Niveditha Gowda: ನಟ ಧನುಷ್ ಹಾಡಿಗೆ ನಿವೇದಿತಾ ಗೌಡ ಡ್ಯಾನ್ಸ್! ವಿಡಿಯೋ ವೈರಲ್

ಫುಲ್ ಸ್ಮೈಲ್ ಕೊಟ್ಟು ಜಾಲಿಯಾಗಿ ಧನುಷ್ ಅವರ ವೈರಲ್ ಹಾಡಿನ ರೀಲ್ಸ್ ಟ್ರೆಂಡಿಂಗ್ ಕ್ಲಿಪ್​ಗೆ ಹೆಜ್ಜೆ ಹಾಕಿದ ನಿವೇದಿತಾ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಅಭಿಮಾನಿಗಳು ಖುಷಿಯಿಂದ ನಿವೇದಿತಾ ಗೌಡ ಅವರ ತಮಿಳು ಹಾಡಿನ ಈ ವಿಡಿಯೋಗೆ ಲೈಕ್ಸ್ ಕೊಟ್ಟಿದ್ದಾರೆ.

ನಿವೇದಿತಾ ಗೌಡ

ನಿವೇದಿತಾ ಗೌಡ

  • Share this:
ಕನ್ನಡ ಬಿಗ್​ಬಾಸ್ (Bigg Boss) ಖ್ಯಾತಿಯ ನಿವೇದಿತಾ ಗೌಡ (Niveditha Gowda) ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್. ಇನ್​ಸ್ಟಾಗ್ರಾಮ್ ರೀಲ್ಸ್ (Instagram Reels), ವಿಡಿಯೋ (Video), ಫೋಟೊಗಳನ್ನು ಹಂಚಿಕೊಳ್ಳುವ ನಟಿ ಅವರ ಅಭಿಮಾನಿಗಳಿಗೆ ಅಪ್ಡೇಟ್​ಗಳನ್ನು ಕೊಡುವುದನ್ನು ಎಂದಿಗೂ ಮಿಸ್ ಮಾಡುವುದಿಲ್ಲ. ಅವರ ಫ್ಯಾಷನ್, ಸ್ಟೈಲ್, ಲೈಫ್​ಸ್ಟೈಲ್ ಕಂಟೆಂಟ್​ಗಳಿಗಾಗಿ ಬಹಳಷ್ಟು ಜನರು ಅವರನ್ನು ಫಾಲೋ ಮಾಡುತ್ತಾರೆ. ಇತ್ತೀಚೆಗಷ್ಟೇ ರಾಮಾಚಾರಿ ಸಿನಿಮಾದ ಆಕಾಶದಾಗೆ ಯಾರೊ ಮಾಯಗಾರನು ಎಂದು ನಲಿದ ನಿವೇದಿತಾ ಗೌಡ ಈಗ ಧನುಷ್, ರಾಶಿ ಖನ್ನಾ ಹಾಗೂ ನಿತ್ಯಾ ಮೆನನ್ ಅಭಿನಯದ ತಿರು ಚಿತ್ರಾಂಬಲಂ (Thiruchitrambalam) ಸಿನಿಮಾದ (Movie) ಹಾಡಿಗೆ (Song) ಡ್ಯಾನ್ಸ್ ಮಾಡಿದ್ದಾರೆ.

ನೀಲಿ ಬಣ್ಣದ ಝೀನ್ಸ್ ಶಾರ್ಟ್ಸ್ ಹಾಗೂ ವೈಟ್ ಕಲರ್ ಸಿಂಪಲ್ ಟಾಪ್​ನಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ ಕೂದಲನ್ನು ಫ್ರೀಯಾಗಿ ಬಿಟ್ಟು ಸಿಂಪಲ್ & ಸ್ಟೈಲಿಷ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಫುಲ್ ಸ್ಮೈಲ್ ಕೊಟ್ಟು ಜಾಲಿಯಾಗಿ ಧನುಷ್ ಅವರ ವೈರಲ್ ಹಾಡಿನ ರೀಲ್ಸ್ ಟ್ರೆಂಡಿಂಗ್ ಕ್ಲಿಪ್​ಗೆ ಹೆಜ್ಜೆ ಹಾಕಿದ ನಿವೇದಿತಾ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಅಭಿಮಾನಿಗಳು ಖುಷಿಯಿಂದ ನಿವೇದಿತಾ ಗೌಡ ಅವರ ತಮಿಳು ಹಾಡಿನ ಈ ವಿಡಿಯೋಗೆ ಲೈಕ್ಸ್ ಕೊಟ್ಟಿದ್ದಾರೆ.

ರೀಲ್ಸ್ ಮಾಡೋದ್ರಲ್ಲಿ ಬ್ಯುಸಿ ನಿವೇದಿತಾ

ನಿವೇದಿತಾ ಗೌಡ ಇನ್​ಸ್ಟಾಗ್ರಾಮ್​ನಲ್ಲಿ ಬರುವ ಯಾವುದೇ ಟ್ರೆಂಡ್​ಗಳನ್ನು ಕೂಡಾ ಮಿಸ್ ಮಾಡುವುದಿಲ್ಲ. ಪ್ರತಿಬಾರಿ ನಿವೇದಿತಾ ಟ್ರೆಂಡಿಂಗ್ ರೀಲ್ಸ್​ಗೆ ಹೆಜ್ಜೆ ಹಾಕುತ್ತಿದ್ದು ಯಾವುದೇ ಭಾಷೆಯ ಹಾಡು, ಆಡಿಯೋ ಕ್ಲಿಪ್ ವೈರಲ್ ಆದಾಗಲೂ ಅವರು ತಪ್ಪದೆ ರೀಲ್ಸ್ ಮಾಡಿ ಶೇರ್ ಮಾಡುತ್ತಾರೆ.

ಟ್ವಿಟರ್​​ನಲ್ಲಿ ವೈರಲ್ ಆದ ತಿರುಚಿತ್ರಾಂಬಲಂ ಹಾಡು

ಮೇಘಂ ಕರುಕಾದ ಎನ್ನುವ ಹಾಡು ಇನ್​ಸ್ಟಾಗ್ರಾಮ್​ನಲ್ಲಿ ವೈರಲ್ ಆಗಿದ್ದು ಧನುಷ್ ಹಾಗೂ ರಾಶಿ ಖನ್ನಾ ಈ ಹಾಡಿಗೆ ಸಖತ್ ಸ್ಟೆಪ್ ಹಾಕುವ ವಿಡಿಯೋ ಕ್ಲಿಪ್ ಎಲ್ಲರ ಮೊಬೈಲ್ ಸ್ಟೇಟಸ್, ಇನ್​ಸ್ಟಾಗ್ರಾಮ್ ವಾಲ್​ಗಳಲ್ಲಿ ರಾರಾಜಿಸುತ್ತಿದೆ. ನಟ ಸ್ವತಃ ಹಾಡಿರುವ ಈ ಸಾಂಗ್ ಯುವಜನರಲ್ಲಿ ಸಖತ್ ಕ್ರೇಜ್ ಹುಟ್ಟಿಸಿದ್ದು ರೀಲ್ಸ್ ಮಾಡುವವರಿಗಂತೂ ಹಬ್ಬವೇ ಆಗಿದೆ.






ಇದನ್ನೂ ಓದಿ: Niveditha Gowda: ರಾಮಾಚಾರಿ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತಾ ಗೌಡ, ಲಂಗ-ದಾವಣಿಯಲ್ಲಿ ಸೂಪರ್

1.5 ಮಿಲಿಯನ್ ಫಾಲೋವರ್ಸ್

ಸದ್ಯ ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್​ನಲ್ಲಿ ಸುಮಾರು 1.5 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1428 ಪೋಸ್ಟ್​​ಗಳನ್ನು ಮಾಡಿದ್ದಾರೆ. ಬಹುತೇಕ ಎಲ್ಲ ದಿನವೂ ನಿವೇದಿತಾ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರಿಂದ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ.

ನೆಟ್ಟಿಗರ ಪ್ರೀತಿಯ ನಿವಿ

ನಿವೇದಿತಾ ಗೌಡ ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ. ದಿನನಿತ್ಯ ಚಂದದ ರೀಲ್ಸ್ ವಿಡಿಯೋಗಳನ್ನು ಮಾಡುವ ನಟಿ ಅವುಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ. ಅಭಿಮಾನಿಗಳು ಸಹ ನಿವಿ ಅವರ ಸೂಪರ್ ಕ್ಯೂಟ್ ವಿಡಿಯೋಗಳನ್ನು ಎಂಜಾಯ್ ಮಾಡುತ್ತಾರೆ.

ಇದನ್ನೂ ಓದಿ: Mouni Roy Saree Looks: ಬ್ಲೌಸ್ ಇಲ್ಲದೆ ಸೀರೆ ಉಟ್ಟ ಮೌನಿ ರಾಯ್! ಕೆಜಿಎಫ್ ಸುಂದರಿಯ ಫೋಟೋಸ್ ವೈರಲ್

ನಿವೇದಿತಾ ಬ್ಯೂಟಿ ಸೀಕ್ರೆಟ್, ಡಯಟ್ ಏನು?

ವಿಡಿಯೋದಲ್ಲಿ ಬೆಳಗ್ಗೆ ತಿಂಡಿಗೆ ಎರಡು ಬ್ರೌನ್ ಬ್ರೆಡ್, ಡ್ರೈ ಫ್ರೂಟ್ಸ್, ಹಣ್ಣು, ಪೀನಟ್ ಬಟರ್ ತಿನ್ನುತ್ತೀನಿ ಎಂಬುದನ್ನ ಹೇಳಿದ್ದಾರೆ. ಬ್ರೆಡ್​ ಅನ್ನು ರೋಸ್ಟ್​ ಮಾಡಿಕೊಂಡು ಅದಕ್ಕೆ ಪೀನಟ್​ ಬಟರ್ ಹಾಕಿ ತಿನ್ನುತ್ತಾರಂತೆ. ಅಲ್ಲದೇ, ತಿಂಡಿಯ ನಂತರ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸ ಮತ್ತು ಹಸಿ ಶುಠಿ ಹಾಕಿ ಮಿಶ್ರಣ ಮಾಡಿ ಅದರ ಜ್ಯೂಸ್ ಕುಡಿಯುತ್ತಾರಂತೆ.
Published by:Divya D
First published: