ಸ್ಯಾಂಡಲ್ವುಡ್ನಲ್ಲಿ ಭೈರತಿ ರಣಗಲ್ (Bhairati Ranagal Movie Updates) ಪಾತ್ರ ಹೆಚ್ಚು ಖ್ಯಾತಿ ಪಡೆದಿದೆ. 6 ವರ್ಷ ಹಿಂದೆ ಬಂದಿದ್ದ ಮಫ್ತಿ ಚಿತ್ರದ ಈ ಪಾತ್ರ ಇಡೀ ಕಥೆ ಈಗ ಸಿನಿಮಾ ಆಗಿ ಬರ್ತಿದೆ. ಡೈರೆಕ್ಟರ್ ನರ್ತನ್ ಸೃಷ್ಟಿಸಿದ್ದ ಈ (Bhairati Ranagal Cinema) ರೋಲ್ಗೆ ವಿಶೇಷ ಗತ್ತಿದೆ. ಆದರೆ ಮಫ್ತಿ ಚಿತ್ರದಲ್ಲಿ (Mufti Film) ಈ ಕ್ಯಾರೆಕ್ಟರ್ನ ಕೆಲವು ಝಲಕ್ ಮಾತ್ರ ಸಿಕ್ಕಿತ್ತು. ಇದನ್ನೆ ನೋಡಿ ಜನ ವ್ಹಾವ್ ಅಂತಲೇ ಉದ್ಘರಿಸಿದ್ದರು. ಶಿವರಾಜ್ ಕುಮಾರ್ (Shiva Rajkumar Movie) ನಿರ್ವಹಿಸಿದ್ದ ಈ ಪಾತ್ರ ತುಂಬಾನೇ ಹೆಸರು ತಂದುಕೊಡ್ತು. ಅದೇ ಪಾತ್ರದೊಂದಿಗೆ ಶಿವರಾಜ್ ಕುಮಾರ್ ಮತ್ತೆ ಬರ್ತಿದ್ದಾರೆ. ಭೈರತಿ ರಣಗಲ್ ಆಗಿಯೇ ಕಂಗೊಳಿಸಲಿದ್ದಾರೆ.
ಮೊನ್ನೆ ಶಿವರಾತ್ರಿ ದಿನ ಈ ಚಿತ್ರದ ಟೈಟಲ್ ರಿವೀಲ್ ಆಗಿದೆ. ಶಿವರಾಜ್ ಕುಮಾರ್ ನಿರ್ಮಾಣ ಸಂಸ್ಥೆಯಾದ ಗೀತಾ ಪಿಕ್ಚರ್ನಿಂದಲೇ ಈ ಚಿತ್ರದ ನಿರ್ಮಾಣ ಆಗುತ್ತಿದೆ.
ಸಂಚಲನ ಸೃಷ್ಟಿಸಿದ ಭೈರತಿ ರಣಗಲ್ ಶಿವಣ್ಣನ ರೋಲ್
ವೇದ ಚಿತ್ರದ ಬಳಿಕ ಗೀತಾ ಪಿಕ್ಚರ್ಸ್ ಮೂಲಕವೇ ಶಿವಣ್ಣನ ಭೈರತಿ ರಣಗಲ್ ಸಿನಿಮಾ ಬರ್ತಿದೆ. ನರ್ತನ್ ಭೈರತಿ ರಣಗಲ್ ಅನ್ನುವ ಪಾತ್ರ ಸೃಷ್ಟಿಸಿ ಇಂಡಸ್ಟ್ರೀಯಲ್ಲಿ ಭಾರೀ ಸಂಚಲನ ಕ್ರಿಯೆಟ್ ಮಾಡಿದ್ದಾರೆ.
ಮಫ್ತಿ ಪ್ರಿಕ್ವೆಲ್ ಚಿತ್ರದಲ್ಲಿ ಇದೇ ಪಾತ್ರದ ಕಥೆಯನ್ನ ವಿಸ್ತರಿಸಿ ಡೈರೆಕ್ಟರ್ ನರ್ತನ್ ಈಗ ಭೈರತಿ ರಣಗಲ್ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಕಥೆಯ ಕೆಲಸ ಪೂರ್ಣ ಆಗಿದ್ದು, ಸಣ್ಣ ಪುಟ್ಟ ಕೆಲಸ ಬಾಕಿ ಇವೆ.
ಶೀಘ್ರದಲ್ಲಿಯೇ ಭೈರತಿ ರಣಗಲ್ ಹೊಸ ನ್ಯೂಸ್
ಅದಕ್ಕೂ ಮೊದಲೇ ಗೀತಾ ಪಿಕ್ಚರ್ಸ್ ಈಗೊಂದು ಅನೌನ್ಸ್ಮೆಂಟ್ ಮಾಡಿದೆ. ಸೋಷಿಯಲ್ ಮೀಡಿಯಾದ ತಮ್ಮ ಪೇಜ್ನಲ್ಲಿ ಮಾರ್ಚ್-05 ರಂದು ಒಂದಷ್ಟು ವಿಶೇಷತೆ ರಿವೀಲ್ ಆಗಲಿದೆ ಅನ್ನೋದನ್ನ ಅಧಿಕೃತವಾಗಿಯೇ ಹೇಳಿಕೊಂಡಿದೆ.
ಮೊನ್ನೆ ಕೇವಲ ಚಿತ್ರದ ಟೈಟಲ್ ಮತ್ತು ಡೈರೆಕ್ಟರ್ ಬಗ್ಗೆ ಹೇಳಲಾಗಿದೆ. ಆದರೆ ಮಾರ್ಚ್-5 ರಂದು ಭೈರತಿ ರಣಗಲ್ ಚಿತ್ರದ ಟೈಟಲ್ ಡಿಸೈನ್ ರಿವೀಲ್ ಆಗುತ್ತಿದೆ.
ಮಾರ್ಚ್-05 ರಂದು ಭೈರತಿ ರಣಗಲ್ ಬಿಗ್ ಅಪ್ಡೇಟ್ಸ್
ಭೈರತಿ ರಣಗಲ್ ಚಿತ್ರದ ಟೆಕ್ನಿಷನ್ಗಳ ಬಗ್ಗೆ ಯಾವುದೇ ಮಾಹಿತಿ ಇನ್ನು ಹೊರಬಿದ್ದಿಲ್ಲ. ಅದನ್ನೂ ಮಾರ್ಚ್-05 ರಂದು ಹೇಳೋಕೆ ಸಿನಿಮಾ ಟೀಮ್ ಪ್ಲಾನ್ ಮಾಡಿದೆ.
ಭೈರತಿ ರಣಗಲ್ ಸಿನಿಮಾ ಕೇವಲ ಕನ್ನಡದಲ್ಲಿ ಈ ಸಲ ತಯಾರಾಗುತ್ತಿಲ್ಲ. ತೆಲುಗು, ಹಿಂದಿಯಲ್ಲೂ ರೆಡಿ ಆಗುತ್ತದೆ. ಇತರ ಭಾಷೆಗೆ ಡಬ್ ಮಾಡುವ ಪ್ಲಾನ್ ಕೂಡ ಇದೆ.
ಪಂಚ ಭಾಷೆಯಲ್ಲಿ ಭೈರತಿ ರಣಗಲ್ ಸಿನಿಮಾ
ಇದರ ಹೊರತಾಗಿ ಕನ್ನಡದ ಭೈರತಿ ರಣಗಲ್ ಸಿನಿಮಾ ಪಂಚ ಭಾಷೆಯಲ್ಲಿ ಬರೋದು ಪಕ್ಕಾ ಆಗಿದೆ. ಕನ್ನಡದ ಶಿವಣ್ಣನ ಸಿನಿಮಾಗಳು ಕರ್ನಾಟಕ ಬಿಟ್ರೆ, ತೆಲುಗು ಭಾಷೆಯಲ್ಲಿ ರಿಲೀಸ್ ಆಗಿರೋ ಮಾಹಿತಿ ಇದೆ.
ಆದರೆ ಭೈರತಿ ರಣಗಲ್ ಸಿನಿಮಾ ಪ್ಯಾನ್ ಇಂಡಿಯಾ ಲೆವಲ್ಗೆ ರಿಲೀಸ್ ಆಗೋಕೆ ಸಿದ್ಧತೆ ಮಾಡಿಕೊಳ್ತಿರೋ ಹಾಗೆ ಕಾಣುತ್ತಿದೆ. ಅದರ ಇತರ ಮಾಹಿತಿ ಮಾರ್ಚ್-05 ರಂದು ದೊರೆಯೋ ಸಾಧ್ಯತೆ ಕೂಡ ಇದೆ.
ಬಹು ಭಾಷೆಯಲ್ಲಿ ಭೈರತಿ ರಣಗಲ್ ಸಿನಿಮಾ
ಭೈರತಿ ರಣಗಲ್ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತದೆ. ಚಿತ್ರಕ್ಕಾಗಿಯೇ ಪ್ರತಿಭಾವಂತರ ಟೀಮ್ ರೆಡಿ ಆಗಿದೆ. ಡೈರೆಕ್ಟರ್ ನರ್ತನ್ ಆಲ್ ಮೋಸ್ಟ್ ರೆಡಿ ಆಗಿದ್ದಾರೆ.
ಇದನ್ನೂ ಓದಿ: Puneeth Rajkumar: ಅಪ್ಪು ಜನ್ಮ ದಿನಕ್ಕೆ ದೊಡ್ಮನೆಯ ಯುವರಾಜನ ಅಬ್ಬರ ಶುರು!
ಸಿನಿಮಾದ ಇತರ ಮಾಹಿತಿ ಮಾರ್ಚ್-05 ರಂದು ದೊರೆಯುತ್ತವೆ. ಸಿನಿಮಾ ತಂಡ ಸದ್ಯಕ್ಕೆ ಮಾರ್ಚ್-5ರ ವರೆಗೂ ವೇಟ್ ಮಾಡಿ ಅನ್ನುವ ಅರ್ಥದಲ್ಲಿಯೆ ಈಗ ಒಂದು ಪೋಸ್ ರಿಲೀಸ್ ಮಾಡಿ, ಮತ್ತಷ್ಟು ಇನ್ನಷ್ಟು ಕುತೂಹಲ ಕ್ರಿಯೇಟ್ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ