Raj Cup In Sharjah: ದುಬೈನಲ್ಲಿ ರಾಜ್ ಕಪ್ ಪಂದ್ಯ! ಅಪ್ಪು ನೆನಪಲ್ಲಿ ವಿಮಾನ ಏರಿದ ಕಲಾವಿದರು

ಈ ಪಂದ್ಯದಲ್ಲಿ ಭಾಗಿ ಆಗಲು ವಿಮಾನ ಏರಿರುವ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ನೃತ್ಯ ನಿರ್ದೇಶಕರು ಏನಂದಿದ್ದಾರೆ? ಇಲ್ಲಿದೆ ನೋಡಿ.

ದುಬೈನ ಶಾರ್ಜಾ ದಲ್ಲಿ ರಾಜ್ ಕಪ್ ಫೈನಲ್, ಸೆಮಿ ಫೈನಲ್ ಪಂದ್ಯ

ದುಬೈನ ಶಾರ್ಜಾ ದಲ್ಲಿ ರಾಜ್ ಕಪ್ ಫೈನಲ್, ಸೆಮಿ ಫೈನಲ್ ಪಂದ್ಯ

  • Share this:
ಸ್ಯಾಂಡಲ್​ವುಡ್​ನಲ್ಲಿ ಕಳೆದ ಕೆಲವು ವರ್ಷಗಳಿಂದ ರಾಜ್​ ಕಪ್ (Raj Cup) ಪಂದ್ಯ ಏರ್ಪಡಿಸಲಾಗುತ್ತಿದೆ. ನೃತ್ಯ ನಿರ್ದೆಶಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್ ಈ ಒಂದು ಪಂದ್ಯದ ಮುಂದಾಳತ್ವ ವಹಿಸಿಕೊಂಡು ಬಂದಿದ್ದಾರೆ. ಡಾಕ್ಟರ್ ರಾಜ್​ಕುಮಾರ್ ಅವರ ಹೆಸರಿನ ಈ ರಾಜ್ ಕಪ್​ (Cricket Match) ಪಂದ್ಯದಲ್ಲಿ ಕನ್ನಡ ಚಿತ್ರರಂಗದ ಎಲ್ಲರೂ ಭಾಗಿ ಆಗುತ್ತಾರೆ. ಸೋಲು-ಗೆಲುವಿನ ಲೆಕ್ಕವಿಲ್ಲದೇ ಒಂದಾಗಿ ಆಡಿ ಖುಷಿ ಪಡುತ್ತಾರೆ. ಕಳೆದ ನಾಲ್ಕು ಸೀಜನ್​ಗಳ ರಾಜ್​ ಕಪ್ ಪಂದ್ಯ ಬೇರೆ ಬೇರೆ ಸ್ಥಳಗಳಲ್ಲಿ ನಡೆದಿದೆ. ಆದರೆ ಸೀಸನ್-5 (Raj Cup Season 5) ಪಂದ್ಯ ಶಾರ್ಜಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾಗಿಯಾಗಲು ಇಂಡಸ್ಟ್ರೀಯ ಕಲಾವಿದರು-ನಿರ್ದೇಶಕರು-ನಿರ್ಮಾಪಕರು ನೃತ್ಯ ನಿರ್ದೇಶಕರು ಹೀಗೆ ಎಲ್ಲರೂ ಶಾರ್ಜಾದತ್ತ ಪಯಣ ಬೆಳೆಸಿದ್ದಾರೆ.

ರಾಜ್ ಕಪ್ ವೈಭವ ಈ ಸಲ ವೇರಿ ವೇರಿ ಡಿಫರಂಟ್
ರಾಜ್ ಕಪ್ ಪಂದ್ಯಗಳು ವಿಶೇಷವಾಗಿಯೇ ಇರುತ್ತವೆ. ಎಲ್ಲಾ ಕಲಾವಿದರು ಈ ಪಂದ್ಯದಲ್ಲಿ ಭಾಗಿ ಆಗುತ್ತಾರೆ. ಟೆಕ್ನಿಷನ್​ಗಳೂ ಈ ಪಂದ್ಯದಲ್ಲಿ ಇರುತ್ತಾರೆ. ಈ ಸಲದ ಪಂದ್ಯದಲ್ಲಿ 8 ತಂಡಗಳು ಭಾಗಿ ಆಗಿವೆ.

ರಾಜ್ ಕಪ್​ ನ ಲೀಗ್ ಪಂದ್ಯಗಳು ಬೆಂಗಳೂರಿನ ಬಿಜಿಎಸ್ ಗ್ರೌಂಡ್​ ನಲ್ಲಿ ನಡೆದಿವೆ. ಈ ಪಂದ್ಯದ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ದುಬೈನ ಶಾರ್ಜಾದಲ್ಲಿಯೇ ನಡೆಯುತ್ತಿರೋದು ವಿಶೇಷ.

Kannada Artists travel to Dubai for Raj Cup Final and Semi Final Match
ರಾಜ್ ಕಪ್ ಪಂದ್ಯದಲ್ಲಿ ಭಾಗಿಯಾಗಲು ದುಬೈಗೆ ತೆರಳಿದ ಕಲಾವಿದರು


ರಾಜ್ ಕಪ್​ ​ಗಾಗಿ ದುಬೈಗೆ ಹಾರಿದ ಕಲಾವಿದರು
ರಾಜ್ ಕಪ್ ಫೈನಲ್ಸ್ ಹಾಗೂ ಸೆಮಿ ಫೈನಲ್ಸ್​ಗಾಗಿಯೇ ಕಲಾವಿದರು ಮತ್ತು ಟೆಕ್ನಿಷನ್​ಗಳು ಎರಡು ದಿನದ ಮೊದಲೇ ಶಾರ್ಜಾಗೆ ಪಯಣ ಬೆಳೆಸಿದ್ದಾರೆ. ಬೆಂಗಳೂರಿನ ಏರ್​ಪೋರ್ಟ್​ ನಿಂದ ಹೆಚ್ಚು ಕಡಿಮೆ ಎರಡ್ಮೂರು ತಂಡವಾಗಿಯೇ ಶಾರ್ಜಾಗೆ ಹೊರಟು ಹೋಗಿದ್ದಾರೆ.

ಇದನ್ನೂ ಓದಿ: Anubandha Awards 2022: ಅನುಬಂಧ ಅವಾರ್ಡ್​​ನಲ್ಲಿ ನಮ್ಮ ಅಪ್ಪು ಹೊಸ ಪ್ರೋಮೋ ಇಲ್ಲಿದೆ ನೋಡಿ

ರಾಜ್ ಕಪ್ ಫೈನಲ್​ ಮತ್ತು ಸೆಮಿ ಫೈನಲ್ಸ್ ಪಂದ್ಯಗಳು ಇದೇ 24 ರಂದು ನಡೆಯಲಿವೆ. ಈ ಹಿನ್ನೆಲೆಯಲ್ಲಿಯೇ ಕಲಾವಿದರು ಮತ್ತು ಟೆಕ್ನಿಷಿಯನ್​ಗಳು ಈಗ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

ದುಬೈಗೆ ತೆರಳೋ ಮುನ್ನ ಏರ್​ಪೋರ್ಟ್​ನಲ್ಲಿ ಗಮನ ಸೆಳೆದ ಡಾಲಿ
ಇನ್ನೂ ಕಲಾವಿದರ ಪೈಕಿ ಡಾಲಿ ಧನಂಜಯ್ ಬೆಂಗಳೂರು ಏರ್​ಪೋರ್ಟ್​ನಲ್ಲಿಯೇ ಗಮನ ಸೆಳೆದರು. ತಮ್ಮ ಹೆಡ್ ಬುಷ್ ಸಿನಿಮಾದ ರೆಟ್ರೋ ಲುಕ್​ ಅಲ್ಲಿಯೇ ಕಾಣಿಸಿಕೊಂಡ್ರು. ಅದೇ ಗೆಟಪ್​ ನಲ್ಲಿಯೇ ವಿಮಾನ ಹತ್ತಿ ದುಬೈನತ್ತ ಪ್ರಯಾಣ ಬೆಳೆಸಿದರು.

ರಾಜ್ ಕಪ್ ದುಬೈ ಡಿಟೈಲ್ಸ್ ಕೊಟ್ಟ ನಟ-ಸಂಕಲನಕಾರ ನಾಗೇಂದ್ರ ಅರಸ್
ಇನ್ನು ಕಲಾವಿದರು ಟೆಕ್ನಿಷನ್ ಲೆಕ್ಕದಲ್ಲಿ ಇನ್ನೂ ಅನೇಕರು ದುಬೈಗೆ ತೆರಳಿದ್ದಾರೆ. ಅವರಲ್ಲಿ ನಟ-ನಿರ್ದೇಶಕ-ಸಂಕಲನಕಾರ ನಾಗೇಂದ್ರ ಅರಸ್ ಕೂಡ ದುಬೈಗೆ ಹೋಗಿದ್ದಾರೆ. ಅಲ್ಲಿಂದಲೇ ನಮಗೆ Voice ನೋಟ್ ಕಳಿಸಿದ್ದಾರೆ. ಈ ಮೂಲಕ ರಾಜ್ ಕಪ್ ಬಗ್ಗೆ ಒಂದಷ್ಟು ಮಾಹಿತಿಯನ್ನ ಕೂಡ ಶೇರ್ ಮಾಡಿದ್ದಾರೆ.

Kannada Artists travel to Dubai for Raj Cup Final and Semi Final Match
ರಾಜ್ ಕಪ್ ಪಂದ್ಯದಲ್ಲಿ ಭಾಗಿಯಾಗಲು ದುಬೈಗೆ ತೆರಳಿದ ಕಲಾವಿದರು


ರಾಜ್ ಕಪ್ ಇದೇ 24 ರಿಂದಲೇ ಶಾರ್ಜಾದಲ್ಲಿ ನಡೆಯುತ್ತದೆ. ಫೈನಲ್ಸ್ ಮತ್ತು ಸೆಮಿಫೈನಲ್ಸ್ ಇಲ್ಲಿಯೇ ನಡೆಯುತ್ತವೆ. ಲೀಗ್ ಪಂದ್ಯಗಳು ಈಗಾಗಲೇ ಬೆಂಗಳೂರಿನ ಬಿಜಿಎಸ್ ಗ್ರೌಂಡ್​ ನಲ್ಲಿ ಆಗಿವೆ ಎಂದು ತಿಳಿಸಿದ್ದಾರೆ.

ಇದೇ 26ಕ್ಕೆ ದುಬೈನಿಂದ ಬೆಂಗಳೂರಿಗೆ ಬರಲಿರೋ ಕಲಾವಿದರು
ಪಂದ್ಯಗಳು ಮುಗಿದ ಬಳಿಕ ದುಬೈಗೂ ಹೋಗುತ್ತೇವೆ. ಅಲ್ಲಿಯ ಸುಂದರ ತಾಣಗಳನ್ನೂ ವೀಕ್ಷಿಸುತ್ತೇವೆ. 26 ರಂದು ರಿಟರ್ನ್ ಟಿಕೆಟ್ ಇದೆ. ಅಂದೇ ವಾಪಸ್ ಬೆಂಗಳೂರಿಗೂ ಬರುತ್ತೇವೆ ಅಂತಲೇ ನಾಗೇಂದ್ರ ಅರಸ್ ಹೇಳಿದ್ದಾರೆ.

ಪವರ್ ಸ್ಟಾರ್ ಅಪ್ಪು ನೇತೃತ್ವದಲ್ಲಿಯೇ ರಾಜ್ ಕಪ್ ಸೀಸನ್-5
ಕನ್ನಡ ನೆಲದ ಕಲಾವಿದರೆಲ್ಲ ದೂರದ ದುಬೈನಲ್ಲಿ ರಾಜ್ ಕಪ್ ಪಂದ್ಯ ಆಡುತ್ತಾರೆ. ವೀಕ್ಷಿಸುತ್ತಾರೆ. ಖುಷಿನೂ ಪಡುತ್ತಾರೆ. ಒಟ್ನಲ್ಲಿ ಕನ್ನಡದ ಕಂಪು
ಈ ಮೂಲಕ ದುಬೈ ನಲ್ಲಿ ಮೊಳಗಲಿದೆ.

ಇದನ್ನೂ ಓದಿ: Oscars 2023: ಗುಜರಾತಿ ಸಿನಿಮಾ 'ಛೆಲ್ಲೊ ಶೋ' ಆಸ್ಕರ್ 2023ಕ್ಕೆ ಭಾರತದ ಅಧಿಕೃತ ಪ್ರವೇಶ

ಆದರೆ ಈ ಪಂದ್ಯದ ಖುಷಿಯಲ್ಲಿ ಅಪ್ಪು ಇದ್ದಿದ್ದರೇ ಎಷ್ಟು ಒಳ್ಳೆದಿತ್ತು ಅಲ್ಲವೇ? ರಾಜ್ ಕಪ್ ಸೀಸನ್-5 ಪುನಿತ್ ನೇತೃತ್ವದಲ್ಲಿಯೇ ನಡೆಯೋದಿತ್ತು. ಆದರೆ ಅದು ಕನಸಾಗಿಯೇ ಉಳಿದು ಬಿಡ್ತು ನೋಡಿ.
First published: