ಬಿಗ್ ಬಾಸ್ ಖ್ಯಾತಿಯ ಅರುಣ್ (Bigg Boss Arun Sagar) ಸಾಗರ್ ಅವ್ರು ಸೀಸನ್-09 ರಲ್ಲಿ ಬೇಜಾನ್ ಕ್ರಿಯೇಟಿವಿಟಿ ಪ್ರದರ್ಶನ ಮಾಡಿದರು. ಅಪ್ಪ ದೊಡ್ಮನೆಯಲ್ಲಿ ತಮ್ಮ ಕಲೆಯನ್ನ (Art Director Arun Sagar) ಪ್ರದರ್ಶನ ಮಾಡಿದ್ರೆ, ಅರುಣ್ ಸಾಗರ್ ಮಕ್ಕಳಿಬ್ಬರು ಸಖತ್ ಆಗಿಯೇ ಮಿಂಚಿದ್ದಾರೆ. ಅರುಣ್ ಸಾಗರ್ ಪುತ್ರಿ ಅದಿತಿ (Arun Sagar Childrens) ಸಾಗರ್ ಬೆಳ್ಳಿ ತೆರೆ ಮೇಲೆ ವೇದ ಮೂಲಕ ಸಿಕ್ಕಾಪಟ್ಟೆ ಜನರ ಮನಸನ್ನ ಕೊಳ್ಳೆ ಹೊಡೆದಿದ್ದಾರೆ. ಇನ್ನೊಂದು ಕಡೆಗೆ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ Muay Thai fight ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಬಹು ರೂಪಿ ಅರುಣ್ ಸಾಗರ್ ಮಕ್ಕಳ ಬಗೆಗಿನ ಇನ್ನೂ ಒಂದಷ್ಟು ವಿಶೇಷತೆಗಳು ಇಲ್ಲಿವೆ ಓದಿ.
ಅರುಣ್ ಸಾಗರ್ ಮಗಳು ಅದಿತಿ ಈಗೀನ ಸೆನ್ಷೇಷನ್!
ಬಿಗ್ ಬಾಸ್ ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಸದ್ಯದ ಸೆನ್ಷೇಷನ್ ಆಗಿದ್ದಾರೆ. ಅಭಿನಯಿಸಿರೋ ಮೊದಲ ಸಿನಿಮಾದಿಂದಲೇ ಗಮನ ಸೆಳೆದಿದ್ದಾರೆ. ಶಿವರಾಜ್ ಕುಮಾರ್ ಜೊತೆಗೆ ಮಗಳ ಪಾತ್ರ ಮಾಡೋ ಮೂಲಕ ಇಡೀ ಕನ್ನಡ ನಾಡಿನ ಸಿನಿ ಪ್ರೇಕ್ಷಕರ ಫೇವರಿಟ್ ಆಗಿದ್ದಾರೆ.
ವೇದ ಸಿನಿಮಾದಲ್ಲಿ ಅದಿತಿಗೆ ಮಾತುಗಳೇ ಇಲ್ಲ. ಕಣ್ಣು ಮತ್ತು ಆ್ಯಕ್ಷನ್ ಮೂಲಕವೇ ಅದಿತಿ ಸಿನಿ ಪ್ರೇಮಿಗಳನ್ನ ಸೆಳೆದು ಬಿಟ್ಟಿದ್ದಾರೆ. ಮೊದಲ ಸಿನಿಮಾ ಅನ್ನೋ ಹಾಗೇ ಇಲ್ಲ. ಅಷ್ಟು ಪರ್ಫೆಕ್ಟ್ ಆಗಿಯೇ ಅದಿತಿ ಸಾಗರ್ ಅಭಿನಯಿಸಿದ್ದಾರೆ.
ಅದಿತಿ ಸಾಗರ್ ಮುಂದಿನ ಸಿನಿಮಾ ಯಾವುದು?
ಕನ್ನಡದ ವೇದ ಸಿನಿಮಾದಲ್ಲಿ ಅದಿತಿ ಸಾಗರ್ ಅಭಿನಯ ಸೂಪರ್ ಆಗಿದೆ. ಇದನ್ನ ಕಂಡ ಅನೇಕರು ಒಳ್ಳೆ ಕಲಾವಿದೆ ಕನ್ನಡಕ್ಕೆ ಸಿಕ್ಕಿದ್ದಾರೆ ಅಂತಲೇ ಹೇಳುತ್ತಿದ್ದಾರೆ. ನಿಜಕ್ಕೂ ಅದಿತಿ ಸಾಗರ್ ಮೊದಲ ಸಿನಿಮಾದಲ್ಲಿ ಭಾರೀ ಸ್ಕೋರ್ ಮಾಡೋ ಮೂಲಕ ತಂದೆ ಅರುಣ್ ಸಾಗರ್ ಅವರಿಗೆ ಒಳ್ಳೆ ಗಿಫ್ಟ್ ಅನ್ನೆ ಕೊಟ್ಟಿದ್ದಾರೆ.
ಇಲ್ಲಿವರೆಗೂ ಬಿಗ್ ಬಾಸ್ ಮನೆಯಲ್ಲಿಯೇ ಇದ್ದ ಅರುಣ್ ಸಾಗರ್ ಈಗ ಹೊರಗೆ ಬಂದಿದ್ದಾರೆ. ಮಗಳಿಗೆ ಪೆಟ್ಟಾಗಿದೆ ಅಂತಲೇ ಒಂದರ್ಧ ದಿನದ ಮಟ್ಟಿಗೆ ಅರುಣ್ ಸಾಗರ್ ಹೊರಗೆ ಬಂದಿದ್ದರು. ಅದಾದ್ಮೇಲೆ ಈಗ ಮನೆಯಿಂದ ಹೊರ ಬಂದು ಮಗಳ ವೇದ ಚಿತ್ರದ ರೋಚಕ ಅಭಿನಯ ಕೇಳಿ ಖುಷಿ ಆಗಿದ್ದಾರೆ.
ರೀಲ್ ಅಲ್ಲಿ ಅದಿತಿ-ರಿಯಲ್ ಅಲ್ಲಿ ಸೂರ್ಯ ಶೈನಿಂಗ್
ಅರುಣ್ ಸಾಗರ್ ಅವರಿಗೆ ಮಗ ಕೂಡ ಇದ್ದಾರೆ. ಅವರ ಹೆಸರು ಸೂರ್ಯ ಸಾಗರ್. ಸೂರ್ಯ ಪಕ್ಕಾ ರಿಯಲ್ ಫೈಟರ್ ಆಗಿದ್ದಾರೆ. ಬೆಳ್ಳಿ ತೆರೆ ಮೇಲೆ ಬಂದರೆ ಏನ್ ಧಮಾಕಾ ಮಾಡ್ತಾರೋ ಗೊತ್ತಿಲ್ಲ. ಆದರೆ ರಿಂಗ್ ಅಲ್ಲಿ ಇಳಿದ್ರೆ ಮುಗಿತು, ಸೂರ್ಯ ಎದುರಿಗೆ ಇರೋರನ್ನ ಹೊಡೆದು ಕೆಡವದೆ ಬಿಡೋದಿಲ್ಲ.
ಅಷ್ಟು ಸ್ಟ್ರಾಂಗ್ ಆಗಿಯೇ ಇರೋ ಸೂರ್ಯ ಸಾಗರ್, ಥೈಲ್ಯಾಂಡ್ನಲ್ಲಿ ನಡೆಯೋ Muay Thai fight ನಲ್ಲಿ ಸಾಧನೆ ಮಾಡುತ್ತಲೇ ಬಂದಿದ್ದಾರೆ. ಜುಲೈ-28 ರಂದು ಥೈಲ್ಯಾಂಡ್ನಲ್ಲಿ ನಡೆದ ಮುವಾಯ್ ಥಾಯ್ ಪಂದ್ಯದಲ್ಲಿ ಸೂರ್ಯ ಸಾಗರ್ ಅದ್ಭುತ ಫೈಟ್ ಪ್ರದರ್ಶಿಸಿದ್ದಾರೆ. ಮ್ಯಾಕ್ಸ್ ಮುವಾಯ್ ಥಾಯ್ ಚಾಂಪಿಯನ್ Chatapetch Sapida ಅನ್ನ ಮೂರು ನಿಮಿಷಯದ ಮೂರು ರೌಂಡ್ ನಲ್ಲಿ ಪಂದ್ಯದಲ್ಲಿ ಸೋಲಿಸಿ ಬೀಗಿದ್ದಾರೆ.
ಇದನ್ನೂ ಓದಿ: Vikram Ravichandran New Movie: ರವಿಚಂದ್ರನ್ ಪುತ್ರ ವಿಕ್ರಮ್ ಚಿತ್ರದಲ್ಲಿ ಮುಧೋಳ ನಾಯಿ ಪ್ರತ್ಯಕ್ಷ!
ಅರುಣ್ ಸಾಗರ್, ಸೂರ್ಯ ಸಾಗರ್, ಅದಿತಿ ಸಾಗರ್!
ಅಪ್ಪ ಮಕ್ಕಳು ತಮ್ಮದೇ ರೀತಿಯಲ್ಲಿ ಈಗ ಶೈನ್ ಆಗುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ಅರುಣ್ ಸಾಗರ್ ಸಾಕಷ್ಟು ಎಂಟರಟೈನ್ ಮಾಡಿದ್ದಾರೆ. ವೇದ ಮೂಲಕ ಅದಿತಿ ಸಾಗರ್ ಹೆಣ್ಣು ಮಕ್ಕಳ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಮುವಾಯ್ ಥಾಯ್ ರಿಂಗ್ ನಲ್ಲಿ ಸೂರ್ಯ ಸಾಗರ್ ಮಿಂಚಿದ್ದಾರೆ. ಒಟ್ಟಾರೆ ಸಾಗರ್ ಫ್ಯಾಮಿಲಿ ಮಿಂಚಿಂಗೋ ಮಿಂಚಿಂಗ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ