Kannada Bigg Boss 8: ಬುಧವಾರದಿಂದ ಬಿಗ್​ ಬಾಸ್ 8ರ 2ನೇ ಇನ್ನಿಂಗ್ಸ್​ ಆರಂಭ: ಕಾರ್ಯಕ್ರಮದಲ್ಲಿ ಹೊಸ ಟ್ವಿಸ್ಟ್​..!

ಕಲರ್ಸ್​ ಕನ್ನಡದವರು ಹೊಸ ಪ್ರೋಮೋ ರಿಲೀಸ್​ ಮಾಡಿದ್ದು, ಅದರಲ್ಲಿ ಕಾರ್ಯಕ್ರಮದ ಪ್ರಸಾರದ ದಿನಾಂಕದ ಜೊತೆ ಸಮಯವನ್ನೂ ತಿಳಿಸಲಾಗಿದೆ. ಜೊತೆಗೆ ಕಾರ್ಯಕ್ರಮದಲ್ಲಿ ಹೊಸ ಟ್ವಿಸ್ಟ್​ ಇರಲಿದೆ ಅನ್ನೋದಕ್ಕೆ ಒಂದು ಸುಳಿವು ಸಿಕ್ಕಿದೆ.

ಬಿಗ್ ಬಾಸ್ 8ರ ಎರಡನೇ ಇನ್ನಿಂಗ್ಸ್​

ಬಿಗ್ ಬಾಸ್ 8ರ ಎರಡನೇ ಇನ್ನಿಂಗ್ಸ್​

  • Share this:
ಲಾಕ್​ಡೌನ್​ನಿಂದಾಗಿ ಅರ್ಧಕ್ಕೆ ರದ್ದಾಗಿದ್ದ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್​ 8 ಮತ್ತೆ ಆರಂಭವಾಗುತ್ತಿದೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುವ ಬಿಗ್​ ಬಾಸ್​ 8 ಕಾರ್ಯಕ್ರಮದ 2ನೇ ಇನ್ನಿಂಗ್ಸ್​​ ಬುಧವಾರದಿಂದ ಆರಂಭವಾಗಲಿದೆ. ಹೌದು, ಜೂನ್​ 23ರಿಂದ ಬಿಗ್​ ಬಾಸ್​ 8ರ ಎರಡನೇ ಇನ್ನಿಂಗ್ಸ್​ಗೆ ಕಿಕ್​ ಸ್ಟಾರ್ಟ್​ ಸಿಗಲಿದೆ. 12 ಮಂದಿ ಸ್ಪರ್ಧಿಗಳ ಜೊತೆಯಲ್ಲಿ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಸಖತ್​ ಟ್ವಿಸ್ಟ್​ ಹಾಗೂ ಟರ್ನ್​ಗಳಿರಲಿವೆಯಂತೆ. ಬಿಗ್​ ಬಾಸ್​ ನೋಡಲು ಸಾಕಷ್ಟು ಮಂದಿ ವೀಕ್ಷಕರು ಕಾತರರಾಗಿದ್ದು, ಬಿಗ್ ಬಾಸ್ 2ನೇ ಇನ್ನಿಂಗ್​ ಆರಂಭವಾಗಲಿರುವ ವಿಷಯ ತಿಳಿದಾಗಿನಿಂದ  ಪ್ರಸಾರದ ಕ್ಷಣಕ್ಕಾಗಿ  ಅಭಿಮಾನಿಗಳು ಕಾಯುತ್ತಿದ್ದಾರೆ. ಅಭಿಮಾನಿಗಳ ಅರ್ವಿಯಾ ಜೋಡಿ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​, ಚಕ್ರವರ್ತಿ ಚಂದ್ರಚೂಡ್​, ರಘು, ಶಮಂತ್​ ಗೌಡ, ವೈಷ್ಣವಿ ಗೌಡ, ಶುಭಾ ಪೂಂಜಾ ಹಾಗೂ ಪ್ರಶಾಂತ್​ ಸಂಬರಗಿ ಮತ್ತೆ ಬಿಗ್​ ಬಾಸ್​ ಮನೆಗೆ ಕಾಲಿಡಲಿದ್ದಾರೆ. 

ಬಿಗ್​ ಬಾಸ್​ ಸೀಸನ್​ 8ರ 2ನೇ ಇನ್ನಿಂಗ್ಸ್​ ಬುಧವಾರ ಸಂಜೆ 6ಕ್ಕೆ ಆರಂಭವಾಗಲಿದೆ. ಮೊದಲ ದಿನದ ಮಹಾ ಸಂಚಿಕೆ ಜೂನ್​ 23ಕ್ಕೆ ಆರಂಭವಾಗಲಿದ್ದು, ಈ ಸಲ ಸಾಕಷ್ಟು ಹೊಸ ಟ್ವಿಸ್ಟ್​ ಇರಲಿದೆಯಂತೆ.
ಕಲರ್ಸ್​ ಕನ್ನಡದವರು ಹೊಸ ಪ್ರೋಮೋ ರಿಲೀಸ್​ ಮಾಡಿದ್ದು, ಅದರಲ್ಲಿ ಕಾರ್ಯಕ್ರಮದ ಪ್ರಸಾರದ ದಿನಾಂಕದ ಜೊತೆ ಸಮಯವನ್ನೂ ತಿಳಿಸಲಾಗಿದೆ. ಜೊತೆಗೆ ಕಾರ್ಯಕ್ರಮದಲ್ಲಿ ಹೊಸ ಟ್ವಿಸ್ಟ್​ ಇರಲಿದೆ ಅನ್ನೋದಕ್ಕೆ ಒಂದು ಸುಳಿವು ಸಿಕ್ಕಿದೆ.

ಇದನ್ನೂ ಓದಿ: ಮತ್ತದೇ ಟಾಲಿವುಡ್​ ನಟನ ಜೊತೆ ತೆರೆ ಹಂಚಿಕೊಳ್ಳಲಿರುವ ರಶ್ಮಿಕಾ ಮಂದಣ್ಣ..!

ಹೌದು, ಪ್ರೋಮೋದಲ್ಲಿ ಒಂದು ಪ್ರಶ್ನೆ ಕೇಳಲಾಗಿದೆ. ಅಂದರೆ ಅರ್ಧಕ್ಕೆ ನಿಂತಿದ್ದ ಕನಸು ಮುಂದುವರೆಯುತ್ತಾ ಅಥವಾ ಹೊಸ ಕನಸು ಶುರುವಾಗುತ್ತಾ ಎಂದು ಹೇಳಲಾಗಿದೆ. ಇದರ ಅರ್ಥ ಈ ಕಾರ್ಯಕ್ರಮದಲ್ಲಿಮತ್ತೆ ಹಳೇ ಸ್ಪರ್ಧಿಗಳು ಮರು ಪ್ರವೇಶ ಪಡೆದರೆ ಆಶ್ಚರ್ಯ ಪಡಬೇಕಿಲ್ಲ.

ಹೌದು, ಈ ಹಿಂದೆ ಮನೆಯಿಂದ ಹೊರ ನಡೆದಿದ್ದ ರಾಜೀವ್​ ಹನು, ಗಾಯಕ ವಿಶ್ವನಾಥ್ ಅವರು ಮನೆಯಿಂದ ಹೊರ ನಡೆದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್​ ಗೈರಾಗಿದ್ದಾರು. ಸುದೀಪ್​ ಅವರು ಅನಾರೋಗ್ಯದಿಂದಾಗಿ ಕಡೆಯ ಕೆಲವು ಸಂಚಿಕೆಯ ನಿರೂಪಣೆ ಮಾಡಿರಲಿಲ್ಲ. ಹೀಗಾಗಿಯೇ ಈ ಸಲದ ಬಿಗ್ ಬಾಸ್​ ಕಾರ್ಯಕ್ರಮದಲ್ಲಿ ಸಾಕಷ್ಟು ಟ್ವಿಸ್ಟ್​ಗಳು ಇರಲಿವೆಯಂತೆ.

ಇದನ್ನೂ ಓದಿ: Yoga Day 2021: ನಿತ್ಯ ಯೋಗ ಮಾಡುತ್ತಲೇ ಯುವತಿಯರಿಗೆ ಸೆಡ್ಡು ಹೊಡೆಯುತ್ತಿರುವ ನಟಿಯರು..!

ಇನ್ನು ರಾಜೀವ್​ ಮನೆಯಿಂದ ಹೊರ ನಡೆದಾಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ಕೇಳಿಬಂದಿತ್ತು. ಪ್ರಬಲ ಸ್ಪಧಿಯಾಗಿದ್ದ ರಾಜೀವ್​ ಮನೆಯಿಂದ ಹೊರ ಬರಬಾರದಿತ್ತು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ಈಗ ಮತ್ತೆ ರಾಜೀವ್​ ಮನೆಯೊಳಗೆ ಬರಲಿ ಅಂತ ಅಭಿಮಾನಿಗಳು ಒತ್ತಾಯಿಸಲು ಆರಂಭಿಸಿದ್ದಾರೆ.

ಇನ್ನು ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರನ್ನು ನೋಡಲು ಸಾಕಷ್ಟು ಮಂದಿ ಕಾತರರಾಗಿದ್ದಾರೆ. ಈ ಕ್ಯೂಟ್​ ಜೋಡಿಯ ಫೋಟೋಗಳು ಮತ್ತೆ ಸಾಮಾಜಿಕ ಜಾಳತಾಣದಲ್ಲಿ ವೈರಲ್​ ಆಗಲಾರಂಭಿಸಿವೆ.

ಬಿಗ್​ ಬಾಸ್​ 8 ಅರ್ಧಕ್ಕೆ ನಿಂತ ವಿಚಾರ ವೀಕ್ಷಕರಿಗೆ ತುಂಬಾ ನಿರಾಸೆ ಮೂಡಿಸಿತ್ತು. ಕೊರೋನಾ ಆರ್ಭದ ನಡುವೆಯೂ ಬಿಗ್​ ಬಾಸ್​ ಸೀಸನ್​ 8 ಪ್ರಸಾರವಾಗುತ್ತಿತ್ತು. ಯಾವುದೇ ಅಡ್ಡಿ ಆತಂಕ ಇಲ್ಲದೆ ಕಾರ್ಯಕ್ರಮವನ್ನು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಡೆಸಿಕೊಂಡು ಹೋಗಲಾಗುತ್ತಿತ್ತು. ಆದರೆ ಕೊರೋನಾ ಎರಡನೇ ಅಲೆ ಆರಂಭವಾದಾಗಿನಿಂದ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು. ಈ ಕಾರಣದಿಂದ ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್​ಡೌನ್​ ಜಾರಿಗೆ ತರಲಾಯಿತು. ಈ ವೇಳೆ ಶೂಟಿಂಗ್​ ಮಾಡಲು ನಿಷೇಧ ಹೇರಿದ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗಿತ್ತು. ಒಟ್ಟು ನೂರು ದಿನಗಳು ನಡೆಯುವ ಕಾರ್ಯಕ್ರಮ 72 ದಿನಕ್ಕೆ ಅಂತ್ಯಗೊಂಡಿತ್ತು. ಈಗ ಈ ಕಾರ್ಯಕ್ರಮವನ್ನು ಹೊಸದಾಗಿ ಆರಂಭಿಸಲು ಕಲರ್ಸ್​ ವಾಹಿನಿ ಸಿದ್ಧತೆ ಮಾಡಿಕೊಂಡಿದೆ.
Published by:Anitha E
First published: