Kannada Bigg Boss 7: ನಂಗೆ ಭೂಮಿ ಅಂದ್ರೆ ಇಷ್ಟ; ಬಿಗ್ ಬಾಸ್ ಮನೆಯಲ್ಲಿ ಆರಂಭವಾಯ್ತು ಶೈನ್ ಶೆಟ್ಟಿ ಪ್ರೇಮ್ ಕಹಾನಿ?

ಮಧ್ಯರಾತ್ರಿ ವೇಳೆ ಭೂಮಿ ಶೆಟ್ಟಿ ಎಲ್ಲರ ಜೊತೆ ಕೂತು ಮಾತನಾಡುತ್ತಿದ್ದರು. ಆಗ ಅವರು ತಮ್ಮ ಮೊದಲ ಕ್ರಶ್​ ವಿಚಾರ ಹೇಳಿಕೊಂಡಿದ್ದಾರೆ. ಏಳನೇ ತರಗತಿಯಲ್ಲಿದ್ದಾಗಲೇ ಅವರಿಗೆ ಕ್ರಶ್​ ಉಂಟಾಗಿತ್ತಂತೆ.

Rajesh Duggumane | news18-kannada
Updated:October 16, 2019, 8:19 AM IST
Kannada Bigg Boss 7: ನಂಗೆ ಭೂಮಿ ಅಂದ್ರೆ ಇಷ್ಟ; ಬಿಗ್ ಬಾಸ್ ಮನೆಯಲ್ಲಿ ಆರಂಭವಾಯ್ತು ಶೈನ್ ಶೆಟ್ಟಿ ಪ್ರೇಮ್ ಕಹಾನಿ?
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸಿನಿಮಾದಲ್ಲಿ ನಾಯಕನಾಗಬೇಕೆಂಬ ಆಸೆಯನ್ನೂ ಶೈನ್ ಶೆಟ್ಟಿ ಹೇಳಿಕೊಂಡಿದ್ದರು.
  • Share this:
ಬಿಗ್​ ಬಾಸ್​ ಮನೆಯಲ್ಲಿ ಹೊಸ ಹೊಸ ಪ್ರೇಮ ಕಹಾನಿಗಳು ಹುಟ್ಟಿ ಕೊಳ್ಳುವುದು, ಹಳೆಯ ಪ್ರೇಮ ಪುರಾಣಗಳು ರೆಕ್ಕೆ ಬಿಚ್ಚಿಕೊಳ್ಳುವುದು ಹೊಸದೇನಲ್ಲ. ಅದೇ ರೀತಿ ಈ ಬಾರಿ ಕನ್ನಡ ಬಿಗ್​ ಬಾಸ್​ ಮನೆ ಸೇರಿರುವ ನಟ ಶೈನ್​ ಶೆಟ್ಟಿ, 'ನಂಗೆ ಭೂಮಿ ಅಂದ್ರೆ ತುಂಬಾನೇ ಇಷ್ಟ' ಎಂದು ಹೇಳಿಕೊಂಡಿದ್ದಾರೆ.. ಆದರೆ, ಅವರು ಹೀಗೆ ಹೇಳಿದ್ದು ಏಕೆ ಗೊತ್ತಾ? ಇಲ್ಲಿದೆ ಉತ್ತರ.

ಶೈನ್​ ಶೆಟ್ಟಿ ಹಾಗೂ ಸಂಗೀತ ಸಂಯೋಜಕ ವಾಸುಕಿ ವೈಭವ್​ ಮಾತನಾಡುತ್ತಿದ್ದರು. ಆಗ, ಶೈನ್​ ಶೆಟ್ಟಿ ‘ನೀನು ನನ್ನ ಉತ್ತಮ ಗೆಳೆಯ’ ಎಂದು ವಾಸುಕಿ ಬಳಿ ಹೇಳಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಟಾಸ್ಕ್​ ವಿಚಾರವಾಗಿ ಮಾತನಾಡಿದ್ದಾರೆ. ಟಾಸ್ಕ್​​ನಲ್ಲಿ ಕಷ್ಟದ ಪ್ರಶ್ನೆಗಳು ಬರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ ವಾಸುಕಿ. ಇದಕ್ಕೆ ಶೈನ್​ ಶೆಟ್ಟಿ ಅಚ್ಚರಿ ವ್ಯಕ್ತಪಡಿಸದರು.

ಅಬ್ದುಲ್​ ಕಲಾಂ ಅಂದ್ರೆ ಇಷ್ಟನಾ? ಅವರು ಮಾಡಿರುವ ಯಾವ ಕೆಲಸಗಳು ಇಷ್ಟ? ಎಂಬಿತ್ಯಾದಿ ಪ್ರಶ್ನೆಯನ್ನು ಶೈನ್​ ಮುಂದಿಟ್ಟಿದ್ದರು ವಾಸುಕಿ. ಶೈನ್​ ಇದಕ್ಕೆ ತಡವರಿಸುತ್ತಲೇ ಉತ್ತರ ನೀಡಿದರು. ನಂತರ ಆಕಾಶ-ಭೂಮಿ ಇವುಗಳಲ್ಲಿ ಯಾವುದು ಇಷ್ಟ ಎಂದು ಪ್ರಶ್ನೆ ಮಾಡಿದ್ದಾರೆ. ಆಗ, ನಂಗೆ ಭೂಮಿನೇ ಇಷ್ಟ ಎಂದರು ಶೈನ್​. ಈ ವೇಳೆ ವಾಸುಕಿ ನಕ್ಕಿದ್ದಾರೆ. ವಾಸುಕಿ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುದನ್ನು ಅರಿತ ಶೈನ್​, ‘ಅಯ್ಯೋ, ಈ ಭೂಮಿ ಅಲ್ಲ ಗುರು, ನಾವಿರೋ ಭೂಮಿ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಕಿಸ್ ರಾಮಾಯಣ!

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಶೈನ್​ ಶೆಟ್ಟಿ ಅವರಿಗೆ ಬಿಗ್​ ಬಾಸ್​ ಮನೆಯಲ್ಲಿರುವ  ಭೂಮಿಯೇ ಇಷ್ಟವಾಗಿರಬಹುದು ಎಂದಿದ್ದಾರೆ. ಮಧ್ಯರಾತ್ರಿ ವೇಳೆ ಭೂಮಿ ಶೆಟ್ಟಿ ಎಲ್ಲರ ಜೊತೆ ಕೂತು ಮಾತನಾಡುತ್ತಿದ್ದರು. ಆಗ ಅವರು ತಮ್ಮ ಮೊದಲ ಕ್ರಶ್​ ವಿಚಾರ ಹೇಳಿಕೊಂಡಿದ್ದಾರೆ. ಏಳನೇ ತರಗತಿಯಲ್ಲಿದ್ದಾಗಲೇ ಅವರಿಗೆ ಕ್ರಶ್​ ಉಂಟಾಗಿತ್ತಂತೆ.

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading