ಅಲ್ಲಿ ದೊಡ್ಡ ನಟರುಗಳೇ ಹಿಂದೇಟು: ಇಲ್ಲಿ ಶೂಟಿಂಗ್ ಅಖಾಡಕ್ಕೆ ಬಿಗ್ ಸ್ಟಾರ್ಸ್..​!

ಸದ್ಯ ಪೊಗರು ಸಿನಿಮಾ ಟೈಟಲ್ ಟ್ರ್ಯಾಕ್ ಶೂಟ್ ಆಗ್ತಿದೆ. ಆಕ್ಷನ್ ‌ಪ್ರಿನ್ಸ್ ಧ್ರುವ ಶೂಟ್ ನಲ್ಲಿ ಭಾಗವಹಿಸಿದ್ದಾರೆ. ಹಾಗೆ ಯುವರತ್ನ ನಿಗಾಗಿ ಅಪ್ಪು ಸಹ ಫೀಲ್ಡಿಗೆ ಇಳಿದಿದ್ದಾರೆ. ಫೀಲ್ ದ ಪವರ್ ಅಂತ ಹಾಡಿಗೆ ಹೆಜ್ಜೆ ಹಾಕ್ತಿದ್ದಾರೆ. ತನ್ಮೂಲಕ ‌ಕನ್ನಡ ಚಿತ್ರರಂಗದ ಬಿಗ್ ಸ್ಟಾರ್ಸ್ ಎಲ್ಲಾ ಶೂಟ್ ನಲ್ಲಿ ಪಾಲ್ಗೊಳ್ಳುತ್ತಾ ಇದ್ದಾರೆ.

Dhruva Sarja-Sudeep

Dhruva Sarja-Sudeep

  • Share this:
ಕೊರೋನಾ ಅಬ್ಬರ ಹಾಗೆಯೇ ಇದೆ.. ಈಗಲೂ ಪ್ರತಿದಿನ 8 ಸಾವಿರಕ್ಕೂ ಹೆಚ್ಚು ಕೇಸ್ ಕರ್ನಾಟಕದಲ್ಲಿ ಬರ್ತಿದೆ. ಆದರೆ ಜನ ಈ ಮಹಾಮಾರಿಯನ್ನ ಮರೆತಂತಿದೆ. ಹಾಗೆಯೇ ಸ್ಯಾಂಡಲ್ ವುಡ್ ಸಹ ನಿಧಾನಕ್ಕೆ ಕೋವಿಡ್-19  ಭಯದಿಂದ ಹೊರ ಬರುತ್ತಿದೆ. ಇದಕ್ಕೆ ಸಾಕ್ಷಿಯೇ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳು ಬ್ಯಾಕ್ ಟು ಬ್ಯಾಕ್  ಶೂಟಿಂಗ್ ಆರಂಭಿಸಿರುವುದು.  ಮೊದಲಿಗೆ ಕಿಚ್ಚ‌ ಸುದೀಪ್ ನಟನೆಯ ಫ್ಯಾಂಟಮ್ ಮೂಲಕ ಚಿತ್ರೀಕರಣ ಕೆಲಸಗಳು ಸ್ಯಾಂಡಲ್ ವುಡ್ ನಲ್ಲಿ ಆರಂಭವಾದವು. ಆ ನಂತರ ಕನ್ನಡ ಚಿತ್ರರಂಗಕ್ಕೆ ಭಜರಂಗಿ ಬಲ ಸಿಕ್ತು. ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಭಜರಂಗಿ-2 ಗಾಗಿ ಶೂಟಿಂಗ್ ಅಖಾಡಕ್ಕೆ ಇಳಿದರು.

ಸದ್ಯ ಪೊಗರು ಸಿನಿಮಾ ಟೈಟಲ್ ಟ್ರ್ಯಾಕ್ ಶೂಟ್ ಆಗ್ತಿದೆ. ಆಕ್ಷನ್ ‌ಪ್ರಿನ್ಸ್ ಧ್ರುವ ಶೂಟ್ ನಲ್ಲಿ ಭಾಗವಹಿಸಿದ್ದಾರೆ. ಹಾಗೆ ಯುವರತ್ನ ನಿಗಾಗಿ ಅಪ್ಪು ಸಹ ಫೀಲ್ಡಿಗೆ ಇಳಿದಿದ್ದಾರೆ. ಫೀಲ್ ದ ಪವರ್ ಅಂತ ಹಾಡಿಗೆ ಹೆಜ್ಜೆ ಹಾಕ್ತಿದ್ದಾರೆ. ತನ್ಮೂಲಕ ‌ಕನ್ನಡ ಚಿತ್ರರಂಗದ ಬಿಗ್ ಸ್ಟಾರ್ಸ್ ಎಲ್ಲಾ ಶೂಟ್ ನಲ್ಲಿ ಪಾಲ್ಗೊಳ್ಳುತ್ತಾ ಇದ್ದಾರೆ.

ಆದರೆ ಪಕ್ಕದ ಟಾಲಿವುಡ್ ನಲ್ಲಿ ಇದಕ್ಕೆ ಭಿನ್ನವಾಗಿದೆ ಪರಿಸ್ಥಿತಿ. ಅಲ್ಲಿ ಸಣ್ಣಪುಟ್ಟ ನಟರನ್ನ ಬಿಟ್ಟರೆ ದೊಡ್ಡವರಾರು ಶೂಟಿಂಗ್ ಗೆ ಇಳಿದಿಲ್ಲ. ಮಹೇಶ್ ಬಾಬು, ಚಿರಂಜೀವಿ, ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್ ಹೀಗೆ ‌ಬಿಗ್ ಸ್ಟಾರ್ಸ್ ಗಳೆಲ್ಲಾ ಕೊರೊನಾ ಭಯದಲ್ಲೇ‌ ಇದ್ದಾರೆ. ಹೀಗಾಗಿ ಟಾಲಿವುಡ್ ಕೊರೋನಾ ಬಂದು ಆರು ತಿಂಗಳಾದ್ರೂ ಇನ್ನೂ ಸ್ತಬ್ಧವಾದಂತೆಯೇ ಇದೆ.

KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
Published by:zahir
First published: