ಕನ್ನಡದ ಬಿಗ್ ಬಾಸ್-09 (Big Boss Prashanth Sambargi) ಇನ್ನೇನು ಮುಗಿತಾ ಬಂತು. ಫೈನಲ್ಗೆ ಯಾರೆಲ್ಲ ಹೋಗ್ತಾರೆ ಅನ್ನೋ ಒಂದು ಅಂದಾಜು ಕೂಡ ವೀಕ್ಷಕರಿಗೆ ಸಿಕ್ಕಾಗಿದೆ. ಇದರ ಬೆನ್ನಲ್ಲಿಯೇ ಸ್ಪರ್ಧಿಗಳಲ್ಲಿ ಒಬ್ಬೊಬ್ಬರೆ ಹೊರಗೆ ಬರ್ತಿದ್ದಾರೆ. ಹಾಗೇನೆ ಈಗ ಪ್ರಶಾಂತ್ ಸಂಬರ್ಗಿ ಹೊರಗೆ ಬಂದಿದ್ದಾರೆ. ಆದರೆ ಪ್ರಶಾಂತ್ (Prashanth Sambargi) ಸಂಬರ್ಗಿ ಕೂಡ ದೀಪಿಕಾ ದಾಸ ಹಾಗೆ ವಾಪಸ್ ಹೋಗ್ತಾರೆ ಅಂದುಕೊಂಡಿದ್ದರು. ಅದು ಸುಳ್ಳಾಗಿದೆ. ಪ್ರಶಾಂತ್ ಹೊರಗೆ ಬಂದಾಗಿದೆ. ಬಂದ್ಮೇಲೆ ಮೊದಲು ದೀಪಿಕಾ (deepika padukone Movies) ಪಡುಕೋಣೆ ಬಗ್ಗೆ ಮಾತನಾಡಿರೋ ಪ್ರಶಾಂತ್ ಸಂಬರ್ಗಿ, ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ತಮ್ಮ (bigg boss kannada season 9) ಬಿಗ್ ಬಾಸ್ ಅನುಭವ ಹಂಚಿಕೊಂಡಿದ್ದಾರೆ. ಹಾಗೇನೆ ಯಾರ್ ಗೆಲ್ತಾರೆ ಅಂತಲೂ ಹೇಳಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಏನಂತಾರೆ?
ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಮನೆಯಿಂದ ಹೊರ ಬಂದಾಗಿದೆ. ಬಂದೋರೇ ದೀಪಿಕಾ ಪಡುಕೋಣೆ ತಪ್ಪನ್ನ ಎಳೆ ಎಳೆಯಾಗಿಯೇ ಬಿಚ್ಚಿಟ್ಟಿದ್ದಾರೆ. ಶಾರುಕ್ ಖಾನ್ ಜನ್ಮ ಜಾಲಾಡಿದ್ದಾರೆ. ಪಠಾಣ್ ಬಾಯ್ಕಾಟ್ ಅಂತಲೇ ಕೂಗಿ ಕೂಗಿ ಹೇಳ್ತಿದ್ದಾರೆ.
ಬಿಗ್ ಬಾಸ್ ಮನೆಯ ಅನುಭವ ಹೇಗಿತ್ತು?
ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಸೀಸನ್-09 ಅನುಭವ ಹಂಚಿಕೊಂಡಿದ್ದಾರೆ. ಇಲ್ಲಿ ಇಷ್ಟು ದಿನ ಇದ್ದಿರೋದು ಖುಷಿ ತಂದಿದೆ. ತುಂಬಾ ಚೆನ್ನಾಗಿಯೇ ಎಲ್ಲವೂ ಇತ್ತು ಅನ್ನೋದು ಇವರ ಮಾತು. ಆದರೆ ಇಷ್ಟು ಬೇಗ ಬರ್ತಿನಿ ಅನ್ನೋದು ಮಾತ್ರ ಗೊತ್ತಿರಲಿಲ್ಲ ಅಂತಲೇ ಹೇಳ್ತಾರೆ.
ಪ್ರಸಾಂತ್ ಸಂಬರ್ಗಿ ಮನೆಯಿಂದ ಹೊರ ಬರಲು ಕಾರಣ ಏನು?
ಬಿಗ್ ಬಾಸ್-09 ಅಲ್ಲಿ ಈ ಸಲ ಅನೇಕ ಸರ್ಪ್ರೈಜ್ಗಳೂ ಇದ್ದವು. ಇನ್ನೂ ಇರುತ್ತವೆ ಅನ್ನೋ ಕುತೂಹಲ ಕೂಡ ಇದೆ. ಹೀಗಿರೋವಾಗ ದೀಪಿಕಾ ದಾಸ್ ಮನೆಯಿಂದ ಅಂದು ಅನಿರೀಕ್ಷಿತವಾಗಿಯೇ ಹೊರಗೆ ಬಂದೇ ಬಿಟ್ಟರು. ಆದರೆ ದೀಪಿಕಾ ವಾಪಸ್ ಮನೆಗೆ ಬಂದಾಗ ಎಲ್ಲರಿಗೂ ಒಂದು ಶಾಕ್ ಕೂಡ ಇತ್ತು.
ಪ್ರಶಾಂತ್ ಸಂಬರ್ಗಿ ಚೆನ್ನಾಗಿಯೇ ಆಡ್ತಾ ಇದ್ದರು. ಸೇಫ್ ಗೇಮ್ ಆಗಿಯೇ ಆಡ್ತಾ ಇದ್ರು. ತಮ್ಮದೇ ರೀತಿಯಲ್ಲಿಯೇ ತಪ್ಪುಗಳನ್ನ ಎತ್ತಿ ತೋರ್ತಾನೇ ಇದ್ದರು. ಈ ಹಿಂದಿನ ಸೀಸನ್ ನಲ್ಲಿ ಪ್ರಶಾಂತ್ ಹೇಗಿದ್ದರೋ ಹಾಗೇ ಕಾಣಲಿಲ್ಲ ಅನ್ನೋ ಮಾತು ಇತ್ತು. ಅದಕ್ಕೋ ಏನೋ, ಪ್ರಶಾಂತ್ ಸಂಬರ್ಗಿ ಹೊರಗೆ ಬಂದೇ ಬಿಟ್ಟರು.
ದೀಪಿಕಾ ದಾಸ್ ರೀತಿ ಪ್ರಶಾಂತ್ ಅವ್ರಿಗೆ ಲಕ್ ಹೊಡೆಯಲಿಲ್ಲ!
ದೀಪಿಕಾ ದಾಸ್ ರೀತಿ ಪ್ರಶಾಂತ್ ಸಂಬರ್ಗಿ ಮನೆಗೆ ವಾಪಸ್ ಹೋಗ್ತಾರೆ ಅಂತಲೆ ಬಹುತೇಕರು ಅಂದುಕೊಂಡಿದ್ದರು. ಆದರೆ ದೀಪಿಕಾ ದಾಸ್ ಅವರಿಗೆ ಲಕ್ ಹೊಡೆದ ರೀತಿ ಇವರಿಗೂ ಆ ಲಕ್ ಹೊಡೆಯಲಿಲ್ಲ.
ಪ್ರಶಾಂತ್ ಸಂಬರ್ಗಿ ಪ್ರಕಾರ ಯಾರ್ ಗೆಲ್ತಾರೆ?
ಪ್ರಶಾಂತ್ ಸಂಬರ್ಗಿ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದು ಬಂದಿದ್ದಾರೆ. ಇವರಿಗೆ ಅಲ್ಲಿರೋರ ಆಟ ಗೊತ್ತಿದೆ. ಅವರ ಶಕ್ತಿಗಳೂ ತಿಳಿದಿದೆ. ಈ ಹಿನ್ನೆಲೆಯಲ್ಲಿಯೇ ಪ್ರಶಾಂತ್ ಯಾರು ಗೆಲ್ತಾರೆ ಅನ್ನೋದನ್ನ Predict ಮಾಡಿದ್ದಾರೆ. ಅದು ಹೀಗಿದೆ ನೋಡಿ.
-ರೂಪೇಶ್ ಶೆಟ್ಟಿ-ವಿನ್ನರ್
-ರಾಕೇಶ್ ಅಡಿಗ-ರನ್ನರ್ ಅಪ್
-ದಿವ್ಯ ಉರುಡುಗ ಹೊರ ಬರ್ತಾರೆ
ಪ್ರಶಾಂತ್ ಸಂಬರ್ಗಿ ಅವರ ಪ್ರಕಾರ ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ ಆಗುತ್ತಾರೆ. ರಾಕೇಶ್ ಅಡಿಗ ರನ್ನರ್ ಅಪ್ ಆಗ್ತಾರೆ. ದಿವ್ಯ ಉರುಡುಗ ಹೊರಗೆ ಬರ್ತಾರೆ. ಹೀಗೆ ಪ್ರಶಾಂತ್ ಸಂಬರ್ಗಿ ಈಗ Predict ಮಾಡಿದ್ದಾರೆ.
ಪ್ರಶಾಂತ್ ಸಂಬರ್ಗಿ ಅವರ ಭವಿಷ್ಯ ವಾಣಿ ನಿಜವಾಗ್ತದೋ ಇಲ್ವೋ ಗೊತ್ತಿಲ್ಲ. ಆದರೆ ಇವರ ಈ ಒಂದು ಭವಿಷ್ಯ ಎಲ್ಲೋ ಒಂದು ಕಡೆ ಸತ್ಯ ಅನಿಸುತ್ತಿದೆ. ರೂಪೇಶ್ ಶೆಟ್ಟಿ ಅದ್ಭುತವಾಗಿಯೇ ಆಟ ಆಡುತ್ತಿದ್ದಾರೆ. ರಾಕೇಶ್ ಅಡಿಗ ಕೂಡ ಒಳ್ಳೆ ಟಕ್ಕರ್ ಕೊಡ್ತಿದ್ದಾರೆ.
ದಿವ್ಯ ಉರುಡುಗ ಅದ್ಯಾಕೋ ಮೊದಲಿನ ರೀತಿ ಆ್ಯಕ್ಟೀವ್ ಆಗಿಲ್ಲ ಅನಿಸುತ್ತಿದೆ.ಸುಮ್ನೆ ಮನೆಯಲ್ಲಿದ್ದಾರೆ ಅನ್ನೋದು ಕೂಡ ಈಗ ಎಲ್ಲರಿಗೂ ಅನಿಸುತ್ತಿದೆ. ಅಮೂಲ್ಯ ಗೌಡ ಆಟ ಹೇಳಿಕೊಳ್ಳುವಂತೇನೂ ಇಲ್ಲ. ರಾಕೇಶ್ ಅಡಿಗ ಜೊತೆಗೆ ಕಾಣಿಸಿಕೊಂಡು ಮಿಂಚುತ್ತಿರೋದೇ ಇಲ್ಲಿ ವಿಶೇಷ ಅನಿಸುತ್ತದೆ.
ಇದನ್ನೂ ಓದಿ: Sriimurali Birthday: ನಟ ಶ್ರೀಮುರಳಿ ಬರ್ತ್ಡೇ, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ಯಾಕೆ?
ಉಳಿದಂತೆ ಬಿಗ್ ಬಾಸ್-09 ಫೈನಲ್ಗೆ ಯಾರೆಲ್ಲ ಹೋಗ್ತಾರೆ ಅನ್ನೋ ಕುತೂಹಲ ಕೂಡ ಈಗಲೇ ಮೂಡಿಸಿದೆ. ಇವರೆಲ್ಲ ಹೋಗಬಹುದು ಅಂತಲೇ ಜನ ಗೆಸ್ ಮಾಡ್ತಿದ್ದಾರೆ. ಯಾವುದಕ್ಕೂ ವೇಟ್ ಮಾಡಿ ನೋಡೋಣ ಅಲ್ವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ