• Home
  • »
  • News
  • »
  • entertainment
  • »
  • Banaras Trailer Review: ನಾನು ನಿನ್ನ ಫ್ಯೂಚರ್ ಗಂಡ ಎಂದ ಟೈಮ್ ಟ್ರಾವೆಲರ್! ಬನಾರಸ್ ಚಿತ್ರದ ಟ್ರೈಲರ್ ರಿವ್ಯೂ ಇಲ್ಲಿದೆ

Banaras Trailer Review: ನಾನು ನಿನ್ನ ಫ್ಯೂಚರ್ ಗಂಡ ಎಂದ ಟೈಮ್ ಟ್ರಾವೆಲರ್! ಬನಾರಸ್ ಚಿತ್ರದ ಟ್ರೈಲರ್ ರಿವ್ಯೂ ಇಲ್ಲಿದೆ

ಕನ್ನಡದ ಬನಾರಸ್ ಟ್ರೈಲರ್ ಹೇಗಿದೆ ಗೊತ್ತೇ

ಕನ್ನಡದ ಬನಾರಸ್ ಟ್ರೈಲರ್ ಹೇಗಿದೆ ಗೊತ್ತೇ

ಟೈಮ್ ಟ್ರ್ಯಾವೆಲರ್ ಮಿಸ್ಟರ್ ಸಿದ್ಧಾರ್ಥ ಇಲ್ಲಿ ತನ್ನ ಹುಡುಗಿಗೆ ಪ್ರಪೋಸ್ ಕೂಡ ಮಾಡುತ್ತಾನೆ. ಅದು ತುಂಬಾ ಇಂಟ್ರಸ್ಟಿಂಗ್ ಆಗಿಯೇ ಇದೆ. ನಾನು ನಿನ್ನ ಪ್ಯೂಚರ್ ಹಸ್ಬಂಡ್ ಅಂತಲೇ ನಾಯಕ ನಟ ಇಲ್ಲಿ ಹೇಳೋದು ವಿಶೇಷ ಅನಿಸುತ್ತದೆ.

  • Share this:

ಕನ್ನಡದಲ್ಲಿ ಒಂದು ಸಿನಿಮಾ (Cinema Release) ರಿಲೀಸ್​ಗೆ ರೆಡಿ ಆಗಿದೆ. ಇದರ ಕಂಟೆಂಟ್​ (Content) ಏನೂ ಅನ್ನೋ ಕುತೂಹಲ ಇತ್ತು. ಚಿತ್ರದ ನಾಯಕನ ಮೊದಲ ಸಿನಿಮಾ ಅನ್ನೋ ಕಾರಣಕ್ಕೆ ಇಂಡಸ್ಟ್ರಿಯಲ್ಲಿ ಟಾಕ್ ಇದ್ದವು. ಅದರಲ್ಲೂ ಈ ಚಿತ್ರ ಪ್ಯಾನ್ (Pan India Film) ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ಇದರ ಹಾಡುಗಳನ್ನ ಗಮನಿಸಿದ್ರೆ, ಇದೊಂದು ಲವ್ ಸ್ಟೋರಿ ಸಿನಿಮಾ ಬಿಡಿ ಅಂತ ಹೇಳಬಹುದು. ಆದರೆ ಯಾವಾಗ ಈ ಚಿತ್ರದ ಟ್ರೈಲರ್ (Trailer) ರಿಲೀಸ್ ಆಯಿತೋ, ಆಗಲೇ ಈ ಸಿನಿಮಾದ ಅಸಲಿ ಕಂಟೆಂಟ್ ಏನೂ ಅಂತಲೇ ತಿಳಿದು ಬಿಟ್ಟಿದೆ. ಹೌದು, ಕನ್ನಡದ ಬನಾರಸ್ ಸಿನಿಮಾ ವಿಶೇಷ ಕಂಟೆಂಟ್ ಇಟ್ಟುಕೊಂಡೇ ರೆಡಿ ಆಗಿದೆ. ನಿರ್ದೇಶಕ ಜಯತೀರ್ಥ ಅವ್ರು ಈ ಮೂಲಕ ಟೈಮ್ ಟ್ರ್ಯಾವಲರ್ ಕಥೆ ಹೆಣೆದಿದ್ದಾರೆ. ಈ ಕಥೆಯ ಈ ಚಿತ್ರದ ಟ್ರೈಲರ್ ರಿವ್ಯೂ ಇಲ್ಲಿದೆ.


ಬನಾರಸ್ ಸಿನಿಮಾ ಟ್ರೈಲರ್ ಹೇಗಿದೆ ಗೊತ್ತೇ?
ಬನಾರಸ್ ಸಿನಿಮಾದಲ್ಲಿ ಮಾಸ್ ಡೈಲಾಗ್ ಗಳು ಇವೆ. ಪ್ರತಿ ಡೈಲಾಗ್​ ನಲ್ಲೂ ಮಜಾ ಇದೆ. ನಾನು ಆ್ಯಕ್ಷನ್ ಇಷ್ಟಪಡೋದಿಲ್ಲ. ಹಾಗಂತ ಟಿ.ವಿ.ಯಲ್ಲಿ ಕೂಡ ಆ್ಯಕ್ಷನ್ ಸಿನಿಮಾ ನೋಡೋದಿಲ್ಲ. ಆದರೆ ನನ್ನ ಪೇಷೆನ್ಸ್ ಟೆಸ್ಟ್ ಮಾಡೋಕೆ ಹೋಗ್ಬೇಡಿ.


ಹಿಂಗೆ ಡೈಲಾಗ್​ಗಳು ನಾಯಕ ಕ್ಯಾರೆಕ್ಟರ್ ರಿವೀಲ್ ಮಾಡುತ್ತವೆ. ಚಿತ್ರದ ಮೊದಲ ಟ್ರೈಲರ್ ನಲ್ಲಿ ಡೈಲಾಗ್ ಮೂಲಕವೇ ಕಂಟೆಂಟ್ ರಿವೀಲ್ ಮಾಡೋ ಪ್ರಯತ್ನವೂ ಆಗಿದೆ.


ನಾನು ಟೈಮ್ ಟ್ರ್ಯಾವಲರ್-ಪ್ಯೂಚರ್​ನಿಂದ ಬಂದಿದ್ದೇನೆ
ನಾನು ಒಬ್ಬ ಆಸ್ಟ್ರೋ ನೋಟ್, ಟೈಮ್ ಟ್ರ್ಯಾವಲರ್, ಪ್ಯೂಚರ್​ನಿಂದ ಬಂದಿದ್ದೇನೆ ಅಂತಲೇ ಯುವ ನಟ ಜಹೀದ್ ಖಾನ್ ತಮ್ಮ ಪಾತ್ರದ ಪರಿಚಯವನ್ನ ಇಲ್ಲಿ ಮಾಡಿಕೊಡ್ತಾನೆ.


ಇದನ್ನೂ ಓದಿ: Katrina Kaif: ಪುಟ್ಟ ಮಕ್ಕಳೊಂದಿಗೆ ಖುಷಿಯಲ್ಲಿ ಹೆಜ್ಜೆ ಹಾಕಿದ ಕತ್ರೀನಾ! ಬಾಲಿವುಡ್ ಬ್ಯೂಟಿ ಹ್ಯಾಪಿ


ಬನಾರಸ್ ಚಿತ್ರದ ಬಹುತೇಕ ಭಾಗವನ್ನ ಬನಾರಸ್​ನಲ್ಲಿಯೇ ಚಿತ್ರೀಕರಿಸಲಾಗಿದೆ. ಇಲ್ಲಿಯ ದೈನಂದಿನ ಸತ್ಯಗಳೂ, ಇಲ್ಲಿಯ ದೃಶ್ಯ ವೈಭವಗಳು, ಕಾಶಿಯ ನದಿ ತೀರ ಎಲ್ಲವೂ ಚಿತ್ರದಲ್ಲಿ ಇದೆ.



ಚಿತ್ರದ ಮೂಲಕ ಚಿತ್ರದ ಅಸಲಿ ಕಂಟೆಂಟ್ ರಿವೀಲ್
ನಿರ್ದೇಶಕ ಜಯತೀರ್ಥ ತಮ್ಮ ಈ ಚಿತ್ರದ ಟ್ರೈಲರ್​ ನಲ್ಲಿ ಆ ಎಲ್ಲ ವಿಷಯಗಳ ಝಲಕ್ ಅನ್ನ ಈಗ ರಿವೀಲ್ ಮಾಡಿದ್ದಾರೆ. ಚಿತ್ರದ ನಾಯಕ ನಟ ನಾನು ಟೈಮ್ ಟ್ರ್ಯಾವೆಲರ್ ಅನ್ನೋದನ್ನ ಒತ್ತಿ ಹೇಳುತ್ತಾರೆ. ನಿಜವಾಗ್ಲೂ ಇದು ಸಾಧ್ಯವೇ ಅನ್ನೋದು ಸಹಜ ಪ್ರಶ್ನೆ. ಆ ಪ್ರಶ್ನೆಯನ್ನ ನಾಯಕಿ ಸೋನಲ್ ಕೂಡ ಇಲ್ಲಿ ಕೇಳುತ್ತಾರೆ.


ಟೈಮ್ ಟ್ರ್ಯಾವೆಲರ್ ಮಿಸ್ಟರ್ ಸಿದ್ಧಾಂತ್ ಇಲ್ಲಿ ತನ್ನ ಹುಡುಗಿಗೆ ಪ್ರಪೋಸ್ ಕೂಡ ಮಾಡುತ್ತಾನೆ. ಅದು ತುಂಬಾ ಇಂಟ್ರಸ್ಟಿಂಗ್ ಆಗಿಯೇ ಇದೆ. ನಾನು ನಿನ್ನ ಪ್ಯೂಚರ್ ಹಸ್ಬಂಡ್ ಅಂತಲೇ ನಾಯಕ ನಟ ಇಲ್ಲಿ ಹೇಳೋದು ವಿಶೇಷ ಅನಿಸುತ್ತದೆ.


ನವ ನಟ ಜಹೀದ್ ಖಾನ್ ಬನಾರಸ್ ಇದೇ ನವೆಂಬರ್-04ಕ್ಕೆ ರಿಲೀಸ್
ಬನಾರಸ್ ಸಿನಿಮಾ ಒಂದು ಲವ್ ಸ್ಟೋರಿ ಸಿನಿಮಾ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಈಗಾಗಲೇ ರಿಲೀಸ್ ಆದ ಪೋಸ್ಟರ್ ಹಾಗೂ ಹಾಡುಗಳು ಅದೇ ವಿಷಯವನ್ನೇ ಬಿಂಬಿಸಿದ್ದವು.


ಇದನ್ನೂ ಓದಿ: Rashmika Mandanna: ಗೋಲ್ಡನ್ ಗರ್ಲ್ ಆದ ರಶ್ಮಿಕಾ! ಪಡ್ಡೆಗಳ ನಿದ್ದೆಗೆಡಿಸಿದ ಚೆಲುವೆ


ಆದರೆ ಈ ಪ್ರೇಮ ಕಥೆಯಲ್ಲಿ ಟೈಮ್ ಟ್ರ್ಯಾವಲರ್ ಇದ್ದಾನೇ ಅನ್ನೋದೇ ಈಗ ರಿಲೀಸ್ ಟ್ರೈಲರ್ ಮೂಲಕ ಎಲ್ಲರಿಗೂ ತಿಳಿದು ಹೋಗಿದೆ. ನಿರ್ದೇಶಕ ಜಯತೀರ್ಥ ಸದಾ ಹೊಸ ವಿಷಯಗಳನ್ನೇ ಹುಡುಕುತ್ತಲೇ ಇರುತ್ತಾರೆ. ಬನಾರಸ್​ ನಲ್ಲೂ ಅಂತಹದ್ದೇ ಒಂದು ಹೊಸ ಕಥೆ ರೀತಿಯ ಕಥೆ ಹೇಳ್ತಿದ್ದಾರೆ.


ಬನಾರಸ್ ಸಿನಿಮಾ ಇದೇ ನವೆಂಬರ್-04 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಹೀಗೆ ಎಲ್ಲ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

First published: