HOME » NEWS » Entertainment » KANNADA BIGG BOSS 8 KICHCHA SUDEEP PROMO VIDEO RELEASED BY COLORS KANNADA SESR

BiggBoss Promo: ಬಿಡುಗಡೆಯಾಯ್ತು ಬಿಗ್​ಬಾಸ್​ ಪ್ರೋಮೋ; ಶೀಘ್ರದಲ್ಲಿಯೇ ದೊಡ್ಮನೆಗೆ ಕಿಚ್ಚನ ಎಂಟ್ರಿ

ಕೊರೋನಾ ಸೋಂಕಿನಿಂದ ಇಡೀ ದೇಶವೇ ಅನ್​ಲಾಕ್​ ಆಗುತ್ತಿರುವ ಸಮಯದಲ್ಲಿ ಬಿಗ್​ ಬಾಸ್​ ಮನೆಯೊಳಗೆ ಅಭ್ಯರ್ಥಿಗಳು ಲಾಕ್​ ಆಗುತ್ತಿದ್ದಾರೆ.

news18-kannada
Updated:January 28, 2021, 6:40 PM IST
BiggBoss Promo: ಬಿಡುಗಡೆಯಾಯ್ತು ಬಿಗ್​ಬಾಸ್​ ಪ್ರೋಮೋ; ಶೀಘ್ರದಲ್ಲಿಯೇ ದೊಡ್ಮನೆಗೆ ಕಿಚ್ಚನ ಎಂಟ್ರಿ
ಸುದೀಪ್​
  • Share this:
ಕೊರೋನಾ ಸೋಂಕಿನಿಂದಾಗಿ ಈ ಬಾರಿ ಬಿಗ್​ ಬಾಸ್​ ತಡವಾಗಿದೆ. ತಡವಾದಷ್ಟು ಬಿಗ್​ ಬಾಸ್​ ಇನ್ನಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರುವ ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದೆ. ಈ ಮೂಲಕ ಬಿಗ್​ ಬಾಸ್​ ಸೀಸನ್​ 8 ಮುಂದಿನ ತಿಂಗಳಿನಿಂದ ಆರಂಭವಾಗುವ ಸೂಚನೆಗೆ ಉತ್ತರ ಸಿಕ್ಕಿದೆ. ಇನ್ನು ಈಗಾಗಲೇ ಯಾರೆಲ್ಲಾ ಅಭ್ಯರ್ಥಿಗಳು ಬಿಗ್​ ಬಾಸ್​ ಮನೆಗೆ ಲಗ್ಗೆ ಇಡಬಹುದು ಎಂಬ ಕುರಿತು ಉಹಾಪೋಹಾಗಳು ಹೆಚ್ಚಿದ್ದು, ಇದಕ್ಕೆಲ್ಲಾ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ. ಇನ್ನು ಕಳೆದವಾರವಷ್ಟೆ ಬಿಗ್​ ಬಾಸ್​ ಬಗ್ಗೆ ನಟ ಕಿಚ್ಚ ಸುದೀಪ್​ ಸುಳಿವು ನೀಡಿದ್ದರು. ಈ ಸಂಬಂಧ ಕಲರ್ಸ್​ ಕನ್ನಡ ವಾಹಿನಿ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಂಚಿಕೊಂಡಿದ್ದರು. ಇದೀಗ ಬಿಗ್​ಬಾಸ್​ ಸೀಸನ್​8ರ ಪ್ರೋಮೋ ಬಿಡುಗಡೆಯಾಗಿದೆ.



ಕೊರೋನಾ ಸೋಂಕಿನಿಂದ ಇಡೀ ದೇಶವೇ ಅನ್​ಲಾಕ್​ ಆಗುತ್ತಿರುವ ಸಮಯದಲ್ಲಿ ಬಿಗ್​ ಬಾಸ್​ ಮನೆಯೊಳಗೆ ಅಭ್ಯರ್ಥಿಗಳು ಲಾಕ್​ ಆಗುತ್ತಿದ್ದಾರೆ. ಈ ಲಾಕ್​ ಆಗುತ್ತಿರುವ ಅಭ್ಯರ್ಥಿಗಳು ಯಾರು ಎಂಬ ಕುತೂಹಲ ಪ್ರೇಕ್ಷಕರಲಿದೆ.




ಇನ್ನು ಈ ಬಾರಿಯ ಬಿಗ್​ ಬಾಸ್​ ಸೀಸನ್​ 8ರಲ್ಲಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊರೋನಾ ಸೋಂಕಿನ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಕಾರ್ಯಕ್ರಮ ನಡೆಸುವ ಹೊಣೆ ಕೂಡ ಇರುವ ಹಿನ್ನಲೆ ಸಾಮಾನ್ಯರಿಗೆ ಪ್ರವೇಶ ಈ ಬಾರಿ ಸಿಗುವುದು ಅನುಮಾನ ಎನ್ನಲಾಗಿದೆ.

ಇದರ ಹೊರತಾಗಿ ವಿವಾದ ಸೃಷ್ಟಿಸಿ ಹೆಸರು ಪಡೆದ ಡ್ರೋನ್​ ಪ್ರತಾಪ್​, ಸೋನು ಸೇರಿದಂತೆ ಹಲವರು ಈ ಬಾರಿ ಬಿಗ್​ಬಾಸ್​ ಮನೆಯಲ್ಲಿ ಲಾಕ್​ ಆಗಲಿದ್ದಾರೆ ಎನ್ನಲಾಗಿದೆ. ಈ ಅಂತೆ ಕಂತೆಗಳಿಗೆಲ್ಲಾ ಕೆಲವೇ ದಿನದಲ್ಲಿ ಉತ್ತರ ಸಿಗಲಿದ್ದು, ಪ್ರೇಕ್ಷಕರಿಗೂ ಭರಪೂರ ಮನರಂಜನೆ ಸಿಗಲಿದೆ.
Published by: Seema R
First published: January 28, 2021, 6:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories