• Home
  • »
  • News
  • »
  • entertainment
  • »
  • Big Boss Sanya: ಬಿಗ್ ಬಾಸ್ ಸಾನ್ಯಾ ಡೈರೆಕ್ಟ್ ನಾಮಿನೇಷನ್! ಕ್ಯಾಪ್ಟನ್ ಏನಂದ್ರು?

Big Boss Sanya: ಬಿಗ್ ಬಾಸ್ ಸಾನ್ಯಾ ಡೈರೆಕ್ಟ್ ನಾಮಿನೇಷನ್! ಕ್ಯಾಪ್ಟನ್ ಏನಂದ್ರು?

ಸಾನ್ಯಾ ನೇರ ನಾಮಿನೇಷನ್ ಆಗಿದ್ಯಾಕೆ? ಕ್ಯಾಪ್ಟನ್ ದೀಪಿಕಾ ಕೊಟ್ಟ ಕಾರಣಗಳೇನು ?

ಸಾನ್ಯಾ ನೇರ ನಾಮಿನೇಷನ್ ಆಗಿದ್ಯಾಕೆ? ಕ್ಯಾಪ್ಟನ್ ದೀಪಿಕಾ ಕೊಟ್ಟ ಕಾರಣಗಳೇನು ?

ಓಪನ್ ನಾಮಿನೇಷನ್ ಪ್ರಕ್ರಿಯೆ ಮುಗಿದ ಮೇಲೆ ಮನೆಯ ಐದು ಜನರ ಹೆಸರನ್ನ ಬಿಗ್ ಬಾಸ್ ತೆಗೆದುಕೊಂಡರು. ಈ ಐವರಲ್ಲಿ ಇರೋ ಹೆಸರು ಯಾರದು ಗೊತ್ತೇ? ಅದು ಇಂತಿದೆ ನೋಡಿ.

  • News18 Kannada
  • Last Updated :
  • Bangalore [Bangalore], India
  • Share this:

ಬಿಗ್ ಬಾಸ್ (Big Boss House) ಮನೆಯಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಮಜವಾಗಿತ್ತು. ಇಡೀ ಓಪನ್ (Open Nomination) ನಾಮಿನೇಷನ್​​ನಲ್ಲಿ ಅರುಣ್ ಸಾಗರ್ ತಮ್ಮದೇ ರೀತಿಯಲ್ಲಿಯೇ ಇಲ್ಲಿ ಜನರನ್ನ ಎಂಟರಟೈನ್ ಮಾಡಿದರು. ಮನೆಯ ಸದಸ್ಯರನ್ನೂ ಅಷ್ಟೇ ವಿಶೇಷವಾಗಿಯೇ ರಂಜಿಸಿದರು. ಓಪನ್ ನಾಮಿನೇಷನ್​ ನಲ್ಲಿ ಅತಿ ಹೆಚ್ಚು ಹೆಸರು ಕೇಳಿ ಬಂದಿರೋದು, ಆರ್ಯವರ್ಧನ್, ಅದು ಬಿಟ್ಟರೇ (Mayuri) ಮಯೂರಿ, ಇನ್ನು ನೇಹಾ (Neha Gowda) ಗೌಡ, ಇದಾದ್ಮೇಲೆ ದಿವ್ಯ ಉರುಡುಗ ಹೀಗೆ ನಾಲ್ಕೈದು ಜನರ ಹೆಸರು ಇಲ್ಲಿ ಕೇಳಿ ಬಂದವರು. ಕೊನೆಗೆ ಬಿಗ್ ಬಾಸ್ ಐದು ಜನರ ಹೆಸರನ್ನ ತೆಗೆದುಕೊಂಡರು. ಆದರೆ ಇಲ್ಲಿ ಈ ವಾರದ ಕ್ಯಾಪ್ಟನ್ ದೀಪಿಕಾ ದಾಸ್ ನೇರವಾಗಿಯೇ ಒಬ್ಬರ ನಾಮಿನೇಷನ್ ಮಾಡಿದರು. ಅದ್ಯಾರು ಹೇಳ್ತಿವಿ ನೋಡಿ.


ಬಿಗ್ ಬಾಸ್ ಮನೆಯ ಓಪನ್ ನಾಮಿನೇಷನ್ ಪ್ರಕ್ರಿಯೆ
ಬಿಗ್ ಬಾಸ್ ಮನೆಯಲ್ಲಿ ಈ ವಾರ ನೇರ ನಾಮಿನೇಷನ್ ಪ್ರಕ್ರಿಯೆ ಮಜವಾಗಿತ್ತು. ಮನೆಯ ಸದಸ್ಯರನ್ನ ಅವರ ಮುಂದೇನೆ ನಾಮಿನೇಷನ್ ಮಾಡೋದೇ ಇಲ್ಲಿ ವಿಶೇಷವಾಗಿತ್ತು. ತಮ್ಮೊಟ್ಟಿಗೆ ಇದ್ದವರೇ ತಮ್ಮನ್ನ ನಾಮಿನೇಟ್ ಮಾಡುವ ಪ್ರಕ್ರಿಯೆ ಇಲ್ಲಿ ಕೆಲವರಿಗೆ ಬೇಸರವನ್ನೂ ತರಿಸಿತ್ತು.


ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಪ್ರತಿವಾರ ಇರೋದೆ. ಇದು ಹೊಸದೇನೂ ಅಲ್ಲ. ಅದರಂತೆ ಈ ವಾರವೂ ನಾಮಿನೇಷನ್ ಪ್ರಕ್ರಿಯೆ ಇತ್ತು. ಓಪನ್ ನಾಮಿನೇಷನ್​ ನಲ್ಲಿ ಅತಿ ಹೆಚ್ಚು ಎಂಜಾಯ್ ಮಾಡಿದವ್ರು ಬೇರೆ ಯಾರೋ ಅಲ್ಲ. ಅದು ಅರುಣ್ ಸಾಗರ್.


Kannada Big Boss Open Nomination Story, Directly Sanya Iyer Nominated this week
ಬಿಗ್ ಬಾಸ್ ಸಾನ್ಯಾ ನೇರ ನಾಮಿನೇಷನ್


ಓಪನ್ ನಾಮಿನೇಷನ್​ನಲ್ಲಿ ಅರುಣ್ ಸಾಗರ್ ಸಖತ್ ಮಜಾ
ಅರುಣ್ ಸಾಗರ್ ಮನೆಯಲ್ಲಿರೋ ವಸ್ತುಗಳನ್ನ ಇಟ್ಟುಕೊಂಡೇ, ನಾಮಿನೇಟ್ ಮಾಡೋ ಸದಸ್ಯರಿಗೆ ಕೊಡ್ತಾಯಿದ್ದರು. ಅದೇ ರೀತಿ ತಮ್ಮ ಸರದಿ ಬಂದಾಗ, ಆರ್ಯವರ್ಧನ್ ಅವರನ್ನ ನಾಮಿನೇಟ್ ಮಾಡಿ ಹೂವನ್ನ ಕೊಟ್ಟರು ಅರುಣ್ ಸಾಗರ್. ನೇಹಾ ಗೌಡಗೂ ಅರುಣ್ ಸಾಗರ್ ನಾಮಿನೇಟ್ ಮಾಡಿದರು.


ಇದನ್ನೂ ಓದಿ: Kantara Movie: ಹಿಂದಿಯಲ್ಲೂ ಕಾಂತಾರ ಅಬ್ಬರ! ವೀಕೆಂಡ್‌ನಲ್ಲಿ ಬಾಚಿಕೊಂಡ ಹಣವೆಷ್ಟು?


ಅರುಣ್ ಸಾಗರ್ ಅಲ್ಲದೇ, ಮನೆಯ ಬಹುತೇಕ ಸದಸ್ಯರು ಆರ್ಯವರ್ಧನ್ ಹೆಸರನ್ನ ನಾಮಿನೇಟ್ ಮಾಡಿದರು. ಇವರಲ್ಲದೇ ಕೆಲವು ಸದಸ್ಯರು ಮಯೂರಿ ಹೆಸರನ್ನ, ನೇಹಾ ಗೌಡ ಹೆಸರನ್ನ ಕೂಡ ನಾಮಿನೇಟ್ ಮಾಡಿದರು.


ನಾಮಿನೇಷನ್​ನಲ್ಲಿ ಆರ್ಯವರ್ಧನ್ ಹೆಸರನ್ನೆ ಬಹುತೇಕರು ಹೇಳಿದರು
ಪ್ರಶಾಂತ್ ಸಂಬರ್ಗಿಯ ಹೆಸರನ್ನ ರಾಕೇಶ್ ಅಡಿಗ ನಾಮಿನೇಟ್ ಮಾಡಿದ್ದರು. ಅದಕ್ಕೂ ಮೊದಲು ಪ್ರಶಾಂತ್ ಸಂಬರ್ಗಿ ಕೂಡ ರಾಕೇಶ್ ಅಡಿಗ ಹೆಸರನ್ನ ತೆಗೆದುಕೊಂಡು ನಾಮಿನೇಟ್ ಮಾಡಿದ್ದರು. ರಾಕೇಶ್ ಪ್ರಬಲ ಸ್ಪರ್ಧಿ ಅನ್ನೋ ಅರ್ಥದಲ್ಲಿಯೇ ಕಾರಣವನ್ನೂ ಕೊಟ್ಟಿದ್ದರು.


Kannada Big Boss Open Nomination Story, Directly Sanya Iyer Nominated this week
ಸಾನ್ಯಾ ನಾಮಿನೇಷನ್​ಗೆ ದೀಪಿಕಾ ಕೊಟ್ಟ ಕಾರಣ ಏನು ?


ಆರ್ಯವರ್ಧನ್, ಮಯೂರಿ, ನೇಹಾ ಗೌಡ, ರಾಕೇಶ್ ಅಡಿಗ, ಪ್ರಶಾಂತ್ ಸಂಬರ್ಗಿ, ಹೀಗೆ ಮನೆಯ ಬಹುತೇಕ ಸದಸ್ಯರ ಹೆಸರನ್ನ ಮನೆಯ ಸದಸ್ಯರೆ ತೆಗೆದುಕೊಂಡರು. ಸೂಕ್ತ ಕಾರಣಗಳನ್ನೂ ಕೊಟ್ಟು ಮನೆಯಿಂದ ಹೊರಗೆ ಕಳಿಸಲು ಹೆಸರು ನಾಮಿನೇಟ್ ಮಾಡಿದರು.


ಇದನ್ನೂ ಓದಿ: Mahesh Babu: ಮಹೇಶ್ ಬಾಬು ಮನದರಸಿ ಮೆಚ್ಚಿದ ಪ್ರಿನ್ಸ್ ಚಿತ್ರ ಯಾವುದು?


ಸಾನ್ಯಾ ನಾಮಿನೇಟ್ ಮಾಡಿದ ಕ್ಯಾಪ್ಟನ್ ದೀಪಿಕಾ ದಾಸ್
ಓಪನ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಾನ್ಯಾ ಹೆಸರನ್ನ ಯಾರೂ ತೆಗೆದುಕೊಂಡಿರಲಿಲ್ಲ. ಆದರೆ ನೇರ ನಾಮಿನೇಷನ್ ಅವಕಾಶ ಇರೋ ಕ್ಯಾಪ್ಟನ್ ದೀಪಿಕಾ ದಾಸ್, ಇಲ್ಲಿ ಸಾನ್ಯಾ ಹೆಸರನ್ನ ತೆಗೆದುಕೊಂಡು ನೇರವಾಗಿಯೇ ನಾಮಿನೇಷನ್ ಮಾಡಿದರು.


ಸಾನ್ಯಾ ನಾಮಿನೇಷನ್​ಗೆ ದೀಪಿಕಾ ಕೊಟ್ಟ ಕಾರಣ ಏನು ?
ಸಾನ್ಯಾ ನೇರ ನಾಮಿನೇಟ್ ಆಗಿದ್ದಾರೆ. ಇದಕ್ಕೆ ದೀಪಿಕಾ ಸೂಕ್ತ ಕಾರಣ ಕೂಡ ಕೊಟ್ಟರು. ಸಾನ್ಯಾ ಚೆನ್ನಾಗಿಯೇ ಆಡ್ತಿದ್ದಾರೆ. ಆದರೆ ಇನ್ನೂ ಚೆನ್ನಾಗಿಯೇ ಆಡಬೇಕಿದೆ. ಅದಕ್ಕೇನೆ ಅವರಲ್ಲಿರೋ ಆ ಪ್ರತಿಭೆಯನ್ನ ಹೊರಗೆ ಬರಬೇಕು ಅನ್ನೋ ಕಾರಣಕ್ಕೆ ನಾಮಿನೇಟ್ ಮಾಡಿದ್ದೇನೆ ಅಂತಲೂ ದೀಪಿಕಾ ಹೇಳಿದ್ದಾರೆ.


ಬಿಗ್ ಬಾಸ್ ನಾಮಿನೇಟ್ ಮಾಡಿದ ಆ ಐವರು ಯಾರು?
ಓಪನ್ ನಾಮಿನೇಷನ್ ಪ್ರಕ್ರಿಯೆ ಮುಗಿದ ಮೇಲೆ ಮನೆಯ ಐದು ಜನರ ಹೆಸರನ್ನ ಬಿಗ್ ಬಾಸ್ ತೆಗೆದುಕೊಂಡರು. ಈ ಐವರಲ್ಲಿ ಇರೋ ಹೆಸರು ಯಾರದು ಗೊತ್ತೇ? ಅದು ಇಂತಿದೆ ನೋಡಿ.


1.ಆರ್ಯವರ್ಧನ್
2.ಮಯೂರಿ
3.ನೇಹಾ ಗೌಡ
4.ಕಾವ್ಯ ಶ್ರೀಗೌಡ
5.ದಿವ್ಯಾ ಉರುಡುಗ


ಬಿಗ್ ಬಾಸ್ ಮನೆಯ ನಾಮಿನೇಷನ್ ಅಂದ್ಮೇಲೆ ಸಹಜವಾಗಿಯೇ ಇಲ್ಲಿ ಭಯ ಕೂಡ ಇರುತ್ತದೆ. ಮನೆಯಿಂದ ಈ ವಾರ ಯಾರು ಹೊರಗೆ ಹೋಗ್ತಾರೆ ಎಂಬ ಆತಂಕವೂ ಇರುತ್ತದೆ. ಆದರೆ, ಒಮ್ಮೆ ನಾಮಿನೇಷನ್ ಆದ್ಮೇಲೆ ಉಳಿದವರು ನಿರಾಳವಾಗೋದು ಪ್ರತಿ ವಾರ ಇರೋ ಕಾಮನ್ ಫೀಲಿಂಗ್ ಆಗಿದೆ.

First published: