Bigg Boss OTT: ಮೊದಲ ವಾರವೇ ಸೋನು ಗೌಡ ನಾಮಿನೇಟ್, ಶುರುವಾಯ್ತು ಬಿಗ್​ ಬಾಸ್​ ಮನೆಯಲ್ಲಿ ವಾರ್​

ಬಿಗ್​ ಬಾಸ್​ ಕನ್ನಡ ಒಟಿಟಿ ಮೊದಲ ದಿನವೇ ಸ್ಪರ್ಧಿಗಳ ನಾಮಿನೇಷನ್​ ಪ್ರಕ್ರಿಯೆ ಶುರುವಾಗಿದ್ದು, ಒಟ್ಟು 8 ಜನ ನಾಮಿನೇಟ್​ ಆಗಿದ್ದಾರೆ.

ಸೋನು ಗೌಡ

ಸೋನು ಗೌಡ

  • Share this:
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Big Boss OTT) ಈ ಬಾರಿ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗ್ತಿದೆ. ಈ ರಿಯಾಲಿಟಿ ಶೋಗೆ (Reality Show)  ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮೊದಲ ದಿನವಾಗಿದ್ದು, ಅಸಲಿ ಆಟ ಆರಂಭವಾಗಿದೆ.  ಹೌದು, ಮೊದಲ ದಿನವೇ ಸ್ಪರ್ಧಿಗಳ ನಾಮಿನೇಷನ್​ ಪ್ರಕ್ರಿಯೆ ಶುರುವಾಗಿದ್ದು, ಒಟ್ಟು 8 ಜನ ನಾಮಿನೇಟ್​ ಆಗಿದ್ದಾರೆ. ಅದರಲ್ಲಿ ಸೋನು ಶ್ರೀನಿವಾಸ ಗೌಡ (Sonu Srinivas Gowda) ಸಹ ನಾಮಿನೇಟ್​ ಆಗಿದ್ದಾರೆ. ಈಗಾಗಲೇ ಸೋನು ಗೌಡ ಅವರು ಬಿಗ್​ ಬಾಸ್​ ಮನೆಯೊಳಗೆ ಹೋಗಿರುವುದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಅವರು ಮೊದಲ ವಾರವೇ ಹೊರಬರುತ್ತಾರಾ ಎಂಬ ಪ್ರಶ್ನೆ ಮೂಡಿದೆ.

8 ಸ್ಪರ್ಧಿಗಳು ಎಲಿಮಿನೇಷನ್:

ಹೌದು, ಬಿಗ್​ ಬಾಸ್​ ಒಟಿಟಿ ಮೊದಲ ದಿನದಿಂದಲೇ ಸಖತ್ ಸ್ಪೀಡ್​ ಆಗಿ ಓಡುತ್ತಿದೆ. ಅದರಲ್ಲಿಯೂ ದಿನದ ಆರಂಭದಲ್ಲಿಯೇ ಸ್ಪರ್ಧಿಗಳಿಗೆ ಎಲಿಮಿನೇಷನ್ ಎಂಬ ಭಯ್ ಆರಂಭವಾಗಿದೆ. ಇರುವ ಒಟ್ಟು 16 ಜನ ಸ್ಪರ್ಧಿಗಳಲ್ಲಿ ಈ ವಾರ 8 ಜನ್ ಸ್ಪರ್ಧಿಗಳು ಎಲಿಮಿನೇಷನ್ ಆಗಿದ್ದಾರೆ. ಅವರುಗಳೆಂದರೆ, ಸೋನು ಶ್ರೀನಿವಾಸ್​ ಗೌಡ, ಸ್ಫೂರ್ತಿ ಗೌಡ, ನಂದಿನಿ, ಆರ್ಯವರ್ಧನ್​ ಗುರೂಜಿ, ಜಯಶ್ರೀ ಆರಾಧ್ಯಾ, ಜಶ್ವಂತ್​, ಕಿರಣ್​ ಯೋಗೇಶ್ವರ್​ ಮತ್ತು ಅಕ್ಷತಾ ಕುಕ್ಕಿ ಎಲಿಮಿನೇಷನ್​ ಆಗಿದ್ದು, ಮೊದಲ ವಾರವೇ ಯಾರು ಹೊರಬರಲಿದ್ದಾರೆ ಎಂದು ಕಾದು ನೋಡಬೇಕಿದೆ.

8 ಸ್ಪರ್ಧಿಗಳು ಸೇಫ್:

ಇನ್ನು, 16ರಲ್ಲಿ 8 ಜನ ಸ್ಪರ್ಧಿಗಳು ಎಲಿಮಿನೇಷನ್ ಆದರೆ ಉಳಿದ 8 ಜನ ಈ ವಾರ ಸೇಫ್ ಆಗಿದ್ದಾರೆ. ಅರ್ಜುನ್​ ರಮೇಶ್​, ಸೋಮಣ್ಣ ಮಾಚಿಮಾಡ, ಸಾನ್ಯಾ ಐಯ್ಯರ್, ಚೈತ್ರಾ ಹಳ್ಳಿಕೇರಿ, ಲೋಕೇಶ್​, ಉದಯ್​ ಸೂರ್ಯ, ರೂಪೇಶ್​ ಶೆಟ್ಟಿ ಮತ್ತು ರಾಕೇಶ್​ ಅಡಿಗ ಸದ್ಯ ಸೇಫ್ ಆಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗಲು ಇವರುಗಳು ಉತ್ತಮವಾಗಿ ಆಡಬೇಕಿದೆ.

ಇದನ್ನೂ ಓದಿ: Bigg Boss OTT: ಮೊದಲ ದಿನವೇ ಕಷ್ಟದ ಕಥೆ ಹೇಳಿಕೊಂಡು ಕಣ್ಣೀರಿಟ್ಟ ಸ್ಪರ್ಧಿಗಳು, ಫುಲ್ ಎಮೋಷನಲ್​ ಎಪಿಸೋಡ್

ಮೊದಲ ದಿನವೇ ಶುರುವಾಯ್ತು ಬಿಗ್​ ಬಾಸ್​ ಮನೆಯಲ್ಲಿ ವಾರ್​:

ಹೌದು, ಬಿಗ್​ ಬಾಸ್​ ಮನೆಯೊಳಗೆ ಪ್ರತಿಬಾರಿಯೂ ಜಗಳಗಳು ನಡೆಯುವುದು ಸಹಜ. ಆದರೆ ಈ ಬಾರಿ ಮೊದಲ ದಿನವೇ ವಾರ್​ ಆರಂಭವಾಗಿದೆ. ಆರ್ಯವರ್ಧನ್ ಗುರೂಜಿ ಮತ್ತು ಲೋಕೇಶ್​ ನಡುವೆ ಜಗಳವಾಗಿದೆ. ಮಲಗುವ ಕೋಣೆಯಲ್ಲಿ ​ ಲೋಕಿ ತನ್ನ ಹಿನ್ನಲೆ ಹೇಳಿಕೊಳ್ಳುತ್ತಾ ಬಡವ ಎನ್ನುತ್ತಾರೆ. ಆಗ ಗುರೂಜಿ ಅವರು ಇದೆಲ್ಲಾ ಕೇವಲ ವೋಟಿಗಾಗಿ ಎನ್ಉವ ಮೂಲಕ ಇಬ್ಬರ ನಡುವೆ ಜಗಳ ನಡೆದಿದ್ದು, ಇದರ ಪ್ರೋಮೋ ಇದಿಗ ಬಿಡುಗಡೆ ಆಗಿದೆ.



ನಾನು ಸಿಗರೇಟ್ ಸೇದುತ್ತೇನೆ ಎಂದ ಸೋನು:

ಇಷ್ಟಕ್ಕೆ ಮುಗಿದಿಲ್ಲ, ಸಿಗರೇಟ್ ಸೇದುತ್ತೀರಾ ಎಂದು ರೂಪೇಶ್​ ಆಶ್ಚರ್ಯದಿಂದ ಕೇಳಿದಾಗ, ನಾನು ಸಿಗರೇಟ್ ಸೇದುತ್ತೇನೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ಸೋನು ಅವರ ಈ ಮಾತು ಕೇಳಿ ಪ್ರೇಕ್ಷಕರಿಗೆ ಆಶ್ಚರ್ಯವಾಗಿದೆ.ಕಳೆದ ಬಾರಿ ಸಹ ಬಿಗ್​ಬಾಸ್​ ಆರಂಭವಾಗುವ ಸಮಯದಲ್ಲಿ ಟಿಕ್​ಟಾಕ್​ ಸ್ಟಾರ್​ ಸೋನು ಶ್ರೀನಿವಾಸ್​ ಗೌಡ ಬಿಗ್​ ಬಾಸ್​ ಮನೆಯೊಳಕ್ಕೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.

ಇದನ್ನೂ ಓದಿ: Sonu Gowda: ನಾನು ಸಿಗರೇಟ್ ಸೇದುತ್ತೇನೆ, ತಪ್ಪೇನು? ಬಿಗ್​ಬಾಸ್​ ಮನೆಯಲ್ಲಿ ಸೋನು ಗೌಡ ಪ್ರಶ್ನೆ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದಿತ್ತು. ಆದರೆ ಹೋಗಿರಲಿಲ್ಲ, ಈ ಬಾರಿ ಹೋಗಿದ್ದಾರೆ. ಟಿಕ್​ಟಾಕ್​ನಲ್ಲಿ ವೈರಲ್​ ಆಗಿದ್ದ ಸೋನು ಶ್ರೀನಿವಾಸ್​ ಗೌಡ ಆಗಾಗ ಟ್ರೋಲ್​ ಕೂಡ ಆಗುತ್ತಿದ್ದರು. ಹಿಂದೊಮ್ಮೆ ಕನ್ನಡಿಗರು ಬೆಳೆಸಲ್ಲ, ತುಳಿತಾರೆ ಎಂಬ ಮಾತು ಹೇಳಿ ಟ್ರೋಲ್​ ಆಗಿದ್ದರು.
Published by:shrikrishna bhat
First published: