Divya Suresh: ನಾನು ಕುಡ್ದಿದ್ನಾ? ಸುಮ್​ ಸುಮ್ನೆ ಇಮೇಜ್​ ಡ್ಯಾಮೇಜ್​ ಮಾಡ್ಬೇಡಿ ಅಂದಿದ್ಯಾಕೆ ದಿವ್ಯಾ ಸುರೇಶ್​!

‘ಪಬ್‌ಗೆ ಹೋಗಿ ಕುಡಿದಿದ್ದು ಕುಡಿದ ಮತ್ತಲ್ಲಿ ಏನ್ ನೀವು ಬಂದು ನೋಡಿದ್ರಾ ನಾನು ಕುಡಿದಿದ್ದೆ ಅಂತಾ? ನಾನು ಕುಡಿದಿದ್ದೆ ಅಂತ ನಿಮ್ಮ ಹತ್ರ ಸಾಕ್ಷಿ ಇದ್ಯಾ? ಆಯ್ತು ಸಾಕ್ಷಿ ಬಗ್ಗೆ ಬಿಡಿ ನಾನು ಏನಾದರೂ ಅಸಭ್ಯವಾಗಿ ವರ್ತಿಸಿದ್ನಾ?’ ಎಂದು ದಿವ್ಯಾ ಸುರೇಶ್​ ಗರಂ ಆಗಿದ್ದಾರೆ

ನಟಿ ದಿವ್ಯಾ ಸುರೇಶ್​

ನಟಿ ದಿವ್ಯಾ ಸುರೇಶ್​

  • Share this:
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಹೊಸ ವರ್ಷ ವೇಳೆ ಸೋಂಕು ಹರಡುವ ಭೀತಿ ಹೆಚ್ಚಾಗಿತ್ತು.ರಾಜ್ಯ ಸರ್ಕಾರ 10 ದಿನಗಳ ಕಾಲ ನೈಟ್‌ ಕರ್ಫ್ಯೂ (Nighr Cerfew) ಜಾರಿಗೊಳಿಸಿದೆ. ಈ ವೇಳೆ ಎಂ.ಜಿ ರಸ್ತೆಯಲ್ಲಿ ಪಾರ್ಟಿ ಮಾಡುತ್ತಿದ್ದ ನಟಿ ದಿವ್ಯಾ ಸುರೇಶ್‌ (Divya Suresh) ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದೆ ಎಂದ ಸುದ್ದಿ ಆಗಿತ್ತು. ನೈಟ್ ಕರ್ಫ್ಯೂ ಇದ್ದರೂ ನಟಿ ರಂಪಾಟ ಕಂಡು ಎಲ್ಲರೂ ಶಾಕ್​ ಆಗಿದ್ದರು. ಇನ್ನೂ ಕೆಲವರು ಆಕೆ ಚೆನ್ನಾಗಿ ಕುಡಿದು ಗಲಾಟೆ ಮಾಡಿದ್ದಾಳೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಅಂದು ನಡೆದಿದ್ದು ಏನು? ನಿಜಕ್ಕೂ ಕಾವ್ಯ ಸುರೇಶ್ ಕುಡಿದು ಗಲಾಟೆ ಮಾಡಿದರಾ? ಈ ಬಗ್ಗೆ ಅವರೇ ಹೇಳಿದ್ದಾರೆ.  ತನ್ನ ಬಳಿ ಏನು ಸಾಕ್ಷಿ ಇದೆ ಎಂದು ಎಂದು ದಿವ್ಯಾ ಸುರೇಶ್ ಮಾತನಾಡಿದ್ದಾರೆ. '9 ಗಂಟೆಗೆ ನಾವಿದ್ದ ಹೋಟೆಲ್‌ (Hotel) ಕ್ಲೋಸ್ ಆಗುತ್ತೆ ನಾನು 9.10ಕ್ಕೆ ಕೆಳಗೆ ಬರ್ತೀವಿ. ಆಗ ನಾನು ಕ್ಯಾಬ್ (Cab) ಕೂಡ ಬುಕ್ ಮಾಡ್ತೀವಿ. ಅದನ್ನು ನಾನು ಪೊಲೀಸರಿಗೆ ತೋರಿಸಿದ್ದೆವು ಕೂಡ. ಪೊಲೀಸರು (Police) ಸರಿ ನೀವು ಬುಕ್ ಮಾಡಿ ಹೊರಡಿ ಅಂತ ಹೇಳಿದ್ರು. ಅಲ್ಲಿದ್ದ ಕ್ಯಾಮೆರಾಗಳು ನನ್ನ ನೋಡಿದ ತಕ್ಷಣ ನನ್ನ ಮೇಲೆ ಅಟ್ಯಾಕ್ ಮಾಡುತ್ತಾರೆ. ಕಲಾವಿದೆ ಆಗಿ ನನಗೂ ಭಯ ಇದ್ದೇ ಇರುತ್ತೆ ಎಂದು ಗರಂ ಆಗಿದ್ದಾರೆ. 

ಸಾಕ್ಷಿ ಸಮೇತ ತೋರಿಸ್ತೀನಿ ಎಂದ ದಿವ್ಯಾ ಸುರೇಶ್​

‘ಪಬ್ಲಿಕ್‌ನಲ್ಲಿ ಯಾರಾದ್ರೂ ವಿಡಿಯೋ ಮಾಡಿದ್ರೆ ಏನು ಆಗಬಹುದು. ನಾನು ಹೊರಡಬೇಕಿತ್ತು. ಅವರ ಜೊತೆ ಅಲ್ಲೇ ವಾದ ಮಾಡಿಕೊಂಡು ನಿಂತಿದ್ದರೆ ರಾತ್ರಿ  10 ಗಂಟೆ ಆದರೂ ಮನೆಗೆ ಹೋಗಲು ಆಗುತ್ತಿರಲಿಲ್ಲ' ಎಂದು ದಿವ್ಯಾ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾವು ಕೆಳಗೆ ಬಂದಾಗ ರಾತ್ರಿ 9.10 ಆಗಿತ್ತು.ಕ್ಯಾಬ್ ಬುಕ್ ಮಾಡಿರುವ ಸಾಕ್ಷಿ ಇದೆ. ಹೋಟೆಲ್‌ನಲ್ಲಿ ಬಿಲ್ ಕಟ್ಟಿರುವುದಕ್ಕೆ ಮೊಬೈನ್‌ನಲ್ಲಿ ಸಾಕ್ಷಿ ಇದೆ. ಒಂದೇ ಪ್ರಶ್ನೆ ಕೇಳಿದ್ದು ಅದನ್ನು ಯಾಕೆ ಇವ್ರು ತಪ್ಪಾಗಿ ತೋರಿಸುತ್ತಿದ್ದಾರೆ? ನಿಜ ಇದರ ಬಗ್ಗೆ ನನಗೆ ಮಾತನಾಡುವುದಕ್ಕೆ ಇಷ್ಟವಿಲ್ಲ. ನನ್ನ ಸ್ನೇಹಿತ ಮಾತನಾಡುತ್ತಿದ್ದ, ಜವಾಬ್ದಾರಿಯಿಂದ ಮಾತನಾಡಿ ಮೊಬೈಲ್‌ನಲ್ಲಿ ಯಾಕೆ ವಿಡಿಯೋ ಮಾಡ್ತಿದ್ದೀರಾ ಅಂತ ಪ್ರಶ್ನೆ ಮಾಡಿದಕ್ಕೆ ಅವರ ಮೇಲೂ ಹೋಗುತ್ತಿದ್ದಾರೆ' ಎಂದು ದಿವ್ಯಾ ಹೇಳಿದ್ದಾರೆ.

ಇದನ್ನು ಓದಿ : RRR ಸಿನಿಮಾದಲ್ಲಿ ಆಲಿಯಾ, ಅಜಯ್​ ದೇವಗನ್​ ಅತಿಥಿ ಪಾತ್ರ: ರಾಜಮೌಳಿ ಮಾತು ಕೇಳಿ ಫ್ಯಾನ್ಸ್​ ಶಾಕ್​!

‘ನಾನು ಹೋಗಿದ್ದು ರಾಸ್ತ ಪಬ್​ ಅಲ್ಲ ರಾಸ್ತ ಕೆಫೆ’

'ಎಲ್ಲಾ ಕಡೆ ರಾಸ್ತ ಪಬ್ ಅಂತ ತೋರಿಸುತ್ತಿದ್ದಾರೆ ದಯವಿಟ್ಟು ಗೂಗಲ್ (Google) ಮಾಡಿ ನೋಡಿ ಅದು ರಾಸ್ತ ಪಬ್ ಅಥವಾ ರಾಸ್ತ ಕೆಫೆ ನಾ ಎಂದು. ಇದನ್ನು ಮೀರಿ ನಾನು ಉತ್ತರ ಕೊಡುವುದಕ್ಕೆ ಆಗೋಲ್ಲ. ಪಬ್‌ಗೆ ಹೋಗಿ ಕುಡಿದಿದ್ದು ಕುಡಿದ ಮತ್ತಲ್ಲಿ ಏನ್ ಏನ್​ ನೀವು ಬಂದು ನೋಡಿದ್ರಾ ನಾನು ಕುಡಿದಿದ್ದೆ ಅಂತಾ? ನಾನು ಕುಡಿದಿದ್ದೆ ಅಂತ ನಿಮ್ಮ ಹತ್ರ ಸಾಕ್ಷಿ ಇದ್ಯಾ? ಆಯ್ತು ಸಾಕ್ಷಿ ಬಗ್ಗೆ ಬಿಡಿ ನಾನು ಏನಾದರೂ ಅಸಭ್ಯವಾಗಿ ವರ್ತಿಸಿದ್ನಾ? ವೈಯಕ್ತಿಕವಾಗಿ ಈ ವಿಚಾರ ಮಾತನಾಡುವುದಕ್ಕೆ ನನಗೇ ಇಷ್ಟ ಇರಲಿಲ್ಲ ಆದರೂ ಈ ವಿಚಾರದ ಬಗ್ಗೆ ನಾನು ಕ್ಲಾರಿಟಿ ಕೊಡಬೇಕು ಅನಿಸಿತು' ಎಂದಿದ್ದಾರೆ.

ಇದನ್ನು ಓದಿ : ಸಮಂತಾ ಇಷ್ಟೊಂದು ವರ್ಕ್‌ಔಟ್ ಮಾಡೋದೇಕೆ.. ಏನು ಹೇಳ್ತಾರೆ ಕೇಳಿ

ಮೊನ್ನೆ ಎಂಜಿ ರಸ್ತೆಯಲ್ಲಿ ನಡೆದಿದ್ದೇನು?

ರಾತ್ರಿ 10ಕ್ಕೆ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆಯ ಪಬ್‌ಗಳಿಂದ ಗ್ರಾಹಕರು ಹೊರ ಬರುತ್ತಿದ್ದರು. ಈ ವೇಳೆ ಪಬ್‌ನಿಂದ ಹೊರ ಬಂದ ದಿವ್ಯಾ ಸುರೇಶ್‌, ಗ್ರಾಹಕರ ದೃಶ್ಯಾವಳಿ ಸೆರೆ ಹಿಡಿಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಜತೆ ಕಿರಿಕ್‌ ತೆಗೆದು ರಂಪಾಟ ಮಾಡಿದರು. ಹಾಗೂ ಕರ್ಫ್ಯೂ ಇದೆ ಮನೆಗೆ ಹೋಗಿ ಎಂದಿದ್ದಕ್ಕೆ ಪೊಲೀಸರಿಗೇ ದಿವ್ಯಾ ಆವಾಜ್ ಹಾಕಿದ್ದರು.
Published by:Vasudeva M
First published: