ಕನ್ನಡ ಸೀರಿಯಲ್ ಲೋಕದಲ್ಲಿ ಹೊಸ (Sudarshan Rangaprasad Updates) ಹೊಸ ಧಾರವಾಹಿಗಳು ಬರ್ತಾನೇ ಇವೆ. ಹೊಸ ಕಥೆ ಹೊಸ ಕಲಾವಿದರು ಜನರನ್ನ ರಂಜಿಸುತ್ತಲೇ ಇದ್ದಾರೆ. ಸಿನಿಮಾದಿಂದ (Secret Reveal) ಸೀರಿಯಲ್‌ಗೆ ಬಂದವರೂ ಹೊಳೆಯುತ್ತಿದ್ದಾರೆ. ಸೀರಿಯಲ್‌ನಿಂದ ಸಿನಿಮಾಗೆ ಹೋದವ್ರು ವಾಪಸ್ ಗೂಡಿಗೆ ಮರಳುತ್ತಿದ್ದಾರೆ. ಹಾಗಾಗಿಯೇ ಕನ್ನಡ ಸೀರಿಯಲ್‌ಗಳಲ್ಲಿ ಹೊಸ (Serial Actor Secrets Reveal) ಮುಖ ಮತ್ತು ಹಳೆ ಮುಖಗಳು ಹೊಸ ರೀತಿಯ ಭಾವನೆ ಕೊಡ್ತಾನೇ ಇವೆ. ಹಾಗಾಗಿಯೇ ಹೊಸ ಸೀರಿಯಲ್‌ಗಳಲ್ಲಿ ಅಂತರಪಟ ಸೀರಿಯಲ್ ಈಗಷ್ಟೇ ಶುರು ಆಗಿದೆ. ಒಲವಿನ ನಿಲ್ದಾಣ (Bhagyalakshmi Serial Actor Sudarshan) ಓಡ್ತಿದೆ. ಭಾಗ್ಯಲಕ್ಷ್ಮಿ ಸೀರಿಯಲ್ ಜನರ ಮನದಲ್ಲಿ ಮನೆ ಮಾಡಿದೆ. ಇದೇ ಸೀರಿಯಲ್‌ನಲ್ಲಿ ತಾಂಡವ ಸೂರ್ಯವಂಶಿ ಪಾತ್ರ ಕಿಚ್ಚು ಹಚ್ಚುತ್ತಿದೆ. ಇದರ ಒಂದಷ್ಟು ಇಂಟ್ರಸ್ಟಿಂಗ್ ಇಲ್ಲಿವೆ ಓದಿ.
ತಾಂಡವ್ ಸೂರ್ಯವಂಶಿ ಪಾತ್ರಧಾರಿ ಅಸಲಿ ಸೀಕ್ರೆಟ್ ರಿವೀಲ್
ಭಾಗ್ಯಲಕ್ಷ್ಮಿ ಸೀರಿಯಲ್ ವಿಶೇಷವಾಗಿಯೇ ಕಾಣಿಸುತ್ತಿದೆ. ಇದರಲ್ಲಿ ಬರುವ ಪಾತ್ರಗಳು ತುಂಬಾನೇ ಸ್ಪೆಷಲ್ ಅನಿಸುತ್ತವೆ. ಸೀರಿಯಲ್ ಪ್ರಿಯರಿಗೆ ಇದರಲ್ಲಿ ಭಾಗ್ಯಲಕ್ಷ್ಮಿ ಪಾತ್ರಧಾರಿಗಳಾದ ಸುಷ್ಮಾ ಮತ್ತು ಭೂಮಿ ತುಂಬಾನೆ ಇಷ್ಟ ಆಗಿದ್ದಾರೆ.
ಭಾಗ್ಯಲಕ್ಷ್ಮೀ ಸೀರಿಯಲ್ ಪಾತ್ರಗಳು ಜನರಿಗೆ ಅಚ್ಚು-ಮೆಚ್ಚು
ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇನ್ನೂ ಒಂದಷ್ಟು ಪಾತ್ರಗಳೂ ಇವೆ. ಅದರಲ್ಲಿ ಕೀರ್ತಿ ರೋಲ್ ಮಾಡಿರೋ ತನ್ವಿ ರಾವ್ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ. ವೈಷ್ಣವ್ ರೋಲ್ ನಿರ್ವಹಿಸಿರೋ ಬ್ರೋ ಗೌಡನೂ ಮಿಂಚುತ್ತಿದ್ದಾರೆ.
ಇದರ ಮಧ್ಯೆ ತೀರಾ ವಿಭಿನ್ನ ಅನಿಸುವ ಇನ್ನೂ ಒಂದು ಪಾತ್ರ ಕೂಡ ಇದೆ. ಅದೇ ತಾಂಡವ್ ಸೂರ್ಯವಂಶಿ ಅನ್ನೋದು ಎಲ್ಲರಿಗೂ ಈಗಾಗಲೇ ಗೊತ್ತಾಗಿದೆ. ಈ ಒಂದು ರೋಲ್ ಬಗ್ಗೇನೆ ಇದೀಗ ಇಂಟ್ರಸ್ಟಿಂಗ್ ವಿಷಯವನ್ನ ಹೇಳೋದಿದೆ.
ತಾಂಡವ್ ಸೂರ್ಯವಂಶಿ ಪಾತ್ರದ ಅಬ್ಬರ ಬಲು ಜೋರು
ಹೌದು, ತಾಂಡವ್ ಸೂರ್ಯವಂಶಿ ಪಾತ್ರವನ್ನ ಜನ ಮೆಚ್ಚಿಕೊಂಡಿದ್ದಾರೆ. ಅಮ್ಮ ಹೇಳಿದ ಹುಡುಗಿಯನ್ನ ಮದುವೆಯಾಗಿ ಒದ್ದಾಡ್ತಿರೋ ಈ ರೋಲ್ ಅನ್ನ ಸ್ಟಾಂಡಪ್ ಕಾಮಿಡಿಯನ್ ಹಾಗೂ ರಂಗಭೂಮಿ ಕಲಾವಿದ ಸುದರ್ಶನ್ ರಂಗಪ್ರಸಾದ್ ನಿರ್ವಹಿಸಿದ್ದಾರೆ.
ಸುದರ್ಶನ್ ರಂಗಪ್ರಸಾದ್ ತಮ್ಮ ಸಿನಿಮಾ ಜೀವನದಲ್ಲಿ ವಿಶೇಷವಾಗಿಯೇ ಕೆಲಸ ಮಾಡಿದ್ದಾರೆ. ಸ್ಟಾಂಡಪ್ ಕಾಮಿಡಿ ಮಾಡ್ತಾನೇ ಗುರುತಿಸಿಕೊಂಡಿದ್ದರು. ಆದರೆ ದೊಡ್ಡಮಟ್ಟದಲ್ಲಿ ಎಲ್ಲರಿಗೂ ಪರಿಚಯ ಆಗಿರೋದು ಈ ಒಂದು ತಾಂಡವ್ ಸೂರ್ಯವಂಶಿ ಪಾತ್ರದ ಮೂಲಕವೇ ಆಗಿದೆ.
ಸ್ಟ್ಯಾಂಡಪ್ ಕಾಮಿಡಿಯನ್ ಇದೀಗ ಸೂಪರ್ ಆ್ಯಕ್ಟರ್
ಈ ಸೀರಿಯಲ್ ಮೂಲಕ ಕನ್ನಡ ಸೀರಿಯಲ್ ಲೋಕದಲ್ಲಿ ಸುದರ್ಶನ್ ಹೊಸ ರೀತಿಯಲ್ಲಿ ಕಾಣಿಸುತ್ತಿದ್ದಾರೆ. ಆದರೆ ಒಂದು ವಿಷಯ ನಿಮಗೆ ಗೊತ್ತೇ? ಈ ಸೀರಿಯಲ್‌ಗೆ ಸೆಲೆಕ್ಟ್ ಆಗೋ ಮುಂಚೆ ಆಡಿಷನ್ ವಿಡಿಯೋವನ್ನ ಯಾರು ಮಾಡಿದ್ದು ಗೊತ್ತೇ?
ಹೌದು, ಈ ಒಂದು ಸೀಕ್ರೆಟ್ ಅನ್ನ ಸುದರ್ಶನ್ ರಂಗಪ್ರಸಾದ್ ವೈಫ್ ಸಂಗೀತ ಭಟ್ ಈಗ ರಿವೀಲ್ ಮಾಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಸ್ಪೆಷಲ್ ಸಂದರ್ಶನದಲ್ಲಿ ಸಂಗೀತ ಈ ಒಂದು ವಿಷಯವನ್ನ ಹೇಳಿಕೊಂಡಿದ್ದಾರೆ.
ತಾಂಡವ್ ಸೂರ್ಯವಂಶಿ ಪಾತ್ರದ ಆಡಿಷನ್ ಮಾಡಿರೋದು ಯಾರು?
ಸುದರ್ಶನ್ ತುಂಬಾನೇ ಸಾಫ್ಟ್ ಆಗಿದ್ದಾರೆ. ಸೀರಿಯಲ್‌ನಲ್ಲಿ ನೀವು ನೋಡ್ತಿರೋ ಹಾಗೆ ಸುದರ್ಶನ್ ಇಲ್ವೇ ಇಲ್ಲ. ಆದರೆ ನಿಮಗೆ ಗೊತ್ತೇ? ಈ ಒಂದು ರೋಲ್‌ಗೆ ಆಡಿಷನ್ ವಿಡಿಯೋ ಶೂಟ್ ಮಾಡಿರೋದು ನಾನೇ ಎಂದು ಸಂಗೀತಾ ಭಟ್ ಹೇಳಿದ್ದಾರೆ.
ಸುದರ್ಶನ್ ಒಳ್ಳೆ ರೈಟರ್ ಕೂಡ ಆಗಿದ್ದಾರೆ. ತಮ್ಮ ಸ್ಟಾಂಡಪ್ ಕಾಮಿಡಿ ಸ್ಕ್ರಿಪ್ಟ್ ಅವರೇ ಬರೆದುಕೊಳ್ಳುತ್ತಿದ್ದರು. ಇವರಿಗೆ ಸ್ಕ್ರಿಪ್ಟ್ ಬರೆಯೋ ಆಸಕ್ತಿ ತುಂಬಾನೇ ಇದೆ. ಆದರೆ ಭಾಗ್ಯಲಕ್ಷ್ಮಿ ಸೀರಿಯಲ್‌ನ ತಾಂಡವ್ ಸೂರ್ಯವಂಶಿ ಪಾತ್ರವನ್ನ ಇವರು ಮಾಡ್ತಾರಾ? ಅನ್ನುವ ಅನುಮಾನ ಇತ್ತು.
ಇದೀಗ ಸುದರ್ಶನ್ ರಂಗಪ್ರಸಾದ್ ತುಂಬಾನೇ ಫೇಮಸ್
ಆದರೆ ತಾಂಡವ್ ಸೂರ್ಯವಂಶಿ ಪಾತ್ರದ ಮೂಲಕ ಸುದರ್ಶನ್ ತುಂಬಾನೇ ಹೊಳೆಯುತ್ತಿದ್ದಾರೆ. ನಾವು ಹೊರಗಡೆ ಹೋದಾಗಲೂ ಅಷ್ಟೇ, ಜನ ತಾಂಡವ್ ಸೂರ್ಯವಂಶಿ ಅಂತ ಸುದರ್ಶನ್ ಅವರನ್ನ ಗುರುತು ಹಿಡಿದು ಮಾತನಾಡಿಸುತ್ತಾರೆ.
ಇದನ್ನೂ ಓದಿ: Disha Patani: ಟೈಗರ್ ಮಾಜಿ ಗರ್ಲ್ ಫ್ರೆಂಡ್ ದಿಶಾ ಪಟಾನಿ ಫೈಟ್! ಆಗಿದ್ದೇನು?
ಇದನ್ನ ನೋಡಿದಾಗ ನನಗೆ ತುಂಬಾನೇ ಖುಷಿ ಆಗುತ್ತದೆ. ಸುದರ್ಶನ್ ಮತ್ತು ನಾನು ಪ್ರೀತಿ-ಗೀತಿ-ಇತ್ಯಾದಿ ಸಿನಿಮಾ ಮೂಲಕ ಪರಿಚಯ ಆದೆವು. ಆಮೇಲೆ ಪ್ರೀತಿ-ಪ್ರೇಮ ಮದುವೆ ಹೀಗೆ ನಮ್ಮ ಲೈಫ್ ಸೂಪರ್ ಆಗಿಯೇ ಇದೆ ಅಂತ ಸಂಗೀತಾ ಭಟ್ ಹೇಳಿಕೊಂಡರು. ಪತಿಯ ಯಶಸ್ಸಿಗೆ ಅಷ್ಟೇ ಖುಷಿಯನ್ನ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ