KGF Chapter 2: ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕಿಡ್ನಾಪ್; ವಿಡಿಯೋ ಹರಿಬಿಟ್ಟ ಆಗಂತುಕರು

Ravi basrur Kidnapped: ರವಿ ಬಸ್ರೂರ್​ ನಿರ್ದೇಶನದ ‘ಗಿರ್ಮಿಟ್​’ ಸಿನಿಮಾಈ ವಾರ ತೆರೆಗೆ ಬಂದಿದೆ. ಎಲ್ಲ ಕಡೆಗಳಿಂದ ಮೆಚ್ಚುಗೆ ಕೂಡ ಪಡೆದುಕೊಳ್ಳುತ್ತಿದೆ. ಹೀಗಿರುವಾಗ ‘ಗಿರ್ಮಿಟ್​’ ಸಿನಿಮಾ ಕಲಾವಿದರೇ ರವಿ ಬಸ್ರೂರ್​ ಅವರನ್ನು ಕಿಡ್ನಾಪ್​ ಮಾಡಿದ್ದಾರೆ!

Rajesh Duggumane | news18-kannada
Updated:November 12, 2019, 12:21 PM IST
KGF Chapter 2: ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕಿಡ್ನಾಪ್; ವಿಡಿಯೋ ಹರಿಬಿಟ್ಟ ಆಗಂತುಕರು
ರವಿ ಬಸ್ರೂರ್​
Rajesh Duggumane | news18-kannada
Updated: November 12, 2019, 12:21 PM IST
‘ಕೆಜಿಎಫ್​’ಗೆ ಸಂಗೀತ ಸಂಯೋಜನೆ ಮಾಡಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದ ರವಿ ಬಸ್ರೂರ್​ ಈಗ ಕಿಡ್ನಾಪ್​ ಆಗಿದ್ದಾರೆ! ಇವರನ್ನು ಅಪಹರಿಸಿದ ಆಗಂತುಕರು ವಿಡಿಯೋ ಹರಿ ಬಿಟ್ಟಿದ್ದಾರೆ. ಅರೆ, ಇವರನ್ನು ಕಿಡ್ನಾಪ್​ ಮಾಡಿದ್ದು ಬೇರಾರು ಅಲ್ಲ, ‘ಗಿರ್ಮಿಟ್​’ ಸಿನಿಮಾ ತಂಡ ಸದಸ್ಯರು!

ರವಿ ಬಸ್ರೂರ್​ ನಿರ್ದೇಶನದ ‘ಗಿರ್ಮಿಟ್​’ ಸಿನಿಮಾಈ ವಾರ ತೆರೆಗೆ ಬಂದಿದೆ. ಎಲ್ಲ ಕಡೆಗಳಿಂದ ಮೆಚ್ಚುಗೆ ಕೂಡ ಪಡೆದುಕೊಳ್ಳುತ್ತಿದೆ. ಹೀಗಿರುವಾಗ ‘ಗಿರ್ಮಿಟ್​’ ಸಿನಿಮಾ ಕಲಾವಿದರೇ ರವಿ ಬಸ್ರೂರ್​ ಅವರನ್ನು ಕಿಡ್ನಾಪ್​ ಮಾಡಿದ್ದೇಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಇದಕ್ಕೂ ಉತ್ತರವಿದೆ.

ನಿಜಕ್ಕೂ ರವಿ ಬಸ್ರೂರ್​ ಕಿಡ್ನಾಪ್​ ಆಗಿಲ್ಲ. ಬದಲಿಗೆ ಸಿನಿಮಾ ಪ್ರಮೋಷನ್​ಗೆ ಹೀಗೊಂದು ಭಿನ್ನ ಮಾರ್ಗ ಅನುಸರಿಸಿದೆ ಚಿತ್ರತಂಡ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.



‘ಗಿರ್ಮಿಟ್​’ ಸಿನಿಮಾದಲ್ಲಿ ನಟಿಸಿದವರೆಲ್ಲರೂ ಮಕ್ಕಳು. ಈ ಮಕ್ಕಳು ರವಿ ಬಸ್ರೂರ್​ ಅವರನ್ನು ಅಪಹರಿಸಿ ಅಪರಿಚಿತ ಜಾಗ ಒಂದಕ್ಕೆ ಕರೆದು ತರುತ್ತಾರೆ. ಅಲ್ಲಿ, ಮಕ್ಕಳು ಸಿನಿಮಾ ಬಗ್ಗೆ ಒಂದಷ್ಟು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ರವಿ ಬಸ್ರೂರ್​​ ಉತ್ತರಿಸುತ್ತಾರೆ. ನಂತರ ನಾವು ಈ ರೀತಿ ಮಾಡಿದ್ದೇಕೆ ಎಂದು ಹೇಳಿಕೊಂಡಿದ್ದಾರೆ.

‘ಗಿರ್ಮಿಟ್​’ ಮಕ್ಕಳ ಸಿನಿಮಾ ಆಗಿದ್ದು, ಯಶ್​-ರಾಧಿಕಾ ಹೀರೋ, ಹೀರೋಯಿನ್​ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಇದು ಸಿನಿಮಾದ ಪ್ಲಸ್​ ಪಾಯಿಂಟ್. ಬುಕ್​ ಮೈ ಶೋನಲ್ಲಿ 89 ರೇಟಿಂಗ್​ ತೆಗೆದುಕೊಂಡಿದೆ.

First published:November 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...