‘ಅಕ್ಕ’ (Akka) ಸೀರಿಯಲ್ ಮೂಲಕ ಅನುಪಮಾ ಗೌಡ(Anupama Gowda) ಕಿರುತೆರೆಗೆ ಎಂಟ್ರಿಯಾಗಿದ್ದಾರೆ. ಈ ಧಾರಾವಾಹಿಯಲ್ಲಿ ಡಬಲ್ ರೋಲ್(Double Roll)ನಲ್ಲಿ ಮಿಂಚಿ ಎಲ್ಲರ ಮನ ಗೆದ್ದಿದ್ದರು. ಇದಾದ ಬಳಿಕ ಬಿಗ್ಬಾಸ್(Big Boss)ಗೆ ಹೋಗಿ ಸಖತ್ ಸೌಂಡ್ ಮಾಡಿದ್ದರು, ಇದೀಗ ಕಲರ್ಸ್ ಕನ್ನಡ(Colours Kannada)ದಲ್ಲಿ ಬ್ಯಾಕ್ ಟು ಬ್ಯಾಕ್ ಶೋಗಳಿಗೆ ನಿರೂಪಣೆ ಮಾಡುತ್ತಿದ್ದಾರೆ. ಅನುಪಮಾ ಗೌಡಗೆ ಸಖತ್ ಡಿಮ್ಯಾಮಂಡ್ ಇದೆ. ರಾಜರಾಣಿ, ನನ್ನಮ್ಮ ಸೂಪರ್ ಸ್ಟಾರ್ ಸೇರಿ ಅನೇಕ್ ರಿಯಾಲಿಟಿ ಶೋ(Reality Show) ನಡೆಸಿಕೊಡುತ್ತಿದ್ದಾರೆ. ಇದರ ಜೊತೆ ಜೊತೆಗೆ ಯೂಟ್ಯೂಬ್ನಲ್ಲಿ ತಮ್ಮದೇ ಆದ ಚಾನೆಲ್ ಹೊಂದಿದ್ದಾರೆ. ಈ ಚಾನೆಲ್ನಲ್ಲಿ ಸಖತ್ ಸೌಂಡ್ ಮಾಡುತ್ತಿರುತ್ತಾರೆ. ಹಲವಾರು ವಿಚಾರಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿರುತ್ತಾರೆ. ಹೆಲ್ತ್ ಟಿಪ್ಸ್(Health Tips)ಗಳಂತಹ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ದಪ್ಪ ಇದ್ದ ಅನುಪಮಾ ಗೌಡ ಇದ್ದಕಿದ್ದ ಹಾಗೇ ತಮ್ಮ ತೂಕ ಇಳಿಸಿಕೊಂಡು ಸಖತ್ ಸ್ಲಿಮ್ ಆಗಿದ್ದರು. ವರ್ಕೌಟ್ (Workout) ಮಾಡುತ್ತಿರುವುದರ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದರೂ, ಅಭಿಮಾನಿಗಳ ಪ್ರಶ್ನೆ ಕಡಿಮೆ ಆಗಿಲ್ಲ. ಹೀಗಾಗಿ ಎರಡು ವಿಡಿಯೋಗಳ ಮೂಲಕ ತಮ್ಮ ದಿನಚಚರಿ ಹೇಗಿರುತ್ತದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ವಿಡಿಯೋವೊಂದನ್ನು ಹಂಚಿಕೊಂಡು, ಸಣ್ಣ ಪುಟ್ಟ ಟಿಪ್ಸ್ ಕೂಡ ಕೊಡುತ್ತಾರೆ.
ಬೆಳಗ್ಗೆ 4:30ಗೆ ಏಳ್ತಾರಂತೆ ಅನುಪಮಾ!
ತಮ್ಮ ದಿನಚರಿ ಬಗ್ಗೆ ಅನುಪಮಾ ಗೌಡ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದಾರೆ. ಬೆಳಗ್ಗೆ 4.30ಗೆ ಏಳುವ ಅನುಪಮಾ, ಮೊದಲು ದೇವರಿಗೆ ಕೈ ಮುಗಿದು ಹಾಸಿಗೆ ಮೇಲೆ ಕೆಲವು ನಿಮಿಷಗಳ ಕಾಲ ಧ್ಯಾನ ಮಾಡುತ್ತಾರಂತೆ. ಆನಂತರ ಒಂದು ಬಾಟಲ್ ಪೂರ್ತಿ ನೀರು ಕುಡಿದ ನಂತರ ತಮ್ಮ ಹಾಸಿಗೆ ಸರಿ ಮಾಡಿ ದಿನ ಆರಂಭಿಸುತ್ತಾರೆ. 2021ರಿಂದ ಈ ದಿನಚರಿ ಅಭ್ಯಾಸ ಮಾಡಿಕೊಂಡಿರುವ ಕಾರಣ ಈ ವರ್ಷದಲ್ಲಿಯೂ ಇದನ್ನು ಪಾಲಿಸುತ್ತಿರುವೆ, ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನು ಓದಿ : ಅಪ್ಪು ಹೇಳಿದ್ದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡ ಈ ನಿರ್ದೇಶಕ ಮಾಡಿದ್ದೇನು ಗೊತ್ತಾ? ನೀವೇ ನೋಡಿ...
ಪ್ರತಿದಿನ ಒಂದು ಗಂಟೆ ಜಾಗಿಂಗ್ ಮಾಡ್ತಾರಂತೆ ಅನುಪಮಾ!
ಇದಾದ ಬಳಿಕ ಜಿಮ್ಗೆ ಅನುಪಮಾ ತೆರಳುತ್ತಾರಂತೆ. ಇದಕ್ಕೂ ಮುನ್ನ 1 ಗಂಟೆಗಳ ಜಾಗಿಂಗ್ ಮಾಡ್ತಾರಂತೆ. ಪ್ರತಿ ದಿನ ಎನರ್ಜಿಯಿಂದ ಇರಲು ನೀರು ಹೆಚ್ಚಿಗೆ ಕುಡಿಯಬೇಕು. ಎಂದು ಜಿಮ್ಗೂ ಕೂಡ ದೊಡ್ಡ ಬಾಟಲ್ ಹೊತ್ತುಕೊಂಡು ಹೋಗುತ್ತಾರೆ. ಹೊರಡುವ ಮುನ್ನ ಮನೆಯಲ್ಲಿಯೇ ಒಂದು ಗ್ಲಾಸ್ ಬ್ಲಾಕ್ ಕಾಫಿ ಕುಡಿಯುತ್ತಾರೆ. ವರ್ಕೌಟ್ ಮಾಡಿ ಮನೆಗೆ ಬಂದ ನಂತರ ತಕ್ಷಣ ತಮ್ಮ ಡಯಟ್ ಶೇಕ್ ಸೇವಿಸುತ್ತಾರೆ. ಎಳನೀರು ಮೂರು ಏಲಕ್ಕಿ ಬಾಳೆ ಹಣ್ಣು, ಎರಡು ಸ್ಪೂನ್ನಲ್ಲಿ ಓಟ್ಸ್ , 5 ಬಾದಾಮಿ . ಗೋಡಂಬಿ ಮತ್ತು ಒಂದು ಸಣ್ಣ ಸ್ಪೂನ್ ಪ್ರೋಟಿನ್ ಹಾಕಿಕೊಂಡು ಸ್ಮೂತಿ ಮಾಡಿಕೊಂಡು ಕುಡಿಯುತ್ತಾರೆ.
ಇದನ್ನು ಓದಿ: ರಜಿನಿಕಾಂತ್ಗೆ ಕನ್ನಡದ ಮೇಲೆ ಪ್ರೀತಿ ಇಲ್ಲ: ಹಿಂಗ್ಯಾಕ್ ಅಂದ್ರು ಮುಖ್ಯಮಂತ್ರಿ ಚಂದ್ರು?
ವರ್ಕೌಟ್ ಮಾಡುವವರಿಗೆ ಟಿಪ್ಸ್ ಕೊಟ್ಟ ನಿರುಪಮಾ ಗೌಡ!
ಸಣ್ಣ ಆಗಲು ವರ್ಕೌಟ್ ಮಾಡುತ್ತಿರುವವರಿಗೆ ನಿರೂಪಕಿ, ನಟಿ ನಿರುಪಮಾ ಗೌಡ ಟಿಪ್ಸ್ ಕೊಟ್ಟಿದ್ದಾರೆ. ಸಣ್ಣ ಆಗಲು ಹೆವಿ ವರ್ಕೌಟ್ ಮಾಡುತ್ತಿರುವವರು ವರ್ಕೌಟ್ ಮುಗಿದ 15 ನಿಮಿಷಗಳ ಅಂತರದಲ್ಲಿ ತಿಂಡಿ ಸೇವಿಸಬೇಕು. ಬೆಳಗ್ಗೆ ದೋಸೆ, ಇಡ್ಲಿ (Dosa Idly) ತಿನ್ನಲು ಇಷ್ಟ ಪಡುವೆ. ಅನುಪಮಾ ವರ್ಷಗಳಿಂದ ತಿಂಡಿ ತಿಂದಿಲ್ವಂತೆ. ಬದಲಿಗೆ ಈ ರೀತಿ ಜ್ಯೂಸ್ ಕುಡಿದು ಆನಂತರ ತಮ್ಮ ದಿನ ಆರಂಭಿಸುತ್ತಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ