ನಿಧಾನವಾಗಿ ಕಿಕ್​ ಕೊಡುತ್ತಿದೆ 'ಬಜಾರ್​' ಸಿನಿಮಾದ ಈ ಹಾಡು..!

news18
Updated:August 12, 2018, 2:16 PM IST
ನಿಧಾನವಾಗಿ ಕಿಕ್​ ಕೊಡುತ್ತಿದೆ 'ಬಜಾರ್​' ಸಿನಿಮಾದ ಈ ಹಾಡು..!
news18
Updated: August 12, 2018, 2:16 PM IST
ನ್ಯೂಸ್​ 18 ಕನ್ನಡ

ಚಂದನವದಲ್ಲಿ ಪ್ರೀತಿ-ಪ್ರೇಮದ ಬ್ರೇಕಪ್​ ಹಾಡುಗಳಿಗೇನು ಕಡಿಮೆ ಇಲ್ಲ. ಪ್ರೇಮ ಕತೆಯಾಧಾರಿತ ಸಿನಿಮಾಗಳಲ್ಲಿ ಪ್ಯಾಥೋ ಹಾಡೊಂದು ಇದ್ದೇ ಇರುತ್ತದೆ. ಅದರಲ್ಲೂ ಹುಡುಗರ ಪ್ರೀತಿಯ ಬ್ರೇಕಪ್‍ ಹಾಡಿನ ಪಟ್ಟಿಗೆ ಈಗ ಹೊಸ ಹಾಡೊಂದು ಸೇರ್ಪಡೆಯಾಗಿದೆ.

ಪ್ರೀತಿ, ಪ್ರೇಮ ಎಲ್ಲ ಪುಸ್ತಪದ ಬದನೆಕಾಯಿ ಅಂತ ಗೊತ್ತಿದ್ದರೂ ಹುಡುಗರು ಪ್ರೀತಿ ಮಾಡೋದನ್ನ ಮಾತ್ರ ಬಿಡಲ್ಲ. ನಮ್ಮ ಚಂದನವನಕ್ಕೆ ಹೊಸದಾಗಿ ಎಂಟ್ರಿ ಕೊಡುತ್ತಿರೊ 'ಬಜಾರಿ'ನ ಹುಡುಗ ಧನ್ವೀರ್​ಗೂ ಲವ್ ಫೆಲ್ಯೂರ್ ಆಗಿದೆ. ಅವನ ಭಗ್ನ ಪ್ರೇಮಕ್ಕಾಗಿ ನಿರ್ದೇಶಕ ಸುನಿ ಒಂದು ಫೀಲಿಂಗ್‍ಫುಲ್ ಹಾಡು ಬರೆದಿದ್ದಾರೆ. ನಿಮಗೂ ಈ ಹಾಡು ಕೇಳಿ ಹಳೇ ಪ್ರೀತಿ ನೆನಪಾದರೆ ಅದನ್ನ ರಿಂಗ್‍ಟೋನ್ ಮಾಡಿಕೊಂಡು, ಹಳೇ ಹುಡುಗಿಗೆ ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿ,  ನಿಮ್ಮ ಭಾವನೆಯನ್ನು ಅವರಿಗೆ ತಿಳಿಸಿ. ಅದಕ್ಕೂ ಮೊದಲು ಈ ಹಾಡನ್ನು ಕೇಳಿ...


ಸುನಿ ನಿರ್ದೇಶನದ 'ಬಜಾರ್​' ಸಿನಿಮಾದಲ್ಲಿ ಡ್ಯಾನ್ಸ್ ಮಾಸ್ಟರ್ ಮುರಳಿ ಸಂಯೋಜಿಸಿರುವ ಹಾಡಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸುನಿ ಅವರ ಸಾಹಿತ್ಯ ಇರುವ ಈ ಹಾಡು ನಿಧಾನವಾಗಿ ಕಿಕ್ಕೇರಿಸುತ್ತಿದೆ.

 
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ