟಿಕ್ ಟಾಕ್ ಸ್ಟಾರ್


First published:October 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...