Bigg Boss OTT: ಮದುವೆಯಾಗಿ ಮಗು ಇದ್ದವನ ಜೊತೆ ರಿಲೇಷನ್​​ಶಿಪ್​ನಲ್ಲಿ ಇದ್ದ ಮಾರಿಮುತ್ತು ಮೊಮ್ಮಗಳು

ಬಿಗ್ ಬಾಸ್ ಒಟಿಟಿ ಸಖತ್ ಇಂಟ್ರೆಸ್ಟಿಂಗ್ ರೀತಿಯಲ್ಲಿ ಮುಂದುವರಿಯುತ್ತಿದೆ. ಇದೀಗ ನಟಿ ಉದ್ಯಮಿ ಜಯಶ್ರೀ ಆರಾಧ್ಯ ತಮ್ಮ ರಿಲೇಷನ್​ಶಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಜಯಶ್ರೀ ಆರಾಧ್ಯ

ಜಯಶ್ರೀ ಆರಾಧ್ಯ

  • Share this:
ಬಿಗ್​ಬಾಸ್ ಒಟಿಟಿಯಲ್ಲಿ ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್ ವಿಚಾರಗಳು ಬಯಲಾಗುತ್ತಲೇ ಇವೆ. ಲವ್ ಲೈಫ್, ಪರ್ಸನಲ್ ಲೈಫ್, ನೋವು, ಖುಷಿ ಹಳೆಯ ಮೆಲುಕು ಎಲ್ಲವೂ ರಿಯಾಲಿಟಿ ಶೋ (Reality Show) ಮೂಲಕ ಜನರನ್ನು ತಲುಪುತ್ತಿದೆ. ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಒಟಿಟಿ (Bigg Boss OTT) ಕನ್ನಡ ಅದ್ದೂರಿಯಾಗಿ ಆರಂಭವಾಗಿದೆ. ಹಿಂದಿಯಲ್ಲಿ ಒಟಿಟಿ ಬಿಗ್​ಬಾಸ್ ನಡೆಸಿದಾಗ ಭಾರೀ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗಿತ್ತು. ಹಾಗೆಯೇ ಕನ್ನಡದಲ್ಲಿಯೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.  ಆಗಸ್ಟ್​ 6ರಂದು ಬಿಗ್ ಬಾಸ್ ಒಟಿಟಿ ಗ್ರ್ಯಾಂಡ್​ ಓಪನಿಂಗ್ ಮಾಡಲಾಗಿದೆ. ನಾನಾಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿದ್ದಾರೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep)​ ಬಿಗ್ ಬಾಸ್ ನಡೆಸಿಕೊಡುತ್ತಿದ್ದು ಸ್ಪರ್ಧಿಗಳಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ.

ಬಿಗ್ ಬಾಸ್ ಒಟಿಟಿಗೆ 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಅಸಲಿ ಆಟ ಪ್ರಾರಂಭಿಸಿದ್ದಾರೆ. ಇತ್ತೀಚಿನ ಎಪಿಸೋಡ್ ನಲ್ಲಿ ಸ್ಪರ್ಧಿಗಳು ತಮ್ಮ ಕಷ್ಟದ ದಿನಗಳನ್ನು ನೆನೆದು ಅದನ್ನು ಮುಕ್ತವಾಗಿ ಹಂಚಿಕೊಂಡು ಹಗುರಾಗಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪರ್ಧಿಗಳ ಎಮೋಷನಲ್ ಅತ್ತಿದ್ದರೂ ಅದರಲ್ಲಿರುವ ನೈಜ್ಯತೆಯನ್ನು ಜನರು ಮೆಚ್ಚಿಕೊಂಡಿದ್ದಾರೆ.

ಹಳೆ ಕಥೆ ರಿವೀಲ್ ಮಾಡಿದ ನಟಿ

ನಾನು ಯಾರು ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮ್ಮ ನೋವಿನ ಕಥೆಯನ್ನು ಬಿಚ್ಚಿಟ್ಟರು. ಬಳಿಕ ಲಿವಿಂಗ್ ಏರಿಯಾ ಸೇರಿದ ಸ್ಪರ್ಧಿಗಳು ಹರಟೆ ಹೊಡೆಯುತ್ತಿದ್ದರು. ಈ ವೇಳೆ ಖ್ಯಾತ ನಟಿ ಮಾರಿಮುತ್ತು ಮೊಮ್ಮಗಳು ತನ್ನ ಹಳೆಯ ಕಥೆ ಬಹಿರಂಗ ಪಡಿಸಿದರು.ರಾಕೇಶ್, ಅರ್ಜುನ್, ಸ್ಫೂರ್ತಿ ಗೌಡ, ಸೋಮಣ್ಣ ಮಾಜಿಮಾಡ ಎಲ್ಲರೂ ಕುಳಿತ್ತಿದ್ದರು. ಆ ವೇಳೆ ಜಯಶ್ರೀ (Jayashree Aradhya) ಅರ್ಜುನ್ ಬಳಿ ಮಾತನಾಡಿ 'ನಿನ್ನ ಕಷ್ಟ ನನಗೂ ಅರ್ಥವಾಗುತ್ತದೆ. ಯಾಕೆಂದರೆ ನಾನು ಕೂಡ ಮದುವೆಯಾದ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದೆ' ಎಂದು ಹೇಳಿದರು. 'ಮದುವೆಯಾಗಿ ಆತನಿಗೆ ಮಗು ಕೂಡ ಇತ್ತು ಆದರೂ ಅವರ ಜೊತೆ ಸಂಬಂಧದಲ್ಲಿ ಇದ್ದೆ. ಬಳಿಕ ಮನೆಯವರಿಗೆಲ್ಲ ಗೊತ್ತಾಯಿತು ದೊಡ್ಡ ಜಗಳವೆ ಆಯಿತು' ಎಂದು ಜಯಶ್ರೀ ತನ್ನ ಹಳೆಯ ಕಥೆ ವಿವರಿಸಿದರು. ತನ್ನ ಮತ್ತು ಸಂಬಂಧ ಹೊಂದಿದ ವ್ಯಕ್ತಿಯ ಮನೆಯವರಿಗೆ ವಿಷಯ ಗೊತ್ತಾದ ಬಳಿಕ ತುಂಬಾ ದೊಡ್ಡ ಸಮಸ್ಯೆ ಆಯಿತು. ಬಳಿಕ ನಾನು ಮನೆಬಿಟ್ಟು ಹೊರಬರಬೇಕಾಯಿತು ಎಂದು ಜಯಶ್ರೀ ಹೇಳಿದರು.

ಇದನ್ನೂ ಓದಿ: Bigg Boss OTT: ನಂದು ಇನ್ನೊಂದು ವಿಡಿಯೋ ಇದೆ; ಅದ್ಯಾವಾಗ ಬಿಡ್ತಾನೋ ಗೊತ್ತಿಲ್ಲ-ಸೋನು ಗೌಡ

ಕೈಹಿಡಿದದ್ದು ಬ್ಯುಸಿನೆಸ್

ಮನೆಬಿಟ್ಟು ಬಂದ ನಂತರವೂ ಆತನ ಜೊತೆ ಇದ್ದೆ ಎಂದು ಜಯಶ್ರೀ ಹೇಳಿದರು. ಬಳಿಕ ಬ್ಯುಸಿನೆಸ್ ಮಾಡಲು ಪ್ರಾರಂಭಿಸಿದೆ ಎಂದರು. ಅಂದಹಾಗೆ ಜಯಶ್ರೀ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಸಿನಿಮಾ ಅವರ ಕೈ ಹಿಡಿಲಿಲ್ಲ. ಪುಟ್ಟರಾಜು ಲವರ್ ಆಫ್ ಶಶಿಕಲಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ಜಯಶ್ರಿಗೆ ಯಶಸ್ಸು ಸಿಕ್ಕಿದ್ದು ಬ್ಯುಸಿನೆಸ್‌ನಲ್ಲಿ.

ಇದನ್ನೂ ಓದಿ: Bigg Boss OTT: ಖುಷಿ ಖುಷಿಯಾಗಿ ಬಿಗ್​ ಬಾಸ್​ ಮನೆಗೆ ಚೈತ್ರ ಹಳ್ಳಿಕೇರಿ ಎಂಟ್ರಿ

ಸಾಲ ಮಾಡಿ ಉದ್ಯಮ ಶುರು

ಸಿನಿಮಾ ತನ್ನ ಕೈ ಹಿಡಿಲಿಲ್ಲ ಎಂದು ಜಯಶ್ರೀ ಬಿಗ್ ಬಾಸ್ ಮನೆಯಲ್ಲಿ ಒಪ್ಪಿಕೊಂಡಿದ್ದಾರೆ.ಹಾಗಾಗಿ ಬ್ಯುಸಿನೆಸ್ ಆರಂಭಿಸಿದ ನಟಿ 50 ಲಕ್ಷ ಸಾಲ ಕೂಡ ಮಾಡಿದ್ದರು. ಸಾಲ ತೀರಿಸಲು ಪ್ರಾರಂಭದಲ್ಲಿ ತುಂಬಾ ಕಷ್ಟ ಪಟ್ಟಿದ್ದ ಜಯಶ್ರೀ ಬಳಿಕ ಯಶಸ್ಸು ಕಂಡರು. ಸಾಲ ಕೊಟ್ಟವರು ಬಂದು ಅನೇಕ ಬಾರಿ ಗಲಾಟೆ ಮಾಡುತ್ತಿದ್ದರು ಎಂದು ಜಯಶ್ರೀ ಹೇಳಿದ್ದಾರೆ.
Published by:Divya D
First published: