• Home
  • »
  • News
  • »
  • entertainment
  • »
  • Bigg Boss Rakesh-Amulya: ತನ್ನ ಫ್ಯೂಚರ್ ಲೈಫ್ ಕನಸನ್ನು ಅಮೂಲ್ಯ ರಾಕೇಶ್​ಗೆ ಹೇಳಿದ್ದೇಕೆ? ಹೊಸ ಲವ್ ಸ್ಟೋರಿ ಶುರು?

Bigg Boss Rakesh-Amulya: ತನ್ನ ಫ್ಯೂಚರ್ ಲೈಫ್ ಕನಸನ್ನು ಅಮೂಲ್ಯ ರಾಕೇಶ್​ಗೆ ಹೇಳಿದ್ದೇಕೆ? ಹೊಸ ಲವ್ ಸ್ಟೋರಿ ಶುರು?

ದುಡ್ಡು ಮಾಡೋ ಆಸೆ ಇಲ್ಲವೇ ಇಲ್ಲ-ಅಮೂಲ್ಯ

ದುಡ್ಡು ಮಾಡೋ ಆಸೆ ಇಲ್ಲವೇ ಇಲ್ಲ-ಅಮೂಲ್ಯ

"ನನಗೆ ಸಾಕಷ್ಟು ದುಡ್ಡು ಮಾಡಬೇಕು ಅಂತ ಏನೂ ಇಲ್ಲ. ಮಕ್ಕಳಿಗೋಸ್ಕರ ಆಸ್ತಿ-ಪಾಸ್ತಿ ಮಾಡಬೇಕು ಅಂತಲೂ ಇಲ್ಲ. ಮದುವೆ ಆಗಬೇಕು. ಮಕ್ಕಳ ಮಾಡಿಕೊಳ್ಳಬೇಕು. ನನ್ನ ಲೈಫ್ ನಾನು ಎಂಜಾಯ್ ಮಾಡಬೇಕು. ಟ್ರಾವೆಲ್ ಮಾಡಬೇಕು" ಹೀಗೆ ಅಮೂಲ್ಯ ರಾಕಿ ಮುಂದೆ ಹೇಳಿಕೊಂಡರು.

  • News18 Kannada
  • Last Updated :
  • Bangalore [Bangalore], India
  • Share this:

ಬಿಗ್ ಬಾಸ್ ಮನೆಯ (Big Boss) ಸದಸ್ಯ ರಾಕೇಶ್ (Rakesh Adiga)ಅಡಿಗ ಸಖತ್ ಆಗಿಯೇ ಆಡುತ್ತಿದ್ದಾರೆ. ಇತರ ಸದಸ್ಯರು ತಮ್ಮದೇ ದಾಟಿಯಲ್ಲಿ ಸಾಗುತ್ತಿದ್ದಾರೆ. ಆದರೆ ಇದರ ಮಧ್ಯೆ ರಾಕೇಶ್ ಅಡಿಗ ತಮ್ಮ ಇಂಟ್ರಸ್ಟ್​ ಅನ್ನ ಅಮೂಲ್ಯ ಗೌಡರ ಮೇಲೆ ಹೆಚ್ಚಿಗೆ ಫೋಕಸ್ (Focus) ಮಾಡಿದಂತಿದೆ. ಇದು ಕಂಟೆಂಟ್​ ಕ್ರಿಯೇಟ್ ಮಾಡೋಕೆ ಮಾಡಿದ ಪ್ಲಾನ್ ಅಂತಲೂ ಅನಿಸುತ್ತದೆ. ಇನ್ನೊಮ್ಮೆ ಸೀರಿಯೆಸ್ ಆಗಿಯೆ ಇದು (Love) ಲವ್ ಕೂಡ ಇರಬಹುದು ಅನ್ನೋ ರೀತಿಯೇನೇ ರಾಕೇಶ್ ಅಡಿಗ, ಅಮೂಲ್ಯ ಗೌಡ ಹಿಂದೆ ಇರ್ತಾರೆ. ಈ ವಿಷಯದಲ್ಲಿ ಅಮೂಲ್ಯ ಇಂಟ್ರೆಸ್ಟೆಡ್ ಇದ್ದಾರೆ ಅಂತ ಏನೂ ಅನಿಸೋದಿಲ್ಲ. ಆದರೆ ರಾಕಿ ಕ್ರಿಯೆಟ್ ಮಾಡಿರೋ ಕಂಫರ್ಟ್ ಜೋನ್​ನಲ್ಲಿಯೇ ರಾಕೇಶ್ ಜೊತೆಗೆ ಫ್ರೀ ಆಗಿಯೇ ಇರ್ತಾರೆ.


ರಾಕೇಶ್ ಅಡಿಗ-ಅಮೂಲ್ಯ ಗೌಡ ದೋಸ್ತಿಗಳೇ?
ರಾಕೇಶ್ ಅಡಿಗ ಸಿಂಗಲ್ ಆಗಿಯೇ ಇದ್ದಾರೆ. ಅಮೂಲ್ಯ ಗೌಡ ಕೂಡ ಸಿಂಗಲ್ ಅನ್ನೋ ಅರ್ಥದಲ್ಲಿಯೇ ಬಿಹೇವ್ ಮಾಡ್ತಿದ್ದಾರೆ. ಆದರು ರಾಕೇಶ್ ಅಡಿಗ ಮತ್ತು ಅಮೂಲ್ಯ ಗೌಡ ಒಂದು ಹಂತಕ್ಕೆ ಫ್ರೀಯಾಗಿಯೇ ಇರ್ತಾರೆ.


ಇದನ್ನೂ ಓದಿ: Kannadathi: ಕಂಬಿ ಹಿಂದೆ ಹರ್ಷ, ಟೈಮ್ ನೋಡಿ ಜೈಲಿಗೆ ಕಳಿಸಿದ ಸಾನಿಯಾ!


ಅಮೂಲ್ಯ ಬಗ್ಗೆ ರಾಕೇಶ್ ಅಡಿಗೆ ಒಂದು ರೀತಿ ಇಂಟ್ರಸ್ಟ್ ಇದೆ ಅಂತಲೇ ಹೇಳಬಹುದು. ಅದು ರಾಕಿಯ ವರ್ತನೆಯಿಂದಲೇ ನಾವು ಜಡ್ಜ್ ಮಾಡಬಹುದು. ಆದರೆ ಅಮೂಲ್ಯ ಈ ರೀತಿ ಸದ್ಯಕ್ಕೆ ಎಲ್ಲೂ ಬಿಹೇವ್ ಮಾಡ್ತಿಲ್ಲ ಬಿಡಿ.


ರಾಕಿ ಮುಂದೆ ಮನದ ಮಾತು ಹಂಚಿಕೊಂಡ ಅಮೂಲ್ಯ ಗೌಡ
ಅಮೂಲ್ಯ ಗೌಡ ಹೆಚ್ಚೇನು ಮಾತಾಡೋದಿಲ್ಲ. ಆದರೆ ರಾಕೇಶ್ ಅಡಿಗ ಜೊತೆಗೆ ಓಪನ್ ಆಗಿಯೇ ಮಾತನಾಡುತ್ತಾರೆ. ತಮ್ಮ ಮನದ ಮಾತುಗಳನ್ನೂ ಹೇಳಿಕೊಳ್ತಾರೆ. ತಮ್ಮ ಫ್ಯೂಚರ್ ಪ್ಲಾನಿಂಗ್​ ಬಗ್ಗೇನೂ ಹೇಳಿಕೊಂಡದ್ದು ಇದೆ.


kannada Big Boss House Rakesh Adiga and Amulya Gowda are So Close
ಅಮೂಲ್ಯ ಗೌಡ-ರಾಕೇಶ್ ಮಧ್ಯೆ ಲವ್ ಶುರು ಆಯ್ತೇ?


ಓಪನ್ ನಾಮಿನೇಷನ್ ದಿನ ಈ ಜೋಡಿ ಮಾತನಾಡುತ್ತಲೇ ಕುಳಿತಿತ್ತು.ಆಗ ರಾಕೇಶ್ ಕೇಳಿಸಿಕೊಳ್ಳುತ್ತಿದ್ದರು. ಅಮೂಲ್ಯ ಗೌಡ ಮಾತನಾಡುತ್ತಲೇ ಇದ್ದರು. ಆದರೆ ಇವರ ಮಾತು ಲವ್ ವಿಷಯಕ್ಕೆ ಸಂಬಂಧಿಸಿದಂತೆ ಇರಲಿಲ್ಲ ನೋಡಿ. ಅಮೂಲ್ಯ ತಮ್ಮ ಮುಂದಿನ ಪ್ಲಾನ್ ಗಳ ಬಗ್ಗೆ ಹೇಳಿಕೊಳ್ತಿದ್ದರು.


ನನಗೆ ದುಡ್ಡು ಮಾಡೋ ಆಸೆ ಇಲ್ಲವೇ ಇಲ್ಲ-ಅಮೂಲ್ಯ ಗೌಡ

"ನನಗೆ ಸಾಕಷ್ಟು ದುಡ್ಡು ಮಾಡಬೇಕು ಅಂತ ಏನೂ ಇಲ್ಲ. ಮಕ್ಕಳಿಗೋಸ್ಕರ ಆಸ್ತಿ-ಪಾಸ್ತಿ ಮಾಡಬೇಕು ಅಂತಲೂ ಇಲ್ಲ. ಮದುವೆ ಆಗಬೇಕು. ಮಕ್ಕಳ ಮಾಡಿಕೊಳ್ಳಬೇಕು. ನನ್ನ ಲೈಫ್ ನಾನು ಎಂಜಾಯ್ ಮಾಡಬೇಕು. ಟ್ರಾವೆಲ್ ಮಾಡಬೇಕು" ಹೀಗೆ ಅಮೂಲ್ಯ ರಾಕಿ ಮುಂದೆ ಹೇಳಿಕೊಂಡರು.


ರಾಕಿ ಕೂಡ ಇದನ್ನ ಕೇಳಿಸಿಕೊಳ್ಳುತ್ತಿದ್ದರು. ಆಗಲೇ ಮತ್ತೆ ಮುಂದುವರೆದ ಅಮೂಲ್ಯ ಗೌಡ, ನನ್ನ ತಂದೆ-ತಾಯಿ ಮಕ್ಕಳಿಗೊಸ್ಕರವೇ ಜೀವನ ಮುಡಿಪಾಗಿಟ್ಟರು. ಅವರು ಏನೂ ಎಂಜಾಯ್ ಮಾಡಲೇ ಇಲ್ಲ ಅಂತಲೇ ಹೇಳಿದರು.


ಇದನ್ನೂ ಓದಿ: Darling Krishana Movie: ಡಾರ್ಲಿಂಗ್ ಕೃಷ್ಣ- ಶಶಾಂಕ್ ಚಿತ್ರದ ಟೈಟಲ್ ಹಿಂಗ್ಯಾಕಿದೆ?


ಅಮೂಲ್ಯ ಗೌಡ-ರಾಕೇಶ್ ಮಧ್ಯೆ ಲವ್ ಶುರು ಆಯ್ತೇ?
ಆಗ ರಾಕಿ ಮತ್ತೆ ರಿಯ್ಯಾಕ್ಟ್ ಮಾಡಿದರು. ಹೌದು, ನೀನು ಹುಟ್ಟಿದ್ದಕ್ಕೆ ಅವರು ಏನೂ ಮಾಡಲಿಲ್ಲ ಅನಿಸುತ್ತದೆ ಅಂತಲೂ ಹೇಳಿದರು. ಅಲ್ಲಿಗೆ ಬಿಗ್ ಬಾಸ್ ಮನೆಯ ಕ್ಯಾಮೆರಾ ಬೇರೆ ಕಡೆಗೆ ತಿರುಗಿತು ನೋಡಿ.


kannada Big Boss House Rakesh Adiga and Amulya Gowda are So Close
ರಾಕಿ ಮುಂದೆ ಮನದ ಮಾತು ಹಂಚಿಕೊಂಡ ಅಮೂಲ್ಯ


ಅಂದ್ಹಾಗೆ ರಾಕೇಶ್ ಈ ಹಿಂದೇನೆ ಹೇಳಿದ್ದರು. ಅಮೂಲ್ಯ ನೀವು ನನ್ನ ಜೊತೆಗೆ ಕಂಫರ್ಟ್ ಆಗಿರಬಹುದು. ನಿಮ್ಮ ಮನಸ್ಸಿನ ಮಾತುಗಳನ್ನೂ ಹೇಳಿಕೊಳ್ಳಬಹುದು ಅಂತಲೇ ಅಮೂಲ್ಯ ಗೌಡರಿಗೆ ಹೇಳಿದ್ದರು. ಆ ಕಾರಣಕ್ಕೋ ಏನೋ, ಅಮೂಲ್ಯ ಮತ್ತು ರಾಕೇಶ್ ಇಲ್ಲಿ ಜೊತೆ ಜೊತೆಗೆ ಹೆಚ್ಚು ಟೈಮ್ ಕಳೆಯುತ್ತಾರೆ ಅನಿಸುತ್ತದೆ. ಏನಂತೀರಿ?

First published: