• Home
  • »
  • News
  • »
  • entertainment
  • »
  • Banaras Pre Release Event: ಹುಬ್ಬಳ್ಳಿಯಲ್ಲಿ ಬನಾರಸ್ ಪ್ರೀ ರಿಲೀಸ್ ಸಂಭ್ರಮ; ಹೊಸ ಹುಡುಗನ ಚಿತ್ರಕ್ಕೆ ಸ್ಟಾರ್​​ಗಳ ಸಮಾಗಮ

Banaras Pre Release Event: ಹುಬ್ಬಳ್ಳಿಯಲ್ಲಿ ಬನಾರಸ್ ಪ್ರೀ ರಿಲೀಸ್ ಸಂಭ್ರಮ; ಹೊಸ ಹುಡುಗನ ಚಿತ್ರಕ್ಕೆ ಸ್ಟಾರ್​​ಗಳ ಸಮಾಗಮ

ಹುಬ್ಬಳ್ಳಿಯಲ್ಲಿ ಬನಾರಸ್ ರಿಲೀಸ್ ಸಂಭ್ರಮ

ಹುಬ್ಬಳ್ಳಿಯಲ್ಲಿ ಬನಾರಸ್ ರಿಲೀಸ್ ಸಂಭ್ರಮ

ಬನಾರಸ್ ಸಿನಿಮಾದ ಹುಬ್ಬಳ್ಳಿಯ ಪ್ರೀ ರಿಲೀಸ್ ಇವೆಂಟ್​​ಗೆ ಸಿನಿಮಾರಂಗದ ಕಲಾವಿದರು ಬರ್ತಿದ್ದಾರೆ. ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್, ಹಾಸ್ಯ ನಟ ಚಿಕ್ಕಣ್ಣ, ವಿನೋದ್ ಪ್ರಭಾಕರ್ ಎಲ್ಲರೂ ಬರ್ತಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗ (Kannada Film Industry) ಚಿತ್ರ ಪ್ರಚಾರಕ್ಕೆ (Promotion) ಮತ್ತೆ ಉತ್ತರ (North Karnataka) ಕರ್ನಾಟಕದತ್ತ ಬರ್ತಿದೆ. ಕೊರೊನಾ ಟೈಮ್​​ನಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲವಾಗಿತ್ತು. ಆದರೆ ಸಿನಿಮಾರಂಗ ಮತ್ತೊಮ್ಮೆ ತನ್ನ ಶೃತಿ ಹಿಡಿದಿದೆ. ಚಿತ್ರ ಪ್ರಚಾರಕ್ಕಾಗಿಯೇ ಸಿನಿಮಾ ತಂಡಗಳು ಹುಬ್ಬಳ್ಳಿ-ದಾವಣಗೆರೆಯತ್ತ ಬರ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಅಭಿಮಾನ ಹೊಂದಿದ ಜನ ಇತ್ತಕಡೆಗೇನೆ ಇರೋದು. ದುಡ್ಡು ಕೊಟ್ಟು ಚಿತ್ರ ನೋಡುವ ಜನ, ಸಿನಿಮಾದವರು ಇಲ್ಲಿಗೆ ಬಂದ್ರೆ, ಅಷ್ಟೇ ಪ್ರೀತಿಯಿಂದಲೇ ಸ್ವಾಗತಿಸುತ್ತಾರೆ. ಮೊನ್ನೆ ದಾವಣೆಗೆರೆಗೆ (Head Bush) ಹೆಡ್ ಬುಷ್ ಚಿತ್ರಕ್ಕಾಗಿ ಇಡೀ ಚಿತ್ರರಂಗವೇ ಇಲ್ಲಿಗೆ ಬಂದಿತ್ತು. ಅದಕ್ಕೂ ಮೊದಲು ಶುಭಮಂಗಳ ಸಿನಿಮಾ ತಂಡ ಹುಬ್ಬಳ್ಳಿಯಲ್ಲಿ ಉಚಿತ ಪ್ರಿಮಿಯರ್ ಶೋ ಇಟ್ಟುಕೊಂಡಿದ್ದರು.


ಈಗ ಇದೇ ಹುಬ್ಬಳ್ಳಿಯಲ್ಲಿ ಇದೇ ಶನಿವಾರ ಮತ್ತೊಂದು ಇವೆಂಟ್ ಇದೆ. ಇದು ಬನಾರಸ್ ಸಿನಿಮಾದ ಇವೆಂಟ್. ಸಿನಿಮಾ ಮುಂಚಿನ ಸಂಭ್ರಮ ಇದಾಗಿದೆ. ಇದರ ವಿವರ ಇಲ್ಲಿದೆ.


ಹುಬ್ಬಳ್ಳಿಯಲ್ಲಿ ಬನಾರಸ್ ಸಿನಿಮಾ ರಿಲೀಸ್ ಮುಂಚಿನ ಸಂಭ್ರಮ
ಹುಬ್ಬಳ್ಳಿ ಒಂದು ರೀತಿ ಸಿನಿಮಾ ಪ್ರೇಮಿಗಳ ಊರು. ಇಲ್ಲಿಗೆ ಸಿನಿಮಾ ಮಂದಿ ಬಂದು ಹೋಗ್ತಾರೆ. ತಮ್ಮ ಸಿನಿಮಾ ಬಗ್ಗೆ ಪ್ರೀತಿಯಿಂದಲೇ ಹೇಳಿ ಹೋಗ್ತಾರೆ. ಪ್ರಚಾರ ಮಾಡಿ ಹೊರಟು ಹೋಗ್ತಾರೆ. ಇದು ಕಾಮನ್ ಆಗಿಯೇ ಇಲ್ಲಿ ನಡೆಯೋ ಪ್ರಕ್ರಿಯೇನೆ ಆಗಿದೆ.


Kannada Banaras Film Pre-Release Event Organized at Hubballi on October 22
ಹುಬ್ಬಳ್ಳಿಯಲ್ಲಿ ಬನಾರಸ್ ರಿಲೀಸ್ ಮುಂಚಿನ ಸಂಭ್ರಮ


ಆದರೂ ಉತ್ತರ ಕರ್ನಾಟಕ ಭಾಗದ ಜನ ಸಿನಿಮಾ ಜನರ ಬಗ್ಗೆ ಒಂದು ವಿಶೇಷ ಗೌರವ ಹೊಂದಿರುತ್ತಾರೆ. ಬಂದಾಗ ಅಷ್ಟೇ ಪ್ರೀತಿಯಿಂದಲೇ ಸ್ವಾಗತಿಸಿ ಅವರ ಸಿನಿಮಾಗಳನ್ನ ದುಡ್ಡುಕೊಟ್ಟು ನೋಡ್ತಾರೆ. ಅದೇ ರೀತಿನೇ ಸಿನಿಮಾ ಮೇಕರ್ಸ್ ಇಲ್ಲಿಗೆ ಬಂದು ಚಿತ್ರ ಪ್ರಚಾರ ಮಾಡ್ತಾರೆ.


ಹುಬ್ಬಳ್ಳಿಗೆ ಬರ್ತಿದೆ ಬನಾರಸ್ ಸಿನಿಮಾ ಟೀಮ್
ಬೆಲ್ ಬಾಟಂ ಡೈರೆಕ್ಟರ್ ಜಯತೀರ್ಥ, ಬನಾರಸ್ ಮೂಲಕ ವಿಶೇಷ ಕಥೆಯನ್ನೆ ತೆಗೆದುಕೊಂಡು ಬರ್ತಿದ್ದಾರೆ. ಟೈಮ್ ಟ್ರ್ಯಾವಲ್​ದಂತಹ ಕಥೆಯನ್ನ ಹೊಂದಿರೋ ಈ ಚಿತ್ರದಲ್ಲಿ ನವ ನಟ ಝೈದ್ ಖಾನ್ ಅಭಿನಯಿಸಿದ್ದಾರೆ. ಸೋನಲ್ ಮೊಂತೇರೋ ಅಭಿನಯಿಸಿದ್ದಾರೆ.


ಇದನ್ನೂ ಓದಿ: Kannadathi: ಊಹಾಪೋಹಗಳಿಗೆ ತೆರೆ, ಕನ್ನಡತಿ ಸೀರಿಯಲ್​ಗೆ ವರೂಧಿನಿ ವಾಪಸ್!


ಝೈದ್ ಖಾನ್ ವಿಶೇಷವಾಗಿ ಈ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಚಿತ್ರದ ಪ್ರಚಾರಕ್ಕಾಗಿಯೇ ಸಿನಿಮಾ ತಂಡದೊಂದಿಗೆ ಹುಬ್ಬಳ್ಳಿಗೂ ಬರ್ತಾಯಿದ್ದಾರೆ.


ನವೆಂಬರ್-4 ರಂದು ಬನಾರಸ್ ಸಿನಿಮಾ ರಿಲೀಸ್
ಬನಾರಸ್ ಸಿನಿಮಾವನ್ನ ನಿರ್ದೇಶಕ ಜಯತೀರ್ಥ ಬನಾರಸ್​​ನಲ್ಲಿಯೇ ಚಿತ್ರೀಕರಿಸಿಕೊಂಡು ಬಂದಿದ್ದಾರೆ. ಅದ್ಭುತ, ಸುಂದರ ತಾಣದಲ್ಲಿಯೇ ಚಿತ್ರೀಕರಣ ಮಾಡಿರೋದು ವಿಶೇಷ.


ಈ ವಿಶೇಷ ಚಿತ್ರದಲ್ಲಿ ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಒಳ್ಳೆ ಹಾಡುಗಳನ್ನೆ ಕಂಪೋಜ್ ಮಾಡಿಕೊಟ್ಟಿದ್ದಾರೆ. ಇಂತಹ ಈ ಚಿತ್ರ ಇದೇ ವರ್ಷದ ನವೆಂಬರ್-04 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಸಿನಿಮಾ ರಿಲೀಸ್ ಪ್ಲಾನ್ ಆಗಿದೆ.


ಬನಾರಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್​ಗೆ ಯಾರೆಲ್ಲ ಬರ್ತಾರೆ
ಬನಾರಸ್ ಸಿನಿಮಾದ ಹುಬ್ಬಳ್ಳಿಯ ಪ್ರೀ ರಿಲೀಸ್ ಇವೆಂಟ್​​ಗೆ ಸಿನಿಮಾರಂಗದ ಕಲಾವಿದರು ಬರ್ತಿದ್ದಾರೆ. ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್, ಹಾಸ್ಯ ನಟ ಚಿಕ್ಕಣ್ಣ, ವಿನೋದ್ ಪ್ರಭಾಕರ್ ಎಲ್ಲರೂ ಬರ್ತಿದ್ದಾರೆ. ಇವರ ಉಪಸ್ಥಿತಿಯಲ್ಲಿಯೇ ವಿವಿಧ ಕಾರ್ಯಕ್ರಮಗಳು Pre-Release Event ನಲ್ಲಿ ನಡೆಯಲಿವೆ.


Kannada Banaras Film Pre-Release Event Organized at Hubballi on October 22
ಹೊಸ ಹುಡುಗನ ಚಿತ್ರಕ್ಕೆ ಸ್ಟಾರ್​​ಗಳ ಸಮಾಗಮ


ಹುಬ್ಬಳ್ಳಿ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್​ನಲ್ಲಿ ಸಂಜೆ 7.30ಕ್ಕೆ ಬನಾರಸ್ ಸಂಭ್ರಮ
ಚಿತ್ರದ Pre-Release Event ನಲ್ಲಿ ಬನಾರಸ್ ಸಿನಿಮಾದ ಒಂದಷ್ಟು ವಿಶೇಷ ವಿಚಾರಗಳು ರಿವೀಲ್ ಆಗಲಿವೆ.


ಇದನ್ನೂ ಓದಿ: Keerthy Suresh Dasara First Look: ಮಹಾ ನಟಿ ಕೀರ್ತಿ ಸುರೇಶ್ ಸಖತ್ ಫೋಟೋ! ದಸರಾ ಚಿತ್ರದ ಫಸ್ಟ್ ಲುಕ್ ರಿವೀಲ್


ಉಳಿದಂತೆ ಹುಬ್ಬಳ್ಳಿಯಲ್ಲಿ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್​ನಲ್ಲಿ ಈ ಕಾರ್ಯಕ್ರಮ ಆಯೋಜನೆ ಆಗಿದೆ. ಶನಿವಾರ ಸಂಜೆ 7.30 ರ ಸುಮಾರಿಗೆ ಈ ಕಾರ್ಯಕ್ರಮ ಪ್ಲಾನ್ ಆಗಿದೆ. ಅಂದಿನ ಈ ಕಾರ್ಯಕ್ರಮದ ಸುದ್ದಿ ಈಗಾಗಲೇ ವೈರಲ್ ಕೂಡ ಆಗುತ್ತಿದೆ.

First published: