ಕನ್ನಡ ಚಿತ್ರರಂಗದಲ್ಲಿ ಬಯಲು ( Bayaluseeme Kannada movie)ಸೀಮೆಯ ಪ್ರತಿಭೆಗಳು ಸಾಕಷ್ಟು ಜನ ಇದ್ದಾರೆ. ಇಲ್ಲಿಯ ಭಾಷೆ ಬಗ್ಗೆ ಪ್ರೀತಿ ಇಟ್ಟುಕೊಂಡು ಹಾಡುಗಳನ್ನೂ ಬರೆಯುತ್ತಾರೆ. ಡೈಲಾಗ್ಗಳ (Uttara Karnataka Language dialogues) ಮೂಲಕ ಜವಾರಿ ಭಾಷೆಯನ್ನ ಜೀವಂತ ಇಟ್ಟಿದ್ದಾರೆ. ಡೈರೆಕ್ಟರ್ ಯೋಗರಾಜ್ ಭಟ್ರು ಕೂಡ ಬಯಲು ಸೀಮೆಯವರೇನೆ. ಅದನ್ನ ಅವರು ಆಗಾಗ ಹೇಳ್ತಾನೇ ಇರುತ್ತಾರೆ. ಹಾಡುಗಳನ್ನೂ ಬರೆಯುತ್ತಲೇ ಬಯಲುಸೀಮೆಯ ಜನರ ಮನದಲ್ಲಿ ಜಾಗ ಮಾಡಿಕೊಂಡಿದ್ದಾರೆ. ಆದರೆ ಈಗ ಈ ಬಯಲುಸೀಮೆ (bayaluseeme kannada movie songs) ಭಾಷೆಯನ್ನೆ ಪ್ರಮುಖವಾಗಿ ಇಟ್ಟುಕೊಂಡು, ಪೊಲಿಟಿಕಲ್ ಕ್ರೈಮ್ ಥ್ರಿಲ್ಲರ್ ಕಥೆಯ ಒಂದು ಸಿನಿಮಾ ಸೆಟ್ಟೇರಿದೆ. ಚಿತ್ರೀಕರಣ ಎಲ್ಲ ಮುಗಿಸಿಕೊಂಡ ತಂಡ ಈಗ (Bayaluseeme Ready to Release) ರಿಲೀಸ್ಗೂ ರೆಡಿ ಆಗಿದೆ.
ಅಂದ್ಹಾಗೆ ಈ ಚಿತ್ರಕ್ಕೆ ಬಯಲುಸೀಮೆ ಅಂತಲೇ ಹೆಸರಿದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿಯ ಒಂದು ಸ್ಟೋರಿ ಇಲ್ಲಿದೆ ಓದಿ.
ಬಯಲುಸೀಮೆ ಸಿನಿಮಾದಲ್ಲಿ ಜವಾರಿ ಭಾಷೆಯ ಡೈಲಾಗ್
ಕನ್ನಡದಲ್ಲಿ ಜವಾರಿ ಭಾಷೆಯನ್ನ ಕಾಮಿಡಿಗೆ ಬಳಸೋ ಕಾಲ ಹೋಗಿದೆ. ಇಲ್ಲಿಯ ಭಾಷೆಯ ಮೇಲೆ ಈಗ ಹಾಡುಗಳೇ ರೆಡಿ ಆಗುತ್ತವೆ. ಹಿಟ್ ಕೂಡ ಆಗೋದು ಈಗೀಗ ಕಾಮನ್ ಆಗಿದೆ.
ಬಯಲುಸೀಮೆ ಅಂದ್ರೆ, ಉತ್ತರ ಕರ್ನಾಟಕ ಅಂತ ಸಪರೇಟ್ ಆಗಿ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಗಂಡು ಭಾಷೆಯ ಈ ನೆಲದ ಕಥೆಯ ಮೇಲೇನೆ ಈಗೊಂದು ಸಿನಿಮಾ ಬರಲು ರೆಡಿ ಆಗಿದೆ. ಆ ಚಿತ್ರಕ್ಕೆ ಬಯಲುಸೀಮೆ ಅಂತೇ ಹೆಸರು ಇಡಲಾಗಿದೆ.
ಬಯಲುಸೀಮೆ ಚಿತ್ರದಲ್ಲಿ ಪೊಲಿಟಿಕಲ್ ಕ್ರೈಮ್ ಥ್ರಿಲ್ಲರ್ ಕಥೆ
ಮುಂಬೈ, ಬೀಳಗಿ, ಗಜೇಂದ್ರಗಡದಲ್ಲೂ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಪಕ್ಕಾ ಪೊಲಿಟಿಕಲ್ ಕ್ರೈಮ್ ಥ್ರಿಲ್ಲರ್ ಕಥೆಯನ್ನೆ ಈ ಚಿತ್ರ ಹೊಂದಿದೆ. ಇದರ ಹಾಡುಗಳು ಈಗಾಗಲೇ ರಿಲೀಸ್ ಆಗಿವೆ. ಒಂದು ಹಂತಕ್ಕೆ ಗಮನ ಕೂಡ ಸೆಳೆದಿದೆ. ವಿಶೇಷವಾಗಿ ಈ ಚಿತ್ರ ಬಯಲುಸೀಮೆ ಹೆಸರಿನಿಂದಲೇ ಹೆಚ್ಚು ಗಮನ ಸೆಳೆಯುತ್ತಿದೆ.
ಬಯಲುಸೀಮೆ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಜವಾರಿ ಭಾಷೆಯ ಡೈಲಾಗ್ಗಳೇ ಇವೆ. ಈ ಹಿನ್ನೆಲೆಯಲ್ಲಿ ಈ ಚಿತ್ರ ಇನ್ನಷ್ಟು ಇಲ್ಲಿಯ ಸಿನಿಮಾನೇ ಅನಿಸುತ್ತಿದೆ. ಚಿತ್ರದಲ್ಲಿ ಜವಾರಿ ಭಾಷೆಯ ಡೈಲಾಗ್ ಹೊಡೆಯೋ ಕಲಾವಿದರು ಹೊರಗಿನವರು ಇದ್ದಾರೆ. ಇಲ್ಲಿಯವರೂ ಇದ್ದಾರೆ.
ಬಯಲುಸೀಮೆ ಚಿತ್ರದ ಡೈರೆಕ್ಟರೇ ಇಲ್ಲಿ ಹೀರೋ!
ಬಯಲುಸೀಮೆ ಚಿತ್ರವನ್ನ ವರುಣ್ ಕಟ್ಟಿಮನಿ ಡೈರೆಕ್ಷನ್ ಮಾಡಿದ್ದಾರೆ. ಜೊತೆಗೆ ತಮ್ಮ ಈ ಚಿತ್ರಕ್ಕೆ ತಾವೇ ಹೀರೋ ಆಗಿದ್ದಾರೆ. ಕನ್ನಡ ಯುವ ನಟಿ ಸಂಯುಕ್ತಾ ಹೊರನಾಡು ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ಚಿತ್ರದಲ್ಲಿ ಇನ್ನೂ ಹಲವು ಪಾತ್ರಗಳೂ ಇವೆ.
ಸೀರಿಯಲ್ ನಲ್ಲಿ ಹೆಸರು ಮಾಡಿರೋ ನಟ ಸಂತೋಷ್ ಉಪ್ಪಿನ್ ಇಲ್ಲಿ ಪ್ರಮುಖ ಪಾತ್ರವನ್ನೆ ಮಾಡಿದ್ದಾರೆ. ಡೈರೆಕ್ಟರ್ ಟಿ.ಎಸ್.ನಾಗಾಭರಣ, ಯಶ್ ಶೆಟ್ಟಿ, ಖಳನಾಯಕ ನಟ ರವಿಶಂಕರ್ ಸೇರಿದಂತೆ ಇನ್ನೂ ಅನೇಕರು ಅಭಿನಯಿಸಿದ್ದಾರೆ.
ಬಯಲುಸೀಮೆ ಚಿತ್ರಕ್ಕೆ ಎ ಪ್ರಮಾಣ ಪತ್ರ ಬಂದಿದೆ
ಬಯಲುಸೀಮೆ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಆಗಿದೆ. ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಎ ಪ್ರಮಾಣ ಪತ್ರವನ್ನೆ ಕೊಟ್ಟಿದೆ. ಚಿತ್ರದ ಹಾಡುಗಳು ಈಗಾಗಲೇ ರಿಲೀಸ್ ಆಗಿವೆ.
ಶೀಘ್ರದಲ್ಲಿ ಸಿನಿಮಾ ಕೂಡ ರಿಲೀಸ್ ಆಗುತ್ತದೆ.
ಇದನ್ನೂ ಓದಿ: Vikram Ravichandran New Movie: ರವಿಚಂದ್ರನ್ ಪುತ್ರ ವಿಕ್ರಮ್ ಚಿತ್ರದಲ್ಲಿ ಮುಧೋಳ ನಾಯಿ ಪ್ರತ್ಯಕ್ಷ!
ಮಾನಸಾ ಹೊಳ್ಳ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ ಮಾಡಿದ್ದಾರೆ. ಇನ್ನುಳಿದಂತೆ ಜವಾರಿ ಭಾಷೆಯ ಬಯಲುಸೀಮೆ ಹೊಸ ಅಲೆ ಹರಿಸೋ ಹಾಗೆ ಭರವಸೆ ಮೂಡಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ