• Home
  • »
  • News
  • »
  • entertainment
  • »
  • Gicchi Giligili Season 2: ನಮ್ಮಮ್ಮ ಸೂಪರ್ ಸ್ಟಾರ್ ನಿಂದ ನಿರಂಜನ್ ಹೊರಗೆ ಬಂದಿದ್ದೇಕೆ?

Gicchi Giligili Season 2: ನಮ್ಮಮ್ಮ ಸೂಪರ್ ಸ್ಟಾರ್ ನಿಂದ ನಿರಂಜನ್ ಹೊರಗೆ ಬಂದಿದ್ದೇಕೆ?

ಒಂದೇ ಚಾನಲ್-ಎರಡು ಪ್ರೊಡಕ್ಷನ್ ಹೌಸ್​ನ ಶೋ​!

ಒಂದೇ ಚಾನಲ್-ಎರಡು ಪ್ರೊಡಕ್ಷನ್ ಹೌಸ್​ನ ಶೋ​!

ನನ್ನ ನಿರ್ಧಾರ ಅಲ್ಲವೇ ಅಲ್ಲ. ನಮ್ಮಮ್ಮ ಸೂಪರ್ ಸ್ಟಾರ್-2 ಹಾಗೂ ಗಿಚ್ಚಿ ಗಿಲಿಗಿಲಿ ಎರಡೂ ಒಂದೇ ಚಾನಲ್​ನಲ್ಲಿಯೇ ಪ್ರಸಾರ ಆಗುತ್ತಿವೆ. ಈ ಒಂದು ಕಾರಣಕ್ಕೇನೆ ಚಾನಲ್​ ನನ್ನನ್ನು ನಮ್ಮಮ್ಮದಿಂದ ಗಿಚ್ಚಿ ಗಿಲಿಗಿಲಿ-2ಗೆ ಬರುವಂತೆ ನಿರ್ಧಾರ ತೆಗೆದಕೊಂಡಿದೆ ಎಂದು ನಿರಂಜನ್ ನ್ಯೂಸ್-18 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡ ಕಿರುತೆರೆಯ ಹೆಸರಾಂತ ನಿರೂಪಕ (Kannada Anchor Niranjan) ನಿರಂಜನ್ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರಿಂದ ರಿಯಾಲಿಟಿ ಶೋಗಳು ಕೂಡ ಹೆಚ್ಚಾಗಿವೆ. ಆದ್ದರಿಂದಲೇ ಈಗ ಒಂದು ಬೆಳವಣಿಗೆ ಆಗಿದೆ. ಒಂದೇ ಚಾನಲ್​ನಲ್ಲಿ ಎರಡು (Gicchi Giligili Season 2) ಶೋಗಳನ್ನ ಒಬ್ಬರೆ ನಡಿಸಿಕೊಟ್ರೆ ಹೇಗೆ? ಈ ಒಂದು ಪ್ರಶ್ನೆಗೆ ಉತ್ತರವನ್ನ ಆ ಚಾನಲ್ ಹುಡುಕಿಕೊಂಡಿದೆ. ಅದಕ್ಕೇನೆ ನಮ್ಮಮ್ಮ (Nannamma Super Star Season 2)ಸೂಪರ್ ಸ್ಟಾರ್ ಸೀಸನ್-2 ನಿರಂಜನ್ ಜಾಗಕ್ಕೆ ನಿರೂಪಕಿ ಜಾಹ್ನವಿ ಈಗ ಬಂದಿದ್ದಾರೆ. ಇದರ ಬಗ್ಗೆ ಸ್ವತಃ ನಿರಂಜನ್ (Anchor Niranjan) ನ್ಯೂಸ್-18 ಕನ್ನಡ ಡಿಜಿಟಲ್​ಗೂ​ ಮಾತನಾಡಿದ್ದಾರೆ. ಏನ್​ ಹೇಳಿದ್ದಾರೆ? ಆ ಎಲ್ಲ ವಿವರ ಇಲ್ಲಿದೆ ಓದಿ.


ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ಸೂಪರ್ ಆಗಿದೆ. ಇದರ ನಿರೂಪಕ ನಿರಂಜನ್ ಕೂಡ ನೋಡುಗರನ್ನ ಎಂಟರಟೈನ್ ಮಾಡಿದ್ದಾರೆ. ಪ್ರತಿ ಸಂಚಿಕೆಯಲ್ಲೂ ಹೊಸ ರೀತಿಯಲ್ಲಿಯೇ ಜನರನ್ನ ನಗಿಸೋ ಕೆಲಸವನ್ನೂ ಮಾಡಿದ್ದಾರೆ.


Kannada Anchor Niranjan Special Talk on New Gicchi Giligili Season 2 Show
ಗಿಚ್ಚಿ ಗಿಲಿಗಿಲಿ-2 ಫಸ್ಟ್ ಎಪಿಸೋಡ್ ಸೂಪರ್!


ನಿರೂಪಣೆ ಮತ್ತು ವಿಡಂಬನೆ ಅಂತೀವಲ್ಲ, ಹಂಗೆ ಎರಡನ್ನ ಮೆಂಟೇನ್ ಮಾಡುತ್ತಲೇ ಜನರನ್ನ ಎಂಟರಟೈನ್​ ಮಾಡೋ ನಿರೂಪಕ ನಿರಂಜನ್. ಕಳೆದ ಎರಡು ತಿಂಗಳಿನಿಂದಲೂ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ನಡೆಸಿಕೊಡ್ತಾಯಿದ್ದರು.




ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ಆ್ಯಂಕರ್ ಬದಲಾಗಿದ್ದೇಕೆ?
ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ನಿರೂಪಕ ನಿರಂಜನ್ ಬದಲಾಗಿರೋದೇಕೆ? ಈ ಒಂದು ಪ್ರಶ್ನೆಯನ್ನ ನಿರೂಪಕ ನಿರಂಜನ್​ಗೆ ಕೇಳಿದ್ರೆ ಏನ್ ಹೇಳ್ತಾರೆ ಗೊತ್ತೇ. ನಿರಂಜನ್ ಮಾತಿನ ಒಟ್ಟು ತಾತ್ಪರ್ಯ ಇಲ್ಲಿದೆ ಓದಿ.


ಗಿಚ್ಚಿ ಗಿಲಿಗಿಲಿ ಸೀಸನ್-2 ಶುರು ಆಗಿದೆ. ಇದಕ್ಕೆ ನಾನೇ ಬೇಕು ಅನ್ನೋ ಬೇಡಿಕೆನೂ ಹೆಚ್ಚು ಇತ್ತು. ಈ ಒಂದು ಕಾರಣಕ್ಕೇನೆ ನಾನು ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್​-2 ನಿರೂಪಣೆಯಿಂದ ಈಗ ಗಿಚ್ಚಿ ಗಿಲಿಗಿಲಿ ಸೀಸನ್-2ಗೆ ಬಂದಿದ್ದೇನೆ.


ಇದು ನನ್ನ ನಿರ್ಧಾರ ಅಲ್ಲವೇ ಅಲ್ಲ. ನಮ್ಮಮ್ಮ ಸೂಪರ್ ಸ್ಟಾರ್-2 ಹಾಗೂ ಗಿಚ್ಚಿ ಗಿಲಿಗಿಲಿ ಎರಡೂ ಒಂದೇ ಚಾನಲ್​ನಲ್ಲಿಯೇ ಪ್ರಸಾರ ಆಗುತ್ತಿವೆ. ಈ ಒಂದು ಕಾರಣಕ್ಕೇನೆ ಚಾನಲ್​ ನನ್ನನ್ನು ನಮ್ಮಮ್ಮದಿಂದ ಗಿಚ್ಚಿ ಗಿಲಿಗಿಲಿ-2ಗೆ ಬರುವಂತೆ ನಿರ್ಧಾರ ತೆಗೆದಕೊಂಡಿದೆ ಎಂದು ನಿರಂಜನ್ ನ್ಯೂಸ್-18 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ.


ಗಿಚ್ಚಿ ಗಿಲಿಗಿಲಿ-2 ಫಸ್ಟ್ ಎಪಿಸೋಡ್ ಸೂಪರ್!
ಗಿಚ್ಚಿ ಗಿಲಿಗಿಲಿ-2 ಮೊದಲ ಎಪಿಸೋಡ್ ಚಿತ್ರೀಕರಣ ಆಗಿದೆ. ಪ್ರೊಮೋ ಕೂಡ ರಿಲೀಸ್ ಆಗಿದೆ. ಸಖತ್ ಆಗಿಯೇ ಈ ಒಂದು ಎಪಿಸೋಡ್ ಬಂದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್​ ಕುಮಾರ್ ಈ ಒಂದು ಸೀಸನ್​ಗೂ ಬಂದು ಹೋಗಿದ್ದಾರೆ.


Kannada Anchor Niranjan Special Talk on New Gicchi Giligili Season 2 Show
ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-2 ಆ್ಯಂಕರ್ ಬದಲಾಗಿದ್ದೇಕೆ?


ಗಿಚ್ಚಿ ಗಿಲಿಗಿಲಿ ಸೀಸನ್​-1 ನಿರೂಪಣೆಯನ್ನ ಈ ಹಿಂದೆ ನಿರಂಜನ್​ ಅವರೇ ಮಾಡಿದ್ದರು. ಈಗ ಅದೇ ಜರ್ನಿ ಗಿಚ್ಚಿ ಗಿಲಿಗಿಲಿ ಸೀಸನ್-2 ಗೂ ಮುಂದುವರೆದಿದೆ. ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್-1 ಅನ್ನ ಅನೂಪಮ ಗೌಡ ಮಾಡಿದ್ದರು. ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್​-2 ಅನ್ನ ನಿರಂಜನ್ ನಿರೂಪಿಸಿದ್ದರು. ಅದೇ ಜಾಗಕ್ಕೆ ಈಗ ನಿರೂಪಕಿ ಜಾಹ್ನವಿ ಬಂದಿದ್ದಾರೆ.


ಒಂದೇ ಚಾನಲ್-ಎರಡು ಪ್ರೊಡಕ್ಷನ್ ಹೌಸ್​ನ ಶೋ​!
ನಮ್ಮಮ್ಮ ಸೂಪರ್ ಸ್ಟಾರ್​-2 ಅನ್ನ ಸೃಜನ್ ಲೋಕೇಶ್ ಪ್ರೋಡಕ್ಷನ್ ಹೌಸ್ ನಿರ್ಮಿಸುತ್ತಿದೆ. ಅದೇ ರೀತಿ ಗಿಚ್ಚಿ ಗಿಲಿಗಿಲಿ ಸೀಸನ್-2 ಅನ್ನ ಶಿವಧ್ವಜ ಪ್ರೋಡಕ್ಷನ್ ಹೌಸ್ ನಿರ್ಮಿಸುತ್ತಿದೆ. ಹೀಗೆ ಎರಡು ಪ್ರೋಡಕ್ಷನ್ ಹೌಸ್​ ಜೊತೆಗೆ ಕೆಲಸ ಮಾಡಿರೋ ನಿರಂಜನ್ ತಮ್ಮ ಬೇಡಿಕೆಯನ್ನ ಎರಡೂ ಕಡೆಗೆ ಉಳಿಸಿಕೊಂಡಿದ್ದಾರೆ.


ಇದನ್ನೂ ಓದಿ: Sapthami Gowda: ಬಾಲಿವುಡ್​ಗೆ ಹಾರಿದ ಕಾಂತಾರ ಚೆಲುವೆ; ವಿವೇಕ್​ ಅಗ್ನಿಹೋತ್ರಿ ಸಿನಿಮಾದಲ್ಲಿ ಸಪ್ತಮಿ ಗೌಡ


ಆ ಹಿನ್ನೆಲೆಯಲ್ಲಿಯೇ ಈಗ ಅಷ್ಟೇ ಸುಲಭವಾಗಿಯೇ ನಿರಂಜನ್, ಒಂದು ಶೋದಿಂದ ಇನ್ನೊಂದು ಶೋಗೆ ಯಾವುದೇ ತೊಂದರೆ ಇಲ್ಲದೇ ಬಂದಿದ್ದಾರೆ. ತಮ್ಮ ಎಂದಿನ ವಿಶೇಷ ಶೈಲಿಯ ನಿರೂಪಣೆಯನ್ನ ಈಗ ಮುಂದುವರೆಸಿದ್ದಾರೆ.


ಇನ್ನುಳಿದಂತೆ ಗಿಚ್ಚಿ ಗಿಲಿಗಿಲಿ-2 ಇದೇ ಶನಿವಾರ ಸಂಜೆ 7.30ಕ್ಕೆ ಪ್ರಸಾರವಾಗಲಿದೆ. ಹೊಸ ರೀತಿಯಲ್ಲGಯೇ ಮತ್ತೊಮ್ಮೆ ಜನರನ್ನ ರಂಜನಿಸೋಕೂ ಈಗ ಬರ್ತಿದೆ.

First published: