ಬಿಗ್​ಬಾಸ್​ನಲ್ಲಿರುವ ಸ್ತ್ರೀಲೋಲ ಯಾರು?; ವಾರದ ಕತೆಯಲ್ಲಿ ಸುದೀಪ್​ ಮುಂದೆಯೇ ಬಯಲಾಯ್ತು ಆ ಸತ್ಯ

Bigg Boss Kannada 7 Updates: ಸ್ತ್ರೀಲೋಲ ಬಿರುದನ್ನು ಬಿಗ್​ಬಾಸ್​ ಮನೆಯಲ್ಲಿ ಮೊದಲಿನಿಂದಲೂ ಹುಡುಗಿಯರ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶೈನ್ ಶೆಟ್ಟಿಗೆ ಎಲ್ಲ ಹುಡುಗಿಯರೂ ನೀಡಬಹುದು ಎಂದು ನೀವು ಅಂದುಕೊಂಡಿದ್ದರೆ ಆ ಊಹೆ ತಪ್ಪು.

Sushma Chakre | news18-kannada
Updated:November 9, 2019, 9:02 PM IST
ಬಿಗ್​ಬಾಸ್​ನಲ್ಲಿರುವ ಸ್ತ್ರೀಲೋಲ ಯಾರು?; ವಾರದ ಕತೆಯಲ್ಲಿ ಸುದೀಪ್​ ಮುಂದೆಯೇ ಬಯಲಾಯ್ತು ಆ ಸತ್ಯ
ಈಗಾಗಲೇ ಬಿಗ್ ಬಾಸ್ ಮನೆಯಿಂದ ಐವರು ಸ್ಪರ್ಧಿಗಳು ಹೊರ ಬಂದಿದ್ದಾರೆ. ಖ್ಯಾತ ಪತ್ರಕರ್ತ ರವಿ ಬೆಳಗೆರೆ ಆತಿಥ್ಯ ಮುಗಿಸಿ ಮೊದಲ ವಾರ ಹೊರಬಂದರೆ...
  • Share this:
ಬಿಗ್​ಬಾಸ್​ ಮನೆಯಿಂದ ಇಂದು 7 ಜನರಲ್ಲಿ ಯಾರು ಹೊರಹೋಗಲಿದ್ದಾರೆ ಎಂಬ ಕುತೂಹಲಕ್ಕೆ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಉತ್ತರ ಸಿಗಲಿದೆ. ಇಂದು ಪ್ರಸಾರವಾಗುವ ಈ ಎಪಿಸೋಡ್​ನಲ್ಲಿ ಬಿಗ್​ಬಾಸ್​ನ ಮಹಿಳಾ ಸ್ಪರ್ಧಿಗಳು ಅಚ್ಚರಿಯ ಸಂಗತಿಯೊಂದನ್ನು ಸುದೀಪ್ ಮುಂದೆ ತೆರೆದಿಟ್ಟಿದ್ದಾರೆ.

ಈಗಾಗಲೇ ಬಿಗ್​ಬಾಸ್​ ಮನೆಯಿಂದ ಮೂವರು ಸ್ಪರ್ಧಿಗಳು ಹೊರನಡೆದಿದ್ದಾರೆ. ಮೊದಲ ವಾರ ಗುರುಲಿಂಗ ಸ್ವಾಮಿ ಹಾಗೂ ರವಿ ಬೆಳಗೆರೆ ಬಿಗ್​ಬಾಸ್​ ಮನೆಯಿಂದ ಹೊರ ನಡೆದಿದ್ದರು. 2ನೇ ವಾರ ನಿರೂಪಕಿ ಚೈತ್ರಾ ವಾಸುದೇವನ್ ಎಲಿಮಿನೇಟ್ ಆಗಿದ್ದರು. ಕಳೆದ ವಾರ ದುನಿಯಾ ರಶ್ಮಿ ದೊಡ್ಡ ಮನೆಯಿಂದ ಹೊರನಡೆದಿದ್ದರು.ಈ ವಾರ ಒಟ್ಟು 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕಿರುತೆರೆ ನಟಿಯರಾದ ಭೂಮಿ ಶೆಟ್ಟಿ, ಪ್ರಿಯಾಂಕಾ, ದೀಪಿಕಾ ದಾಸ್, ಶೈನ್ ಶೆಟ್ಟಿ, ಬರಹಗಾರ್ತಿ ಚೈತ್ರಾ ಕೋಟೂರ್, ನಟರಾದ ಚಂದನ್ ಆಚಾರ್ ಹಾಗೂ ರಾಜು ತಾಳೀಕೋಟೆ ಈ ವಾರ ನಾಮಿನೇಟ್ ಆಗಿದ್ದಾರೆ.

Kannada Bigg Boss 7 Elimination: ಯಾರು ಹಿತವರು ನಿಮಗೆ ಈ ಏಳರೊಳಗೆ?; ಬಿಗ್​ಬಾಸ್​ ಮನೆಯಲ್ಲಿ ಈ ವಾರ ಹೊರ ಹೋಗೋರು ಯಾರು?

ಇಂದು 'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡ್​ನಲ್ಲಿ ಬಿಗ್​ಬಾಸ್​ ಮನೆಯಲ್ಲಿರುವ ಒಬ್ಬೊಬ್ಬ ಸ್ಪರ್ಧಿಗಳ ಹೆಸರನ್ನೂ ಹೇಳುವ ಕಿಚ್ಚ ಸುದೀಪ್ ಅವರಿಗೆ ಮನೆಯಲ್ಲಿದ್ದವರು ಯಾವ ಬಿರುದು ನೀಡುತ್ತೀರಿ? ಎಂದು ಕೇಳುತ್ತಾರೆ. ಸ್ತ್ರೀಲೋಲ ಬಿರುದನ್ನು ಬಿಗ್​ಬಾಸ್​ ಮನೆಯಲ್ಲಿ ಮೊದಲಿನಿಂದಲೂ ಹುಡುಗಿಯರ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶೈನ್ ಶೆಟ್ಟಿಗೆ ಎಲ್ಲ ಹುಡುಗಿಯರೂ ನೀಡಬಹುದು ಎಂದು ನೀವು ಅಂದುಕೊಂಡಿದ್ದರೆ ಆ ಊಹೆ ತಪ್ಪು.ಯಾಕೆಂದರೆ, ಬಿಗ್​ಬಾಸ್​ ಸ್ಪರ್ಧಿಗಳಾದ ಭೂಮಿ ಶೆಟ್ಟಿ, ದೀಪಿಕಾ ದಾಸ್, ಪ್ರಿಯಾಂಕಾ, ಚೈತ್ರಾ ಕೋಟೂರ್, ಚಂದನಾ ಬೇರೆಯದೇ ಉತ್ತರ ನೀಡಿದ್ದಾರೆ. ಹರೀಶ್ ರಾಜ್​ಗೆ ಯಾವ ಬಿರುದು ನೀಡುತ್ತೀರಿ? ಎಂದು ಭೂಮಿ ಶೆಟ್ಟಿ ಬಳಿ ಕಿಚ್ಚ ಸುದೀಪ್ ಕೇಳುತ್ತಾರೆ. ಆಗ ಒಂದು ಕ್ಷಣವೂ ಯೋಚಿಸದೆ 'ಫ್ಲರ್ಟೇಶ್' ಎಂಬ ಬಿರುದು ನೀಡುತ್ತೇನೆ ಎಂದು ಭೂಮಿ ಶೆಟ್ಟಿ ಹೇಳುತ್ತಾರೆ.

ಅದಕ್ಕೆ ಧ್ವನಿಗೂಡಿಸುವ ದೀಪಿಕಾ ದಾಸ್ 'ಸ್ತ್ರೀಲೋಲ' ಎಂದರೆ ಇನ್ನೂ ಸರಿಯಾಗಿರುತ್ತದೆ ಎಂದು ಹರೀಶ್ ರಾಜ್​ಗೆ ಸ್ತ್ರೀಲೋಲ ಎಂಬ ಬಿರುದು ನೀಡುತ್ತಾರೆ. ಅದಕ್ಕೆ ಬೇರೆ ಮಹಿಳಾ ಸ್ಪರ್ಧಿಗಳೂ ಧ್ವನಿಗೂಡಿಸುತ್ತಾರೆ. ಹರೀಶ್​ ರಾಜ್​ಗೆ ಯಾಕೆ ಸ್ತ್ರೀಲೋಲ ಎಂದು ಕರೆದರು ಎಂಬ ಪ್ರಶ್ನೆಗೆ ಇಂದಿನ ಎಪಿಸೋಡ್​ನಲ್ಲಿ ಉತ್ತರ ಸಿಗಲಿದೆ.
First published: November 9, 2019, 9:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading