HOME » NEWS » Entertainment » KANNADA BIGG BOSS 8 PRASHANTH SAMBARGI ONCE AGAIN STARTED FIGHTING WHILE PERFORMING IN A NEW TASK AE

Bigg Boss 8: ಯಾವ ಸ್ಥಾನಕ್ಕೆ ಯಾರು ಯೋಗ್ಯ ಟಾಸ್ಕ್​: ಮತ್ತೆ ಜಗಳ ಆರಂಭಿಸಿದ ಪ್ರಶಾಂತ್​ ಸಂಬರಗಿ

Prashanth Sambargi: ಮೊಟ್ಟೆ ವಿಷಯ ತಣ್ಣಗಾಗುತ್ತಿದ್ದಂತೆಯೇ ಪ್ರಶಾಂತ್​ ಸಂಬರಗಿ ಬಿಗ್​ಬಾಸ್​ ಮನೆಯಲ್ಲಿ ಮತ್ತೆ ಹೊಸದಾಗಿ ಜಗಳ ಆರಂಭಿಸಿದ್ದಾರೆ. 

Anitha E | news18-kannada
Updated:April 27, 2021, 6:09 PM IST
Bigg Boss 8: ಯಾವ ಸ್ಥಾನಕ್ಕೆ ಯಾರು ಯೋಗ್ಯ ಟಾಸ್ಕ್​: ಮತ್ತೆ ಜಗಳ ಆರಂಭಿಸಿದ ಪ್ರಶಾಂತ್​ ಸಂಬರಗಿ
ಪ್ರಶಾಂತ್ ಸಂಬರಗಿ
  • Share this:
ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಚರ್ಚೆಯಲ್ಲಿದ್ದ ಪ್ರಶಾಂತ್​ ಸಂಬರಗಿ ಸದ್ಯ ಬಿಗ್​ ಬಾಸ್ ಸೀಸನ್​ 8ರ ಸ್ಪರ್ಧಿಯಾಗಿದ್ದಾರೆ. ಕನ್ನಡ ಬಿಗ್​ ಬಾಸ್ ಮನೆಗೆ ಹೋದಾಗಿನಿಂದಲೂ ಒಂದಲ್ಲಾ ಒಂದು ವಿಷಯಕ್ಕೆ ಮನೆಯಲ್ಲಿರುವ ಸಹ ಸ್ಪರ್ಧಿಗಳೊಂದಿಗೆ ಜಗಳವಾಡುತ್ತಾ, ವೈಯಕ್ತಿ ವಿಷಯಗಳ ಕುರಿತಾಗಿ ಕಮೆಂಟ್​ ಮಾಡುತ್ತಾ ಇತರೆ ಸ್ಪರ್ಧಿಗಳ ಬಳಿ ಕ್ಷಮೆ ಕೇಳುತ್ತಾ ತನ್ನದೇ ಆದ ರೀತಿಯಲ್ಲಿ ಆಟವಾಡುತ್ತಾ ಇದ್ದಾರೆ. ಬಿಗ್​ ಬಾಸ್​ 8 ಆರಂಭವಾಗಿ 8 ವಾರಗಳಾಗಿದ್ದು, ನಾಮಿನೇಟ್​ ಆದ ಪ್ರತಿ ವಾರವೂ ಎಲಿಮಿನೇಷನ್​ನಿಂದ ಪಾರಾಗುತ್ತಾ ಬಂದಿದ್ದಾರೆ. ಮನೆಯಲ್ಲಿ ಆಗಾಗ ತುಪ್ಪ ಹಾಗೂ ಮೊಟ್ಟೆ ತಿನ್ನುವ ವಿಷಯದಿಂದಾಗಿ  ವಾಕ್ಸಮರ ನಡೆದು ಮನೆಯಲ್ಲಿ ಚರ್ಚೆಯ ವಿಷಯವಾಗಿರುವ ಪ್ರಶಾಂತ್ ಸಂಬರಗಿ  ವಿರುದ್ಧ ಮೆನಯಲ್ಲಿ ಹಲವರಿಗೆ ಅಸಮಾಧಾನವಿದೆ. ಅದರಲ್ಲೂ ಪ್ರಶಾಂತ್​ ಮಾತನಾಡುವ ಬರದಲ್ಲಿ ಸಹ ಸ್ಪರ್ಧಿಗಳ ವೈಯಕ್ತಿಕ ವಿಷಯಗಳ ಬಗ್ಗೆ ಮಾಡಿವ ಕಮೆಂಟ್​ ವಿಷಯಕಂತೂ ಮನೆಯ ಸ್ಪರ್ಧಿಗಳ ಜತೆಗೆ ಬಿಗ್​ ಬಾಸ್​ ವೀಕ್ಷಕರಿಗೂ ಬೇಸರವಿದೆ. 

ಮನೆಯಲ್ಲಿ ಮೊಟ್ಟೆ ತಿಂದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾಕ್ಸಮರದಲ್ಲಿ ಪ್ರಶಾಂತ್​ ಸಂಬರಗಿ ನಿಧಿ ಸುಬ್ಬಯ್ಯ ಅವರ ಚರಿತ್ರೆಯ ಬಗ್ಗೆ ಹೇಳುತ್ತೇನೆ ಎಂದು ಹೇಳಿದ್ದರು. ಈ ವಿಷಯದಿಂದ ನೊಂದು ಕಣ್ಣೀರಿಟ್ಟಿದ್ದ ನಿಧಿ ಸುಬ್ಬಯ್ಯ ಅವರಿಗೆ ಮನೆಯವರು ಸಮಾಧಾನಪಡಿಸಿದ್ದರು. ಅಲ್ಲದೆ ನಿಧಿ ಬಳಿ ಕ್ಷಮೆ ಕೇಳುವಂತೆಯೂ ಹೇಳಿದ್ದರು.

ಪ್ರಶಾಂತ್​ ಸಂಬರಗಿ


ಬಿಗ್​ ಬಾಸ್​ ಪ್ರೇಕ್ಷಕರೊಬ್ಬರು ವಾರಾಂತ್ಯದ ಕಾರ್ಯಕ್ರಮದಲ್ಲಿ ಪ್ರಶಾಂತ್​ ಸಂಬರಗಿ ಅವರಿಗೆ ಕರೆ ಮಾಡಿ, ಈ ಘಟನೆ ಬಗ್ಗೆ ಮಾತನಾಡಿ, ಪ್ರಶಾಂತ್​ ಸಂಬರಗಿ ಮಾಡಿದ್ದು ಸರಿಯಲ್ಲ, ನೀವು ಹೆಣ್ಣು ಮಕ್ಕಳನ್ನೇ ಟಾಗೆರ್ಟ್ ಮಾಡುತ್ತೀರಿ ಏಕೆ ಎಂದು ಪ್ರಶ್ನಿಸಿದ್ದರು. ನನಗೆ ಸ್ತ್ರೀ ವಿರೋಧ ಪಟ್ಟ ಕಟ್ಟಬೇಡಿ ಎಂದು ಮನವಿ ಮಾಡಿದ್ದ ಸಂಬರಗಿಯವರನ್ನು ನಂತರ ಕಳಪೆ ಆಟಗಾರ ಎಂದು ನಿರ್ಧರಿಸಲಾಯಿತು. ಈ ವಾರ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಪ್ರಶಾಂತ್ ಹಾಗೂ​ ನಿಧಿ ಅವರನ್ನು ಜೈಲಿನಲ್ಲಿ ಒಟ್ಟಿಗೆ ಇರಿಸಲಾಗಿತ್ತು. ಆಗ ಪ್ರಶಾಂತ್​ ಸಂಬರಗಿ ನಟಿ ನಿಧಿ ಅವರ ಬಳಿ ಕ್ಷಮೆ ಯಾಚಿಸುತ್ತಾರೆ.
ಮೊಟ್ಟೆ ವಿಷಯ ತಣ್ಣಗಾಗುತ್ತಿದ್ದಂತೆಯೇ ಪ್ರಶಾಂತ್​ ಸಂಬರಗಿ ಮನೆಯಲ್ಲಿ ಮತ್ತೆ ಹೊಸದಾಗಿ ಜಗಳ ಆರಂಭಿಸಿದ್ದಾರೆ. ಯಾವ ಸ್ಥಾನಕ್ಕೆ ಯಾರು ಯೋಗ್ಯ ಟಾಸ್ಕ್​ನಲ್ಲಿ ಮನೆಯಲ್ಲಿರುವ ಸ್ಪರ್ಧಿಗಳು ಒಮ್ಮತದಿಂದ 1-12ರಲ್ಲಿ ಯಾವ ಸ್ಥಾನಕ್ಕೆ ಯಾರು ಯೋಗ್ಯ ಎಂದು ನಿರ್ಧರಿಸಬೇಕು. ಪ್ರಶಾಂತ್ ಅವರಿಗೆ ಈ ಟಾಸ್ಕ್​ನಲ್ಲಿ ಇತರೆ ಸ್ಪರ್ಧಿಗಳು 5ನೇ ಸ್ಥಾನ ನೀಡುತ್ತಾರೆ. ಈ ವಿಷಯವಾಗಿಯೇ ಪ್ರಶಾಂತ್​ ಮಂಜು ಪಾವಗಡ ಹಾಗೂ ಅವರಿಂದ್​ ಜತೆ ವಾಕ್ಸಮರಕ್ಕೆ ಇಳಿಯುತ್ತಾರೆ. 
 

 

 


View this post on Instagram


 

 

 

 

A post shared by Parameshwar Gundkal (@parameshwargundkal)


ಪ್ರಶಾಂತ್ ಸಂಬರಗಿ ಅವರಿಗೆ ಯಾರೆಲ್ಲ ಸೇರಿ 5ನೇ ಸ್ಥಾನ ಕೊಟ್ಟರು. ನಂತರ ಅಲ್ಲಿ ನಡೆದ ಮಾತುಕತೆಯಾದರೂ ಏನು..? ಪ್ರಶಾಂತ್​ ಸಂಬರಗಿ, ಮಂಜು ಪಾವಗಡ ಹಾಗೂ ಅರವಿಂದ್​ ನಡುವೆ ವಾಕ್ಸಮರ ನಡೆಯಲು ನಿಖರ ಕಾರಣ ಏನೆಂದು ತಿಳಿಯಲು ಇಂದಿನ ಬಿಗ್​ ಬಾಸ್​ ಸಂಚಿಕೆಯನ್ನು ನೋಡಬೇಕು.

ಇದನ್ನೂ ಓದಿ: Kavyashree Gowda: ತುಂಡುಡುಗೆ ತೊಟ್ಟು ಮಾಡರ್ನ್ ಲುಕ್​ನಲ್ಲಿ ಮಿಂಚಿದ ಮಂಗಳ ಗೌರಿ

ಇನ್ನು ರಾಜೀವ್​ ಅವರು ಮನೆಯಿಂದ ಹೊರ ನಡೆದ ನಂತರ ಬಿಗ್​ ಬಾಸ್​ ಮನೆಯಲ್ಲೂ ಮೂರು ಗುಂಪುಗಳಾಗಿವೆ. ರಾಜೀವ್​ ಎಲಿಮಿನೇಟ್​ ಆದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲೂ ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ. ಕಳೆದ ಭಾನುವಾರದಿಂದ ನೆಟ್ಟಿಗರು ಬಿಗ್​​ ಬಾಸ್​ ಮನೆಯಲ್ಲಿ ಕಳಪೆ ಪ್ರದರ್ಶನ ತೋರುವ ಸ್ಪರ್ಧಿಗಳು ಇರುವಾಗ ರಾಜೀವ್​ನಂತಹ ಉತ್ತಮ ಆಟಗಾರ ಮನೆಯಿಂದ ಹೊರ ಬರಬಾರದಿತ್ತು ಎನ್ನುತ್ತಿದ್ದಾರೆ.
Published by: Anitha E
First published: April 27, 2021, 6:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories