• Home
  • »
  • News
  • »
  • entertainment
  • »
  • Big Boss Season 9: ದೊಡ್ಮನೆ ಹೊಸ ಲವ್ ಸ್ಟೋರಿ! ರೂಪೇಶ್-ಸಾನ್ಯಾ ಮಧ್ಯೆ ಬಂದೇ ಬಿಟ್ರೇ ಮಂಗಳ ಗೌರಿ ಕಾವ್ಯ ಗೌಡ?

Big Boss Season 9: ದೊಡ್ಮನೆ ಹೊಸ ಲವ್ ಸ್ಟೋರಿ! ರೂಪೇಶ್-ಸಾನ್ಯಾ ಮಧ್ಯೆ ಬಂದೇ ಬಿಟ್ರೇ ಮಂಗಳ ಗೌರಿ ಕಾವ್ಯ ಗೌಡ?

ಬಿಗ್ ಬಾಸ್ ಮನೆಯ ಹೊಸ ಲವ್ ಸ್ಟೋರಿ

ಬಿಗ್ ಬಾಸ್ ಮನೆಯ ಹೊಸ ಲವ್ ಸ್ಟೋರಿ

ರೂಪೇಶ್ ಶೆಟ್ಟಿ ಹಾಗೂ ಮಂಗಳ ಗೌರಿ ಸೀರಿಯಲ್ ಖ್ಯಾತಿಯ ನಟಿ ಕಾವ್ಯ ಗೌಡ ತೀರ ಕ್ಲೋಸ್ ಆಗುತ್ತಿದ್ದಾರೆ. ಒಟ್ಟಿಗೆ ಕೊಂಚ ಜಾಸ್ತಿನೆ ಮನೆಯಲ್ಲಿ ಓಡಾಡುತ್ತಿದ್ದಾರೆ. ರೂಪೇಶ್ ಜಿಮ್ ಮಾಡಿದ್ರೆ, ಕಾವ್ಯ ಗೌಡ ಅಲ್ಲಿ ಪಕ್ಕದಲ್ಲಿಯೇ ಕುಳಿತು ಮೇಕಪ್ ಮಾಡಿಕೊಳ್ತಾರೆ.

  • Share this:

ಬಿಗ್ ಮನೆಯಲ್ಲಿ (Big Boss House) ಹೊಸ ಲವ್ ಸ್ಟೋರಿಯೊಂದು (Love Story) ಶುರು ಆಗಿದೆ. ಓಟಿಟಿಯಿಂದಲೇ ಈ ಲವ್ಲಿ ಜೋಡಿ ಹಂಗಾಮಾ ಮಾಡುತ್ತಿದೆ. ಅಲ್ಲಿಂದ ಇಲ್ಲಿವರೆಗೂ ಬರೋ ಹೊತ್ತಿಗೆ ಓಟಿಟಿ ಲವ್ಲಿ ಕಥೆ ಈಗ ಬೇರೆ ಟರ್ನ್ ತೆಗೆದುಕೊಂಡಿದೆ. ಅದರಿಂದ ಆ ಲವ್ಲಿ ಗರ್ಲ್ ಕೊಂಚ ಡಿಸ್ಟರ್ಬ್​ ಆಗಿರೋದು ಅಷ್ಟೇ ಸತ್ಯ. ಅದೇ ಲವ್ ಸ್ಟೋರಿನೇ ಈಗ ಟ್ರ್ಯಾಂಗಲ್ ಲವ್ (Triangle Love Story) ಆಗೋ ಎಲ್ಲ ಸಾಧ್ಯತೆ ಇದೆ. ಅದರ ಬಗ್ಗೇನೆ ಬಿಗ್ ಮನೆಯಲ್ಲಿ ಚರ್ಚೆ ಆಗುತ್ತಿದೆ. ಬಾತ್ ರೂಮ್​ ನಲ್ಲಿ ನೇಹಾ ಗೌಡ ಮಾತಾಡ್ತಾರೆ. ಆರ್ಯವರ್ಧನ್ ಅದಕ್ಕೆ ಕಾಮೆಂಟ್ ಕೊಡ್ತಾರೆ. ದರ್ಶ್ ಚಂದ್ರಪ್ಪ ಕೂಡ ಡೈಲಾಗ್ ಹೊಡೀತಾರೆ. ಅಲ್ಲಿಗೆ ಆ ಲವ್ ಸ್ಟೋರಿ ಯಾವುದು ಅಂತ ನಿಮ್ಗೆ ಒಂದು ಅಂದಾಜು ಸಿಕ್ಕಿರಬಹುದು ಅನಿಸುತ್ತದೆ. ಅದರ ಡಿಟೈಲ್ಸ್ ಇಲ್ಲಿದೆ ಓದಿ.


ದೊಡ್ಮನೆ ಸಣ್ಣ ಸಣ್ಣ ಪ್ರೇಮ ಕಥೆಗಳ ಹೊಸ ಕಥೆ
ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ಅರಳುತ್ತವೆ. ಮನೆಯಲ್ಲಿ ಇರೋವರೆಗೂ ಅವುಗಳ ರೋಮ್ಯಾಂಟಿಕ್ ದೃಶ್ಯಗಳು, ಅವುಗಳ ಸುತ್ತದ ಗಾಸಿಪ್ ಎಲ್ಲವೂ ಈ ಬಿಗ್ ಮನೆಗೆ ಭರ್ಜರಿ ಕಂಟೆಂಟ್ ಆಗಿ ಬಿಡುತ್ತವೆ. ನೋಡುಗರು ಎಂಜಾಯ್ ಮಾಡಿದ್ರೆ, ಮನೆಯವರು ಗಾಸಿಪ್ ಮಾಡಿ ಬಿಡ್ತಾರೆ.


ಬಿಗ್ ಮನೆಯ ಲವ್ಲಿ ಕಥೆಗಳು ಕೇವಲ ಕಂಟೆಂಟ್​ಗೋಸ್ಕರವೇ ಹುಟ್ಟಿಕೊಂಡಿರುತ್ತವೆ ಅನ್ನೋ ಸತ್ಯ ಈಗೇನೂ ಗುಟ್ಟಾಗಿ ಉಳಿದಿಲ್ಲ. ಆದರೂ ಲವ್ ಸ್ಟೋರಿಗಳು ಸೀಸನ್ ಒಂದರಿಂದ ಸೀಸನ್ 9 ರವರೆಗೂ ನಡೆದುಕೊಂಡು ಬಂದಿವೆ.


Kannada Big Boss House New Tringle Love Story
ಮಂಗಳ ಗೌರಿ ಕಾವ್ಯ ಗೌಡ ಸಖತ್ ಹಾಟ್


ಅದೇ ರೀತಿ ಓಟಿಟಿ ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಜೋಡಿಯ ಮೋಡಿ ಬೇರೆ ಫೀಲ್​ ಅನ್ನೇ ಕೊಟ್ಟಿದೆ. ಅಲ್ಲಿದ್ದ ಅಷ್ಟೂ ದಿನಗಳೂ ಈ ಜೋಡಿಯ ಲವ್ಲಿ ಕಥೆಗಳು ಅಲ್ಲಿದ್ದವ್ರ ಬಾಯಿಗಳಿಗೆ ಆಹಾರವಾಗಿರೋದಂತೂ ಅಷ್ಟೇ ಸತ್ಯ.


ರೂಪೇಶ್ ಶೆಟ್ಟಿ-ಸಾನ್ಯಾ ಅಯ್ಯರ್ ಲವ್ ನಿಜವೇ?
ಅಂತಹ ಈ ಜೋಡಿ ಡೌಟ್ ಬರೋ ಹಾಗೇನೆ, ಬಿಗ್ ಬಾಸ್ ಸೀಸನ್-09ಕ್ಕೆ ಒಟ್ಟಿಗೇನೆ ವೇದಿಕೆ ಏರಿತ್ತು. ಕಿಚ್ಚನ ಮುಂದೆ ಒಂದೇ ರೀತಿಯ ಬಟ್ಟೆಯನ್ನ ಧರಿಸಿಕೊಂಡು ಇವರು ಪ್ರೇಮಿಗಳೇ ಅನ್ನೋ ಹಂಗೆ ಫೀಲ್ ಆದರು.


ಇದನ್ನೂ ಓದಿ: Bigg Boss Kannada 9: ನಾನ್ ಸಾಲ ತಗೊಂಡ್ರೆ ಬಡ್ಡಿ ಸಮೇತ ಕೊಡ್ತೀನಿ! ಸಂಬರ್ಗಿಗೆ ಮತ್ತೊಬ್ಬ ಸ್ಪರ್ಧಿಯಿಂದ ವಾರ್ನ್


ಆದರೆ, ಬಿಗ್ ಮನೆಯೊಳಗೆ ಹೋಗುತ್ತಿದ್ದಂತೇನೆ ಸಾನ್ಯಾ ಅಯ್ಯರ್ ಏನೂ ಬದಲಾದಂತೆ ಕಾಣಲಿಲ್ಲ. ರೂಪೇಶ್ ಶೆಟ್ಟಿ ಬಗ್ಗೆ ಇನ್ನೂ ಅದೇ ಫೀಲ್​ ಅಲ್ಲಿಯೇ ಇದ್ದಂತಿದೆ. ಆದರೆ ಮಿಸ್ಟರ್ ರೂಪೇಶ್ ಶೆಟ್ಟಿ ಬದಲಾದಂತೆ ಕಾಣುತ್ತಿದ್ದಾರೆ.


ರೂಪೇಶ್ ಶೆಟ್ಟಿ-ಕಾವ್ಯ ಗೌಡ ತೀರ ಕ್ಲೋಸ್ ಆಗ್ತವ್ರೆ
ಹೌದು, ರೂಪೇಶ್ ಶೆಟ್ಟಿ ಹಾಗೂ ಮಂಗಳ ಗೌರಿ ಸೀರಿಯಲ್ ಖ್ಯಾತಿಯ ನಟಿ ಕಾವ್ಯ ಗೌಡ ತೀರ ಕ್ಲೋಸ್ ಆಗುತ್ತಿದ್ದಾರೆ. ಒಟ್ಟಿಗೆ ಕೊಂಚ ಜಾಸ್ತಿನೆ ಮನೆಯಲ್ಲಿ ಓಡಾಡುತ್ತಿದ್ದಾರೆ. ರೂಪೇಶ್ ಜಿಮ್ ಮಾಡಿದ್ರೆ, ಕಾವ್ಯ ಗೌಡ ಅಲ್ಲಿ ಪಕ್ಕದಲ್ಲಿಯೇ ಕುಳಿತು ಮೇಕಪ್ ಮಾಡಿಕೊಳ್ತಾರೆ.


Kannada Big Boss House New Tringle Love Story
ಬಿಗ್ ಬಾಸ್ ಮನೆಯ ಸಾನ್ಯಾ ಅಯ್ಯರ್


ಇದನ್ನ ಕಂಡ ಸಾನ್ಯಾ ಜಲಸ್ ಪಟ್ರೇ? ಗೊತ್ತಿಲ್ಲ. ಆದರೆ ಮನೆಯ ಸದಸ್ಯರಿಗೆ ರೂಪೇಶ್ ಮತ್ತು ಕಾವ್ಯ ಗೌಡರ ಕ್ಲೋಸ್​ನೆಸ್ ಸಖತ್ ಖುಷಿ ಕೊಡ್ತಿದೆ. ಅದರ ಬೆನ್ನಲ್ಲಿಯೇ ಸಾನ್ಯಾ ವರ್ತನೆ ಇವರೆಲ್ಲ ಗಾಸಿಪ್ ಮಾಡೋ ಹಾಗೇನೆ ಕಂಡು ಬರುತ್ತಿದೆ.


ರೂಪೇಶ್ ಶೆಟ್ಟಿ ವರ್ತನೆಯನ್ನ ಸಾನ್ಯಾ ಕೂಡ ನೋಡ್ತಿದ್ದಾರೆ ಅನಿಸುತ್ತಿದೆ. ಓಟಿಟಿ ಬಿಗ್ ಬಾಸ್​ ಅಲ್ಲಿ ಒಟ್ಟಿಗೆ ಇದ್ದವ್ರು ಅಲ್ಲವೇ? ಅದಕ್ಕೇನೆ ಸಾನಿಯಾ ಕೊಂಚ ವಿಚತಲಿತಗೊಂಡಿದ್ದರೂ ಆಶ್ಚರ್ಯವಲ್ಲ ಬಿಡಿ.


ಸಾನ್ಯಾ ಅಯ್ಯರ್ ವರ್ತನೆ ಈಗ ದೊಡ್ಮನೆ ಗಾಸಿಪ್ ಕಂಟೆಂಟ್
ಆದರೆ ಸಾನ್ಯಾ ವರ್ತನೆಯನ್ನ ದರ್ಶ್ ಚಂದ್ರಪ್ಪ ಆಡಿಕೊಳ್ತಾರೆ. ಆರ್ಯವರ್ಧನ್ ಕೂಡ ಕಾಮೆಂಟ್ ಹೊಡೀತಾರೆ. ಇದನ್ನ ಕೇಳಿ ಆಶ್ಚರ್ಯ ಪಟ್ಟ ನೇಹಾ ಗೌಡ, ಏನೂ ಇದು ನಿಜವೇ, ಅಂತ ಕೇಳ್ತಾರೆ. ಅನುಮಾನದಲ್ಲಿಯೇ ಇದು ಹೇಗೆ ಸಾಧ್ಯ ಅಂತಲೂ ನೇಹಾ ಕೇಳ್ತಾರೆ.


ಇದನ್ನೂ ಓದಿ: Kantara: ನಮ್ಮ ಸಿನಿಮಾ ನಮ್ಗೆ, ಅವರ ಸಿನಿಮಾ ಅವರಿಗೆ! ಪೊನ್ನಿಯನ್​ ಸೆಲ್ವನ್​ ಬಗ್ಗೆ ಭಯವಿಲ್ಲ ಎಂದ ರಿಷಭ್​ ಶೆಟ್ಟಿ


ರೂಪೇಶ್-ಕಾವ್ಯ ಗೌಡ ಕ್ಲೋಸ್ ಆಗಿರೋದು ನನಗೆ ಜಲಸ್ ಆಗುತ್ತಿದೆ ಅಂತ ಸಾನಿಯಾ ಹೇಳಿದ್ದಾಳೇಯೇ ಅಂತಲೂ ನೇಹಾ ಗೌಡ ದರ್ಶನ್​ ಗೆ ಕೇಳ್ತಾರೆ. ಈ ವೇಳೆ ಅಲ್ಲಿಯೇ ಕಾವ್ಯ ಗೌಡ ಕೂಡ ಇರ್ತಾರೆ. ಕಾವ್ಯ ಇದನ್ನ ಮೊದಲು ಕೇಳ್ತಾರೆ ಆ ಮೇಲೆ ಏನೋ ಒಂದು ರಿಯಾಕ್ಟ್ ಮಾಡ್ತಾರೆ. ಹಿಂಗೆ ಸಾನ್ಯಾ ವರ್ತನೆ ಈಗ ದೊಡ್ಮನೆಯಲ್ಲಿ ಗಾಸಿಪ್​ಗೆ ಕಾರಣ ಆಗುತ್ತಿದೆ.

First published: