ಬ್ಯಾಡ್ ಮ್ಯಾನರ್ಸ್ ಚಿತ್ರದ ಮೊಟ್ಟ ಮೊದಲ (Bad Manners Movie) ಹಾಡು ರಿಲೀಸ್ ಆಗಿದೆ. ಯುಗಾದಿ ಹಬ್ಬಕ್ಕೆ ಫಸ್ಟ್ ಸಾಂಗ್ ರಿಲೀಸ್ ಮಾಡ್ತಿವಿ ಅಂತಲೇ ಸಿನಿಮಾ ತಂಡ ಕುತೂಹಲ ಕೆರಳಿಸಿತ್ತು. ಆ ಕುತೂಹಲ ಹಬ್ಬದ (BadManners Song Release) ದಿನವೇ ತಣಿಸಿದೆ. ವಿಶೇಷವಾಗಿಯೇ ಇರೋ ಈ ಗೀತೆಯಲ್ಲಿ ಅಭಿಷೇಕ್ ಅಂಬರೀಶ್ ನಿರ್ವಹಿಸಿರೋ ಪಾತ್ರದ ಚಿತ್ರಣ ಇದೆ. ಪ್ರತಿ ಸಾಲಲ್ಲೂ ಅಭಿ ಪಾತ್ರದ ಸಾಫ್ಟ್ ಮತ್ತು ಹಾರ್ಡ್ (BadManners Title Song Release) ಮ್ಯಾನರಿಸಂನ ಝಲಕ್ ಇದೆ. ಬಹು ಭಾಷಾ ಗಾಯಕಿ ಉಷಾ ಉತ್ತುಪ ಅವರ ಅದ್ಭುತ ಕಂಠಸಿರಿಯಲ್ಲಿ ಈ ಹಾಡು ಮೂಡಿ ಬಂದಿದೆ. ಅಷ್ಟೇ ಕಲರ್‌ಫುಲ್ ಆಗಿಯೂ ಇದೆ.
ನಿರ್ದೇಶಕ ದುನಿಯಾ ಸೂರಿ ಅವರ ಕಲ್ಪನೆಯ (Abhishek Ambareesh Movie) ಈ ಗೀತೆಯ ಮೇಕಿಂಗ್ ವಿಡಿಯೋ ಹಬ್ಬಕ್ಕೆ ಇದೇ ಲಿರಿಕಲ್ ಹಾಡಿನೊಂದಿಗೆ ರಿವೀಲ್ ಆಗಿದೆ. ಇದರ ಇನ್ನಷ್ಟು ಮತ್ತಷ್ಟು ಮಾಹಿತಿ ಈ ಸ್ಟೋರಿಯಲ್ಲಿದೆ ಓದಿ.
ಸ್ಟೈಲಿಶ್ ಲುಕ್‌ಲ್ಲಿ ರಂಗೇರಿಸಿದ ಬ್ಯಾಡ್‌ಮ್ಯಾನರ್ಸ್ ಅಭಿ
ಬ್ಯಾಡ್‌ಮ್ಯಾನರ್ಸ್ ಸಿನಿಮಾ ಫಸ್ಟ್ ಟೈಟಲ್ ಟ್ರ್ಯಾಕ್ ಸಖತ್ ಆಗಿದೆ. ಟ್ರೆಂಡಿ ಅನಿಸೋ ಈ ಗೀತೆ ಸಖತ್ ಕಿಕ್ ಕೊಡುವ ಹಾಗೇನೂ ಇದೆ. ಕಲರ್‌ಫುಲ್ ಸೆಟ್‌ಲ್ಲಿ ಇಡೀ ಹಾಡು ಚಿತ್ರೀಕರಣ ಆಗಿದೆ. ಝಗಮಗಿಸೋ ಲೈಟ್‌ಗಳ ಮಧ್ಯೆ ಅಭಿಷೇಕ್ ಫುಲ್ ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡು ಇಡೀ ಮಾಹೋಲ್ ಅನ್ನ ರಂಗೇರಿಸಿದ್ದಾರೆ.
ದುನಿಯಾ ಸೂರಿ ಅವರ ಸಿನಿಮಾಗಳಲ್ಲಿ ಕಲರ್ ಫುಲ್ ಸೆಟ್‌ಗಳೇ ಇರುತ್ತವೆ. ಮೊದಲೇ ಚಿತ್ರ ಕಲಾವಿದರಾಗಿರೋ ಸೂರಿ ಅವರು ಈ ಚಿತ್ರಕ್ಕೆ ತಮ್ಮ ಕಲ್ಪನೆಯಂತೆ ಒಂದು ಕ್ಲಾಸಿಕ್ ಕಲರ್‌ಫುಲ್ ಸೆಟ್ ಪ್ಲಾನ್ ಮಾಡಿದ್ದಾರೆ. ಅದರ ಫಲವೇ ಆ ದಿನಗಳ ರೆಟ್ರೋ ಫೀಲ್ ಇರೋ ಸೆಟ್ ಇಲ್ಲಿ ರೆಡಿಯಾಗಿದ್ದು ಕೇಳುಗರಿಗೆ ಮತ್ತು ನೋಡುಗರಿಗೆ ಬ್ಯಾಡ್‌ಮ್ಯಾನರ್ಸ್ ಚಿತ್ರದ ಹಾಡು ಹೊಸ ಭಾವ ಮೂಡಿಸುತ್ತಿದೆ.
ಉಷಾ ಉತ್ತುಪ್ ಕಂಠಸಿರಿಯಲ್ಲಿ ಅಭಿ ಗುಣಗಾನ
ಚರಣ್ ರಾಜ್ ಸಂಗೀತ ನಿರ್ದೇಶನದ ಈ ಹಾಡಲ್ಲಿ ಅಭಿಷೇಕ್ ಅಂಬರೀಶ್ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ. ಸ್ಪೆಷಲ್ ಜಾಕೆಟ್ ಸ್ಪೆಷಲ್ ಸನ್ ಗ್ಲಾಸ್, ಕೈಯಲ್ಲಿ ಸಿಗಾರ್ ಹೀಗೆ ಅಭಿಷೇಕ್ ಖದರ್ ಇಲ್ಲಿ ಕಂಪ್ಲೀಟ್ ಚೇಂಜ್ ಆಗಿದೆ.
ತುಂಬಾನೇ ವಿಭಿನ್ನ ಅನಿಸೋ ಈ ಗೀತೆಯನ್ನ ವಿಶೇಷ ಧ್ವನಿಯ ಗಾಯಕಿಯಿಂದಲೇ ಹಾಡಿಸಲಾಗಿದೆ. ಬಹು ಭಾಷೆಯಲ್ಲೂ ಮಿಂಚಿರೋ ಗಾಯಕಿ ಉಷಾ ಉತ್ತುಪ್ ಈ ಗೀತೆಗೆ ಧ್ವನಿ ಆಗಿದ್ದಾರೆ. ತಮ್ಮ ವಿಶೇಷ ಕಂಠಸಿರಿಯಿಂದ ಇಡೀ ಹಾಡಿಗೆ ಬೇರೆ ಮೆರಗು ತಂದು ಕೊಟ್ಟಿದ್ದಾರೆ.
ಬ್ಯಾಡ್‌ಮ್ಯಾನರ್ಸ್ ಲಿರಿಕಲ್ ವಿಡಿಯೋದಲ್ಲಿ ಏನಿದೆ?
ಧನಂಜಯ್ ರಾಜನ್ ಬರೆದಿರೋ ಈ ಗೀತೆಯಲ್ಲಿ ಅಭಿಷೇಕ್ ಪಾತ್ರದ ಚಿತ್ರಣ ಇದೆ. ಸ್ವಲ್ಪ ಬ್ಯಾಡ್ ಸ್ವಲ್ಪ ಗುಡ್ ಅನ್ನೋ ಅರ್ಥದ ಸಾಲುಗಳು ಇಲ್ಲಿ ಗಮನ ಸೆಳೆಯುತ್ತವೆ. ಸ್ಪೆಷಲ್ ಆಗಿ ದುನಿಯಾ ಸೂರಿ ಡಿಸೈನ್ ಮಾಡಿರೋ ಬ್ಯಾಡ್ ಮ್ಯಾನರ್ಸ್ ಚಿತ್ರದ ಅಭಿ ಪಾತ್ರದ ಝಲಕ್ ಈ ಒಂದು ಗೀತೆಯಲ್ಲಿ ಸಾಲುಗಳಾಗಿ ಹೊರ ಹೊಮ್ಮಿದೆ.
ಚಿತ್ರದ ನಿರ್ದೇಶಕ ದುನಿಯಾ ಸೂರಿ ತಮ್ಮ ಈ ಚಿತ್ರದ ಶೂಟಿಂಗ್ ಕೆಲಸ ಮುಗಿಸಿದ್ದಾರೆ. ಇದೀಗ ಚಿತ್ರೀಕರಣದ ನಂತರದ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಅದರ ಮಧ್ಯೆ ಮೊನ್ನೆಯಿಂದಲೇ ಸಿನಿಮಾ ಹಾಡಿನ ರಿಲೀಸ್ ಬಗೆಗಿನ ಒಂದಷ್ಟು ಝಲಕ್ ಅನ್ನ ಬಿಡ್ತಾನೆ ಇದ್ದರು.
ಬ್ಯಾಡ್‌ಮ್ಯಾನರ್ಸ್ ಸಖತ್ ಲಿರಿಕಲ್ ವಿಡಿಯೋ ರಿಲೀಸ್
ಕೊನೆಗೆ ಯುಗಾದಿ ಹಬ್ಬದಂದು ಚಿತ್ರದ ಮೊದಲ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ್ದಾರೆ. ಕೋರಿಯೋಗ್ರಾಫರ್ ಧನಂಜಯ್ ಈ ಗೀತೆಯನ್ನ ಕೋರಿಯೋಗ್ರಾಫಿ ಮಾಡಿದ್ದಾರೆ. ಜಬರದಸ್ತ್ ಆಗಿಯೆ ಈ ಒಂದು ಹಾಡು ಬಂದಿದೆ.
ಇದನ್ನೂ ಓದಿ: Actor Yash: ತಮಿಳು ನಟನಿಗೆ ಧನಸಹಾಯ ಮಾಡಿದ ಯಶ್, ರಾಕಿ ಭಾಯ್ ಕೊಂಡಾಡಿದ ಡೇನಿಯಲ್ ಬಾಲಾಜಿ
ಈ ಮೂಲಕ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರದ ಪ್ರಚಾರ ಶುರು ಆಗಿದೆ. ಇನ್ನೇನು ರಿಲೀಸ್ ದಿನವೂ ಅನೌನ್ಸ್ ಆಗಲಿದೆ. ಉಳಿದಂತೆ ಬ್ಯಾಡ್‌ಮ್ಯಾನರ್ಸ್ ಸಿನಿಮಾದ ತನ್ನದೇ ರೀತಿಯಲ್ಲಿ ಈಗಲೇ ಒಂದು ಭರವಸೆ ಮೂಡಿಸಿದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ