• Home
  • »
  • News
  • »
  • entertainment
  • »
  • Big Boss Anupama Gowda: ಪ್ರ್ಯಾಂಕ್ ರಾಣಿ ಅನುಪಮಾ ಗೌಡ - ಇದು ಸೀಕ್ರೆಟ್ ಟಾಸ್ಕಾ ಇಲ್ಲ ಇದೂ ನಕಲಿಯಾ?

Big Boss Anupama Gowda: ಪ್ರ್ಯಾಂಕ್ ರಾಣಿ ಅನುಪಮಾ ಗೌಡ - ಇದು ಸೀಕ್ರೆಟ್ ಟಾಸ್ಕಾ ಇಲ್ಲ ಇದೂ ನಕಲಿಯಾ?

ಇದು ಸೀಕ್ರೆಟ್ ಟಾಸ್ಕಾ ಇಲ್ಲ ಇದೂ ಫ್ರ್ಯಾಂಕಾ?

ಇದು ಸೀಕ್ರೆಟ್ ಟಾಸ್ಕಾ ಇಲ್ಲ ಇದೂ ಫ್ರ್ಯಾಂಕಾ?

ಅನುಪಮಾ ಗೌಡ ಅದ್ಯಾಕ್ ಹಿಂಗೆ ಮಾಡ್ತಿದ್ದಾರೋ ಏನೋ. ಕಳೆದ ಬಾರಿ ಇದೇ ಮನೆಗೆ ಬಂದಾಗ ಅನುಪಮಾ ಹೀಗೆ ಪ್ರ್ಯಾಂಕ್ ಆಟಗಳನ್ನೆಲ್ಲ ಆಡ್ತಾನೇ ಇರಲಿಲ್ಲ. ಆದರೆ ಈ ಬಾರಿ ಪ್ರ್ಯಾಂಕ್ ಮಾಸ್ಟರ್ ಆಗಿ ಬಿಟ್ಟಿದ್ದಾರೆ ಅನುಪಮಾ ಗೌಡ.

  • Share this:

ಬಿಗ್ ಬಾಸ್ ಮನೆಯಲ್ಲಿ ಹಲ್ ಚಲ್ ಎದ್ದು ಬಿಟ್ಟಿದೆ. ಏನೇನೋ ಆಗುತ್ತದೆ. ಇನ್ನೇನೂ ಸದ್ದು -ಗದ್ದಲದ ಅಬ್ಬರ. ಇದರ ಮಧ್ಯೆ ಒಂದಷ್ಟು ನಗು. ಆ ನಗುವಿನಲ್ಲೂ ಆಟ-ಚೇಷ್ಟೆ. ಹಿಂಗೆ ಬಿಗ್ (Big Boss House) ಮನೆಯ ಮಂದಿ ಆಟ ಆಡ್ತಾನೇ ಇದ್ದಾರೆ. ಸೀರಿಯೆಸ್ ಜಗಳಗಳೇನೂ ಇಲ್ಲ. ಆದ್ರೆ ಪ್ರ್ಯಾಂಕ್ (Prank) ಕಾಲ್ ಕೇಳಿದ್ವಿ. ಒಂದು ಹಂತಕ್ಕೆ ಪ್ರ್ಯಾಂಕ್ ಇತ್ತು. ಆದರೆ ಬಿಗ್ ಬಾಸ್ ಮನೆ ಒಂದು ರೀತಿ ಪ್ರ್ಯಾಂಕ್ ಮಾಡೋ ದೊಡ್ಮನೆ ಆಗಿ ಬಿಟ್ಟಿದೆ. ಈ ಫ್ರ್ಯಾಂಕ್ ಥಿಯೇರಿ (Theory) ಈ ಸಲವೇ ಹೆಚ್ಚು ಕಂಡು ಬರುತ್ತಿದೆ. ಇದರ ಹಿಂದಿನ ಮಾಸ್ಟರ್ (Master Mind) ಮೈಂಡ್ ಯಾರು ಅನ್ನೋದು ಗೊತ್ತೇ ಇದೆ. ಆದರೆ ಬಿಗ್ ಬಾಸ್ ನೋಡದೆ ಇರೋರಿಗೆ ಆ ಹೆಸರನ್ನ ಇಲ್ಲಿ ಹೇಳ್ತಿವಿ ನೋಡಿ.


ಬಿಗ್ ಬಾಸ್ ಮನೆಯಲ್ಲಿ ಅನುಪಮಾ ಗೌಡ ಫ್ರ್ಯಾಂಕ್ ಮಾಸ್ಟರ್
ಬಿಗ್ ಬಾಸ್ ಮನೆಯಲ್ಲಿ ಅನುಪಮಾ ಗೌಡ ಫುಲ್ ಸ್ವಿಂಗ್ ನಲ್ಲಿಯೇ ಇದ್ದಾರೆ. ಅನುಪಮಾ ನೇತೃತ್ವದ ತಂಡ ಎಲ್ಲ ಟಾಸ್ಕ್​ ನಲ್ಲೂ ಗೆದ್ದು ಬೀಗಿದೆ. ಎಲ್ಲ ಟಾಸ್ಕ್​ ಗಳನ್ನೂ ಅಷ್ಟೇ ಲೀಲಾಜಾಲವಾಗಿಯೇ ಮಾಡಿ ಮುಗಿಸಿದೆ.


ಇಷ್ಟೆಲ್ಲ ಇದ್ರೂ ಕೂಡ ಅದೇನೋ ಅಂತಾರಲ್ಲ, ಹಂಗೆ ಏನೋ ಮಾಡದವ್ರು ಇನ್ನೇನೋ ಮಾಡ್ತಾರೆ ಅನ್ನೋ ಹಾಗೆ ಅನುಪಮಾ ಗೌಡ ಇಲ್ಲಿ ಪ್ರ್ಯಾಂಕ್ ಮಾಡ್ತಾನೇ ಇದ್ದಾರೆ.


ಬಿಗ್ ಮನೆಯ ಫ್ರ್ಯಾಂಕ್ ರಾಣಿ ಯಾರು ?
ಬಿಗ್ ಮನೆಯ ಪ್ರ್ಯಾಂಕ್ ಮಾಸ್ಟರ್ ಯಾರು? ಒನ್ಸ್ ಅಗೇನ್ ಅದು ಅನುಪಮಾ ಗೌಡ ಅಂತಲೇ ಹೇಳಬಹುದು. ದೊಡ್ಮನೆಯ ಎಲ್ಲ ಪ್ರ್ಯಾಂಕ್ ಹಿಂದೆ ಅನುಮಪಾ ಗೌಡ ಮೈಂಡ್ ಇದ್ದೇ ಇದೆ.


Kannada Anchor Kannada Actor Anupama Gowda Now Frank Master Mind in Big Boss House
ಬಿಗ್ ಬಾಸ್ ಮನೆ ಫ್ರ್ಯಾಂಕ್ ಮಾಸ್ಟರ್


ಅನುಪಮಾ ಮಾಡ್ತಿರೋದು ಪ್ರ್ಯಾಂಕ್ ಇಲ್ಲ ಸೀಕ್ರೆಟ್ ಟಾಸ್ಕಾ?
ಅನುಪಮಾ ಗೌಡ ಅದ್ಯಾಕ್ ಹಿಂಗೆ ಮಾಡ್ತಿದ್ದಾರೋ ಏನೋ. ಕಳೆದ ಬಾರಿ ಇದೇ ಮನೆಗೆ ಬಂದಾಗ ಅನುಪಮಾ ಹೀಗೆ ಪ್ರ್ಯಾಂಕ್ ಆಟಗಳನ್ನೆಲ್ಲ ಆಡ್ತಾನೇ ಇರಲಿಲ್ಲ. ಆದರೆ ಈ ಬಾರಿ ಪ್ರ್ಯಾಂಕ್ ಮಾಸ್ಟರ್ ಆಗಿ ಬಿಟ್ಟಿದ್ದಾರೆ ಅನುಪಮಾ ಗೌಡ.


ಇದನ್ನೂ ಓದಿ: Yash With Lewis Hamilton: ಫಾರ್ಮುಲಾ ಕಾರ್ ರೇಸರ್ ಜೊತೆ ರಾಕಿ ಭಾಯ್! ಅಮೆರಿಕದಲ್ಲಿ ಬಿಗ್ ಪ್ಲಾನ್


ಅನುಪಮಾ ಗೌಡ ಪ್ರ್ಯಾಂಕ್ ಮಾಡ್ತಿರೋದು ಯಾಕೆ? ಈ ಒಂದು ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಅನುಮಾನಗಳೇ ಜಾಸ್ತಿ ಇವೆ. ಅನುಪಮಾ ಗೌಡ, ಈ ಮೂಲಕ ಕಂಟೆಂಟ್ ಕೊಡೋಕೆ ಟ್ರೈ ಮಾಡುತ್ತಿದ್ದಾರೇಯೇ? ಬಿಗ್ ಬಾಸ್ ಈ ಸಲ ಅನುಪಮಾ ಗೌಡಗೆ ಸೀಕ್ರೆಟ್ ಟಾಸ್ಕ್ ಏನಾದರೂ ಕೊಟ್ರೇ? ಗೊತ್ತಿಲ್ಲ. ಪ್ರ್ಯಾಂಕ್ ಇಲ್ಲಿ ಟು ಬಿ ಕಂಟಿನ್ಯೂಡ್ಸ್ .


ರಾಕೇಶ್ ಬಟ್ಟೆ ಬರೆ ಬಚ್ಚಿಟ್ಟ ಅನು ಗ್ಯಾಂಗ್
ಅನುಪಮಾ ಗೌಡ ಹಬ್ಬದ ದಿನದ ರಾತ್ರಿ ಒಂದು ಗಂಟೆ ಹೊತ್ತಿಗೆ ಪ್ರ್ಯಾಂಕ್ ಕಾರ್ಯಾಚರಣೆ ಆರಂಭಿಸಿಯೇ ಬಿಟ್ಟರು. ಹೆಚ್ಚು ಕಡಿಮೆ ಮನೆಯ ಎಲ್ಲ ಲೇಡೀಸ್ ಒಟ್ಟಿಗೆ ಸೇರಿ ಬಟ್ಟೆ ಬರೆಗಳನ್ನ ಬಚ್ಚಿಟ್ಟಿದ್ದಾರೆ. ಈ ಪ್ರ್ಯಾಂಕ್ ನಿಂದ ಇನ್ನು ಏನೆಲ್ಲ ಆಗ್ತದೋ ಏನೋ ಸದ್ಯಕ್ಕಂತು ಗೊತ್ತಿಲ್ಲ ಬಿಡಿ.


Kannada Anchor Kannada Actor Anupama Gowda Now Frank Master Mind in Big Boss House
ಫ್ರ್ಯಾಂಕ್ ಮಾಸ್ಟರ್ ಅನುಪಮಾ ಗೌಡ


ಹಬ್ಬದ ದಿನ ಕೂಡ ಒಂದು ಪ್ರ್ಯಾಂಕ್ ಅನ್ನ ಮಾಡಲಾಯಿತು. ಆರ್ಯವರ್ಧನ್ ಗುರೂಜಿ ಈ ಪ್ರ್ಯಾಂಕ್​​ಗೆ ಟಾರ್ಗೆಟ್​ ಆಗಿದ್ದರು. ನಿಜ, ಕ್ಯಾಪ್ಟನ್ ಆಗಲೇಬೇಕು ಅಂತ ಹಂಬಲಿಸ್ತಿರೋ ಆಯರ್ವರ್ಧನ್ ಗುರೂಜಿ, ಈ ಪ್ರ್ಯಾಂಕ್​ಗೆ​ ಜೋಕರ್ ರೀತಿನೆ ಕಂಡು ಬಿಟ್ಟರು.


ಇದನ್ನೂ ಓದಿ: Ghost Shiva Rajumar: ಶಿವಣ್ಣ ಚಿತ್ರಕ್ಕೆ ಕೋಟಿ ಬೆಲೆಯ ಸೆಟ್ ಹಾಕಿದ ಘೋಸ್ಟ್ ತಂಡ!


ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯನ್ನ ಪ್ರ್ಯಾಂಕ್ ಮಾಡಿದ್ದ ಅನುಪಮಾ ಆ್ಯಂಡ್ ಗ್ಯಾಂಗ್ ಇಲ್ಲಿ ಗುರೂಜಿಯನ್ನ ಆಟ ಆಡಿಸಿ ಬಿಟ್ಟರು. ಇದರ ಫಲ ಈಗ ಸರಿಯಾಗಿಯೆ ಆಗಿದೆ. ಬಿಗ್ ಬಾಸ್ ಈ ಪ್ರ್ಯಾಂಕ್ ಟೀಮ್​ ಅನ್ನ ಕ್ಯಾಪ್ಟನ್ ಆಯ್ಕೆಯಿಂದೇ ದೂರ ಇಟ್ಟು ಬಿಟ್ಟಿದೆ.

First published: