ಸಂಗೀತ ನಿರ್ದೇಶಕ ವಾಸುಕಿ ವೈಭವ್ ಬಹುಮುಖ ಪ್ರತಿಭೆ. ಸಂಗೀತ ನಿರ್ದೇಶನ, ಗಾಯನ, ಗೀತ ಸಾಹಿತಿ, ರಂಗಭೂಮಿ ಕಲಾವಿದ, ನಟ, ಮಾತ್ರವಲ್ಲ ರಿಯಾಲಿಟಿ ಶೋ ಬಿಗ್ಬಾಸ್ನಲ್ಲಿ ಮಿಂಚಿರುವ ಸ್ಮಾಲ್ ಸ್ಕ್ರೀನ್ ಸ್ಟಾರ್ ಕೂಡ ಹೌದು. ಇಂತಹ ವಾಸುಕಿ ವೈಭವ್ ಈಗ ನಾಲ್ಕು ವರ್ಷಗಳ ಬಳಿಕ ಮತ್ತೆ ಬಿಗ್ ಸ್ಕ್ರೀನ್ಗೆ ನಟನಾಗಿ ಮರಳಿದ್ದಾರೆ.
ಹೌದು, ರಾಮಾ ರಾಮಾ ರೇ ಚಿತ್ರದ ಮೂಲಕ 2016ರಲ್ಲಿ ಸ್ಯಾಂಡಲ್ವುಡ್ ಡೆಬ್ಯೂ ಮಾಡಿದ ವಾಸುಕಿ ವೈಭವ್ ಮೂರು ಹಾಡುಗಳನ್ನು ಕಂಪೋಸ್ ಮಾಡಿ, ಹಾಡಿದ್ದರು. ಸಿನಿಮಾ ಜೊತೆಗೆ ಹಾಡುಗಳೂ ಹಿಟ್ ಲಿಸ್ಟ್ ಸೇರಿದವು. ಆ ಬಳಿಕ 2018ರಲ್ಲಿ ಚೂರಿಕಟ್ಟೆ, ಒಂದಲ್ಲಾ ಎರಡಲ್ಲಾ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರಗಳಿಗೂ ಮ್ಯೂಸಿಕ್ ಡೈರೆಕ್ಟ್ ಮಾಡಿದ್ದರು. ವಿಶೇಷ ಅಂದರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರದ ಸಂಗೀತಕ್ಕೆ ಅವರಿಗೆ 66ನೇ ಸಾಲಿನ ಫಿಲ್ಮ್ಫೇರ್ ಸೌತ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯೂ ಒಲಿದು ಬಂದಿತ್ತು. ಆ ಬಳಿಕ ಭಿನ್ನ, ಮುಂದಿನ ನಿಲ್ದಾಣ, ಕಥಾ ಸಂಗಮ, ಲಾ, ಫ್ರೆಂಚ್ ಬಿರಿಯಾನಿ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದರು ವಾಸುಕಿ ವೈಭವ್.
ಇದನ್ನೂ ಓದಿ:ಬೆಂಗಳೂರಿನ ಅಕ್ಕ-ಪಕ್ಕದಲ್ಲೇ ಇವೆ ಬೆಸ್ಟ್ ಟ್ರೆಕ್ಕಿಂಗ್ ಪ್ಲೇಸ್ಗಳು; ವೀಕೆಂಡ್ನಲ್ಲಿ ಹೋಗಿ ಎಂಜಾಯ್ ಮಾಡಿ..!
ಹಾಗಂತ ಕೇವಲ ಸಂಗೀತ ನಿರ್ದೇಶನಕ್ಕೆ ಮಾತ್ರ ಸೀಮಿತವಾಗಿರದೇ ಊರ್ವಿ, ಶುದ್ಧಿ ಎಂಬ ಎರಡು ಸಿನಿಮಾಗಳಲ್ಲಿ ವಾಸುಕಿ ವೈಭವ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದರು. ಇನ್ನು ಕಳೆದ ಬಿಗ್ಬಾಸ್ ಸೀಸನ್ 7ರಲ್ಲಿ ಎರಡನೇ ರನ್ನರ್ ಅಪ್ ಆಗಿ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದರು ವಾಸುಕಿ ವೈಭವ್. ಇಂತಹ ವಾಸುಕಿ ಈಗ ಮತ್ತೆ ಆನ್ಸ್ಕ್ರೀನ್ ಮಿಂಚಲು ರೆಡಿಯಾಗಿದ್ದಾರೆ. ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶಿಸುತ್ತಿರುವ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಲಾ ಮತ್ತು ಫ್ರೆಂಚ್ ಬಿರಿಯಾನಿ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ನಿರ್ಮಾಣ ಸಂಸ್ಥೆಯ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರಕ್ಕೆ ವಾಸುಕಿ ಸಂಗೀತ ನೀಡುತ್ತಿದ್ದಾರೆ. ಪಿಆರ್ಕೆ ಪ್ರೊಡಕ್ಷನ್ಸ್ ಜೊತೆಗೆ ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಸೇರಿ ತಯಾರಿಸುತ್ತಿರುವ ಚಿತ್ರ ಈ ಮ್ಯಾನ್ ಆಫ್ ದಿ ಮ್ಯಾಚ್.
ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ವಾಸುಕಿ ವೈಭವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಹಾಡಿ, ಕುಣಿದಿದ್ದಾರೆ. ನೃತ್ಯ ನಿರ್ದೇಶನವನ್ನು ಖುದ್ದು ನಿರ್ದೇಶಕ ಡಿ. ಸತ್ಯಪ್ರಕಾಶ್ ಅವರೇ ಮಾಡಿದ್ದಾರೆ. ಚಿತ್ರದ ವಸ್ತು ವಿಷಯವನ್ನು ತಿಳಿಸುವ ಈ ಹಾಡಿಗೆ ಯೋಗರಾಜ್ ಭಟ್ ಮತ್ತು ಸತ್ಯಪ್ರಕಾಶ್ ಜಂಟಿಯಾಗಿ ಸಾಹಿತ್ಯ ಬರೆದಿದ್ದಾರೆ. ಇತ್ತೀಚೆಗಷ್ಟೇ ಈ ಹಾಡಿನ ಚಿತ್ರೀಕರಣ ಮುಗಿದಿದ್ದು, ಆ ಮೂಲಕ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಹಾಗೇ ಡಬ್ಬಿಂಗ್ ಕೂಡ ಜೊತೆ ಜೊತೆಗೆ ಪೂರ್ಣಗೊಂಡಿದ್ದು, ಸದ್ಯ ರಿಲೀಸ್ಗೆ ರೆಡಿಯಾಗುತ್ತಿದೆ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರ.
ಇದನ್ನೂ ಓದಿ:ಮಂತ್ರಿಮಂಡಲ ರಚನೆಗೆ ನಾನು ಮಧ್ಯಪ್ರವೇಶ ಮಾಡಲ್ಲ ಎಂದರೂ ಬಿಎಸ್ವೈ ಭೇಟಿಗೆ ಬರುತ್ತಿರುವ ಶಾಸಕರು
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ